< ಯೆರೆಮೀಯನು 5 >
1 ೧ ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡುತ್ತಾ ಅಲ್ಲಿನ ಚೌಕಗಳಲ್ಲಿ ಹುಡುಕಿರಿ; ನ್ಯಾಯವನ್ನು ಕೈಕೊಂಡು ಸತ್ಯವನ್ನು ಅನುಸರಿಸುವ ಒಬ್ಬನಾದರೂ ಇದ್ದಾನೋ? ಇಂತಹ ಸತ್ಪುರುಷನನ್ನು ಕಂಡುಕೊಳ್ಳಬಹುದೇ ಎಂಬುದನ್ನು ನೋಡಿ ನಿಶ್ಚಯಿಸಿರಿ; ಸಿಕ್ಕಿದರೆ ನಾನು ಪಟ್ಟಣವನ್ನು ಕ್ಷಮಿಸುವೆನು.
Mwet Jerusalem, yuwot yume ke inkanek nukewa! Liye akwoya yen nukewa! Suk pac ke acn in kuka! Suk lah kom ac ku in konauk sie mwet Su oru ma suwohs ac inse pwaye nu sin God. Kowos fin ku in konauk sie, na LEUM GOD El fah nunak munas nu sin mwet Jerusalem nukewa.
2 ೨ ಜನರು, “ಯೆಹೋವನ ಜೀವದಾಣೆ” ಎಂದರೂ ಆ ಆಣೆಯು ಸುಳ್ಳೇ ಸುಳ್ಳು ಎಂದು ಯೆಹೋವನು ನುಡಿಯುತ್ತಾನೆ.
Kowos finne orala fulahk lowos ke Inen LEUM GOD moul, A ma kowos fahk uh kikiap.
3 ೩ ಯೆಹೋವನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇರುತ್ತವಲ್ಲಾ; ನೀನು ಹೊಡೆದರೂ ಅವರು ದುಃಖಪಡಲ್ಲಿಲ್ಲ, ಸಂಹರಿಸಿದರೂ ನೀತಿ ಶಿಕ್ಷೆಗೆ ಒಳಪಡಲಿಲ್ಲ. ತಮ್ಮ ಮುಖವನ್ನು ಕಲ್ಲಿಗಿಂತ ಕಠಿನಮಾಡಿಕೊಂಡು ಪಶ್ಚಾತ್ತಾಪಪಡದೆ ಹೋಗಿದ್ದಾರೆ.
Pwayena lah LEUM GOD El suk mwet inse pwaye. El sringil kowos, a kowos tia mayak kac. El itungkowosi, a kowos tia lungse in aksuwosyeyuk kowos. Kowos likkeke ac tiana forla liki ma koluk lowos.
4 ೪ ಹೀಗಿರುವಲ್ಲಿ ನಾನು, “ಇವರು ಬಡವರು, ಮೂರ್ಖರು, ಯೆಹೋವನ ಮಾರ್ಗವನ್ನೂ ಮತ್ತು ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು;
Na nga nunku, “Mwet inge mwet sukasrup ac mwet nikin. Ma elos oru uh lalfon; Elos tia etu lah mea God El enenu selos, Ac mea LEUM GOD El lungse elos in oru.
5 ೫ ನಾನು ದೊಡ್ಡ ಮನುಷ್ಯರ ಬಳಿಗೆ ಹೋಗಿ ಅವರ ಸಂಗಡ ಮಾತನಾಡುವೆನು; ಯೆಹೋವನ ಮಾರ್ಗವು ಮತ್ತು ಅವರ ದೇವರ ನ್ಯಾಯವಿಧಿಗಳೂ ಅವರಿಗೆ ಗೊತ್ತು” ಅಂದುಕೊಂಡೆನು. ಆದರೆ ಈ ದೊಡ್ಡ ಮನುಷ್ಯರು ಒಂದು ಮನಸ್ಸಿನಿಂದ ತಮ್ಮ ಹೆಗಲ ನೊಗವನ್ನು ಮುರಿದು, ಕಣ್ಣಿಗಳನ್ನು ಕಿತ್ತುಬಿಟ್ಟಿದ್ದಾರೆ.
Nga ac som nu yurin mwet kol Ac kaskas nu selos. Sahp elos pa etu lah mea God lalos enenu selos, Ac mea LEUM GOD El lungse elos in oru.” Tusruktu mwet kol nukewa tia lungse muta ye ku lun LEUM GOD, Ac srunga pac aksol.
6 ೬ ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವುದು, ಕಾಡಿನ ತೋಳವು ಕೊಳ್ಳೆ ಹೊಡೆಯುವುದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವುದು. ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.
Pa sis lion insak uh fah onelosi; Wolf yen mwesis me fah seseya manolos, Ac leopard uh ac forfor in siti selos ac suk ma nac. Mwet ingo fin tufoki liki lohm selos, ac fah seyuki manolos Mweyen ma koluk lalos uh arulana pus, Ac pusla pacl elos forla liki God.
7 ೭ ಯೆಹೋವನು, “ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆ ತುಂಬಾ ಆಹಾರಕೊಟ್ಟ ಮೇಲೂ ಅವರು ವ್ಯಭಿಚಾರ ಮಾಡಿದರು, ವ್ಯಭಿಚಾರಿಣಿಯರ ಮನೆಗಳಲ್ಲಿ ಗುಂಪುಕೂಡಿದರು.
LEUM GOD El siyuk, “Efu ku nga in nunak munas nu sin mwet luk ke ma koluk lalos? Elos ngetla likiyu Ac alu nu ke god sutuu lun facl saya. Nga kite mwet luk nwe ke elos kihpi, A elos orek kosro Ac sisla pacl lalos yurin mutan su kukakin manolos.
8 ೮ ಕೊಬ್ಬಿ ಅತ್ತಿತ್ತ ಓಡಾಡುವ ಕುದುರೆಗಳಂತೆ ಅವರಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹೆಂಡತಿಯನ್ನು ನೋಡಿ ಮೋಹಿಸುತ್ತಿದ್ದನು.
Kowos wella in suk in oru lungse koluk lowos nu sin mutan kien mwet tulan lowos, Oana horse mukul ma kitakat wo ke elos sukna horse mutan uh.
9 ೯ ನಾನು ಇವುಗಳಿಗಾಗಿ ದಂಡಿಸಬಾರದೋ? ಇಂತಹ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ” ಎಂದು ಯೆಹೋವನು ನುಡಿಯುತ್ತಾನೆ.
Ya tia fal nga in kalyaelos ke ma elos oru inge, Ac oru foloksak luk nu sin mutunfacl se su ouinge?
10 ೧೦ “ಚೀಯೋನೆಂಬ ದ್ರಾಕ್ಷಿ ತೋಟದ ಸಾಲುಗಿಡಗಳ ಮೇಲೆ ಬಿದ್ದು ಹಾಳುಮಾಡಿರಿ, ಆದರೆ ನಿರ್ಮೂಲಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ, ಅವು ಯೆಹೋವನವುಗಳಲ್ಲ.
Nga fah supwala mwet lokoalok in fahsr inmasrlon takin grape sunun mwet luk Ac pakpakiya, tusruktu in tia kunausla nufon. Nga fah fahk elos in kotala lah ke grape uh, Mweyen lah ingan tia ma luk.
11 ೧೧ ಇಸ್ರಾಯೇಲ್ ವಂಶದವರೂ, ಯೆಹೂದ ವಂಶದವರೂ ನನಗೆ ಕೇವಲ ದ್ರೋಹವನ್ನು ಮಾಡಿರುತ್ತಾರೆ ಎಂದು ಯೆಹೋವನು ನುಡಿಯುತ್ತಾನೆ.
Mwet Israel ac mwet Judah Arulana pilesreyu. Nga, LEUM GOD, pa fahk ma inge.”
12 ೧೨ ಅವರು ಯೆಹೋವನನ್ನು ಅಲ್ಲಗಳೆದು, ‘ಆತನು ಏನು ಮಾಡುವನು? ನಮಗೆ ಕೇಡುಬಾರದು, ಖಡ್ಗವೂ, ಕ್ಷಾಮವೂ ನಮ್ಮ ಕಣ್ಣಿಗೆ ಬೀಳವು;
Mwet lun LEUM GOD elos lafwekunul ac elos fahk, “Wangin ma El ac oru. Wangin ma upa ac sikyak nu sesr. Ac fah wangin mweun, ku pacl in sracl.
13 ೧೩ ಪ್ರವಾದಿಗಳು ಬರೀ ಗಾಳಿಯೇ, ದೈವೋಕ್ತಿಯು ಅವರಲ್ಲಿಲ್ಲ; ಅವರಿಗೆ ಹೀಗೆಯೇ ಆಗಲಿ’” ಅಂದುಕೊಂಡಿದ್ದಾರೆ.
Kas lun mwet palu inge wangin kalmac, oana eng tuhtuh. Tia God pa kaskas nu selos. Ongoiya ma elos palye ingan ac ma na nu selos sifacna!”
14 ೧೪ ಹೀಗಿರಲು ಸೇನಾಧೀಶ್ವರನಾದ ಯೆಹೋವನೆಂಬ ದೇವರು, “ನೀವು ಹೀಗೆ ಅಂದುಕೊಂಡಿದ್ದರಿಂದ ಆಹಾ, ನಾನು ಪ್ರವಾದಿಯ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಯೂ, ಈ ಜನರನ್ನು ಸೌದೆಯನ್ನಾಗಿಯೂ ಮಾಡುವೆನು, ಅದು ಅವರನ್ನು ದಹಿಸಿಬಿಡುವುದು.
LEUM GOD Kulana El fahk nu sik, “Jeremiah, mweyen mwet inge fahk kain kas inge, nga fah oru kas luk in oana sie e in oalum. Mwet uh ac fah oana etong, ac e uh ac fah esukulosyak.”
15 ೧೫ ಇಗೋ, ಇಸ್ರಾಯೇಲ್ ವಂಶವೇ, ಯೆಹೋವನ ಮಾತನ್ನು ಕೇಳು, ನಾನು ಒಂದು ಜನಾಂಗವನ್ನು ದೂರದಿಂದ ನಿಮ್ಮ ಮೇಲೆ ಬರಮಾಡುವೆನು. ಅದು ತಲತಲಾಂತರಗಳಿಂದ ಸ್ಥಿರವಾದ ಜನಾಂಗ, ಅದರ ಭಾಷೆಯು ನಿನಗೆ ತಿಳಿಯದು, ಅದು ಆಡುವ ಮಾತುಗಳನ್ನು ನೀನು ಗ್ರಹಿಸಲಾರೆ.
Mwet Israel, LEUM GOD El ac use sie mutunfacl yen loesla me in lain kowos. Sie mutunfacl oemeet me su arulana ku, sie mutunfacl su kowos tia etu kas la.
16 ೧೬ ಅದರ ಬತ್ತಳಿಕೆಯು ಬಾಯ್ದೆರೆದ ಗೋರಿಯೇ, ಅದರ ಭಟರೆಲ್ಲರೂ ಶೂರರೇ.
Mwet pisr lalos elos mwet mweun kulana su uniya ke wangin pakomuta.
17 ೧೭ ಇವರು ನಿನ್ನ ಬೆಳೆಯನ್ನೂ, ನಿನ್ನ ಆಹಾರವನ್ನೂ, ನಿನ್ನ ಗಂಡು ಮತ್ತು ಹೆಣ್ಣುಮಕ್ಕಳನ್ನೂ, ನಿನ್ನ ದನ ಮತ್ತು ಕುರಿಗಳನ್ನೂ, ನಿನ್ನ ದ್ರಾಕ್ಷಾಲತೆಗಳನ್ನೂ ಹಾಗೂ ಅಂಜೂರದ ಗಿಡಗಳನ್ನೂ ತಿಂದುಬಿಡುವರು. ನಿನ್ನ ಭರವಸೆಯ ಕೋಟೆಕೊತ್ತಲುಗಳ ಪಟ್ಟಣಗಳನ್ನು ಖಡ್ಗದಿಂದ ಹಾಳುಮಾಡುವರು.
Elos fah kangla fokin ima lowos, oayapa mwe mongo nowos. Elos fah uniya wen ac acn nutuwos. Elos ac lusluseya un sheep ac un cow nutuwos, ac sukela ima in grape ac sak fig sunowos. Mwet mweun lalos ac fah kunausla siti potyak ku lowos, su yohk lulalfongi lowos kac.
18 ೧೮ ಆದರೆ ಆ ದಿನಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲಮಾಡೆನು, ಇದು ಯೆಹೋವನೆಂಬ ನನ್ನ ನುಡಿ” ಎಂದು ಹೇಳುತ್ತಾನೆ.
LEUM GOD El fahk, “Ne ouinge, in len ingo nga fah tia sukela nufon mwet luk uh.
19 ೧೯ “ನಮ್ಮ ದೇವರಾದ ಯೆಹೋವನು ಇವುಗಳನ್ನೆಲ್ಲಾ ನಮಗೆ ಏಕೆ ಮಾಡಿದ್ದಾನೆ?” ಎಂದು ನಿನ್ನ ಜನರು ಅನ್ನುವಾಗ ನೀನು ಅವರಿಗೆ, “ನೀವು ಯೆಹೋವನನ್ನು ತೊರೆದು, ಸ್ವದೇಶದಲ್ಲಿ ಅನ್ಯದೇವತೆಗಳನ್ನು ಆರಾಧಿಸಿದ ಹಾಗೆ ಪರದೇಶದಲ್ಲಿ ಅನ್ಯರನ್ನು ಆರಾಧಿಸುವಿರಿ” ಎಂದು ಹೇಳು.
Ke elos ac siyuk sripen nga oru ma inge nukewa, na Jeremiah, fahk nu selos lah ke sripen elos forla likiyu ac orekma nu sin god saya uh in facl selos sifacna, ouinge elos fah kulansupu mwet saya in sie facl ma tia ma selos.”
20 ೨೦ ಯಾಕೋಬನ ಮನೆತನದೊಳಗೆ ಇದನ್ನು ಸಾರಿರಿ, ಯೆಹೂದದಲ್ಲಿ ಹೀಗೆ ಪ್ರಕಟಿಸಿರಿ,
LEUM GOD El fahk, “Fahkang nu sin fwilin tulik natul Jacob, ac fahkeng nu sin mwet Judah:
21 ೨೧ ಕಣ್ಣಿದ್ದರೂ ಕಾಣದ, ಕಿವಿ ಇದ್ದರೂ ಕೇಳದ, ಬುದ್ಧಿಯಿಲ್ಲದ ಮೂಢ ಜನರೇ, ಯೆಹೋವನ ಈ ಮಾತನ್ನು ಕೇಳಿರಿ,
Porongeyu, kowos mwet lalfon ac mwet sulalkung, su oasr muta tuh tiana liye; su oasr srac tuh tiana lohng.
22 ೨೨ ನೀವು ನನಗೆ ಅಂಜುವುದಿಲ್ಲವೋ, ನನ್ನೆದುರಿಗೆ ನಡುಗುವುದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.
Nga LEUM GOD. Efu kowos ku tia sangeng sik? Efu kowos ku tia rarrar ye mutuk? Nga oakiya puk uh mu pa inge masrol lun meoa uh, sie masrol oakwuk nwe tok ma meoa uh tia ku in alukela. Noa uh finne ngirngir ac toki weacn uh, a tia ku in som alukela.
23 ೨೩ ಈ ಜನರ ಹೃದಯವೋ ನನ್ನ ಅಧೀನ ತಪ್ಪಿ ತಿರುಗಿಬಿದ್ದಿದೆ; ಇವರು ನನ್ನ ಅಧೀನವನ್ನು ಮೀರಿ ಬಿಟ್ಟುಹೋಗಿದ್ದಾರೆ.
A kowos mwet uh, kowos likkeke ac lungse alein. Kowos kuhfla nu saya ac som likiyu.
24 ೨೪ “ಮುಂಗಾರು, ಹಿಂಗಾರು ಅಂತು ಸಕಾಲದ ಮಳೆಯನ್ನು ದಯಪಾಲಿಸಿ, ಸುಗ್ಗಿಯ ಕೆಲವು ವಾರಗಳನ್ನು ನಮಗಾಗಿ ಪ್ರತ್ಯೇಕಪಡಿಸುವ ನಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯಿಡೋಣ” ಎಂದು ಮನದಲ್ಲಿ ಅಂದುಕೊಳ್ಳವುದಿಲ್ಲ.
Wanginna nunak in sunakinyu, nga finne supu af in taknelik ac af in kosrani, ac sot nu suwos pacl in kosrani ke kais sie yac.
25 ೨೫ ನಿಮ್ಮ ಅಪರಾಧಗಳು ನಿಮಗಾಗುವ ಪ್ರಯೋಜನಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮ್ಮ ಒಳಿತನ್ನು ತಡೆದಿದೆ.
A ma koluk lowos kosrala ma wo inge liki kowos.
26 ೨೬ ನನ್ನ ಜನರಲ್ಲಿ ದುಷ್ಟರು ಕಂಡು ಬಂದಿದ್ದಾರೆ; ಬೇಡರು ಹೊಂಚು ಹಾಕುವ ಹಾಗೆ ಹೊಂಚುಹಾಕುತ್ತಾರೆ; ಉರುಳುಗಳನ್ನು ಹಾಕಿ ಮನುಷ್ಯರನ್ನು ಹಿಡಿಯುತ್ತಾರೆ.
“Oasr mwet koluk muta inmasrlon mwet luk uh. Elos wikla soano oana mwet ma likiya mwe sruhf in sruokya won, tusruktu elos filiya sruhf lalos in sruok mwet.
27 ೨೭ ಪಂಜರದಲ್ಲಿ ಪಕ್ಷಿಗಳು ತುಂಬಿರುವಂತೆ ಅವರ ಮನೆಗಳಲ್ಲಿ ಮೋಸದ ಫಲವು ತುಂಬಿದೆ; ಇದರಿಂದ ಧನವಂತರಾಗಿದ್ದಾರೆ.
Oana ke sie mwet sruh won el nwakla kalkal lal uh ke won, ouinge elos nwakla lohm selos ke ma elos eisla lun mwet uh. Pa oru elos kulana ac kasrup;
28 ೨೮ ಕೊಬ್ಬಿ ಢಾಂಭಿಕರಾಗಿದ್ದಾರೆ; ಇದಲ್ಲದೆ ದುಷ್ಕೃತ್ಯಗಳಲ್ಲಿ ನಿಸ್ಸೀಮರಾಗಿದ್ದಾರೆ. ಅನಾಥರ ವೃದ್ಧಿಗಾಗಿ ಅವರ ಪರವಾಗಿ ವ್ಯಾಜ್ಯ ನಡೆಸರು, ದಿಕ್ಕಿಲ್ಲದವರಿಗೆ ನ್ಯಾಯದೊರಕಿಸರು.
pa oru elos fact ac kihp. Wangin saflaiyen orekma koluk lalos. Elos tia sang suwohs nu sin tulik mukaimtal ku oru nununku suwohs nu sin mwet enenu.
29 ೨೯ ನಾನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ? ಇದು ಯೆಹೋವನಾದ ನನ್ನ ಮಾತು ಎಂಬುದೇ.
Tusruktu nga, LEUM GOD, fah kaelos ke ma elos oru inge. Nga fah orek foloksak nu sin mutunfacl se inge.
30 ೩೦ ಭೀಕರವೂ, ಅಸಹ್ಯವೂ ಆದ ಸಂಗತಿಯು ದೇಶದಲ್ಲಿ ನಡೆದುಬಂದಿದೆ;
Sie ma koluklana ac mwe lut sikyak tari fin facl se inge:
31 ೩೧ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ. ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?
mwet palu tia fahk ma pwaye a kikiap mukena; ac mwet tol uh kol mwet uh oana ma mwet palu sapkin, ac mwet luk uh tiana lain. Na mea elos ac oru pacl se ke ma nukewa sun saflaiya uh?”