< ಯೋಬನು 17 >
1 ೧ “ನನ್ನ ಉಸಿರು ಕಟ್ಟುತ್ತಿದೆ, ನನ್ನ ಆಯಷ್ಕಾಲವು ಮುಗಿದಿವೆ, ಗೋರಿಯು ನನಗಾಗಿ ಕಾದಿದೆ.
Mi aliento está corrompido, mis días son cortados, y me está aparejado el sepulcro.
2 ೨ ನನ್ನ ಬಳಿಯಲ್ಲಿರುವವರು ಹಾಸ್ಯಗಾರರೇ ಸರಿ, ಅವರ ಕೆಣಕಾಟವು ಯಾವಾಗಲೂ ನನ್ನ ಕಣ್ಣಿನ ಮುಂದೆ ಇದೆ.
Ya no hay conmigo sino escarnecedores, en cuyas amarguras se detienen mis ojos.
3 ೩ ಕೃಪೆಮಾಡಿ ಈಡನ್ನು ಕೊಡು, ನನಗಾಗಿ ನೀನೇ ನಿನ್ನ ಹತ್ತಿರ ಹೊಣೆಯಾಗು, ನನ್ನ ಕೈ ಮೇಲೆ ಕೈ ಹಾಕತಕ್ಕವರು ನನಗೆ ಇನ್ನಾರೂ ಇಲ್ಲ.
Pon ahora, dame fianzas contigo; ¿quién tocará ahora mi mano?
4 ೪ ವಿವೇಕವು ಪ್ರವೇಶಿಸದಂತೆ; ಅವರ ಮನಸ್ಸನ್ನು, ಹೃದಯವನ್ನು ಮುಚ್ಚಿರುವೆ, ಹೀಗೆ ಅವರು ಜಯಶೀಲರಾಗದಂತೆ ತಡೆಯುವೆ.
Porque a éstos has tú escondido su corazón de entendimiento; por tanto, no los ensalzarás.
5 ೫ ಯಾರು ಸ್ವಲಾಭಕ್ಕಾಗಿ ಮಿತ್ರರ ಮೇಲೆ ದೂರು ಹೊರಿಸುವನೋ, ಅವನ ಮಕ್ಕಳು ಕಂಗೆಡುವರು.
El que denuncia lisonjas a su prójimo, los ojos de sus hijos desfallezcan.
6 ೬ ಆತನು ನನ್ನನ್ನು ಅನ್ಯದೇಶದವರ ವ್ಯರ್ಥ ಆಪಾದನೆಗಳಿಗೆ ಗುರಿ ಮಾಡಿದ್ದಾನೆ, ಜನರ ಉಗುಳಿಗೆ ನನ್ನ ಮುಖ ಗುರಿಯಾಗಿದೆ.
El me ha puesto por parábola de pueblos, y delante de ellos he sido como tamboril.
7 ೭ ದುಃಖದಿಂದ ನನ್ನ ಕಣ್ಣು ಮೊಬ್ಬಾಗಿದೆ, ನನ್ನ ಅಂಗಗಳೆಲ್ಲಾ ನೆರಳಿನಂತೆ ನಿಸ್ಸಾರವಾಗಿವೆ.
Y mis ojos se oscurecieron de desabrimiento, y todos mis pensamientos han sido como sombra.
8 ೮ ಯಥಾರ್ಥಜನರು ಇದನ್ನು ನೋಡಿ ಬೆರಗಾಗಿದ್ದಾರೆ, ಮತ್ತು ನಿರಪರಾಧಿಯು ಭ್ರಷ್ಟನ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.
Los rectos se maravillarán de esto, y el inocente se despertará contra el hipócrita.
9 ೯ ಹೀಗಾದರೂ ಶಿಷ್ಟನು ತನ್ನ ಮಾರ್ಗವನ್ನೇ ಹಿಡಿದು ನಡೆಯುವನು, ಶುದ್ಧಹಸ್ತನು ಬಲಗೊಳ್ಳುತ್ತಲೇ ಇರುವನು.
El justo retendrá su carrera, y el limpio de manos aumentará la fuerza.
10 ೧೦ ಆದರೆ ನೀವೆಲ್ಲರೂ ಮತ್ತೆ ವಾದಕ್ಕೆ ಬನ್ನಿರಿ, ನಿಮ್ಮಲ್ಲಿ ಒಬ್ಬ ಜ್ಞಾನಿಯನ್ನಾದರೂ ಕಾಣೆನು.
Pero volved todos vosotros, y venid ahora, que no hallaré entre vosotros sabio.
11 ೧೧ ನನ್ನ ದಿನಗಳು ಮುಗಿದುಹೋದವು. ನನ್ನ ಉದ್ದೇಶಗಳೂ, ನನ್ನ ಹೃದಯದ ಆಶೆಗಳೂ ಭಂಗವಾದವು.
Mis días se pasaron, y mis pensamientos fueron arrancados, los designios de mi corazón.
12 ೧೨ ಇವರು ಇರುಳನ್ನು ಹಗಲೆಂದು ಸಾಧಿಸಿ, ಕತ್ತಲಿಂದ ಬೆಳಕು ಬೇಗನೆ ಬರುವುದೆಂದು ತಿಳಿಸುತ್ತಾರೆ.
Me pusieron la noche por día, y la luz se acorta delante de las tinieblas.
13 ೧೩ ನಾನು ಪಾತಾಳವನ್ನು ನನ್ನ ಮನೆಯೆಂದು ನಿರೀಕ್ಷಿಸಿ, ನನ್ನ ಹಾಸಿಗೆಯನ್ನು ಕತ್ತಲಲ್ಲಿ ಹಾಸಿದ್ದೇನೆ. (Sheol )
Si yo espero, el sepulcro es mi casa; en las tinieblas hice mi cama. (Sheol )
14 ೧೪ ಸಮಾಧಿಯನ್ನು, ‘ನೀನು, ನನ್ನ ತಂದೆ’ ಎಂದೂ ಹುಳವನ್ನು, ‘ನನ್ನ ತಾಯಿ, ನನ್ನ ತಂಗಿ’ ಎಂದೂ ಕರೆಯುವುದಾದರೆ,
A la huesa tengo dicho: Mi padre eres tú; a los gusanos: Mi madre y mi hermano.
15 ೧೫ ನನ್ನ ನಿರೀಕ್ಷೆ ಎಂಥದು? ನನ್ನ ನಿರೀಕ್ಷೆಯನ್ನು ಯಾರು ನೋಡುವರು?
¿Dónde pues estará ahora mi esperanza? Y mi esperanza ¿quién la verá?
16 ೧೬ ಅದು ನನ್ನ ಸಂಗಡ ಪಾತಾಳಕ್ಕೆ ಇಳಿದು ಬಂದೀತೇ? ನಾವು ಜೊತೆಯಾಗಿ ಧೂಳಿಗೆ ಸೇರಲು ಸಾಧ್ಯವೇ?” (Sheol )
A los rincones de la huesa descenderán, y juntamente descansarán en el polvo. (Sheol )