< ಯೋಬನು 34 >

1 ಆಗ ಎಲೀಹು ಮತ್ತೆ ಇಂತೆಂದನು,
अझै एलीहूले निरन्‍तर बोले,
2 “ವಿವೇಕಿಗಳೇ, ನನ್ನ ಮಾತುಗಳನ್ನು ಕೇಳಿರಿ, ಜ್ಞಾನಿಗಳೇ, ನನಗೆ ಕಿವಿಗೊಡಿರಿ!
“हे बुद्धिमान् मानिसहरू हो, मेरा वचन सुन्‍नुहोस् । हे ज्ञान भएकाहरू हो, मेरा कुरा सुन्‍नुहोस् ।
3 ನಾಲಿಗೆಯು ಆಹಾರವನ್ನು ರುಚಿನೋಡುವಂತೆ, ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.
जिब्रोले भोजनको स्वाद लिएझैं, कानले शब्दहरूलाई जाँच्ने कोसिस गर्छ ।
4 ನ್ಯಾಯವನ್ನೇ ಆರಿಸಿಕೊಳ್ಳೋಣ, ಒಳ್ಳೆಯದು ಇಂಥದೆಂದು ನಮ್ಮನಮ್ಮೊಳಗೆ ನಿಶ್ಚಯಿಸಿಕೊಳ್ಳೋಣ.
जे न्‍यायोचित छ, सो हामी आफ्‍नो निम्‍ति रोजौं । जे असल छ, सो हामी आफ्‍नो बिचमा खोजौं ।
5 ಯೋಬನು, ‘ನಾನು ನೀತಿವಂತನು, ದೇವರು ನನ್ನ ನ್ಯಾಯವನ್ನು ತಪ್ಪಿಸಿದ್ದಾನೆ.
किनकि अय्यूबले भनेका छन्, 'म धर्मी छु, तर परमेश्‍वरले मेरा अधिकारहरू हटाउनुभएको छ ।
6 ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರ ಎಂದು ಎನ್ನಿಸಿಕೊಂಡಿದ್ದೇನೆ. ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ’ ಎಂದು ಹೇಳಿಕೊಂಡಿದ್ದಾನೆ.
मेरा अधिकारहरू भए पनि मलाई झुटो ठानिएको छ । म पापी नभए पनि मेरो घाउ निको हुँदैन ।'
7 ಯೋಬನಿಗೆ ಸಮಾನನು ಯಾರು? ದೇವದೂಷಣೆಯನ್ನು ನೀರಿನಂತೆ ಕುಡಿಯುತ್ತಾನಲ್ಲಾ.
अय्यूब कस्ता मानिस हुन्, जसले गिल्लालाई पनि पानीझैं पिउँछन्,
8 ಅವನು ಅಧರ್ಮಿಗಳ ಜೊತೆಯಲ್ಲಿ ಸಂಚರಿಸುತ್ತಾನೆ, ಕೆಟ್ಟವರ ಸಂಗಡ ನಡೆದಾಡುತ್ತಾನೆ.
जो दुष्‍ट काम गर्नेहरूको सङ्गतमा जान्छन्, र जो दुष्‍ट मानिसहरूसितै हिंड्छन् ।
9 ‘ಒಬ್ಬನು ದೇವರ ಅನ್ಯೋನ್ಯತೆಯಲ್ಲಿ ಸಂತೋಷಪಟ್ಟರೂ, ಅವನಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳಿದ್ದಾನಷ್ಟೆ.
किनकि तिनले भनेका छन्, 'परमेश्‍वरले जे इच्‍छा गर्नुहुन्‍छ त्‍यो गर्नमा मानिसलाई कुनै रमाहट हुँदैन ।'
10 ೧೦ ಹೀಗಿರಲು, ಬುದ್ಧಿವಂತರೇ, ನನ್ನ ಮಾತುಗಳನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾನೆಂಬ ಯೋಚನೆಯೂ, ಸರ್ವಶಕ್ತನಾದ ದೇವರು ಅನ್ಯಾಯವನ್ನು ನಡೆಸುತ್ತಾನೆಂಬ ಭಾವನೆಯೂ ದೂರವಾಗಿರಲಿ!
त्यसैले हे सुझबुझ भएका मानिसहरू हो, मेरो कुरा सुन्‍नुहोस् । परमेश्‍वरले कदापि दुष्‍ट काम गर्नुहुन्‍न । सर्वशक्तिमान्‌ले कदापि पाप गर्नुहुन्‍न ।
11 ೧೧ ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.
किनकि उहाँले व्यक्तिको कामअनुसारको प्रतिफल दिनुहुन्छ । उहाँले हरेक मानिसलाई उसका आफ्नै चालअनुसारको इनाम दिनुहुन्छ ।
12 ೧೨ ಹೌದು, ದೇವರು ಕೆಟ್ಟದ್ದನ್ನು ನಡೆಸುವುದೇ ಇಲ್ಲ, ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವುದೇ ಇಲ್ಲ.
वास्तवमा परमेश्‍वरले कुनै दुष्‍ट काम गर्नुहुन्‍न, न त सर्वशक्तिमान्‌ले कदापि न्यायलाई बङ्ग्याउनुहुन्छ ।
13 ೧೩ ಭೂಲೋಕವನ್ನು ಆತನ ವಶಕ್ಕೆ ಕೊಟ್ಟವನು ಯಾರು? ಯಾರು ಭೂಮಂಡಲವನ್ನೆಲ್ಲಾ ಕ್ರಮಪಡಿಸಿದನು?
कसले उहाँलाई पृथ्वीको निरीक्षक तुल्याएको हो र? कसले सारा संसार उहाँको अधीनमा राखिदिएको हो र?
14 ೧೪ ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು ತನ್ನ ಆತ್ಮವನ್ನೂ, ಶ್ವಾಸವನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾದರೆ,
उहाँले आफ्ना मनसायहरू आफैमा मात्र राख्‍नुभएको भए, र उहाँले कहिलै आफ्ना आत्मा र सास आफैमा फर्काउनुभए,
15 ೧೫ ಸಮಸ್ತ ಜನರು ಒಟ್ಟಾಗಿ ಅಳಿದುಹೋಗುವರು, ಪುನಃ ಮನುಷ್ಯರು ಧೂಳೇ ಆಗುವರು.
तब सारा प्राणी एकसाथ नष्‍ट हुन्‍थे । मानव-जाति फेरि पनि माटोमा नै फर्कन्‍थ्‍यो ।
16 ೧೬ ನಿನಗೆ ವಿವೇಕವಿದ್ದರೆ ಇದನ್ನು ಕೇಳು, ನನ್ನ ಮಾತುಗಳ ಧ್ವನಿಗೆ ಕಿವಿಗೊಡು!
अब तपाईंसित सुझबुझ छ भने, यो कुरा सुन्‍नुहोस् । मेरो वचनको आवाजलाई सुन्‍नुहोस् ।
17 ೧೭ ನ್ಯಾಯವನ್ನು ದ್ವೇಷಿಸುವವನು ಆಳ್ವಿಕೆ ಮಾಡಾನೇ? ಧರ್ಮಸ್ವರೂಪನೂ, ಮಹಾಶಕ್ತನೂ ಆಗಿರುವಾತನನ್ನು ಕೆಟ್ಟವನೆಂದು ನಿರ್ಣಯಿಸುವೆಯಾ?
के न्यायलाई घृणा गर्नेले शासन गर्न सक्छ? के तपाईंले परमेश्‍वरलाई दोषी ठहराउनुहुन्‍छ जो धर्मी र शक्तिशाली हुनुहुन्छ?
18 ೧೮ ಆತನು ರಾಜನಿಗೆ, ‘ನೀನು ಮೂರ್ಖ’ ಪ್ರಭುಗಳಿಗೆ, ‘ನೀವು ಕೆಟ್ಟವರು’ ಎಂದು ಹೇಳಬಲ್ಲನೇ?
परमेश्‍वरले राजालाई भन्‍नुहुन्छ, 'तँ निकम्मा होस्' वा कुलीनहरूलाई भन्‍नुहुन्छ, 'तिमीहरू दुष्‍ट हौ ।'
19 ೧೯ ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ, ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.
परमेश्‍वरले अगुवाहरूको पक्ष लिनुहुन्‍न, र गरिबहरूलाई भन्दा बढी मान धनीहरूलाई गर्नुहुन्‍न, किनकि तिनीहरू सबै उहाँका हातका काम हुन् ।
20 ೨೦ ಕ್ಷಣ ಮಾತ್ರದೊಳಗೆ ಸಾಯುವರು; ಮಧ್ಯರಾತ್ರಿಯಲ್ಲೇ ಪ್ರಜೆಗಳು ಕದಲಿ ಇಲ್ಲವಾಗುವರು, ಮನುಷ್ಯನ ಕೈ ಸೋಕದೆ ಬಲಿಷ್ಠರೂ ಅಪಹರಿಸಲ್ಪಡುವರು.
एकै क्षणमा तिनीहरू मर्नेछन् । मध्यरातमा मानिसहरू हल्लिन्‍छन् र बितेर जान्‍छन् । शक्तिशाली मानिसहरू लगिन्‍छन्, तर मानवीय हातले होइन ।
21 ೨೧ ಆತನು ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು, ಅವನ ಹೆಜ್ಜೆಗಳನ್ನೆಲ್ಲಾ ನೋಡುವನು.
किनकि परमेश्‍वरको दृष्‍टि मानिसको चालमा हुन्‍छ । उहाँले त्यसका सबै कदम हेर्नुहुन्छ ।
22 ೨೨ ಅಧರ್ಮಿಗಳು ಅಡಗಿಕೊಳ್ಳುವುದಕ್ಕೆ, ಅನುಕೂಲವಾದ ಯಾವ ಕತ್ತಲೂ, ಯಾವ ಗಾಢಾಂಧಕಾರವೂ ಇರುವುದಿಲ್ಲ.
यस्तो कुनै अन्धकार वा बाक्लो अँध्यारो छैन, जहाँ अधर्म गर्नेहरूले आफैलाई लुकाउन सक्छन् ।
23 ೨೩ ದೇವರು ಮನುಷ್ಯನ ಮೇಲೆ ಹೆಚ್ಚು ಗಮನವಿಡುವುದೂ, ಮನುಷ್ಯನೂ ಆತನ ನ್ಯಾಯವಿಚಾರಣೆಗೆ ಬರುವುದೂ, ಅವಶ್ಯವಿಲ್ಲ.
किनकि परमेश्‍वरले व्‍यक्‍तिको थप जाँच गर्नुपर्दैन । कुनै पनि व्यक्ति इन्‍साफको लागि उहाँको सामु जानु आवश्यक छैन ।
24 ೨೪ ಯಾವ ವಿಮರ್ಶಕರೂ ಇಲ್ಲದೆ ತೀರ್ಮಾನಿಸಿ ಬಲಿಷ್ಠರನ್ನು ಮುರಿದು, ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸುವನು.
उहाँले शक्तिशाली मानिसहरूलाई तिनीहरूका चालको कारणले टुक्रा-टुक्रा पार्नुहुन्छ जसको थप अनुसन्धान आवश्यक नै हुँदैन । उहाँले तिनीहरूका ठाउँमा अरूलाई राख्‍नुहुन्छ ।
25 ೨೫ ಈ ಪ್ರಕಾರ ಆತನು ಅವರ ಕಾರ್ಯಗಳನ್ನು ಲಕ್ಷಿಸಿ, ರಾತ್ರಿಯಲ್ಲಿ ಅವರನ್ನು ಕೆಡವಿ ನಾಶಕ್ಕೆ ಗುರಿಮಾಡುವನು.
यसरी तिनीहरूका कामहरूका जानकारी उहाँलाई हुन्‍छ । उहाँले यी मानिसहरूलाई रातमा पल्टाउनुहुन्छ । तिनीहरू नष्‍ट हुन्छन् ।
26 ೨೬ ಅಪರಾಧಿಗಳಿಗೋ ಎಂಬಂತೆ ಬಹಿರಂಗವಾಗಿ ಅವರಿಗೆ ಪೆಟ್ಟುಹಾಕುವನು.
अरूले देख्‍नेगरी खुला ठाउँमा, उहाँले तिनीहरूका दुष्‍ट कामहरूको लागि अपराधीहरूलाई झैं तिनीहरूलाई मार्नुहुन्छ,
27 ೨೭ ಅವರು ಆತನನ್ನು ಹಿಂಬಾಲಿಸದೆ, ತಿರುಗಿಕೊಂಡು ಆತನ ಮಾರ್ಗಗಳನ್ನೆಲ್ಲಾ ಅಲಕ್ಷ್ಯಮಾಡಿದ್ದರಷ್ಟೆ.
किनकि उहाँको अनुसरण गर्नबाट तिनीहरू तर्के, र उहाँका कुनै पनि मार्गको अनुसरण गर्न इन्कार गरे ।
28 ೨೮ ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲಿಸಿದನು.
यसरी गरिब मानिसहरूको रोदन उहाँको कानले सुन्‍ने तिनीहरूले बनाए । कष्‍टमा परेका मानिसहरूको रोदन उहाँले सुन्‍नुभयो ।
29 ೨೯ ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು? ವಿಮುಖನಾದರೆ ಆತನ ದರ್ಶನ ಮಾಡುವವರಾರು? ಆತನು ಜನಾಂಗಕ್ಕಾಗಲಿ, ಮನುಷ್ಯನಿಗಾಗಲಿ ಮಾಡುವುದೆಲ್ಲಾ ಹೀಗೆಯೇ.
जब उहाँ चुप लाग्‍नुहुन्‍छ, तब कसले उहाँलाई दोषी ठहराउन सक्छ र? उहाँले आफ्नो अनुहार लुकाउनुहुन्‍छ भने कसले उहाँलाई भेट्‍न सक्छ र? उहाँले जाति र व्यक्तिमाथि समान किसिमले शासन गर्नुहुन्छ,
30 ೩೦ ಭ್ರಷ್ಟನು ಆಳಬಾರದು, ಯಾರೂ ಜನರಿಗೆ ಉರುಲಾಗಕೂಡದು ಎಂಬುದೇ ಆತನ ಉದ್ದೇಶ.
जसको कारणले पापी मानिसले शासन गर्न नपाओस्, यसरी मानिसहरूलाई पासोमा पार्ने कोही नहोस् ।
31 ೩೧ ಮನುಷ್ಯನು ದೇವರನ್ನು ಕುರಿತು, ‘ನಾನು ಕೆಟ್ಟದ್ದನ್ನು ಮಾಡದಿದ್ದರೂ ದಂಡನೆಯನ್ನು ಸಹಿಸಿಕೊಂಡಿದ್ದೇನೆ,
मानौँ, कसैले परमेश्‍वरलाई भन्छ, 'म निश्‍चय नै दोषी छु, तर म फेरि पाप गर्नेछैनँ ।
32 ೩೨ ನಾನು ಕಾಣದಿರುವುದನ್ನು ನೀನೇ ಸೂಚಿಸು; ನಾನು ಒಂದು ವೇಳೆ ಅನ್ಯಾಯವನ್ನು ಮಾಡಿದ್ದರೂ ಇನ್ನು ಮೇಲೆ ಮಾಡುವುದಿಲ್ಲ’ ಎಂದು ಹೇಳುವುದಕ್ಕಾದೀತೇ?
मैले देख्‍न नसक्‍ने कुरा मलाई सिकाउनुहोस् । मैले पाप गरेको छु, तर त्‍यो काम म फेरि गर्नेछैनँ ।'
33 ೩೩ ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು.
तपाईंको विचारमा, परमेश्‍वरले गर्नुहुने कुरा तपाईंलाई मन पर्दैन भन्‍दैमा, के परमेश्‍वरले त्यो व्यक्तिको पापलाई दण्ड दिनैपर्छ र? तपाईंले नै चुन्‍ने हो, मैल होइन । त्यसैले आफूले जानेका कुरा भन्‍नुहोस् ।
34 ೩೪ ಬುದ್ಧಿವಂತರೂ, ನನ್ನ ಕಡೆಗೆ ಕಿವಿಗೊಡುವ ಪ್ರತಿಯೊಬ್ಬ ಜ್ಞಾನಿಯೂ ನಿನ್ನ ವಿಷಯವಾಗಿ,
सुझबुझ भएका मानिसहरूले मलाई भन्‍नेछन्— वास्तवमा मेरो कुरा सुन्‍ने हरेक बुद्धिमान् मानिसले भन्‍नेछ,
35 ೩೫ ‘ಯೋಬನು ತಿಳಿವಳಿಕೆಯಿಲ್ಲದೆ ನುಡಿಯುತ್ತಾನೆ, ಅವನ ಮಾತುಗಳಲ್ಲಿ ಬುದ್ಧಿಯಿಲ್ಲ.’
'अय्यूब ज्ञानविनै बोल्छन् । तिनका शब्‍दहरूमा बुद्धिका कुरा छैनन् ।'
36 ೩೬ ಯೋಬನ ಪರಿಶೋಧನೆಯು ನಿರಂತರವಾಗಿದ್ದರೆ ಸಂತೋಷ! ದುಷ್ಟರ ಹಾಗೆ ಉತ್ತರಕೊಡುತ್ತಾನಲ್ಲವೆ.
अय्यूबले दुष्‍ट मानिसहरूले झैं कुरा गरेको हुनाले, तिनको भनेका स-साना कुरा लिएर जाँच गर्न सकिए त!
37 ೩೭ ಅವನು ಅಪರಾಧವನ್ನಲ್ಲದೆ ದೈವದ್ರೋಹವನ್ನೂ ಮಾಡಿದ್ದಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆಹೊಡೆದು, ದೇವರಿಗೆ ವಿರುದ್ಧವಾಗಿ ಅಧಿಕ ಮಾತುಗಳನ್ನು ಆಡುತ್ತಾನೆ” ಎಂದು ನನಗೆ ಹೇಳುವರು.
किनकि आफ्नो पापमा तिनले विद्रोह थप्छन् । हाम्रा बिचमा गिल्ला गर्दै तिनी थपडी मार्छन् । तिनी परमेश्‍वरको विरुद्धमा वचनको थुप्रो लगाउँछन् ।”

< ಯೋಬನು 34 >