< ಯೆರೆಮೀಯನು 41 >

1 ಏಳನೆಯ ತಿಂಗಳಿನಲ್ಲಿ ರಾಜವಂಶದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಅರಸನ ಪ್ರಧಾನರಲ್ಲಿ ಒಬ್ಬನೂ ಆದ ಇಷ್ಮಾಯೇಲನು ಹತ್ತು ಮಂದಿಯೊಂದಿಗೆ ಅಹೀಕಾಮನ ಮಗನಾದ ಗೆದಲ್ಯನು ವಾಸವಾಗಿದ್ದ ಮಿಚ್ಪಕ್ಕೆ ಬಂದನು; ಅಲ್ಲಿ ಅವನೊಂದಿಗೆ ಊಟಮಾಡಿದರು.
Ɔsram a ɛto so ason mu no, Elisama babarima Netania babarima Ismael a ɔyɛ ɔdehye a na anka ɔyɛ ɔhene adwumayɛfo no mu baako no ne mmarima du baa Ahikam babarima Gedalia nkyɛn wɔ Mispa. Bere a wɔn nyinaa gu so redidi no,
2 ಆಗ ನೆತನ್ಯನ ಮಗನಾದ ಇಷ್ಮಾಯೇಲನೂ ಅವನೊಂದಿಗಿದ್ದ ಹತ್ತು ಜನರೂ ಎದ್ದು ಅಹೀಕಾಮನ ಮಗ ಶಾಫಾನನ ಮೊಮ್ಮಗ ಬಾಬೆಲಿನ ಅರಸನಿಂದ ದೇಶಾಧಿಪತಿಯಾಗಿ ನೇಮಿಸಲ್ಪಟ್ಟವನೂ ಆದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು.
Netania babarima Ismael ne ne mmarima du no a wɔka ne ho no sɔree na wɔde afoa wɔɔ Ahikam babarima Gedalia, a ɔyɛ Safan nena ne nea Babiloniahene ayi no sɛ amrado wɔ asase no so no kum no.
3 ಇದಲ್ಲದೆ ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರೆಲ್ಲರನ್ನೂ, ಅಲ್ಲಿ ಸಿಕ್ಕಿದ ಕಸ್ದೀಯರಾದ ಸೈನಿಕರನ್ನೂ ಹತ್ಯೆಮಾಡಿದನು.
Ismael kum Yudafo a na wɔka Gedalia ho wɔ Mispa ne Babilonia asraafo a na wɔwɔ hɔ no nso.
4 ಅವನು ಗೆದಲ್ಯನನ್ನು ಕೊಂದ ಎರಡನೆಯ ದಿನದಲ್ಲಿ ಆ ಸಂಗತಿಯು ಇನ್ನೂ ಯಾರಿಗೂ ತಿಳಿಯದಿರಲು,
Ade kyee no, ansa na obiara bɛte Gedalia wu no,
5 ಗಡ್ಡಬೋಳಿಸಿ, ಬಟ್ಟೆಹರಿದು ಗಾಯ ಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದು ಕೈಯಲ್ಲಿ ಧೂಪ ಮತ್ತು ನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು.
mmarima aduɔwɔtwe a wɔayiyi wɔn abogyesɛ, asunsuane wɔn ntade mu na wɔasesa wɔn honam ani fi Sekem, Silo ne Samaria bae a wɔde aduan afɔrebɔde ne nnuhuam reba Awurade fi.
6 ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಅವರ ಕಡೆಗೆ ಹೊರಟು ದಾರಿಯುದ್ದಕ್ಕೂ ಅಳುತ್ತಾ ನಡೆದು ಅವರನ್ನು ಎದರುಗೊಂಡು, “ಅಹೀಕಾಮನ ಮಗನಾದ ಗೆದಲ್ಯನ ಬಳಿಗೆ ಬನ್ನಿರಿ” ಎಂದು ಹೇಳಿದನು.
Netania babarima Ismael de agyaadwo fi Mispa kohyiaa wɔn. Bere a ohyiaa wɔn no ɔkae se, “Mommra Ahikam babarima Gedalia nkyɛn.”
7 ಅವರು ಊರೊಳಕ್ಕೆ ಬಂದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಮತ್ತು ಅವನ ಸಂಗಡಿಗರೂ ಅವರನ್ನು ಕೊಲ್ಲಿಸಿ ಬಾವಿಯಲ್ಲಿ ಹಾಕಿದರು.
Woduu kuropɔn no mu no, Netania babarima Ismael ne mmarima a wɔka ne ho no kum wɔn na wɔtow wɔn afunu guu abura bi mu.
8 ಆದರೆ ಆ ಎಂಭತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಲ್ಲಬೇಡ; ಗೋದಿ, ಜವೆಗೋದಿ, ಎಣ್ಣೆ, ಜೇನುತುಪ್ಪ, ಇವುಗಳನ್ನು ಕಾಡಿನಲ್ಲಿ ಬಹಳವಾಗಿ ಬಚ್ಚಿಟ್ಟಿದ್ದೇವೆ” ಎಂದು ಬಿನ್ನೈಸಲು ಅವನು ಅವರನ್ನು ಅವರ ಜೊತೆಯವರಂತೆ ಕೊಲ್ಲದೆ ಬಿಟ್ಟನು.
Nanso nnipa no mu du ka kyerɛɛ Ismael se, “Nkum yɛn! Yɛwɔ awi ne atoko, ngo ne ɛwo a yɛde asie wɔ afuw bi mu.” Enti ogyaa wɔn na wankum wɔn nso.
9 ಇಷ್ಮಾಯೇಲನು ತಾನು ಗೆದಲ್ಯನ ಸಂಗಡ ಕೊಂದ ಇತರರ ಶವಗಳನ್ನು ಹಾಕಿದ ಬಾವಿಯು, ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಅರಸನಾದ ಆಸನು ತೋಡಿಸಿದ್ದ ಬಾವಿಯೇ. ಆ ಬಾವಿಯನ್ನು ನೆತನ್ಯನ ಮಗನಾದ ಇಷ್ಮಾಯೇಲನು ಹತರಾದವರ ಶವಗಳಿಂದ ತುಂಬಿಸಿಬಿಟ್ಟನು.
Abura a Ismael tow nnipa a okunkum wɔn no afunu ne Gedalia guu mu no, na ɛyɛ nea ɔhene Asa tuu sɛ ne ho bammɔ fa bi de tiaa Israelhene Baasa. Netania babarima Ismael de afunu hyɛɛ no ma.
10 ೧೦ ಆ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನು ರಾಜಕುಮಾರ್ತೆಯರನ್ನು, ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ, ಮಿಚ್ಪದ ಉಳಿದ ಜನರನ್ನು ಸೆರೆಹಿಡಿದು ಅಮ್ಮೋನ್ಯರ ಸೀಮೆಗೆ ಹೊರಟನು.
Ismael faa nnipa a na wɔaka wɔ Mispa no nyinaa nnommum; ɔhene mmabea ne wɔn a wɔkaa hɔ no nyinaa, wɔn a Nebusaradan a otua ɔhene awɛmfo ano no ayi Ahikam babarima Gedalia sɛ ɔnhwɛ wɔn so no. Netania babarima Ismael faa wɔn nnommum na osii mu kɔɔ Amonfo nkyɛn.
11 ೧೧ ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಕಲ ಸೇನಾಪತಿಗಳೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ ಎಲ್ಲಾ ಕೆಡುಕನ್ನು ಕೇಳಿ,
Bere a Karea babarima Yohanan ne asraafo mpanyimfo a wɔka ne ho no nyinaa tee awudisɛm a Netania babarima Ismael adi no,
12 ೧೨ ತಮ್ಮ ಸೈನಿಕರನ್ನೆಲ್ಲಾ ಕರೆದುಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಮೇಲೆ ಯುದ್ಧಕ್ಕೆ ಹೊರಟು, ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಅವನನ್ನು ಕಂಡರು.
wɔfaa wɔn asraafo nyinaa sɛ wɔne Netania babarima Ismael rekɔko. Wɔkɔtoo no wɔ ɔtare kɛse bi a ɛwɔ Gibeon ho.
13 ೧೩ ಆಗ ಇಷ್ಮಾಯೇಲನ ಸಂಗಡ ಇದ್ದ ಎಲ್ಲಾ ಜನರು ಕಾರೇಹನ ಮಗನಾದ ಯೋಹಾನಾನನನ್ನೂ ಅವನೊಂದಿಗಿದ್ದ ಸಮಸ್ತ ಸೇನಾಪತಿಗಳನ್ನೂ ನೋಡಿ ಸಂತೋಷಪಟ್ಟರು.
Bere a nnipa a wɔka Ismael ho no nyinaa huu Karea babarima Yohanan ne asraafo mpanyimfo a wɔka ne ho no, wɔn ani gyei.
14 ೧೪ ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ಒಯ್ದಿದ್ದ ಸಕಲ ಜನರು ಹಿಂದಿರುಗಿ ಹೋಗಿ ಕಾರೇಹನ ಮಗನಾದ ಯೋಹಾನಾನನ ಬಳಿಗೆ ಸೇರಿದರು.
Nnipa a na Ismael afa wɔn nnommum wɔ Mispa no nyinaa dan kɔɔ Karea babarima Yohanan afa.
15 ೧೫ ನೆತನ್ಯನ ಮಗನಾದ ಇಷ್ಮಾಯೇಲನೋ ಎಂಟು ಮಂದಿಯ ಸಂಗಡ ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರನ್ನು ಮೊರೆಹೊಕ್ಕನು.
Nanso Netania babarima Ismael ne ne mmarima baawɔtwe, guan fii Yohanan anim kɔɔ Amonfo nkyɛn.
16 ೧೬ ಆಗ ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಮಸ್ತ ಸೇನಾಧಿಪತಿಗಳೂ ತಾವು ನೆತನ್ಯನ ಮಗನಾದ ಇಷ್ಮಾಯೇಲನ ಕೈಯಿಂದ ತಪ್ಪಿಸಿ ಗಿಬ್ಯೋನಿನಿಂದ ತಂದಿದ್ದ ಭಟರು, ಹೆಂಗಸರು, ಮಕ್ಕಳು, ಕಂಚುಕಿಗಳು, ಅಂತು ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದ ಮೇಲೆ ಮಿಚ್ಪದಿಂದ ಒಯ್ದ ಉಳಿದ ಜನರನ್ನೆಲ್ಲಾ ಕರೆದುಕೊಂಡು ಹೋದರು.
Afei Karea babarima Yohanan ne asraafo mpanyimfo a wɔka ne ho no dii Mispa nkae a ogyee wɔn fii Netania babarima Ismael nsam bere a okum Ahikam babarima Gedalia no akyi no anim: Ɔde asraafo, mmea, mmofra ne asennii adwumayɛfo, fii Gibeon bae.
17 ೧೭ ಅವರು ಕಸ್ದೀಯರ ಭಯದಿಂದ ಐಗುಪ್ತಕ್ಕೆ ವಲಸೆಹೋಗಬೇಕೆಂದು ಬೇತ್ಲೆಹೇಮಿನ ಸಮೀಪವಾಗಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು.
Wosii mu sɛ wɔrekɔ Misraim no, wɔsoɛɛ wɔ Gerut Kimham a ɛbɛn Betlehem;
18 ೧೮ ಬಾಬೆಲಿನ ಅರಸನಿಂದ ದೇಶಕ್ಕೆ ಅಧಿಪತಿಯಾಗಿ ನೇಮಿಸಲ್ಪಟ್ಟವನೂ ಅಹೀಕಾಮನ ಮಗನೂ ಆದ ಗೆದಲ್ಯನನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ್ದರಿಂದ ಕಸ್ದೀಯರಿಗೆ ಅಂಜಿದರು.
na wɔreguan Babiloniafo no. Na wosuro wɔn, efisɛ na Netania babarima Ismael akum Ahikam babarima Gedalia a Babiloniahene yii no sɛ amrado a ɔhwɛ asase no so no.

< ಯೆರೆಮೀಯನು 41 >