< ಯೆರೆಮೀಯನು 25 >
1 ೧ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ,
Magana ta zo wa Irmiya game da dukan mutanen Yahuda a shekara ta huɗu ta Yehohiyakim ɗan Yosiya sarkin Yahuda, wadda ta kasance shekara ta fari ta Nebukadnezzar sarkin Babilon.
2 ೨ ಪ್ರವಾದಿಯಾದ ಯೆರೆಮೀಯನು ಯೆಹೂದ್ಯರೆಲ್ಲರ ವಿಷಯವಾಗಿ ತನಗೆ ಉಂಟಾದ ಈ ದೈವೋಕ್ತಿಯನ್ನು ಸಕಲ ಯೆಹೂದ್ಯರಿಗೂ ಸಮಸ್ತ ಯೆರೂಸಲೇಮಿನವರಿಗೂ ಸಾರಿದನು.
Saboda haka Irmiya annabi ya ce wa dukan mutanen Yahuda da dukan mazaunan Urushalima.
3 ೩ ಆತನು, “ಆಮೋನನ ಮಗನೂ ಯೆಹೂದದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಿಂದ ಈ ದಿನದವರೆಗೆ, ಇಪ್ಪತ್ತಮೂರು ವರ್ಷಗಳಿಂದಲೂ ಯೆಹೋವನು ತನ್ನ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ; ಅದನ್ನು ನಿಮಗೆ ಪ್ರಕಟಿಸುತ್ತಲೇ ಬಂದಿದ್ದೇನೆ; ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ.
Shekaru ashirin da uku, daga shekara ta goma sha uku ta Yosiya ɗan Amon sarkin Yahuda har zuwa wannan rana, maganar Ubangiji ta zo mini na kuma yi muku magana sau da sau, amma ba ku saurara ba.
4 ೪ ಯೆಹೋವನು ತನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ತಪ್ಪದೆ ಕಳುಹಿಸುತ್ತಿದ್ದರೂ ನೀವು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.
Ko da yake Ubangiji ya aika dukan bayinsa annabawa gare ku sau da sau, ba ku saurara ba, ba ku kuma kula ba.
5 ೫ ಆತನು ನಿಮಗೆ ಹೇಳಿದ ಮಾತೇನೆಂದರೆ, ‘ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗದಿಂದಲೂ ಮತ್ತು ದುಷ್ಕೃತ್ಯಗಳಿಂದಲೂ ಹಿಂದಿರುಗಿರಿ. ನಿಮಗೆ ಶಾಶ್ವತ ಸ್ವತ್ತಾಗಿರಲಿ ಎಂದು ಯೆಹೋವನು ಪುರಾತನ ಕಾಲದಲ್ಲಿ ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಅನುಗ್ರಹಿಸಿದ ದೇಶದೊಳಗೆ ನೆಲೆಗೊಳ್ಳಿರಿ.
Sun ce, “Ku juye yanzu, kowannenku, daga mugayen hanyoyinku da mugayen ayyukanku, za ku kuwa iya zauna a ƙasar da Ubangiji ya ba ku da kuma kakanninku har abada abadin.
6 ೬ ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ ಪೂಜಿಸಬೇಡಿರಿ; ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸಬೇಡಿರಿ; ಹೀಗಾದರೆ ನಾನು ನಿಮಗೆ ಯಾವ ಕೇಡನ್ನೂ ಮಾಡುವುದಿಲ್ಲ’ ಎಂಬುದೇ.
Kada ku bi waɗansu alloli don ku bauta ku kuma yi musu sujada; kada ku tsokane ni in yi fushi da abin da hannuwanku suka yi. Sa’an nan ba zan kawo muku lahani ba.”
7 ೭ ಆದರೆ ನೀವು ನನ್ನ ಕಡೆಗೆ ಕಿವಿಗೊಡದೆ, ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ಕೆಣಕಿ ನಿಮಗೆ ನೀವೇ ಕೇಡನ್ನು ತಂದುಕೊಂಡಿದ್ದೀರಿ” ಎಂದು ಹೇಳಿದನು.
“Amma ba ku saurare ni ba,” in ji Ubangiji, “kun tsokane ni da abin da kuka yi da hannuwanku, kuka kuma kawo lahani wa kanku.”
8 ೮ ಹೀಗಿರಲು ಸೇನಾಧೀಶ್ವರನಾದ ಯೆಹೋವನ ಈ ನುಡಿಯನ್ನು ಕೇಳಿರಿ, “ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ,
Saboda haka Ubangiji Maɗaukaki ya ce, “Domin kun ƙi ku saurara ga maganata,
9 ೯ ನಾನು ಉತ್ತರ ದಿಕ್ಕಿನ ಜನಾಂಗಗಳನ್ನೆಲ್ಲಾ ಕರೆಯಿಸಿ, ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡುವೆನು. ಇವರೆಲ್ಲರನ್ನು ಈ ದೇಶದ ಮೇಲೂ, ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ, ಅವುಗಳನ್ನು ತುಂಬಾ ಹಾಳುಗೈದು, ಪರಿಹಾಸ್ಯಕ್ಕೂ, ನಿತ್ಯನಾಶನಕ್ಕೂ ಈಡುಮಾಡುವೆನು.
zan kira dukan mutanen arewa da bawana Nebukadnezzar sarkin Babilon,” in ji Ubangiji, “zan kuma kawo su su yi gāba da wannan ƙasa da mazaunanta da kuma gāba da dukan al’ummai da suke kewaye. Zan hallaka su sarai in kuma mai da su abin bantsoro da abin dariya, za su kuma zama kufai har abada.
10 ೧೦ ಇದಲ್ಲದೆ ನಾನು ಅವುಗಳಲ್ಲಿ ಹರ್ಷಸಂಭ್ರಮಗಳ ಧ್ವನಿಯನ್ನೂ, ವಧೂವರರ ಸ್ವರವನ್ನೂ, ಬೀಸುವ ಕಲ್ಲಿನ ಶಬ್ದವನ್ನೂ, ದೀಪದ ಬೆಳಕನ್ನೂ ನಿಲ್ಲಿಸಿಬಿಡುವೆನು.
Zan kawar da muryoyin farin ciki da murna daga gare su, muryoyin amarya da na ango, ƙarar dutsen niƙa da hasken fitila.
11 ೧೧ ಈ ದೇಶವೆಲ್ಲಾ ಹಾಳಾಗಿ ಬೆರಗಿಗೆ ಈಡಾಗುವುದು; ಮತ್ತು ಈ ಜನಾಂಗಗಳು ಎಪ್ಪತ್ತು ವರ್ಷ ಬಾಬೆಲಿನ ಅರಸನ ಅಡಿಯಾಳಾಗಿ ಬಿದ್ದಿರುವವು.
Dukan wannan ƙasa za tă zama kango, kuma waɗannan al’ummai za su bauta wa sarkin Babilon shekaru saba’in.
12 ೧೨ ಎಪ್ಪತ್ತು ವರ್ಷಗಳ ತರುವಾಯ ನಾನು ಬಾಬೆಲಿನ ಅರಸನನ್ನೂ, ಕಸ್ದೀಯರ ದೇಶವನ್ನೂ, ಆ ಜನಾಂಗದವರನ್ನೂ ಅವರ ದ್ರೋಹಕ್ಕಾಗಿ ದಂಡಿಸಿ, ಆ ದೇಶವನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ಇದು ಯೆಹೋವನ ನುಡಿ.
“Amma sa’ad da shekaru saba’in ɗin suka cika, zan hukunta sarkin Babilon da kuma al’ummarsa, ƙasar Babiloniyawa, saboda laifinsu,” in ji Ubangiji, “in kuma mai da ita kango har abada.
13 ೧೩ ನಾನು ಆ ದೇಶದ ವಿಷಯದಲ್ಲಿ ನುಡಿದದ್ದನ್ನೆಲ್ಲಾ ಅಂದರೆ ಯೆರೆಮೀಯನು ಸಕಲ ಜನಾಂಗಗಳ ವಿಷಯವಾಗಿ ಮಾಡಿರುವ ಈ ಪ್ರವಾದನೆಗಳ ಗ್ರಂಥದಲ್ಲಿ ಬರೆದದ್ದನ್ನೆಲ್ಲಾ ಅದರ ಮೇಲೆ ಬರಮಾಡುವೆನು.
Zan kawo wa wannan ƙasa dukan abubuwan na yi magana a kanta, dukan abubuwan da aka rubuta a wannan littafi, abubuwan da Irmiya kuma ya yi annabci a kan dukan al’ummai.
14 ೧೪ ಅನೇಕ ಜನಾಂಗಗಳೂ ಮತ್ತು ಮಹಾರಾಜರೂ ಅವರನ್ನೇ ಅಡಿಯಾಳಾಗಿ ಮಾಡಿಕೊಳ್ಳುವರು; ಅವರ ಕೃತ್ಯಗಳಿಗೂ ಮತ್ತು ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿತೀರಿಸುವೆನು” ಎಂಬುದೇ.
Su kansu al’ummai da sarakuna masu yawa za su bautar da su; zan sāka musu bisa ga ayyukansu da aikin hannuwansu.”
15 ೧೫ ಇಸ್ರಾಯೇಲರ ದೇವರಾದ ಯೆಹೋವನು ನನಗೆ, “ರೋಷರೂಪ ಮದ್ಯದ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊಂಡು ಯಾವ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೋ ಆ ಸಕಲ ಜನಾಂಗಗಳು ಇದರಲ್ಲಿ ಕುಡಿಯುವಂತೆ ಮಾಡು.
Ga abin da Ubangiji, Allah na Isra’ila, ya faɗa mini, “Ka karɓi kwaf ruwan inabin nan na fushina a wurina, ka sa dukan al’umman da na aike ka gare su, su sha.
16 ೧೬ ನಾನು ಅವರಲ್ಲಿಗೆ ಖಡ್ಗವನ್ನು ಕಳುಹಿಸುವೆನು. ಆ ನನ್ನ ರೋಷವನ್ನು ಅವರು ಕುಡಿದು ಓಲಾಡುವರು, ಹುಚ್ಚುಚ್ಚಾಗುವರು” ಎಂದು ಅಪ್ಪಣೆಕೊಟ್ಟನು.
Sa’ad da suka sha, za su yi ta tangaɗi su kuma yi hauka saboda takobin da zan aika a cikinsu.”
17 ೧೭ ಆಗ ನಾನು ಯೆಹೋವನ ಕೈಯಿಂದ ಆ ಪಾತ್ರೆಯನ್ನು ತೆಗೆದುಕೊಂಡು ಯೆಹೋವನು ಯಾವ ಜನಾಂಗಗಳ ಬಳಿಗೆ ನನ್ನನ್ನು ಕಳುಹಿಸಿದನೋ, ಆ ಸಕಲ ಜನಾಂಗಗಳು ಅದರಲ್ಲಿ ಕುಡಿಯುವಂತೆ ಮಾಡಿದೆನು.
Saboda haka na karɓi kwaf daga hannun Ubangiji na sa dukan al’ummai waɗanda ya aiko ni wurinsu su sha.
18 ೧೮ ಅದನ್ನು ಯೆರೂಸಲೇಮಿಗೂ, ಯೆಹೂದದ ಪಟ್ಟಣಗಳಿಗೂ, ಅರಸರಿಗೂ ಮತ್ತು ಪ್ರಧಾನರಿಗೂ ಕುಡಿಸಿದೆನು. ಇದರಿಂದ ಅವರು ಹಾಳಾಗಿ ಪರಿಹಾಸ್ಯಕ್ಕೂ ಮತ್ತು ಶಾಪಕ್ಕೂ ಗುರಿಯಾಗುವುದಕ್ಕೆ ಆಸ್ಪದವಾಯಿತು.
Urushalima da garuruwan Yahuda, sarakunan da fadawanta, don su mai da su kufai da kuma abin bantsoro da ba’a da la’ana, yadda suke a yau;
19 ೧೯ ಅದು ಈ ದಿನ ನೆರವೇರಿದೆ. ಇದರೊಂದಿಗೆ ಐಗುಪ್ತದ ಅರಸನಾದ ಫರೋಹನು, ಅವನ ಸೇವಕರು, ಪ್ರಧಾನರು, ಅವನ ಎಲ್ಲಾ ಜನರು,
Fir’auna sarkin Masar, ma’aikatansa, fadawansa da dukan mutanensa,
20 ೨೦ ಬಗೆಬಗೆಯ ಎಲ್ಲಾ ವಿದೇಶೀಯರು, ಊಚ್ ದೇಶದ ಎಲ್ಲಾ ಅರಸರು, ಫಿಲಿಷ್ಟಿಯ ದೇಶದ ಎಲ್ಲಾ ಅರಸರು, ಅಷ್ಕೆಲೋನ್, ಗಾಜಾ, ಎಕ್ರೋನ್, ಹಾಳಾಗದೆ ಉಳಿದ ಸ್ವಲ್ಪ ಅಷ್ಡೋದ್,
da dukan baƙin da suke can; dukan sarakunan Uz; dukan sarakunan Filistiyawa (waɗannan na Ashkelon, Gaza, Ekron da mutanen da aka bari a Ashdod);
21 ೨೧ ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು,
Edom, Mowab da Ammon;
22 ೨೨ ತೂರಿನ ಎಲ್ಲಾ ಅರಸರು, ಚೀದೋನಿನ ಎಲ್ಲಾ ಅರಸರು, ಸಮುದ್ರದ ಆಚೆಯ ಕರಾವಳಿಯ ಅರಸರು,
dukan sarakunan Taya da Sidon; sarakunan bakin teku a ƙetaren teku;
23 ೨೩ ದೆದಾನ್ಯರು, ತೇಮಾ ದೇಶದವರು, ಬೂಜ್ ದೇಶದವರು, ಚಂಡಿಕೆ ಬಿಟ್ಟುಕೊಂಡಿರುವವರೆಲ್ಲರು,
Dedan, Tema, Buz da dukan waɗanda suke a manisantan wurare;
24 ೨೪ ಅರಬಿಯದ ಎಲ್ಲಾ ಅರಸರು, ಅರಣ್ಯವಾಸಿಗಳಾದ ಮಿಶ್ರಜಾತಿಯವರ ಎಲ್ಲಾ ಅರಸರು,
dukan sarakunan Arabiya da dukan sarakunan baƙin da suke zama a hamada;
25 ೨೫ ಜಿಮ್ರಿಯ ಎಲ್ಲಾ ಅರಸರು, ಏಲಾಮಿನ ಎಲ್ಲಾ ಅರಸರು, ಮೇದ್ಯರ ಎಲ್ಲಾ ಅರಸರು,
dukan sarakunan Zimri, Elam da Mediya;
26 ೨೬ ದೂರ ಮತ್ತು ಸಮೀಪವಿರುವ ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು ಇವರೆಲ್ಲರಿಗೂ ಕುಡಿಸು; ಇವರು ಕುಡಿದ ಮೇಲೆ ಶೇಷಕಿನ ಅರಸನೂ ಕುಡಿಯಲಿ ಎಂಬುದೇ ನನಗಾದ ಅಪ್ಪಣೆ.
da kuma dukan sarakunan arewa, nesa da kuma kusa, bi da bi, dukan mulkokin duniya. Bayan dukansu kuma, sai sarkin Sheshak ma yă sha.
27 ೨೭ ಇದಲ್ಲದೆ ನನಗೆ ಈ ಅಪ್ಪಣೆಯಾಯಿತು, ನೀನು ಅವರಿಗೆ ನುಡಿಯತಕ್ಕದ್ದೇನೆಂದರೆ, “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಾನು ನಿಮ್ಮಲ್ಲಿಗೆ ಖಡ್ಗವನ್ನು ಕಳುಹಿಸುವೆನು; ಆ ನನ್ನ ರೋಷವನ್ನು ಕುಡಿದು ಅಮಲೇರಿದವರಾಗಿ ಕಕ್ಕಿ ಬಿದ್ದು ಏಳದಿರಿ.”
“Sa’an nan na faɗa musu cewa, ‘Ga abin da Ubangiji Maɗaukaki, Allah na Isra’ila, yana cewa ku sha, ku bugu ku kuma yi amai, ku fāɗi, kada kuma ku ƙara tashi saboda takobin da zan aiko muku.’
28 ೨೮ ಅವರು ಒಂದು ವೇಳೆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ, ಕುಡಿಯಲಿಕ್ಕೂ ಕೇಳದಿದ್ದರೆ ನೀನು ಅವರಿಗೆ ಹೀಗೆ ಹೇಳು, “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನೀವು ಕುಡಿಯಲೇ ಬೇಕು.
Amma in suka ki su karɓi kwaf ɗin daga hannunka su sha, ka faɗa musu cewa, ‘Ga abin da Ubangiji Maɗaukaki yana cewa dole ku sha!
29 ೨೯ ಇಗೋ, ನನ್ನ ಹೆಸರುಗೊಂಡಿರುವ ಪಟ್ಟಣದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಂಡೀರೋ? ಆಗುವುದೇ ಇಲ್ಲ. ಖಡ್ಗವೇ, ಭೂನಿವಾಸಿಗಳನ್ನೆಲ್ಲ ಸಂಹರಿಸಲಿಕ್ಕೆ ಬಾ” ಎಂದು ಕೂಗುವೆನು. ಇದು ಸೇನಾಧೀಶ್ವರನಾದ ಯೆಹೋವನೆಂಬ ನನ್ನ ನುಡಿ.
Ga shi, na sa masifa tă yi aiki cikin birnin da ake kira da sunana, kuna gani za ku tafi ba hukunci? Ba za ku tafi ba hukunci ba, gama ina kawo wa dukan mazaunan duniya takobi, in ji Ubangiji Maɗaukaki.’
30 ೩೦ ಇಂತಿರಲು ನೀನು ಪ್ರವಾದಿಸುತ್ತಾ ಈ ಮಾತುಗಳನ್ನೆಲ್ಲಾ ಅವರಿಗೆ ಹೇಳು, “ಯೆಹೋವನು ಉನ್ನತಲೋಕದಿಂದ ಗರ್ಜಿಸುವನು, ತನ್ನ ಘನನಿವಾಸದಿಂದ ಧ್ವನಿಗೈಯುವನು. ಆತನು ಗಟ್ಟಿಯಾಗಿ ಗರ್ಜಿಸಿ, ತನ್ನ ಹುಲ್ಗಾವಲಿನ ಮಂದೆಯನ್ನು ಬೆದರಿಸುವನು. ದ್ರಾಕ್ಷಿಯ ಹಣ್ಣನ್ನು ತುಳಿಯುವವರು ಕೂಗಾಡುವಂತೆ ಭೂನಿವಾಸಿಗಳೆಲ್ಲರಿಗೂ ಭಯಂಕರನಾಗಿ ಕೂಗುವನು.
“Yanzu ka yi annabcin dukan waɗannan maganganu a kansu ka kuma ce musu, “‘Ubangiji zai yi ruri daga bisa; zai yi tsawa daga mazauninsa mai tsarki ya kuma yi ruri da ƙarfi a kan ƙasarsa. Zai yi ihu kamar waɗanda suke matsin’ya’yan inabi, yi ihu a kan dukan waɗanda suke zaune a duniya.
31 ೩೧ ಆ ಶಬ್ದವು ಭೂಮಿಯ ಕಟ್ಟಕಡೆಯವರೆಗೆ ವ್ಯಾಪಿಸುವುದು, ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ, ಅವನು ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು, ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು” ಇದು ಯೆಹೋವನ ನುಡಿ.
Hayaniya za tă taso har iyakar duniya, gama Ubangiji zai kawo tuhume-tuhume a kan al’ummai; zai kawo shari’a a kan dukan’yan adam ya kuma kashe mugaye da takobi,’” in ji Ubangiji.
32 ೩೨ ಸೇನಾಧೀಶ್ವರನಾದ ಯೆಹೋವನು, “ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವುದು; ದೊಡ್ಡ ಬಿರುಗಾಳಿಯು ಲೋಕದ ಕಟ್ಟಕಡೆಯಿಂದ ಎದ್ದು ಬರುವುದು.
Ga abin da Ubangiji Maɗaukaki yana cewa, “Duba! Masifa tana yaɗuwa daga al’umma zuwa al’umma; hadari mai girma yana tasowa daga iyakar duniya.”
33 ೩೩ ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೂ ಬಿದ್ದಿರುವರು; ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಒಟ್ಟುಗೂಡಿಸುವುದಿಲ್ಲ, ಯಾರು ಹೂಣಿಡುವುದಿಲ್ಲ, ಅವರು ಭೂಮಿಯ ಮೇಲೆ ಗೊಬ್ಬರವಾಗುವರು.
A lokacin waɗanda Ubangiji ya kashe za su kasance a ko’ina, daga wannan bangon duniya zuwa wancan. Ba za a yi kuka dominsu, ba za a tattara su don a binne ba, amma za su zama kamar juji da an tsiba a ƙasa.
34 ೩೪ ಕುರುಬರೇ, ಅರಚಿ ಗೋಳಾಡಿರಿ! ಮಂದೆಯಲ್ಲಿನ ಹಿರಿಯ ನಾಯಕರೇ, ಬೂದಿಯಲ್ಲಿ ಬಿದ್ದು ಹೊರಳಾಡಿರಿ! ನಿಮ್ಮನ್ನು ವಧಿಸುವ ಕಾಲವು ಬಂದಿದೆ; ನಾನು ನಿಮ್ಮನ್ನು ಭಂಗಪಡಿಸುವೆನು; ನೀವು ಬಿದ್ದು ಒಡೆದುಹೋದ ಅಂದವಾದ ಪಾತ್ರೆಯಂತೆ ಚೂರುಚೂರಾಗುವಿರಿ.
Ku yi kuka ku kuma yi makoki, ku makiyaya; ku yi ta birgima a ƙura, ku shugabannin garke. Gama lokacin da za a yanka ku ya zo; za ku fāɗi ku kuma farfasa kamar tukunyar yumɓu mai kyau.
35 ೩೫ ಕುರುಬರು ಓಡಿಹೋಗುವುದಕ್ಕೆ ಮಾರ್ಗವು ಸಿಕ್ಕದು, ಮಂದೆಯ ಹಿರಿಯ ನಾಯಕರು ತಪ್ಪಿಸಿಕೊಳ್ಳುವುದಕ್ಕೆ ಆಸ್ಪದ ದೊರೆಯದು.
Makiyaya ba za su sami wurin da za su gudu su tafi ba, shugabannin garke ba za su sami wurin kuɓuta ba.
36 ೩೬ ಆಹಾ, ಕುರುಬರ ಕೂಗಾಟ! ಮಂದೆಯ ಹಿರಿಯ ನಾಯಕರ ಅರಚಾಟ! ಯೆಹೋವನು ಆ ಹುಲ್ಗಾವಲನ್ನು ಹಾಳುಮಾಡುತ್ತಿದ್ದಾನಲ್ಲಾ.
Ji kukan makiyaya, kururuwan shugabannin garke, gama Ubangiji yana hallaka wurin kiwo.
37 ೩೭ ನೆಮ್ಮದಿಯ ಗೋಮಾಳಗಳು ಯೆಹೋವನ ರೋಷಾಗ್ನಿಯಿಂದ ನಿಶ್ಯಬ್ದವಾಗಿವೆ.
Rafi mai gudu a hankali zai zama kango saboda zafin fushin Ubangiji.
38 ೩೮ ಆತನು ಸಿಂಹದಂತೆ ತನ್ನ ಗವಿಯನ್ನು ಬಿಟ್ಟು ಬಂದಿದ್ದಾನೆ. ಹಿಂಸಿಸುವ ಖಡ್ಗದಿಂದಲೂ ಆತನ ರೋಷಾಗ್ನಿಯಿಂದಲೂ ಅವರ ದೇಶವು ಬೆರಗಿಗೆ ಈಡಾಗಿದೆ” ಎಂದು ನುಡಿಯುತ್ತಾನೆ.
Kamar zaki zai bar wurin ɓuyarsa, ƙasarsu kuma za tă zama kufai saboda takobin masu danniya da kuma saboda zafin fushin Ubangiji.