< ಯೆರೆಮೀಯನು 6 >

1 “ಬೆನ್ಯಾಮೀನ್ ಕುಲದವರೇ, ಯೆರೂಸಲೇಮಿನೊಳಗಿಂದ ವಲಸೆ ಹೋಗಿರಿ, ತೆಕೋವದಲ್ಲಿ ಕೊಂಬನ್ನೂದಿರಿ, ಬೇತ್ ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ, ಏಕೆಂದರೆ ಉತ್ತರ ದಿಕ್ಕಿನಿಂದ ಅತಿನಾಶಕರವಾದ ವಿಪತ್ತು ತಲೆದೋರುತ್ತಿದೆ.
הָעִ֣זוּ ׀ בְּנֵ֣י בִניָמִ֗ן מִקֶּ֙רֶב֙ יְר֣וּשָׁלַ֔͏ִם וּבִתְקֹ֙ועַ֙ תִּקְע֣וּ שֹׁופָ֔ר וְעַל־בֵּ֥ית הַכֶּ֖רֶם שְׂא֣וּ מַשְׂאֵ֑ת כִּ֥י רָעָ֛ה נִשְׁקְפָ֥ה מִצָּפֹ֖ון וְשֶׁ֥בֶר גָּדֹֽול׃
2 ಚೀಯೋನ್ ನಗರಿಯು ಸೊಂಪಾದ ಹಸುರುಗಾವಲಿಗೆ ಸಮಾನವಾಗಿ ನನಗೆ ಕಾಣುತ್ತದೆ.
הַנָּוָה֙ וְהַמְּעֻנָּגָ֔ה דָּמִ֖יתִי בַּת־צִיֹּֽון׃
3 ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರೆದುರಿಗೆ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು; ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಮೇಯಿಸಿಬಿಡುವನು.
אֵלֶ֛יהָ יָבֹ֥אוּ רֹעִ֖ים וְעֶדְרֵיהֶ֑ם תָּקְע֨וּ עָלֶ֤יהָ אֹהָלִים֙ סָבִ֔יב רָע֖וּ אִ֥ישׁ אֶת־יָדֹֽו׃
4 ಇವರು, ಚೀಯೋನಿಗೆ ವಿರುದ್ಧವಾಗಿ ಸನ್ನದ್ಧರಾಗಿರಿ, ಏಳಿರಿ, ಮಧ್ಯಾಹ್ನಕ್ಕೆ ಅದರ ಮೇಲೆ ನುಗ್ಗುವ! ಅಯ್ಯೋ, ಇದೇನು! ನಮಗೆ ಹೊತ್ತು ತಿರುಗಿತಲ್ಲಾ, ಸಂಜೆಯ ನೆರಳುಗಳು ಉದ್ದವಾದವು ಅನ್ನುವರು.
קַדְּשׁ֤וּ עָלֶ֙יהָ֙ מִלְחָמָ֔ה ק֖וּמוּ וְנַעֲלֶ֣ה בַֽצָּהֳרָ֑יִם אֹ֥וי לָ֙נוּ֙ כִּי־פָנָ֣ה הַיֹּ֔ום כִּ֥י יִנָּט֖וּ צִלְלֵי־עָֽרֶב׃
5 ಎದ್ದು ರಾತ್ರಿಯಲ್ಲಿ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ ಅಂದುಕೊಳ್ಳುವರು.
ק֚וּמוּ וְנַעֲלֶ֣ה בַלָּ֔יְלָה וְנַשְׁחִ֖יתָה אַרְמְנֹותֶֽיהָ׃ ס
6 ಸೇನಾಧೀಶ್ವರನಾದ ಯೆಹೋವನು, ಮರಗಳನ್ನು ಕಡಿದುಬಿಡಿರಿ, ಯೆರೂಸಲೇಮಿನ ಎದುರಿಗೆ ದಿಬ್ಬಹಾಕಿರಿ. ಇದೇ ನೀವು ದಂಡಿಸತಕ್ಕ ಪಟ್ಟಣ; ಅದರೊಳಗೆ ಬರೀ ದಬ್ಬಾಳಿಕೆಯೇ ತುಂಬಿದೆ.
כִּ֣י כֹ֤ה אָמַר֙ יְהוָ֣ה צְבָאֹ֔ות כִּרְת֣וּ עֵצָ֔ה וְשִׁפְכ֥וּ עַל־יְרוּשָׁלַ֖͏ִם סֹלְלָ֑ה הִ֚יא הָעִ֣יר הָפְקַ֔ד כֻּלָּ֖הּ עֹ֥שֶׁק בְּקִרְבָּֽהּ׃
7 ತೊಟ್ಟಿಯು ತನ್ನಲ್ಲಿನ ನೀರನ್ನು ತಿಳಿಯಾಗಿ ಇಟ್ಟುಕೊಳ್ಳುವಂತೆ ಈ ಪಟ್ಟಣವು ತನ್ನಲ್ಲಿನ ದುಷ್ಟತನವನ್ನು ನಿಚ್ಚಳವಾಗಿ ಇಟ್ಟುಕೊಂಡಿದೆ. ಅಲ್ಲಿ ಬಲಾತ್ಕಾರದ ಮತ್ತು ಕೊಳ್ಳೆಯ ಸುದ್ದಿಯೇ ಕೇಳಿಬರುತ್ತದೆ; ರೋಗಗಳೂ, ಗಾಯಗಳೂ ಸದಾ ನನ್ನ ಕಣ್ಣಿಗೆ ಬೀಳುತ್ತವೆ.
כְּהָקִ֥יר בְּוֵר (בַּ֙יִר֙) מֵימֶ֔יהָ כֵּ֖ן הֵקֵ֣רָה רָעָתָ֑הּ חָמָ֣ס וָ֠שֹׁד יִשָּׁ֨מַע בָּ֧הּ עַל־פָּנַ֛י תָּמִ֖יד חֳלִ֥י וּמַכָּֽה׃
8 ಯೆರೂಸಲೇಮೇ, ನಾನು ನಿನ್ನನ್ನು ಅಗಲಿ ನಾಶಪಡಿಸಿ ನಿರ್ಜನ ದೇಶವನ್ನಾಗಿ ಮಾಡದಂತೆ ರಕ್ಷಿಸಿಕೊಳ್ಳಲು ಶಿಕ್ಷಣವನ್ನು ಹೊಂದು ಎಂದು ಹೇಳಿದ್ದಾನೆ.
הִוָּסְרִי֙ יְר֣וּשָׁלַ֔͏ִם פֶּן־תֵּקַ֥ע נַפְשִׁ֖י מִמֵּ֑ךְ פֶּן־אֲשִׂימֵ֣ךְ שְׁמָמָ֔ה אֶ֖רֶץ לֹ֥וא נֹושָֽׁבָה׃ פ
9 ಸೇನಾಧೀಶ್ವರನಾದ ಯೆಹೋವನು, ಇಸ್ರಾಯೇಲಿನ ಶೇಷವನ್ನು ದ್ರಾಕ್ಷಿಯ ಹಕ್ಕಲನ್ನೋ ಎಂಬಂತೆ ಆಯಬೇಕು; ದ್ರಾಕ್ಷಿಯ ಹಣ್ಣನ್ನು ಕೀಳುವವನಂತೆ ನೀನು ನಿನ್ನ ಕೈಯನ್ನು ತಿರುಗಿ ರೆಂಬೆಗಳಲ್ಲಿ ಹಾಕು ಎಂದು ಹೇಳುತ್ತಾನೆ.
כֹּ֤ה אָמַר֙ יְהֹוָ֣ה צְבָאֹ֔ות עֹולֵ֛ל יְעֹולְל֥וּ כַגֶּ֖פֶן שְׁאֵרִ֣ית יִשְׂרָאֵ֑ל הָשֵׁב֙ יָדְךָ֔ כְּבֹוצֵ֖ר עַל־סַלְסִלֹּֽות׃
10 ೧೦ ನಾನು, ಯಾರ ಸಂಗಡ ಮಾತನಾಡಿ ಅವರು ಗಮನಿಸುವಂತೆ ಸಾಕ್ಷಿಕೊಡಲಿ? ಇಗೋ, ಅವರ ಕಿವಿ ಮುಚ್ಚಲ್ಪಟ್ಟಿವೆ. ಅಯ್ಯೋ, ಯೆಹೋವನ ಮಾತು ಅವರಿಗೆ ತಿರಸ್ಕಾರ, ಅದರಲ್ಲಿ ಅವರಿಗೆ ಆನಂದವೇ ಇಲ್ಲ.
עַל־מִ֨י אֲדַבְּרָ֤ה וְאָעִ֙ידָה֙ וְיִשְׁמָ֔עוּ הִנֵּה֙ עֲרֵלָ֣ה אָזְנָ֔ם וְלֹ֥א יוּכְל֖וּ לְהַקְשִׁ֑יב הִנֵּ֣ה דְבַר־יְהוָ֗ה הָיָ֥ה לָהֶ֛ם לְחֶרְפָּ֖ה לֹ֥א יַחְפְּצוּ־בֹֽו׃
11 ೧೧ ಆದಕಾರಣ ಯೆಹೋವನ ರೋಷವು ನನ್ನಲ್ಲಿ ತುಂಬಿ ತುಳುಕುತ್ತದೆ; ತಡೆದು ತಡೆದು ನನಗೆ ಸಾಕಾಯಿತು. ಬೀದಿಯಲ್ಲಿನ ಮಕ್ಕಳ ಮೇಲೂ, ಯುವಕರ ಸಂಘದ ಮೇಲೂ ಅದನ್ನು ಹೊಯ್ದು ಬಿಡಬೇಕು. ಗಂಡನೂ, ಹೆಂಡತಿಯೂ, ಮುದುಕನೂ, ಮುಪ್ಪಿನ ಮುದುಕನೂ ಅಂತು ಎಲ್ಲರೂ ಅಪಹರಿಸಲ್ಪಡುವರು.
וְאֵת֩ חֲמַ֨ת יְהוָ֤ה ׀ מָלֵ֙אתִי֙ נִלְאֵ֣יתִי הָכִ֔יל שְׁפֹ֤ךְ עַל־עֹולָל֙ בַּח֔וּץ וְעַ֛ל סֹ֥וד בַּחוּרִ֖ים יַחְדָּ֑ו כִּֽי־גַם־אִ֤ישׁ עִם־אִשָּׁה֙ יִלָּכֵ֔דוּ זָקֵ֖ן עִם־מְלֵ֥א יָמִֽים׃
12 ೧೨ ಅವರ ಹೆಂಡತಿ, ಮನೆ, ಹೊಲ ಮತ್ತು ಗದ್ದೆ ಇವೆಲ್ಲವುಗಳು ಅನ್ಯರ ಪಾಲಾಗುವವು. ದೇಶದ ನಿವಾಸಿಗಳ ಮೇಲೆ ಕೈಮಾಡುವೆನಷ್ಟೆ ಎಂದು ಯೆಹೋವನು ಹೇಳಿದ್ದಾನೆ.
וְנָסַ֤בּוּ בָֽתֵּיהֶם֙ לַאֲחֵרִ֔ים שָׂדֹ֥ות וְנָשִׁ֖ים יַחְדָּ֑ו כִּֽי־אַטֶּ֧ה אֶת־יָדִ֛י עַל־יֹשְׁבֵ֥י הָאָ֖רֶץ נְאֻם־יְהוָֽה׃
13 ೧೩ ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಬಾಚಿಕೊಳ್ಳುತ್ತಲೇ ಇದ್ದಾರೆ; ಪ್ರವಾದಿಗಳು ಮೊದಲುಗೊಂಡು ಯಾಜಕರವರೆಗೆ ಸಕಲರು ಮೋಸಮಾಡುತ್ತಾರೆ.
כִּ֤י מִקְּטַנָּם֙ וְעַד־גְּדֹולָ֔ם כֻּלֹּ֖ו בֹּוצֵ֣עַ בָּ֑צַע וּמִנָּבִיא֙ וְעַד־כֹּהֵ֔ן כֻּלֹּ֖ו עֹ֥שֶׂה שָּֽׁקֶר׃
14 ೧೪ ಸಮಾಧಾನವಿಲ್ಲದಿದ್ದರೂ, ಸಮಾಧಾನ ಎಂದು ಹೇಳಿ ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.
וַֽיְרַפְּא֞וּ אֶת־שֶׁ֤בֶר עַמִּי֙ עַל־נְקַלָּ֔ה לֵאמֹ֖ר שָׁלֹ֣ום ׀ שָׁלֹ֑ום וְאֵ֖ין שָׁלֹֽום׃
15 ೧೫ ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾದರೂ ಎಳ್ಳಷ್ಟೂ ನಾಚಿಕೆಪಡಲಿಲ್ಲ, ಲಜ್ಜೆಯ ಗಂಧವನ್ನೂ ತಿಳಿಯಲಿಲ್ಲ. ಆದಕಾರಣ ನಾನು ದಂಡಿಸುವ ಸಮಯದಲ್ಲಿ ಅವರು ಮುಗ್ಗರಿಸುವರು, ಬೀಳುವವರ ಸಂಗಡ ಬಿದ್ದೇ ಹೋಗುವರು” ಎಂದು ಯೆಹೋವನು ನುಡಿಯುತ್ತಾನೆ.
הֹבִ֕ישׁוּ כִּ֥י תֹועֵבָ֖ה עָשׂ֑וּ גַּם־בֹּ֣ושׁ לֹֽא־יֵבֹ֗ושׁוּ גַּם־הַכְלִים֙ לֹ֣א יָדָ֔עוּ לָכֵ֞ן יִפְּל֧וּ בַנֹּפְלִ֛ים בְּעֵת־פְּקַדְתִּ֥ים יִכָּשְׁל֖וּ אָמַ֥ר יְהוָֽה׃ ס
16 ೧೬ ಯೆಹೋವನು, “ದಾರಿಗಳು ಕೂಡುವ ಸ್ಥಳದಲ್ಲಿ ನಿಂತುಕೊಂಡು ನೋಡಿ ಪುರಾತನ ಮಾರ್ಗಗಳು ಯಾವುವು. ಆ ಸನ್ಮಾರ್ಗವು ಎಲ್ಲಿ? ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ; ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು ಎಂದು ಅಪ್ಪಣೆಕೊಟ್ಟಾಗ ಅವರು ‘ಅದರಲ್ಲಿ ನಾವು ನಡೆಯುವುದೇ ಇಲ್ಲ’ ಎಂದರು.
כֹּ֣ה אָמַ֣ר יְהוָ֡ה עִמְדוּ֩ עַל־דְּרָכִ֨ים וּרְא֜וּ וְשַׁאֲל֣וּ ׀ לִנְתִבֹ֣ות עֹולָ֗ם אֵי־זֶ֨ה דֶ֤רֶךְ הַטֹּוב֙ וּלְכוּ־בָ֔הּ וּמִצְא֥וּ מַרְגֹּ֖ועַ לְנַפְשְׁכֶ֑ם וַיֹּאמְר֖וּ לֹ֥א נֵלֵֽךְ׃
17 ೧೭ ‘ತುತ್ತೂರಿಯ ಶಬ್ದವನ್ನು ಕೇಳಿರಿ’ ಎಂದು ನಾನು ಅವರ ಮೇಲೆ ಕಾವಲುಗಾರರನ್ನು ನೇಮಿಸಲು, ‘ನಾವು ಕೇಳುವುದಿಲ್ಲ’ ಎಂದು ಹೇಳಿದರು.
וַהֲקִמֹתִ֤י עֲלֵיכֶם֙ צֹפִ֔ים הַקְשִׁ֖יבוּ לְקֹ֣ול שֹׁופָ֑ר וַיֹּאמְר֖וּ לֹ֥א נַקְשִֽׁיב׃
18 ೧೮ ಆದಕಾರಣ, ಜನಾಂಗಗಳೇ, ಕೇಳಿರಿ! ಜನಸಮೂಹವೇ, ಅವರಲ್ಲಿ ನಡೆದದ್ದನ್ನು ಮನಸ್ಸಿಗೆ ತಂದುಕೋ!
לָכֵ֖ן שִׁמְע֣וּ הַגֹּויִ֑ם וּדְעִ֥י עֵדָ֖ה אֶת־אֲשֶׁר־בָּֽם׃
19 ೧೯ ಭೂಲೋಕವೇ, ಕೇಳು! ಆಹಾ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದರಿಂದ ಇವರ ಆಲೋಚನೆಗಳ ಫಲವಾದ ಕೇಡನ್ನು ಇವರ ಮೇಲೆ ಬರಮಾಡುವೆನು.
שִׁמְעִ֣י הָאָ֔רֶץ הִנֵּ֨ה אָנֹכִ֜י מֵבִ֥יא רָעָ֛ה אֶל־הָעָ֥ם הַזֶּ֖ה פְּרִ֣י מַחְשְׁבֹותָ֑ם כִּ֤י עַל־דְּבָרַי֙ לֹ֣א הִקְשִׁ֔יבוּ וְתֹורָתִ֖י וַיִּמְאֲסוּ־בָֽהּ׃
20 ೨೦ ನೀವು ಶೆಬದ ಧೂಪವನ್ನು ಮತ್ತು ದೂರ ದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವುದರಿಂದ ಏನು ಪ್ರಯೋಜನ? ನಿಮ್ಮ ಹೋಮಗಳು ನನಗೆ ಮೆಚ್ಚಿಕೆಯಲ್ಲ, ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.
לָמָּה־זֶּ֨ה לִ֤י לְבֹונָה֙ מִשְּׁבָ֣א תָבֹ֔וא וְקָנֶ֥ה הַטֹּ֖וב מֵאֶ֣רֶץ מֶרְחָ֑ק עֹלֹֽותֵיכֶם֙ לֹ֣א לְרָצֹ֔ון וְזִבְחֵיכֶ֖ם לֹא־עָ֥רְבוּ לִֽי׃ ס
21 ೨೧ ಆದಕಾರಣ ಇಗೋ, ನಾನು ಈ ಜನರ ಮುಂದೆ ಅಡ್ಡಿಆತಂಕಗಳನ್ನು ಒಡ್ಡುವೆನು. ತಂದೆ ಮಕ್ಕಳು ಅವುಗಳನ್ನೂ ಎಡವುವರು, ನೆರೆಹೊರೆಯವರೂ ನಾಶವಾಗುವರು ಇದೇ ಯೆಹೋವನಾದ ನನ್ನ ಮಾತು” ಎಂದು ನುಡಿಯುತ್ತಾನೆ.
לָכֵ֗ן כֹּ֚ה אָמַ֣ר יְהוָ֔ה הִנְנִ֥י נֹתֵ֛ן אֶל־הָעָ֥ם הַזֶּ֖ה מִכְשֹׁלִ֑ים וְכָ֣שְׁלוּ בָ֠ם אָבֹ֨ות וּבָנִ֥ים יַחְדָּ֛ו שָׁכֵ֥ן וְרֵעֹ֖ו יֹאבֵדוּ (וְאָבָֽדוּ)׃ פ
22 ೨೨ “ಆಹಾ, ಉತ್ತರ ದಿಕ್ಕಿನಿಂದ ಜನಸಮೂಹ ಬರುತ್ತದೆ, ಮಹಾ ಜನಾಂಗವು ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಹೊರಡುತ್ತದೆ.
כֹּ֚ה אָמַ֣ר יְהוָ֔ה הִנֵּ֛ה עַ֥ם בָּ֖א מֵאֶ֣רֶץ צָפֹ֑ון וְגֹ֣וי גָּדֹ֔ול יֵעֹ֖ור מִיַּרְכְּתֵי־אָֽרֶץ׃
23 ೨೩ ಬಿಲ್ಲನ್ನೂ, ಈಟಿಯನ್ನೂ ಹಿಡಿದುಕೊಂಡಿದ್ದಾರೆ, ಅವರು ಕ್ರೂರರು, ನಿಷ್ಕರುಣಿಗಳು; ಅವರ ಧ್ವನಿಯು ಸಮುದ್ರದಂತೆ ಬೋರ್ಗರೆಯುತ್ತದೆ, ಕುದುರೆಗಳನ್ನು ಹತ್ತಿದ್ದಾರೆ. ಚೀಯೋನ್ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ” ಎಂದು ಯೆಹೋವನು ನುಡಿಯುತ್ತಾನೆ.
קֶ֣שֶׁת וְכִידֹ֞ון יַחֲזִ֗יקוּ אַכְזָרִ֥י הוּא֙ וְלֹ֣א יְרַחֵ֔מוּ קֹולָם֙ כַּיָּ֣ם יֶהֱמֶ֔ה וְעַל־סוּסִ֖ים יִרְכָּ֑בוּ עָר֗וּךְ כְּאִישׁ֙ לַמִּלְחָמָ֔ה עָלַ֖יִךְ בַּת־צִיֹּֽון׃
24 ೨೪ ನಾವು ಅದರ ಸುದ್ದಿಯನ್ನು ಕೇಳಿದೆವು, ನಮ್ಮ ಕೈಗಳು ಜೋಲುಬಿದ್ದವು, ಪ್ರಸವವೇದನೆಯಂತಿರುವ ಯಾತನೆಯು ನಮ್ಮನ್ನು ಹಿಡಿದಿದೆ.
שָׁמַ֥עְנוּ אֶת־שָׁמְעֹ֖ו רָפ֣וּ יָדֵ֑ינוּ צָרָה֙ הֶחֱזִיקַ֔תְנוּ חִ֖יל כַּיֹּולֵדָֽה׃
25 ೨೫ ಊರ ಹೊರಗೆ ಹೋಗಬೇಡಿರಿ, ದಾರಿಯಲ್ಲಿ ನಡೆಯಬೇಡಿರಿ; ಶತ್ರುವಿನ ಕತ್ತಿಯಿದೆ, ಸುತ್ತುಮುತ್ತಲು ದಿಗಿಲು.
אַל־תֵּצְאִי (תֵּֽצְאוּ֙) הַשָּׂדֶ֔ה וּבַדֶּ֖רֶךְ אַל־תֵּלֵכִי (תֵּלֵ֑כוּ) כִּ֚י חֶ֣רֶב לְאֹיֵ֔ב מָגֹ֖ור מִסָּבִֽיב׃
26 ೨೬ ನನ್ನ ಪ್ರಜೆಯೆಂಬ ಯುವತಿಯೇ, ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ದುಃಖಪಟ್ಟು ಘೋರಪ್ರಲಾಪ ಮಾಡು; ಕೊಳ್ಳೆಗಾರನು ತಟ್ಟನೆ ನಮ್ಮ ಮೇಲೆ ಬೀಳುವನಷ್ಟೆ.
בַּת־עַמִּ֤י חִגְרִי־שָׂק֙ וְהִתְפַּלְּשִׁ֣י בָאֵ֔פֶר אֵ֤בֶל יָחִיד֙ עֲשִׂ֣י לָ֔ךְ מִסְפַּ֖ד תַּמְרוּרִ֑ים כִּ֣י פִתְאֹ֔ם יָבֹ֥א הַשֹּׁדֵ֖ד עָלֵֽינוּ׃
27 ೨೭ ಯೆಹೋವನು ನನಗೆ, “ನಾನು ನಿನ್ನನ್ನು ನನ್ನ ಜನವೆಂಬ ಅದಿರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ; ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು.
בָּחֹ֛ון נְתַתִּ֥יךָ בְעַמִּ֖י מִבְצָ֑ר וְתֵדַ֕ע וּבָחַנְתָּ֖ אֶת־דַּרְכָּֽם׃
28 ೨೮ ಅವರೆಲ್ಲರೂ ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ಅವರು ತಾಮ್ರ ಮತ್ತು ಕಬ್ಬಿಣ, ಅವರೆಲ್ಲರೂ ಭ್ರಷ್ಟರೇ.
כֻּלָּם֙ סָרֵ֣י סֹֽורְרִ֔ים הֹלְכֵ֥י רָכִ֖יל נְחֹ֣שֶׁת וּבַרְזֶ֑ל כֻּלָּ֥ם מַשְׁחִיתִ֖ים הֵֽמָּה׃
29 ೨೯ ತಿದಿಯು (ಶ್ವಾಸಕೋಶ) ಬುಸುಬುಸುಗುಟ್ಟುತ್ತದೆ, ಸೀಸವು ಉರಿಯಿಂದ ಸುಟ್ಟುಹೋಗುತ್ತದೆ. ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ನಿಷ್ಪ್ರಯೋಜನ, ಕಲ್ಮಷವು ತೆಗೆಯಲ್ಪಡುವುದಿಲ್ಲ.
נָחַ֣ר מַפֻּ֔חַ מֵאִשְׁתַּם (מֵאֵ֖שׁ תַּ֣ם) עֹפָ֑רֶת לַשָּׁוְא֙ צָרַ֣ף צָרֹ֔וף וְרָעִ֖ים לֹ֥א נִתָּֽקוּ׃
30 ೩೦ ಯೆಹೋವನಾದ ನಾನು ಇವರನ್ನು ನೂಕಿಬಿಟ್ಟಿದ್ದರಿಂದ ಇವರು ‘ಕಂದು ಬೆಳ್ಳಿ’ ಎನಿಸಿಕೊಳ್ಳುವರು” ಎಂದು ಹೇಳಿದ್ದಾನೆ.
כֶּ֣סֶף נִמְאָ֔ס קָרְא֖וּ לָהֶ֑ם כִּֽי־מָאַ֥ס יְהוָ֖ה בָּהֶֽם׃ פ

< ಯೆರೆಮೀಯನು 6 >