< ಯೆರೆಮೀಯನು 44 >
1 ೧ ಐಗುಪ್ತ ದೇಶದ ಮಿಗ್ದೋಲ್, ತಹಪನೇಸ್, ನೋಫ್ ಎಂಬ ಪಟ್ಟಣಗಳಲ್ಲಿಯೂ, ಪತ್ರೋಸ್ ಪ್ರಾಂತ್ಯದಲ್ಲಿಯೂ ವಾಸಮಾಡುತ್ತಿದ್ದ ಯೆಹೂದ್ಯರೆಲ್ಲರ ವಿಷಯವಾಗಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ,
मिश्रदेश बसोबास गरेका, मिग्दोल, तहपनेस, नोप र माथिल्लो मिश्रमा बसिरहेका सबै यहूदीको विषयमा यो वचन यर्मियाकहाँ आयोः
2 ೨ “ಇಸ್ರಾಯೇಲಿನ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಾನು ಯೆರೂಸಲೇಮಿಗೂ, ಯೆಹೂದದ ಎಲ್ಲಾ ಊರುಗಳಿಗೂ ಬರಮಾಡಿದ ಕೇಡನ್ನು ನೀವು ನೋಡಿದ್ದೀರಷ್ಟೆ.
“सर्वशक्तिमान् परमप्रभु इस्राएलका परमेश्वर यसो भन्नुहुन्छ, ‘यरूशलेम र यहूदाका सबै सहरमाथि मैले ल्याएका विपत्तिहरू तिमीहरू आफैले देखेका छौ । हेर, आज ती भग्नावशेष भएका छन् । तिनमा बस्ने कोही छैन ।
3 ೩ ಆಹಾ, ಅಲ್ಲಿನವರು ತಮಗೂ, ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ತಿಳಿಯದ ಅನ್ಯದೇವತೆಗಳಿಗೆ ಧೂಪಹಾಕಿ ಸೇವೆಮಾಡುವುದಕ್ಕೆ ಆತುರಪಟ್ಟು ನನ್ನನ್ನು ಕೆಣಕಬೇಕೆಂದೇ ಈ ದುರಾಚಾರವನ್ನು ನಡೆಸಿದ್ದರಿಂದ ಆ ಸ್ಥಳಗಳು ಹಾಳಾದವು, ಅಲ್ಲಿ ಯಾರೂ ವಾಸಿಸರು.
धुप बाल्न र अरू देवताहरूको पुजा गर्न गएर तिनीहरूले मलाई चोट पुर्याउनलाई गरेका तिनीहरूका दुष्ट कुराहरूले गर्दा यसो भएको हो । यी देवताहरूलाई न तिनीहरूले चिन्दथे, न तिमीहरू चिन्छौ, न त तिमीहरूका पुर्खाहरूले चिन्दथे ।'
4 ೪ ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ಅವರ ಬಳಿಗೆ ತಡ ಮಾಡದೆ ಕಳುಹಿಸುತ್ತಾ, ‘ಆಹಾ! ನಾನು ಹೇಸುವ ಈ ಅಸಹ್ಯಕಾರ್ಯವನ್ನು ಮಾಡಬೇಡಿರಿ’ ಎಂದು ಪ್ರಕಟಿಸುತ್ತಾ ಬಂದರೂ,
त्यसैले मैले बारम्बार मेरा दास अगमवक्ताहरूलाई तिनीहरूकहाँ पठाएँ । मैले तिनीहरूलाई यसो भन्न पठाएँ, 'मैले घृणा गर्ने यी घिनलाग्दा कुराहरू गर्न छोड ।’
5 ೫ ಅವರು ಕಿವಿಗೊಟ್ಟು ಕೇಳಲಿಲ್ಲ, ಅನ್ಯದೇವತೆಗಳಿಗೆ ಧೂಪಹಾಕುವುದನ್ನು ನಿಲ್ಲಿಸಲಿಲ್ಲ, ತಮ್ಮ ದುರಾಚಾರವನ್ನು ಬಿಡಲಿಲ್ಲ.
तर तिनीहरूले सुनेनन् । अरू देवताहरूलाई धुप बाल्ने तिनीहरूको दुष्टताबाट ध्यान हटाउने वा फर्कने कुरालाई तिनीहरूले इन्कार गरे ।
6 ೬ ಆದಕಾರಣ ನನ್ನ ಉಗ್ರರೋಷಾಗ್ನಿಯು ಸುರಿದು ಯೆಹೂದದ ಊರುಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಧಗಧಗಿಸಿತು; ಅವು ಈಗಲೂ ಹಾಳು ಪಾಳಾಗಿವೆ.
त्यसैले यहूदाका सहरहरू र यरूशलेमका सडकहरूमा मेरो रिस र क्रोध खन्याइयो, र आगो लगाइयो । ती उजाड र सर्वनाश भए, जस्तो आजको दिनसम्म छ ।'
7 ೭ ಹೀಗಿರಲು ಸೇನಾಧೀಶ್ವರಸ್ವಾಮಿಯೂ ಇಸ್ರಾಯೇಲಿನ ದೇವರೂ ಆದ ಯೆಹೋವನು ಈಗ ಇಂತೆನ್ನುತ್ತಾನೆ, ಈ ದೊಡ್ಡ ಕೇಡನ್ನು ನಿಮಗೆ ನೀವೇ ಉಂಟುಮಾಡಿಕೊಳ್ಳುವುದೇಕೆ? ಈ ದುರಾಚಾರದ ನಿಮಿತ್ತ ಯೆಹೂದದಲ್ಲಿರುವ ಗಂಡಸರು, ಹೆಂಗಸರು, ಮಕ್ಕಳು, ಮೊಲೆಕೂಸುಗಳು ನಿರ್ಮೂಲವಾಗುವರು, ನಿಮ್ಮಲ್ಲಿ ಯಾರೂ ಉಳಿಯುವುದಿಲ್ಲ.
त्यसैले अब परमप्रभु सर्वशक्तिमान् परमेश्वर, इस्राएलका परमेश्वर यसो भन्नुहुन्छ, 'आफ्नै विरुद्धमा तिमीहरू किन ठुला-ठुला दुष्ट काम गर्दैछौ? यहूदाका पुरुषहरू, स्त्रीहरू, बालबालिका तथा दूधे बालकहरूबाट किन आफै बहिष्कृत हुँदैछौ? तिमीहरूका कोही पनि बाँकी छाडिनेछैनौ ।
8 ೮ ಪ್ರವಾಸಿಗಳಾಗಿ ನೀವು ಬಂದಿರುವ ಐಗುಪ್ತ ದೇಶದಲ್ಲಿ ಅನ್ಯದೇವತೆಗಳಿಗೆ ಧೂಪಹಾಕುವ ದುಷ್ಕೃತ್ಯವನ್ನು ನಡೆಸುತ್ತಾ ನನ್ನನ್ನು ಕೆಣಕುವುದರಿಂದ ನೀವು ನಿರ್ಮೂಲರಾಗಿ ಸಕಲ ಭೂರಾಜ್ಯಗಳ ಶಾಪ ಮತ್ತು ದೂಷಣೆಗಳಿಗೆ ಗುರಿಯಾಗುವಿರಿ.
तिमीहरूका हातका कामहरूद्वारा, तिमीहरू बस्न गएका मिश्रदेशमा अरू देवताहरूलाई धुप बालेर तिमीहरूका हातले गरेका कामका दुष्टता तिमीहरूले मलाई चोट पुर्याएका छौ । तिमीहरू नष्ट गरिन र पृथ्वीका सबै जातिका बिचमा सराप र निन्दाको पात्र बन्न तिमीहरू त्यहाँ गएका छौ ।
9 ೯ ನಿಮ್ಮ ಪೂರ್ವಿಕರು, ಯೆಹೂದದ ಅರಸರು, ಅವರ ಹೆಂಡತಿಯರು, ನೀವು ಮತ್ತು ನಿಮ್ಮ ಹೆಂಡತಿಯರು ಇವರೆಲ್ಲರೂ ಯೆಹೂದ ದೇಶದಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ನಡೆಸಿದ ದುರಾಚಾರಗಳನ್ನು ಮರೆತುಬಿಟ್ಟಿರೋ?
तिमीहरूका पुर्खाहरू अनि यहूदाका राजाहरू र तिनीहरूका पत्नीहरूले गरेका दुष्टतालाई के तिमीहरूले बिर्सेका छौ? यहूदा देशमा र यरूशलेमका सडकहरूमा तिमीहरू आफै र तिमीहरूका पत्नीहरूले गरेका दुष्ट कामलाई के तिमीहरूले बिर्सेका छौ?
10 ೧೦ ಅವರು ಇಂದಿನವರೆಗೂ ತಗ್ಗಲಿಲ್ಲ, ನನಗೆ ಭಯಪಡಲಿಲ್ಲ; ನಾನು ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ನೇಮಿಸಿದ ನಿಯಮನಿಷ್ಠೆಗಳನ್ನು ಅನುಸರಿಸಿ ನಡೆಯಲೂ ಇಲ್ಲ.
आजको दिनसम्म पनि तिनीहरू नम्र भएका छैनन् । मैले तिनीहरू र तिनीहरूका पुर्खाहरूका सामु राखेको मेरा व्यवस्था वा विधानहरूलाई तिनीहरूले आदर गर्दैनन्, न त तिनीहरू तीअनुसार हिंड्छन् ।'
11 ೧೧ “ಆದಕಾರಣ ಇಸ್ರಾಯೇಲಿನ ದೇವರೂ, ಸೇನಾಧೀಶ್ವರನು ಆದ ಯೆಹೋವನು ಹೀಗೆನ್ನುತ್ತಾನೆ, ಆಹಾ, ಯೆಹೂದವನ್ನೆಲ್ಲಾ ನಿರ್ಮೂಲಮಾಡುವೆನು, ಕೇಡಿಗಾಗಿಯೇ ನಿಮ್ಮ ಮೇಲೆ ದೃಷ್ಟಿಯಿಡುವೆನು.
त्यसकारण सर्वशक्तिमान् परमप्रभु इस्राएलका परमेश्वर यसो भन्नुहुन्छ, 'हेर, तिमीहरूमाथि विपत्ति ल्याउन र सारा यहूदालाई नष्ट गर्न मैले आफ्नो अनुहारलाई तिमीहरूबाट हटाउनै लागेको छु ।
12 ೧೨ ಐಗುಪ್ತಕ್ಕೆ ಹೋಗಿ ಅಲ್ಲಿ ಪ್ರವಾಸಿಸಲು ಹಟಹಿಡಿದ ಯೆಹೂದದ ಉಳಿದ ಜನರನ್ನು ನಾನು ಹಿಡಿದು ನಾಶಮಾಡುವೆನು; ಐಗುಪ್ತದಲ್ಲೇ ಒರಗಿ ಹೋಗುವರು; ಖಡ್ಗ ಮತ್ತು ಕ್ಷಾಮಗಳಿಂದ ನಾಶವಾಗುವರು; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಖಡ್ಗ ಮತ್ತು ಕ್ಷಾಮಗಳಿಂದ ಸತ್ತು ಅಪವಾದ, ಶಾಪ, ನಿಂದೆಗೆ ಮತ್ತು ದೂಷಣೆಗಳಿಗೆ ಗುರಿಯಾಗುವರು.
किनकि मिश्रदेशमा बस्न जाने निधो गरेका यहूदाका बाँकी रहेकाहरूलाई म नष्ट पार्नेछु । तिनीहरू सबै मिश्रदेशमा नष्ट होऊन् भनेर म यसो गर्नेछु । तिनीहरू सबै तरवार र अनिकालले ढल्नेछन् । सानादेखि ठुलासम्म तिनीहरू तरवार र अनिकालले नष्ट हुनेछन् । तिनीहरू मर्नेछन्, अनि कसम, सराप, निन्दा र घृणाका पात्र बन्नेछन् ।
13 ೧೩ ನಾನು ಯೆರೂಸಲೇಮಿನವರನ್ನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸಿದಂತೆ ಐಗುಪ್ತದಲ್ಲಿ ವಾಸಿಸುವವರನ್ನೂ ದಂಡಿಸುವೆನು.
जसरी मैले यरूशलेमलाई तरवार, अनिकाल र विपत्तिले दण्ड दिएँ, त्यसै गरी मिश्रदेशमा बसेका मानिसहरूलाई दण्ड दिनेछु,
14 ೧೪ ಐಗುಪ್ತಕ್ಕೆ ಹೋಗಿ ಪ್ರವಾಸ ಮಾಡುತ್ತಿರುವ ಯೆಹೂದದ ಉಳಿದ ಜನರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಉಳಿದು ಅಲ್ಲಿಂದ ತಪ್ಪಿಸಿಕೊಂಡು ಯೆಹೂದಕ್ಕೆ ಹಿಂದಿರುಗುವುದಿಲ್ಲ; ಓಡಿಬರುವ ಸ್ವಲ್ಪ ಜನರೇ ಹೊರತು ಯಾರೂ ಹಿಂದಿರುಗುವುದಿಲ್ಲ.
जसको कारणले मिश्रदेशमा बस्न गएका यहूदाका बाँकी रहेकाहरूमध्ये कोही पनि उम्कने वा बाँच्ने वा यहूदामा फर्कनेछैन, जहाँ फर्केर जाने र बस्ने तिनीहरूको इच्छा छ । अनि त्यहाँबाट भागेका थोरैबाहेक अरू कोही फर्कनेछैन' ।”
15 ೧೫ “ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಹಾಕುತ್ತಿದ್ದರೆಂದು ತಿಳಿದುಕೊಂಡಿದ್ದ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು ಅಂತು ಐಗುಪ್ತದಲ್ಲಿಯೂ, ಪತ್ರೋಸಿನಲ್ಲಿಯೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ” ಹೀಗೆ ಹೇಳಿದರು,
तब आफ्ना पत्नीहरूले अरू देवताहरूलाई धुप बाल्दैथिए भनी थाहा पाएका त्यस ठुलो सभाका सबै मानिस र उक्त सभामा भएका सबै स्त्री अनि तल्लो र माथिल्लो मिश्रमा बस्ने सबै यहूदीले यर्मियालाई जवाफ दिए,
16 ೧೬ “ಯೆಹೋವನ ಹೆಸರಿನಿಂದ ನೀನು ನಮಗೆ ನುಡಿದ ಮಾತುಗಳನ್ನು ಕೇಳುವುದಿಲ್ಲ.
तिनीहरूले भने, “परमप्रभुको नाउँमा तिमीले हामीलाई भनेका वचनका तिम्रा कुरा हामी सुन्नेछैनौं ।
17 ೧೭ ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವುದಿಲ್ಲ ಎಂದು ನಾವು ಬಾಯಿಬಿಟ್ಟು ಹೇಳಿದ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುವೆವು. ಮೊದಲು ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ ನಾವೂ ಮತ್ತು ನಮ್ಮ ಪೂರ್ವಿಕರೂ ನಮ್ಮ ಅರಸರೂ, ನಮ್ಮ ಪ್ರಧಾನರೂ ಹೀಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದೆವು.
किनकि हामीले गर्नेछौं भनेका सबै कुरा हामी निश्चय नै गर्नेछौं, अर्थात् स्वर्गकी रानीलाई धुप बाल्नेछौं, अनि यहूदाका सहरहरू र यरूशलेमका सडकहरूमा हामी, हाम्रा पुर्खाहरू, हाम्रा राजाहरू र हाम्रा अगुवाहरूले गरेझैं हामी तिनको निम्ति अर्घबलिहरू खन्याउनेछौं । तब हामी भोजनले भिपूर्ण हुनेछौं, र कुनै विपत्तिविना हाम्रो उन्नति हुनेछ ।
18 ೧೮ ಆದರೆ ನಾವು ಗಗನದ ಒಡತಿಗೆ ಧೂಪಹಾಕುವುದನ್ನೂ ಪಾನವನ್ನು ನೈವೇದ್ಯವಾಗಿ ಸುರಿಯುವುದನ್ನೂ ನಿಲ್ಲಿಸಿಬಿಟ್ಟಂದಿನಿಂದ ಎಲ್ಲಾ ಕೊರತೆಗೂ ಗುರಿಯಾಗಿ ಖಡ್ಗ, ಕ್ಷಾಮಗಳಿಂದ ನಾಶವಾಗುತ್ತಿದ್ದೇವೆ.
हामीले स्वर्गकी रानीलाई धुप बाल्न र उनलाई अर्घबलिहरू खन्याउन छोड्दा हामी सबै जनाले गरिबी भोग्दै थियौँ अनि हामी तरवार र अनिकालले मर्दै थियौँ ।”
19 ೧೯ ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುತ್ತಿದ್ದಾಗ ನಾವು ಆಕೆಯ ಪೂಜೆಗಾಗಿ ಆಕೆಯ ಆಕಾರವಾದ ಹೋಳಿಗೆಗಳನ್ನು ಮಾಡಿ ಪಾನದ್ರವ್ಯವನ್ನು ಅರ್ಪಿಸಿದ್ದು ನಮ್ಮ ಗಂಡಂದಿರಿಗೆ ಒಪ್ಪಿಗೆಯಾಗಿರಲಿಲ್ಲವೋ?” ಎಂದರು.
स्त्रीहरूले भने, “हामीले स्वर्गकी रानीको सामु धुप बाल्दा र उनलाई अर्घबलिहरू खन्याउँदा, उनको प्रतिरूपका फुरौलाहरू बनाउँदा र उनलाई अर्घबलिहरू चढाउँदा के हामीले आफ्ना पतिहरूले भनेको नमानेर यी कुराहरू गर्यौँ र?”
20 ೨೦ ಆಗ ಯೆರೆಮೀಯನು ಗಂಡಸರಿಗೂ, ಹೆಂಗಸರಿಗೂ ಅಂತು ತನಗೆ ಆ ಉತ್ತರಕೊಟ್ಟ ಎಲ್ಲಾ ಜನರಿಗೂ,
तब यर्मियाले सबै मानिस अर्थात् पुरुषहरू र स्त्रीहरू अनि तिनलाई जवाफ दिने सबै मानिसहरूलाई तिनले घोषणा गरे र भने,
21 ೨೧ “ನೀವು, ನಿಮ್ಮ ಪೂರ್ವಿಕರು, ನಿಮ್ಮ ಅರಸರು, ನಿಮ್ಮ ಪ್ರಧಾನರು, ಸಾಮಾನ್ಯ ಜನರು, ನೀವೆಲ್ಲರೂ ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ ಹಾಕಿದ ಧೂಪವು ಯೆಹೋವನ ನೆನಪಿನಲ್ಲಿ ಇಲ್ಲವೋ, ಅದು ಆತನ ಜ್ಞಾಪಕಕ್ಕೆ ಬರಲಿಲ್ಲವೋ?
“के तिमीहरू, तिमीहरूका पुर्खाहरू, तिमीहरूका राजाहरू, अगुवाहरू र देशका मानिसहरूले यहूदाका सहरहरू र यरूशलेमका सडकहरूमा चढाएका धुपलाई परमप्रभुले सम्झनुभएन र? किनकि परमप्रभुले यो सम्झनुहुन्छ । यो उहाँको विचारमा आउँछ ।
22 ೨೨ ನೀವು ನಡೆಸಿದ ದುರಾಚಾರಗಳನ್ನೂ, ಅಸಹ್ಯಕಾರ್ಯಗಳನ್ನೂ ಯೆಹೋವನು ಇನ್ನು ಸಹಿಸಲಾರದೆ ಹೋದುದರಿಂದ ನಿಮ್ಮ ದೇಶವು ಹಾಳುಬಿದ್ದು ಜನವಿಲ್ಲದೆ ನಾಶಕ್ಕೂ, ಶಾಪಕ್ಕೂ ಆಸ್ಪದವಾಯಿತು; ಈಗಲೂ ಹಾಗೆಯೇ ಇದೆ.
तब तिमीहरूका दुष्ट अभ्यासहरूका कारणले र तिमीहरूले गरेका घिनलाग्दा कुराहरूको कारणले उहाँले यसलाई सहन सक्नुभएन । तब तिमीहरूको देश उजाड, त्रास र सराप बन्यो, यसैले आजको दिनसम्म त्यहाँ एक जना बासिन्दा छैन ।
23 ೨೩ ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ, ನಿಬಂಧನೆಗಳನ್ನೂ, ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪ ಮಾಡಿ ಅನ್ಯದೇವತೆಗಳಿಗೆ ಧೂಪಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ” ಎಂದನು.
तिमीहरूले धुप बालेका र परमप्रभुको विरुद्धमा पाप गरेको कारणले अनि तिमीहरूले उहाँको स्वोर, उहाँको व्यवस्था, उहाँका विधानहरू वा उहाँका करारका आदेशहरू पालन नगरेको कारणले तिमीहरूको विरुद्धमा यो विपत्ति आएको हो, जस्तो आजको दिनसम्म छ ।”
24 ೨೪ ಇದಲ್ಲದೆ ಯೆರೆಮೀಯನು ಹೆಂಗಸರಿಗೂ, ಎಲ್ಲಾ ಜನರಿಗೂ ಹೀಗೆ ಹೇಳಿದನು, “ಐಗುಪ್ತದಲ್ಲಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ.
तब यर्मियाले सबै मानिस र सबै स्त्रीलाई भने, “हे मिश्रदेशमा भएका यहूदाका सबै मानिस हो, परमप्रभुको वचन सुन ।
25 ೨೫ ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವೆವು ಎಂದು ನಾವು ಮಾಡಿಕೊಂಡ ಹರಕೆಗಳನ್ನು ಖಂಡಿತವಾಗಿ ತೀರಿಸುವೆವು ಎಂಬುದಾಗಿ ನೀವೂ, ನಿಮ್ಮ ಹೆಂಡತಿಯರೂ ಬಾಯಿಂದ ಪ್ರತಿಜ್ಞೆಮಾಡಿ ಕೈಯಿಂದ ನೆರವೇರಿಸಿದ್ದೀರಲ್ಲಾ; ನಿಮ್ಮ ಹರಕೆಗಳನ್ನು ಖಂಡಿತವಾಗಿ ತೀರಿಸಿರಿ, ನೆರವೇರಿಸೇ ನೆರವೇರಿಸಿರಿ!
सर्वशक्तिमान् परमप्रभु, इस्राएलका परमेश्वर यसो भन्नुहुन्छः 'स्वर्गकी रानीलाई पुजा गर्न र उनलाई अर्घबलिहरू चढाउन हामीले खाएका भाकलहरूलाई हामी निश्चय नै पुरा गर्नेछौं' भनी तिमीहरू र तिमीहरूका पत्नीहरू दुवैले तिमीहरूका मुखले भनेका थियौ र तिमीहरूले आफ्ना हातले पुरा गरेका छौ । अब तिमीहरूका भाकलहरू पुरा गर । तिनलाई निरन्तर गर ।’
26 ೨೬ ಐಗುಪ್ತದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ; ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ಎತ್ತಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನು ಇರುವುದಿಲ್ಲ ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆಯಿಟ್ಟಿದ್ದೇನೆ.
त्यसैले मिश्रदेशमा बस्ने सारा यहूदा हो, परमप्रभुको यो वचन सुन ‘हेर, मेरो महान् नाउँद्वारा मैले शपथ खाएको छु, परमप्रभु भन्नुहुन्छ । सारा मिश्र देशमा भएका यहूदाका मानिसको मुखले अहिले, 'जीवित परमप्रभुको नाउँमा' भनेरझैं फेरि मेरो नाउँ कहिलै पनि पुकार्नेछैनन् ।”
27 ೨೭ ಇಗೋ, ಇವರಿಗೆ ಮೇಲನ್ನಲ್ಲ, ಕೇಡನ್ನೇ ಮಾಡಬೇಕೆಂದು ಎಚ್ಚರಗೊಂಡಿದ್ದೇನೆ; ಐಗುಪ್ತದಲ್ಲಿನ ಎಲ್ಲಾ ಯೆಹೂದ್ಯರು ಖಡ್ಗ, ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.
हेर, मैले तिनीहरूलाई भलाइको निम्ति होइन, विपत्तिको निम्ति हेर्दैछु । मिश्रदेशमा भएको यहूदाको हरेक व्यक्ति सखाप नभएसम्म तिनीहरू तरवार र अनिकालले नष्ट हुनेछ ।
28 ೨೮ ಖಡ್ಗಕ್ಕೆ ತಪ್ಪಿಸಿಕೊಂಡವರು ಸ್ವಲ್ಪ ಜನ ಮಾತ್ರವೇ ಆಗಿ ಐಗುಪ್ತದಿಂದ ಯೆಹೂದಕ್ಕೆ ಹಿಂದಿರುಗುವರು; ಆಗ ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದದ ಉಳಿದ ಜನರೆಲ್ಲರೂ ನನ್ನ ಮಾತು ನಡೆಯುವುದೋ ಅಥವಾ ತಮ್ಮ ಮಾತು ನಡೆಯುವುದೋ ಎಂದು ತಿಳಿದುಕೊಳ್ಳುವರು.
तब तरवारबाट बाँचेकामध्येका थोरै सङ्ख्या मात्र तिनीहरू मिश्रदेशबाट यहूदाको देशमा फर्कनेछन् । तब तिनीहरूको कि मेरो कसको वचन सत्य ठहर्दोरहेछ भनी मिश्रदेशमा बस्न गएका यहूदाका बाँकी भएकाहरूले जान्नेछन् ।
29 ೨೯ ನಾನು ನಿಮ್ಮನ್ನು ಈ ಸ್ಥಳದಲ್ಲಿ ದಂಡಿಸುವೆನು ಎಂಬುದಕ್ಕೆ ಒಂದು ಗುರುತು ಕಾಣುವುದು; ನನ್ನ ಮಾತುಗಳು ಈಡೇರಿ ನಿಮಗೆ ಕೇಡನ್ನು ಉಂಟುಮಾಡುವೆನು ಎಂಬುದಾಗಿ ಅದರಿಂದಲೇ ನಿಮಗೆ ತಿಳಿದುಬರುವುದು.
यो परमप्रभुको घोषणा हो, तिमीहरूका विरुद्धमा मैले तिमीहरूलाई यो ठाउँमा दिने चिन्हचाहिं यो हुनेछ, यसैले कि मेरो वचनले निश्चय पनि तिमीहरूलाई विपत्तिले आक्रमण गर्नेछ भनी तिमीहरूलाई थाहा होस् ।
30 ೩೦ ಅದೇನೆಂದರೆ, ಇಗೋ ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಪ್ರಾಣ ಹುಡುಕುತ್ತಿದ್ದ ಶತ್ರುವಾದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಕೈಗೆ ಕೊಟ್ಟಂತೆ ಐಗುಪ್ತದ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣ ಹುಡುಕುವ ಶತ್ರುಗಳ ಕೈಗೆ ಕೊಡುವೆನು; ಇದು ಯೆಹೋವನಾದ ನನ್ನ ನುಡಿ’” ಎಂಬುದೇ.
परमप्रभु यसो भन्नुहुन्छ, 'हेर, मिश्रको राजा फारो होप्रालाई त्यसका शत्रुहरू र त्यसको ज्यान लिन खोज्नेहरूको हातमा मैले सुम्पिदिनै लागेको छु । यहूदाका राजा सिदकियालाई मैले त्यसको ज्यान लिन खोज्ने शत्रु बेबिलोनको राजा नबूकदनेसरको हातमा सुम्पेको जस्तै त्यो हुनेछ ।’”