< ಯೋಬನು 35 >
1 ೧ ಆ ಮೇಲೆ ಎಲೀಹು ಮತ್ತೆ ಇಂತೆಂದನು,
Na Elihu el sifilpa fahk:
2 ೨ “ನೀತಿಯಿಂದ ನನಗೇನು ಪ್ರಯೋಜನವಾಯಿತು? ಪಾಪಮಾಡದೆ ಇದ್ದುದರಿಂದ ನನಗಾದ ಹೆಚ್ಚು ಲಾಭವೇನು?
“Ku kom nunku mu ma se inge suwohs Ke kom fahk mu, ‘Nga suwohs ye mutun God.’
3 ೩ ಈ ರೀತಿ ನೀನು ನುಡಿಯುವುದು ನ್ಯಾಯವೆಂದು ನೀನು ಊಹಿಸಿಕೊಂಡು, ನನ್ನ ನೀತಿಯು ದೇವರ ನೀತಿಗಿಂತ ಹೆಚ್ಚೆಂದುಕೊಳ್ಳುತ್ತಿಯಾ?
Ku ke kom siyuk sin God, ‘Nga fin tia oru ma koluk, mea ac wo nu sik?’
4 ೪ ನಾನು ನಿನಗೂ, ನಿನ್ನ ಜೊತೆಗಾರರಿಗೂ ಕೂಡ ಉತ್ತರಕೊಡುವೆನು.
Nga ac topuk kom, ac mwet kawuk lom ingan pac.
5 ೫ ಕಣ್ಣೆತ್ತಿ ಗಗನಮಂಡಲವನ್ನು ನೋಡು, ಮೇಘಮಾರ್ಗವನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ!
“Ngetak liye acn lucng! Liye fulatiyen pukunyeng uh!
6 ೬ ನೀನು ಪಾಪಮಾಡಿದ್ದರೆ ಆತನಿಗೆ ಏನು ಮಾಡಿದಂತಾಯಿತು? ನಿನ್ನ ದ್ರೋಹಗಳು ಹೆಚ್ಚಾಗಿದ್ದರೂ ಆತನಿಗೇನು?
Kom fin orekma koluk, God El tiana akkolukyeyuk kac. Kom fin oru ma koluk pacl pus, ya ma inge ac aklokoalokyal?
7 ೭ ನೀನು ನೀತಿವಂತನಾಗಿದ್ದರೆ ಆತನಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಆತನಿಗೆ ಲಾಭವೇನು?
Ya kom kasru God kom fin arulana orek suwohs? Wangin ma God El enenu sum.
8 ೮ ನಿನ್ನ ಕೆಟ್ಟತನದಿಂದ ನಿನ್ನಂಥ ಮನುಷ್ಯನಿಗೇ ನಷ್ಟವಾದೀತು, ನಿನ್ನ ನೀತಿಯಿಂದ ನರಜನ್ಮದವನಿಗೇನು ಲಾಭ ಸಿಕ್ಕಬಹುದು.
Mwet uh pa ac keok ke ma koluk kom oru uh, Ac ma wo kom oru uh ac kasru pac mwet.
9 ೯ ಅಪಾರವಾದ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾ, ಬಲಿಷ್ಠರ ಭುಜಬಲದಿಂದ ಪೀಡಿತರಾಗಿ ಕೂಗಿಕೊಳ್ಳುವರು.
“Ke akkeokyeyuk mwet uh, elos ac sasao; Ac elos pang tuh in oasr mwet kasrelos.
10 ೧೦ ‘ನನ್ನ ಸೃಷ್ಟಿ ಕರ್ತನಾದ ದೇವರು ಎಲ್ಲಿ? ಆತನು ರಾತ್ರಿಯಲ್ಲಿಯೂ ಕೀರ್ತನೆಗಳನ್ನು ಹಾಡುತ್ತಾನಲ್ಲಾ ಎಂದು ಯಾರೂ ಹೇಳುವುದಿಲ್ಲ.
Tuh elos tia ngetang nu sin God su oralosla, Su sang soko on in finsrak nu selos ke pacl upa nu selos.
11 ೧೧ ಆತನು ಕಾಡು ಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನು ಬೋಧಿಸುತ್ತಾ, ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿಯನ್ನು ನಮಗೆ ಕಲಿಸುತ್ತಾನೆ’ ಎಂದು ಹೇಳುವುದೇ ಇಲ್ಲ.
Elos tia nget nu sin God su ase etauk nu sesr, Etauk liki kutena kosro, ku won.
12 ೧೨ ಇಂಥಾ ಸಂದರ್ಭದಲ್ಲಿ ಅವರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುವರು, ಆದರೂ ಆತನು ಉತ್ತರವನ್ನು ದಯಪಾಲಿಸುವುದಿಲ್ಲ.
Elos pang in suk kasru, tuh God El tiana topkolos, Mweyen elos mwet koluk ac inse fulat.
13 ೧೩ ದೇವರು ಮೂರ್ಖನ ಮಾತಿಗೆ ಕಿವಿಗೊಡುವುದೇ ಇಲ್ಲ, ಸರ್ವಶಕ್ತನಾದ ದೇವರು ಅದನ್ನು ಎಂದಿಗೂ ಲಕ್ಷಿಸುವುದಿಲ್ಲ.
Wangin sripen pang lalos uh; God Kulana El tiana liyalos, ku lohng pusralos.
14 ೧೪ ಹೀಗಿರಲು ಆತನು ಕಾಣುವುದಿಲ್ಲ, ನನ್ನ ವ್ಯಾಜ್ಯವು ಆತನ ಮುಂದೆ ಇದೆ, ಆತನನ್ನು ಕಾದಿರುತ್ತೇನೆ ಎಂದು ನೀನು ಹೇಳಿದರೆ ಆತನು ಕೇಳುತ್ತಾನೆಯೇ?
“Job, kom fahk mu kom tia ku in liye God; Tusruktu, kom in mongfisrasr ac tupan. Top lal nu sum uh oasr yorol.
15 ೧೫ ಆತನು ದುಷ್ಟರ ಮೇಲೆ ತನ್ನ ಕೋಪವನ್ನು ತೀರಿಸದೆ ಇರುವ ಕಾರಣ ಆಹಾ, ಆತನು ದ್ರೋಹವನ್ನು ವಿಶೇಷವಾಗಿ ಗಮನಿಸುವುದಿಲ್ಲವೆಂದು,
In nunak lom kom mu God El ac tiana kalyei mwet, Ac kom mu El tia arulana lohang nu ke ma koluk uh.
16 ೧೬ ಯೋಬನು ಸುಮ್ಮನೆ ಬಾಯಿ ತೆರೆಯುತ್ತಾನೆ, ಯಾವ ತಿಳಿವಳಿಕೆಯೂ ಇಲ್ಲದೆ ಬಹಳ ಮಾತನಾಡುತ್ತಾನೆ.”
Wangin sripa kom in nuna kaskas na; Kalem tari lah kom tia etu ma kom fahk an.”