< ಯೋಬನು 25 >

1 ಆ ಮೇಲೆ ಶೂಹ್ಯನಾದ ಬಿಲ್ದದನು ಹೀಗೆಂದನು,
Bildad, Suhitɔ ɖo eŋu nɛ be,
2 “ಆತನಲ್ಲಿ ಪ್ರಭುತ್ವವೂ ಭೀಕರತ್ವವೂ ಉಂಟು, ತನ್ನ ಉನ್ನತ ಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವನು ಆತನೇ.
“Dziɖuɖu kple ŋɔdzi nye Mawu tɔ, eyae ɖo ɖoɖo anyi ɖe dziƒo ƒe kɔkɔƒewo.
3 ಆತನ ಸೈನ್ಯಗಳಿಗೆ ಲೆಕ್ಕವಿದೆಯೋ? ಆತನ ತೇಜಸ್ಸು ಯಾರಲ್ಲಿಯೂ ಮೂಡುವುದಿಲ್ಲ?
Ɖe woate ŋu axlẽ eƒe aʋakɔwoa? Ame ka tame eƒe kekeli meklẽ ɖo o?
4 ಮನುಷ್ಯನು ದೇವರ ಎಣಿಕೆಯಲ್ಲಿ ನೀತಿವಂತನಾಗಿರುವುದು ಹೇಗೆ? ಮಾನವನಾಗಿ ಹುಟ್ಟಿದವನು ಪರಿಶುದ್ಧನಾಗಿರುವುದು ಸಾಧ್ಯವೋ?
Ekema aleke amegbetɔ anye dzɔdzɔetɔ le Mawu ŋkume? Aleke amegbetɔ, nyɔnu tɔ dzidzia, anɔ dzadzɛe?
5 ನೋಡಿರಿ, ಆತನ ದೃಷ್ಟಿಯಲ್ಲಿ ಚಂದ್ರನಿಗಾದರೂ ಕಳೆಯಿಲ್ಲ, ನಕ್ಷತ್ರಗಳೂ ಶುದ್ಧವಲ್ಲ.
Ne ɣleti ƒe keklẽ menye naneke nɛ o eye ɣletiviwo hã medza le eŋkume o la,
6 ಹೀಗಿರುವಲ್ಲಿ ನರಹುಳವು ಅಶುದ್ಧವಾದದ್ದು! ನರಕ್ರಿಮಿಯು ಎಷ್ಟೋ ಅಪವಿತ್ರವಾಗಿದ್ದಾನೆ!”
aleke amegbetɔ si nye ŋɔvi kple ame vi si nye ŋɔ la ayi nane nye ge le eŋkume!”

< ಯೋಬನು 25 >