< ಯೆರೆಮೀಯನು 5 >

1 ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡುತ್ತಾ ಅಲ್ಲಿನ ಚೌಕಗಳಲ್ಲಿ ಹುಡುಕಿರಿ; ನ್ಯಾಯವನ್ನು ಕೈಕೊಂಡು ಸತ್ಯವನ್ನು ಅನುಸರಿಸುವ ಒಬ್ಬನಾದರೂ ಇದ್ದಾನೋ? ಇಂತಹ ಸತ್ಪುರುಷನನ್ನು ಕಂಡುಕೊಳ್ಳಬಹುದೇ ಎಂಬುದನ್ನು ನೋಡಿ ನಿಶ್ಚಯಿಸಿರಿ; ಸಿಕ್ಕಿದರೆ ನಾನು ಪಟ್ಟಣವನ್ನು ಕ್ಷಮಿಸುವೆನು.
請你們巡行耶路撒冷的街道,觀察注意,在她的廣場上搜尋:若他們能找到一人,一個履正義,追求信實的人,我就寬恕這城。
2 ಜನರು, “ಯೆಹೋವನ ಜೀವದಾಣೆ” ಎಂದರೂ ಆ ಆಣೆಯು ಸುಳ್ಳೇ ಸುಳ್ಳು ಎಂದು ಯೆಹೋವನು ನುಡಿಯುತ್ತಾನೆ.
雖然他們起誓說:「上主永在! 」其實他們起的誓仍是虛誓。
3 ಯೆಹೋವನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇರುತ್ತವಲ್ಲಾ; ನೀನು ಹೊಡೆದರೂ ಅವರು ದುಃಖಪಡಲ್ಲಿಲ್ಲ, ಸಂಹರಿಸಿದರೂ ನೀತಿ ಶಿಕ್ಷೆಗೆ ಒಳಪಡಲಿಲ್ಲ. ತಮ್ಮ ಮುಖವನ್ನು ಕಲ್ಲಿಗಿಂತ ಕಠಿನಮಾಡಿಕೊಂಡು ಪಶ್ಚಾತ್ತಾಪಪಡದೆ ಹೋಗಿದ್ದಾರೆ.
上主,你的眼睛難道不顧信實﹖你打擊了他們,他們卻毫不覺痛;你使他們挫敗,他們仍拒絕受教,使自己的面孔比火石還要頑硬,不願悔改。
4 ಹೀಗಿರುವಲ್ಲಿ ನಾನು, “ಇವರು ಬಡವರು, ಮೂರ್ಖರು, ಯೆಹೋವನ ಮಾರ್ಗವನ್ನೂ ಮತ್ತು ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು;
我想:「不錯,他們原是無知的平民,不認識上主的道路和衪他們天主的法律。
5 ನಾನು ದೊಡ್ಡ ಮನುಷ್ಯರ ಬಳಿಗೆ ಹೋಗಿ ಅವರ ಸಂಗಡ ಮಾತನಾಡುವೆನು; ಯೆಹೋವನ ಮಾರ್ಗವು ಮತ್ತು ಅವರ ದೇವರ ನ್ಯಾಯವಿಧಿಗಳೂ ಅವರಿಗೆ ಗೊತ್ತು” ಅಂದುಕೊಂಡೆನು. ಆದರೆ ಈ ದೊಡ್ಡ ಮನುಷ್ಯರು ಒಂದು ಮನಸ್ಸಿನಿಂದ ತಮ್ಮ ಹೆಗಲ ನೊಗವನ್ನು ಮುರಿದು, ಕಣ್ಣಿಗಳನ್ನು ಕಿತ್ತುಬಿಟ್ಟಿದ್ದಾರೆ.
我要去問有權勢的人,與他們談論,因為他們知道火道路和他們天主的法律。」哎! 連他們也都折斷了軛,掙斷了繩索。
6 ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವುದು, ಕಾಡಿನ ತೋಳವು ಕೊಳ್ಳೆ ಹೊಡೆಯುವುದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವುದು. ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.
為此,獅子由叢林出來襲擊他們,曠野的豺狼出來傷害他們,豹子潛伏在他們的城旁,凡出來的人都被撕裂,因為他們罪上加罪,失節有增無已。
7 ಯೆಹೋವನು, “ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆ ತುಂಬಾ ಆಹಾರಕೊಟ್ಟ ಮೇಲೂ ಅವರು ವ್ಯಭಿಚಾರ ಮಾಡಿದರು, ವ್ಯಭಿಚಾರಿಣಿಯರ ಮನೆಗಳಲ್ಲಿ ಗುಂಪುಕೂಡಿದರು.
如此,我怎能寬恕你﹖你的子孫離棄了我,奉「非神」發誓。我使他們飽食,他們卻去行淫,群集在妓院裏;
8 ಕೊಬ್ಬಿ ಅತ್ತಿತ್ತ ಓಡಾಡುವ ಕುದುರೆಗಳಂತೆ ಅವರಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹೆಂಡತಿಯನ್ನು ನೋಡಿ ಮೋಹಿಸುತ್ತಿದ್ದನು.
他們像荒淫雄壯的牡馬,各向自己近人的妻室嘶鳴。
9 ನಾನು ಇವುಗಳಿಗಾಗಿ ದಂಡಿಸಬಾರದೋ? ಇಂತಹ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ” ಎಂದು ಯೆಹೋವನು ನುಡಿಯುತ್ತಾನೆ.
這些事,我怎能不懲罰﹖──上主的斷語──像這些火民族,我怎能不親自報復﹖
10 ೧೦ “ಚೀಯೋನೆಂಬ ದ್ರಾಕ್ಷಿ ತೋಟದ ಸಾಲುಗಿಡಗಳ ಮೇಲೆ ಬಿದ್ದು ಹಾಳುಮಾಡಿರಿ, ಆದರೆ ನಿರ್ಮೂಲಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ, ಅವು ಯೆಹೋವನವುಗಳಲ್ಲ.
請你們登上她的牆上頭,加以毀壞,但不要完全毀滅,該除去她的枝條,因為它們不屬於上主。
11 ೧೧ ಇಸ್ರಾಯೇಲ್ ವಂಶದವರೂ, ಯೆಹೂದ ವಂಶದವರೂ ನನಗೆ ಕೇವಲ ದ್ರೋಹವನ್ನು ಮಾಡಿರುತ್ತಾರೆ ಎಂದು ಯೆಹೋವನು ನುಡಿಯುತ್ತಾನೆ.
以色列和猶大家,實在對我不忠,達到極點──
12 ೧೨ ಅವರು ಯೆಹೋವನನ್ನು ಅಲ್ಲಗಳೆದು, ‘ಆತನು ಏನು ಮಾಡುವನು? ನಮಗೆ ಕೇಡುಬಾರದು, ಖಡ್ಗವೂ, ಕ್ಷಾಮವೂ ನಮ್ಮ ಕಣ್ಣಿಗೆ ಬೀಳವು;
上主的斷語。他們否認上主說:「衪不存在! 災禍不會臨到我們身上,我們也決不會見到戰爭和飢荒;
13 ೧೩ ಪ್ರವಾದಿಗಳು ಬರೀ ಗಾಳಿಯೇ, ದೈವೋಕ್ತಿಯು ಅವರಲ್ಲಿಲ್ಲ; ಅವರಿಗೆ ಹೀಗೆಯೇ ಆಗಲಿ’” ಅಂದುಕೊಂಡಿದ್ದಾರೆ.
先知們不過是一陣風,他們並沒有上主的話;他們這樣只有自作自受。」
14 ೧೪ ಹೀಗಿರಲು ಸೇನಾಧೀಶ್ವರನಾದ ಯೆಹೋವನೆಂಬ ದೇವರು, “ನೀವು ಹೀಗೆ ಅಂದುಕೊಂಡಿದ್ದರಿಂದ ಆಹಾ, ನಾನು ಪ್ರವಾದಿಯ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಯೂ, ಈ ಜನರನ್ನು ಸೌದೆಯನ್ನಾಗಿಯೂ ಮಾಡುವೆನು, ಅದು ಅವರನ್ನು ದಹಿಸಿಬಿಡುವುದು.
為此,上主萬軍火天主這樣說:「因為他們說了這話,我必使我的話在你的口中成為火,使這人民成為木柴,將他們吞滅。
15 ೧೫ ಇಗೋ, ಇಸ್ರಾಯೇಲ್ ವಂಶವೇ, ಯೆಹೋವನ ಮಾತನ್ನು ಕೇಳು, ನಾನು ಒಂದು ಜನಾಂಗವನ್ನು ದೂರದಿಂದ ನಿಮ್ಮ ಮೇಲೆ ಬರಮಾಡುವೆನು. ಅದು ತಲತಲಾಂತರಗಳಿಂದ ಸ್ಥಿರವಾದ ಜನಾಂಗ, ಅದರ ಭಾಷೆಯು ನಿನಗೆ ತಿಳಿಯದು, ಅದು ಆಡುವ ಮಾತುಗಳನ್ನು ನೀನು ಗ್ರಹಿಸಲಾರೆ.
以色列家! 看,我從遠方給你們引來一個民族──上主的斷語──一個所向無敵的民族,一個支老的民族,一個你們不慬她的語言,也聽不出她說什麼的民族
16 ೧೬ ಅದರ ಬತ್ತಳಿಕೆಯು ಬಾಯ್ದೆರೆದ ಗೋರಿಯೇ, ಅದರ ಭಟರೆಲ್ಲರೂ ಶೂರರೇ.
他們的箭有如張口墳墓;他們都是善戰的勇士。
17 ೧೭ ಇವರು ನಿನ್ನ ಬೆಳೆಯನ್ನೂ, ನಿನ್ನ ಆಹಾರವನ್ನೂ, ನಿನ್ನ ಗಂಡು ಮತ್ತು ಹೆಣ್ಣುಮಕ್ಕಳನ್ನೂ, ನಿನ್ನ ದನ ಮತ್ತು ಕುರಿಗಳನ್ನೂ, ನಿನ್ನ ದ್ರಾಕ್ಷಾಲತೆಗಳನ್ನೂ ಹಾಗೂ ಅಂಜೂರದ ಗಿಡಗಳನ್ನೂ ತಿಂದುಬಿಡುವರು. ನಿನ್ನ ಭರವಸೆಯ ಕೋಟೆಕೊತ್ತಲುಗಳ ಪಟ್ಟಣಗಳನ್ನು ಖಡ್ಗದಿಂದ ಹಾಳುಮಾಡುವರು.
這民族必吃掉你的收穫和食糧,必吃掉你的兒子和女兒,必吃掉你的羊群和牛群,必吃掉你的葡萄和無花果,必以武力蹂躝你依恃的堅城。
18 ೧೮ ಆದರೆ ಆ ದಿನಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲಮಾಡೆನು, ಇದು ಯೆಹೋವನೆಂಬ ನನ್ನ ನುಡಿ” ಎಂದು ಹೇಳುತ್ತಾನೆ.
即在那些時日裏──上主的斷語──我也不對你們加以徹底的毀滅。」
19 ೧೯ “ನಮ್ಮ ದೇವರಾದ ಯೆಹೋವನು ಇವುಗಳನ್ನೆಲ್ಲಾ ನಮಗೆ ಏಕೆ ಮಾಡಿದ್ದಾನೆ?” ಎಂದು ನಿನ್ನ ಜನರು ಅನ್ನುವಾಗ ನೀನು ಅವರಿಗೆ, “ನೀವು ಯೆಹೋವನನ್ನು ತೊರೆದು, ಸ್ವದೇಶದಲ್ಲಿ ಅನ್ಯದೇವತೆಗಳನ್ನು ಆರಾಧಿಸಿದ ಹಾಗೆ ಪರದೇಶದಲ್ಲಿ ಅನ್ಯರನ್ನು ಆರಾಧಿಸುವಿರಿ” ಎಂದು ಹೇಳು.
假使有人問:「為什麼上主我們的天主對我們做了這一切的事﹖」你當對他們說:「你們怎樣離棄了我,在你們國內事奉了外邦的神祗,你們也該怎樣在不屬於你們的境內事奉外邦人。」
20 ೨೦ ಯಾಕೋಬನ ಮನೆತನದೊಳಗೆ ಇದನ್ನು ಸಾರಿರಿ, ಯೆಹೂದದಲ್ಲಿ ಹೀಗೆ ಪ್ರಕಟಿಸಿರಿ,
你們你們將這事通知雅各伯家,轉告猶大說:
21 ೨೧ ಕಣ್ಣಿದ್ದರೂ ಕಾಣದ, ಕಿವಿ ಇದ್ದರೂ ಕೇಳದ, ಬುದ್ಧಿಯಿಲ್ಲದ ಮೂಢ ಜನರೇ, ಯೆಹೋವನ ಈ ಮಾತನ್ನು ಕೇಳಿರಿ,
「你們愚昧無知,有目不見,有耳不聞的人民,請聽聽這話:
22 ೨೨ ನೀವು ನನಗೆ ಅಂಜುವುದಿಲ್ಲವೋ, ನನ್ನೆದುರಿಗೆ ನಡುಗುವುದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.
你們不敬畏我嗎﹖──上主的斷語──你們在我面前不戰憟嗎﹖是我堆集了沙石作海的界限,作為它永不能越過的界限浪雖然洶湧,仍無能為力;雖怒號澎湃,仍不能越過。」
23 ೨೩ ಈ ಜನರ ಹೃದಯವೋ ನನ್ನ ಅಧೀನ ತಪ್ಪಿ ತಿರುಗಿಬಿದ್ದಿದೆ; ಇವರು ನನ್ನ ಅಧೀನವನ್ನು ಮೀರಿ ಬಿಟ್ಟುಹೋಗಿದ್ದಾರೆ.
但這內心頑固的心民,竟背叛而離去,
24 ೨೪ “ಮುಂಗಾರು, ಹಿಂಗಾರು ಅಂತು ಸಕಾಲದ ಮಳೆಯನ್ನು ದಯಪಾಲಿಸಿ, ಸುಗ್ಗಿಯ ಕೆಲವು ವಾರಗಳನ್ನು ನಮಗಾಗಿ ಪ್ರತ್ಯೇಕಪಡಿಸುವ ನಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯಿಡೋಣ” ಎಂದು ಮನದಲ್ಲಿ ಅಂದುಕೊಳ್ಳವುದಿಲ್ಲ.
從不反心自省:「我們應該敬畏上主,我們的天主,因為衪按時降下雨露、秋霜和春雨;又給我們保持固定的收穫時節。」
25 ೨೫ ನಿಮ್ಮ ಅಪರಾಧಗಳು ನಿಮಗಾಗುವ ಪ್ರಯೋಜನಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮ್ಮ ಒಳಿತನ್ನು ತಡೆದಿದೆ.
是你們的過犯混亂了這些時令,是罪惡阻止了你們享這幸福。
26 ೨೬ ನನ್ನ ಜನರಲ್ಲಿ ದುಷ್ಟರು ಕಂಡು ಬಂದಿದ್ದಾರೆ; ಬೇಡರು ಹೊಂಚು ಹಾಕುವ ಹಾಗೆ ಹೊಂಚುಹಾಕುತ್ತಾರೆ; ಉರುಳುಗಳನ್ನು ಹಾಕಿ ಮನುಷ್ಯರನ್ನು ಹಿಡಿಯುತ್ತಾರೆ.
因為在我的人民中發現惡人;他們像隱伏的捕鳥者在窺探,布下羅網捕捉人。
27 ೨೭ ಪಂಜರದಲ್ಲಿ ಪಕ್ಷಿಗಳು ತುಂಬಿರುವಂತೆ ಅವರ ಮನೆಗಳಲ್ಲಿ ಮೋಸದ ಫಲವು ತುಂಬಿದೆ; ಇದರಿಂದ ಧನವಂತರಾಗಿದ್ದಾರೆ.
猶如籠中滿了飛鳥,他們家中也充滿了欺詐,因此成了有勢力,有錢財的人。
28 ೨೮ ಕೊಬ್ಬಿ ಢಾಂಭಿಕರಾಗಿದ್ದಾರೆ; ಇದಲ್ಲದೆ ದುಷ್ಕೃತ್ಯಗಳಲ್ಲಿ ನಿಸ್ಸೀಮರಾಗಿದ್ದಾರೆ. ಅನಾಥರ ವೃದ್ಧಿಗಾಗಿ ಅವರ ಪರವಾಗಿ ವ್ಯಾಜ್ಯ ನಡೆಸರು, ದಿಕ್ಕಿಲ್ಲದವರಿಗೆ ನ್ಯಾಯದೊರಕಿಸರು.
他們肥胖紅潤,作奸犯科,不為孤兒辯護;只求自己享受,也不關懷窮人的權利。
29 ೨೯ ನಾನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ? ಇದು ಯೆಹೋವನಾದ ನನ್ನ ಮಾತು ಎಂಬುದೇ.
像這樣的事,我怎能不懲罰﹖──上主的斷語──像這樣的民族,我怎能不親自報復﹖
30 ೩೦ ಭೀಕರವೂ, ಅಸಹ್ಯವೂ ಆದ ಸಂಗತಿಯು ದೇಶದಲ್ಲಿ ನಡೆದುಬಂದಿದೆ;
在國內發生了一件恐怖而可憎的事:
31 ೩೧ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ. ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?
先知們說假預言,司祭們爭權奪利,我的人民反以此為樂;到了最後,你們究竟還要作什麼﹖

< ಯೆರೆಮೀಯನು 5 >