< ಯೋಬನು 26 >

1 ಆಗ ಯೋಬನು ಹೀಗೆ ಉತ್ತರಕೊಟ್ಟನು,
Ningĩ Ayubu agĩcookia atĩrĩ:
2 “ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು! ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು.
“Kaĩ ũrĩ gũteithia ũrĩa ũtarĩ na ũhoti-ĩ! Kaĩ ũrĩ kũhonokia guoko kũrĩa gũtarĩ na hinya-ĩ!
3 ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ! ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ!
Kaĩ ũrĩ gũtaara mũndũ ũtarĩ na ũũgĩ-ĩ! Na atĩrĩ, kaĩ nĩwonanĩtie ũmenyo mũnene-ĩ!
4 ಯಾರಿಗೆ ಮಾತುಗಳನ್ನು ಕಲಿಸಿದ್ದಿ? ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?”
Nũũ wagũteithia kwaria ciugo icio? Na nĩ roho waũ waria na kanua gaku?
5 ಅದಕ್ಕೆ ಬಿಲ್ದದನು, “ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ, ಪ್ರೇತಗಳು ಆತನ ಭಯದಿಂದ ಯಾತನೆಪಡುವವು.
“Arĩa akuũ marĩ na ruo rũnene, o acio marĩ rungu rwa maaĩ na kĩrĩa gĩothe gĩtũũraga kuo.
6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ, ನಾಶಲೋಕವು ಮರೆಯಾಗಿಲ್ಲ. (Sheol h7585)
Gĩkuũ nĩkĩguũranie mbere ya Ngai; mwanangĩko ũikarĩte ũtarĩ mũhumbĩre. (Sheol h7585)
7 ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ, ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ.
Atambũrũkagia matu ma mwena wa gathigathini igũrũ rĩa kũndũ gũtarĩ kĩndũ; nayo thĩ ndarĩ kĩndũ amĩcunjurĩtie nakĩo.
8 ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು.
Athayaga maaĩ thĩinĩ wa matu make, no matu macio matingĩtembũrwo nĩ ũritũ wamo.
9 ತನ್ನ ಸಿಂಹಾಸನಕ್ಕೆ ಮರೆಯಾಗಿ, ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು.
Ahumbagĩra ũthiũ wa mweri rĩrĩa waiganana, agatambũrũkia matu make igũrũ rĩaguo.
10 ೧೦ ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ, ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ.
Nĩekĩrĩte rũkiriri igũrũ rĩa maaĩ, rũkahakania ũtheri na nduma.
11 ೧೧ ಆಕಾಶಮಂಡಲದ ಸ್ತಂಭಗಳು, ಆತನ ಗದರಿಕೆಯಿಂದ ಬೆರಗಾಗಿ ಕದಲುವವು.
Itugĩ iria itiirĩrĩire igũrũ nĩ ithingithaga, ikagegearaga nĩ ũndũ wa ikũũmana rĩake.
12 ೧೨ ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು; ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು.
Nĩoirugire maaĩ ma iria na ũndũ wa hinya wake; na nĩ ũndũ wa ũũgĩ wake nĩatinaangirie Rahabu tũcunjĩ.
13 ೧೩ ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು, ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು.
Mĩhũmũ yake nĩyo yathakaririe igũrũ; guoko gwake nĩ gwatheecire nyoka ĩrĩa ĩnyororokaga na ihenya.
14 ೧೪ ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?”
Atĩrĩrĩ, ĩno no mĩthia ya mawĩra make; kaĩ no kamũheehũ kanini tũiguaga ka ũhoro wake-ĩ! Nũũ ũngĩgĩtaũkĩrwo nĩ marurumĩ ma ũhoti wake?”

< ಯೋಬನು 26 >