< ಯೆರೆಮೀಯನು 23 >
1 ೧ “ನನ್ನ ಕಾವಲಿನ ಕುರಿಗಳನ್ನು ಚದುರಿಸಿ ಹಾಳು ಮಾಡುವ ಕುರುಬರ ಗತಿಯನ್ನು ಏನೆಂದು ಹೇಳಲಿ” ಎಂಬುದು ಯೆಹೋವನ ನುಡಿ.
Jehova Nyasaye wacho niya, “Mano kaka unune malit un jokwath maketho kendo keyo romba kar kwadhgi!”
2 ೨ ಇಸ್ರಾಯೇಲರ ದೇವರಾದ ಯೆಹೋವನು ತನ್ನ ಜನರೆಂಬ ಕುರಿಗಳನ್ನು ಮೇಯಿಸುವ ಕುರುಬರ ದ್ರೋಹವನ್ನು ಕಂಡು ಅವರನ್ನು ಕುರಿತು ಇಂತೆನ್ನುತ್ತಾನೆ, “ನೀವು ನನ್ನ ಮಂದೆಯನ್ನು ಚದರಿಸಿ ಅಟ್ಟಿಬಿಟ್ಟಿದ್ದೀರಿ, ವಿಚಾರಿಸಲೇ ಇಲ್ಲ. ಆಹಾ, ನಿಮ್ಮ ದುಷ್ಕೃತ್ಯಗಳ ನಿಮಿತ್ತ ನಾನು ನಿಮ್ಮನ್ನು ವಿಚಾರಿಸುವೆನು.
Emomiyo ma e gima Jehova Nyasaye, Nyasach Israel, wachone jokwath makwayo joga: “Nikech usekeyo romba kendo uriembogi kendo ok useritogi, anakumu kuom timbe mamono musetimo,” Jehova Nyasaye owacho.
3 ೩ ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ, ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ, ತಮ್ಮ ತಮ್ಮ ಹಟ್ಟಿಗಳಿಗೆ ತಿರುಗಿ ಬರಮಾಡುವೆನು; ಅವು ದೊಡ್ಡ ಸಂತಾನವಾಗಿ ಹೆಚ್ಚುವವು.
Jehova Nyasaye wacho niya, “An awuon anachok romba modongʼ e pinje duto kuonde maseriembogie anadwog-gi legegi kama gibiro nyaa kendo kwan-gi nomedre.
4 ೪ ನಾನು ಅವುಗಳ ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು. ಅವು ಇನ್ನು ಕಳವಳಗೊಳ್ಳುವುದಿಲ್ಲ, ಭಯಪಡುವುದಿಲ್ಲ ಮತ್ತು ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ; ಇದು ಯೆಹೋವನ ನುಡಿ” ಎಂಬುದೇ.
Anamigi jokwath manoritgi, kendo ok ginibed maluor kata ok ginibwogi, bende onge manolal,” Jehova Nyasaye owacho.
5 ೫ ಯೆಹೋವನು, “ಇಗೋ, ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು. ಅವನು ರಾಜನಾಗಿ ಆಳುತ್ತಾ, ವಿವೇಕದಿಂದ ಕಾರ್ಯವನ್ನು ಸಾಧಿಸುತ್ತಾ, ದೇಶದಲ್ಲಿ ನೀತಿ, ನ್ಯಾಯಗಳನ್ನು ನಿರ್ವಹಿಸುವನು.
Jehova Nyasaye wacho niya, “Kinde biro ma anami Daudi Bad Yath makare, Ruoth manobed gi loch mar rieko kendo tim gima kare kendo ratiro e piny.
6 ೬ ಅವನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು, ಇಸ್ರಾಯೇಲರು ನೆಮ್ಮದಿಯಾಗಿ ವಾಸಿಸುವರು; ‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ನಮ್ಮ ಸದ್ಧರ್ಮ ಎಂಬ ಹೆಸರು ಅವನಿಗಾಗುವುದು” ಎಂದು ನುಡಿಯುತ್ತಾನೆ.
E ndalone Juda noresi kendo Israel nodag gi kwe. Ma e nying ma ibiro luongego: Jehova Nyasaye mamiyo wabedo jo-ratiro.”
7 ೭ ಆಹಾ, ಮುಂದಿನ ಕಾಲದಲ್ಲಿ ಜನರು, “ಇಸ್ರಾಯೇಲರನ್ನು ಐಗುಪ್ತ ದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ ಎಂಬುದಾಗಿ ಪ್ರಮಾಣ ಮಾಡುವುದನ್ನು ಬಿಟ್ಟು,
Jehova Nyasaye wacho niya, “Ndalo biro ma ji ok nowach kendo ni, ‘Akwongʼora gi nying Jehova Nyasaye mangima, manogolo jo-Israel Misri,’
8 ೮ ಇಸ್ರಾಯೇಲ್ ಮನೆತನವೆಂಬ ಸಂತಾನವನ್ನು ಉತ್ತರ ದಿಕ್ಕಿನ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ, ಉದ್ಧರಿಸಿದ ಯೆಹೋವನ ಜೀವದಾಣೆ ಎಂದು ಪ್ರಮಾಣಮಾಡುವರು. ಅವರು ಸ್ವದೇಶದಲ್ಲಿ ಸುಖವಾಸಿಗಳಾಗುವರು.” ಇದು ಯೆಹೋವನ ನುಡಿ.
to giniwachi, ‘Akwongʼora gi nying Jehova Nyasaye mangima, mane ogolo nyithind Israel e piny ma yo nyandwat kendo e pinje duto mane oseriembogie.’ Bangʼe gibiro dak e pinygi giwegi.”
9 ೯ ಪ್ರವಾದಿಗಳ ವಿಷಯ: ನನ್ನ ಹೃದಯವು ನನ್ನೊಳಗೆ ಒಡೆದುಹೋಗಿದೆ; ನನ್ನ ಎಲುಬುಗಳೆಲ್ಲಾ ಕರಗಿಹೋಗಿವೆ. ನಾನು ಯೆಹೋವನಿಗೂ ಆತನ ಪರಿಶುದ್ಧ ವಾಕ್ಯಗಳಿಗೂ ವಶನಾಗಿ ಅಮಲೇರಿದವನಂತಿದ್ದೇನೆ. ಹೌದು, ದ್ರಾಕ್ಷಾರಸಕ್ಕೆ ಸೋತವನ ಹಾಗಿದ್ದೇನೆ.
Kuom jonabi: Chunya maiye ool; chokega duto tetni. Achalo ngʼama omer, mana ka ngʼama divai osemero, nikech Jehova Nyasaye kod wechene maler.
10 ೧೦ ಸೀಮೆಯು ವ್ಯಭಿಚಾರಿಗಳಿಂದ ತುಂಬಿದೆ, ದೈವಶಾಪದ ನಿಮಿತ್ತ ದೇಶವು ದುಃಖಿಸುತ್ತದೆ. ಅಡವಿಯ ಹುಲ್ಗಾವಲು ಬಾಡಿದೆ; ದೇಶದವರು ತ್ವರೆಪಡುವ ಮಾರ್ಗವು ದುರ್ಮಾರ್ಗ, ಅವನ ಶೌರ್ಯವು ಅನ್ಯಾಯಸಾಧಕ.
Piny opongʼ gi joma terore; nikech kwongʼ, piny obaro okak kendo kuonde kwath otimo ongoro. Jonabi luwo bangʼ timbe mamono kendo gitiyo gi teko mag-gi e yo ma ok nikare.
11 ೧೧ ಪ್ರವಾದಿಗಳು ಭ್ರಷ್ಟರು, ಯಾಜಕರೂ ಭ್ರಷ್ಟರು. ಹೌದು ನನ್ನ ಆಲಯದಲ್ಲಿಯೇ ಅವರ ಕೆಟ್ಟತನವನ್ನು ಕಂಡಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ.
Jehova Nyasaye wacho niya, “Jonabi kod jodolo ok oluoro Nyasaye; kata mana ei hekalu mara ayudoe timbegi maricho.”
12 ೧೨ ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಸ್ಥಳಗಳಿಗೆ ಸಮಾನವಾಗುವುದು. ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರ್ಷದ ಕೇಡನ್ನು ಬರಮಾಡುವೆನು ಎಂದು ಯೆಹೋವನು ನುಡಿಯುತ್ತಾನೆ.
Jehova Nyasaye wacho niya, “Emomiyo yoregi nobed mapoth poth; notergi e mudho kendo kanyo ginipodhie piny. Anakel masira kuomgi e higa mokumgie.
13 ೧೩ ನಾನು ಸಮಾರ್ಯದ ಪ್ರವಾದಿಗಳಲ್ಲಿ ಅನೈತಿಕತೆಯನ್ನು ನೋಡಿದ್ದೇನೆ; ಅವರು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ, ಇಸ್ರಾಯೇಲೆಂಬ ನನ್ನ ಜನರನ್ನು ಮಾರ್ಗ ತಪ್ಪಿಸಿದ್ದಾರೆ.
“Kuom jonabi mag Samaria ne aneno gino mawangʼo ich: Ne gikoro e nying Baal kendo ma gimiyo joga Israel obayo yo.
14 ೧೪ ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ. ಅವರು ವ್ಯಭಿಚಾರಮಾಡಿ, ಮೋಸದಲ್ಲಿ ನಡೆದು, ದುಷ್ಟರಲ್ಲಿ ಯಾರೂ ತನ್ನ ದುಷ್ಟತನವನ್ನು ಬಿಡದಂತೆ ಅವರ ಕೈಗಳನ್ನು ಬಲಪಡಿಸುತ್ತಿದ್ದಾರೆ. ಅವರೆಲ್ಲರು ಸೊದೋಮಿನಂತೆ, ಆ ಪಟ್ಟಣದ ನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.
Kendo e kind jonabi mag Jerusalem aseneno gimoro malich mokadho: Giterore kendo gidak e ngima mar miriambo. Gijiwo joma timbegi mono, mondo omi kik ngʼato olokre owe timbene maricho. Giduto gichalo Sodom ne an; jo-Jerusalem chalo gi Gomora.”
15 ೧೫ ಆದಕಾರಣ ಸೇನಾಧೀಶ್ವರನಾದ ಯೆಹೋವನು ಪ್ರವಾದಿಗಳ ವಿಷಯದಲ್ಲಿ, “ಆಹಾ, ನಾನು ಇವರಿಗೆ ಕಹಿಯಾದ ಆಹಾರ ಮತ್ತು ಪಾನಗಳನ್ನು ಕೊಡುವೆನು; ಯೆರೂಸಲೇಮಿನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲೆಲ್ಲಾ ಹರಡಿದೆಯಷ್ಟೆ” ಎಂದು ನುಡಿಯುತ್ತಾನೆ.
Emomiyo, ma e gima Jehova Nyasaye Maratego wacho kuom jonabi: “Anami gicham chiemo makech kendo modh pi motimo sum, nikech koa kuom jonabi mag Jerusalem kia Nyasaye oselandore e piny ngima.”
16 ೧೬ ಸೇನಾಧೀಶ್ವರನಾದ ಯೆಹೋವನು, “ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ; ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯದೆ ಸ್ವಂತ ಮನಸ್ಸಿಗೆ ಬಂದದ್ದನ್ನೇ ಹೇಳುತ್ತಾರೆ.
Ma e gima Jehova Nyasaye Maratego wacho: “Kik uchik itu ne gigo ma jonabi koronu; gipongʼo itu gi geno mag miriambo. Giwachonu fweny moa e pachgi giwegi, ok moa e dho Jehova Nyasaye.
17 ೧೭ ನನ್ನನ್ನು ಅಸಡ್ಡೆಮಾಡುವವರಿಗೆ, ‘ನಿಮಗೆ ಶುಭವಾಗುವುದು ಎಂಬುದಾಗಿ ಯೆಹೋವನು ನುಡಿದಿದ್ದಾನೆ’ ಎಂದು ಹೇಳುತ್ತಲೇ ಇದ್ದಾರೆ. ಸ್ವಂತ ಹೃದಯದ ಹಟದಂತೆ ನಡೆಯುವವರೆಲ್ಲರಿಗೂ, ‘ನಿಮಗೆ ಯಾವ ಕೇಡೂ ಸಂಭವಿಸದು’ ಎಂದು ನುಡಿಯುತ್ತಾರೆ.
Gisiko giwachone jogo ma jara ni, ‘Jehova Nyasaye wacho: Unubed gi kwe.’ Kendo ne jogo maluwo timbe achach mag chunjegi wacho ni, ‘Onge gima biro hinyowa.’
18 ೧೮ ಅವರಲ್ಲಿ ಯಾರು ಯೆಹೋವನ ಆಲೋಚನಾಸಭೆಯಲ್ಲಿ ನಿಂತು ಆತನ ಮಾತನ್ನು ಕೇಳಿ ತಿಳಿದುಕೊಂಡಿದ್ದಾರೆ? ಯಾರು ಆತನ ನುಡಿಗೆ ಕಿವಿಗೊಟ್ಟು ಗಮನಿಸಿದ್ದಾರೆ?
To en ngʼa kuomgi mosechungoe kar ngʼado bura mar Jehova Nyasaye, mondo one kata owinji wachne?
19 ೧೯ ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಸುಂಟರಗಾಳಿಯು ಹೊರಟಿದೆ. ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.
Neuru, apaka mar Jehova Nyasaye nomwomre gi mirima, ka kalausi mafuyo e wiye joma timbegi richo.
20 ೨೦ ಯೆಹೋವನು ತನ್ನ ಹೃದಯದ ಆಲೋಚನೆಗಳನ್ನು ಸಾಧಿಸಿ, ನೆರವೇರಿಸುವ ತನಕ ಆತನ ರೋಷವು ತಣ್ಣಗಾಗುವುದಿಲ್ಲ. ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಗ್ರಹಿಸುವಿರಿ.
Mirimb Jehova Nyasaye ok nodog chien nyaka one ni ochopo thoro mar chunye. E ndalo mabiro iniwinj tiende malongʼo.
21 ೨೧ ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ, ತಾವೇ ಆತುರಗೊಂಡರು; ನಾನು ಇವರಿಗೆ ಏನೂ ಹೇಳಲಿಲ್ಲ, ಅವರೇ ಪ್ರವಾದಿಸಿದರು.
Ne ok aoro jonabigi, kata kamano giseringo gi wechegi; ne ok awuoyo kodgi, to kata kamano gisekoro wach.
22 ೨೨ ಇವರು ಆಲೋಚನಾಸಭೆಯಲ್ಲಿ ನಿಂತಿದ್ದರೆ, ನನ್ನ ಮಾತುಗಳನ್ನು ನನ್ನ ಜನರ ಕಿವಿಗೆ ಮುಟ್ಟಿಸಿ, ಅವರನ್ನು ಅವರ ದುರ್ಮಾರ್ಗದಿಂದಲೂ ಮತ್ತು ದುಷ್ಕೃತ್ಯಗಳಿಂದಲೂ ತಪ್ಪಿಸುತ್ತಿದ್ದರು” ಎಂದು ಹೇಳುತ್ತಾನೆ.
To kane ginyalo chungoe kara mar ngʼado bura, dine gilando wechena ne joga kendo gilokore gia e yoregi mamono, kod timbegi mamono.”
23 ೨೩ ಯೆಹೋವನು ಇಂತೆನ್ನುತ್ತಾನೆ, “ನಾನು ಸಮೀಪದಲ್ಲಿ ಮಾತ್ರ ಇರುವ ದೇವರೋ?
Jehova Nyasaye wacho niya, “Ok an Nyasaye mantie machiegni kende, to an Nyasaye man mabor bende.”
24 ೨೪ ದೂರದಲ್ಲಿಯೂ ಇರುವವನಲ್ಲವೋ? ನನ್ನ ಕಣ್ಣಿಗೆ ಬೀಳದಂತೆ ಯಾರಾದರೂ ಗುಪ್ತಸ್ಥಳಗಳಲ್ಲಿ ತನ್ನನ್ನು ತಾನೇ ಮರೆಮಾಡಿಕೊಂಡಾನೇ? ನಾನು ಭೂಮ್ಯಾಕಾಶಗಳಲ್ಲಿಯೂ ವ್ಯಾಪಿಸಿರುವವನಲ್ಲವೆ.”
Jehova Nyasaye wacho niya, “Bende ngʼato nyalo pondo kuonde mopandore mondo omi kik anene? Donge apongʼo polo gi piny?”
25 ೨೫ ನನಗೆ ಕನಸು ಬಿತ್ತು, ಕನಸು ಬಿತ್ತು ಎಂದು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುವ ಪ್ರವಾದಿಗಳ ನುಡಿಯನ್ನು ಕೇಳಿದ್ದೇನೆ.
Jehova Nyasaye wacho niya, “Asewinjo gima jonabi makoro e nyinga gi miriambo wacho. Giwacho ni, ‘Ne aleko! Ne aleko!’
26 ೨೬ ಇವರ ಪೂರ್ವಿಕರು ಬಾಳನನ್ನು ಪೂಜಿಸಿ, ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು ಸ್ವಹೃದಯಕಲ್ಪಿತ ಮೋಸವನ್ನು ಪ್ರಕಟಿಸುತ್ತಾ, ತಾವು ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ.
Nyaka karangʼo ma gigi nosik e chunje jonabi mariambogi, makoro gigo moa e pachgi giwegi?
27 ೨೭ ಇಂಥಾ ಯೋಚನೆಯು ಸುಳ್ಳಾಗಿ ಪ್ರವಾದಿಸುವ ಈ ಪ್ರವಾದಿಗಳ ಹೃದಯದಲ್ಲಿ ಎಂದಿನವರೆಗೆ ಇರುವುದು?
Giparo ni lek ma ginyisore giwegi nomi ji wigi nowil gi nyinga, mana kaka wuonegi wigi nowil koda kaluwore gilamo mane gilamogo Baal.”
28 ೨೮ ಕನಸು ಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ. ನನ್ನ ಮಾತನ್ನು ಕೇಳಿದವನೋ ನನ್ನ ಮಾತನ್ನು ಯಥಾರ್ಥವಾಗಿ ನುಡಿಯಲಿ.
Jehova Nyasaye wacho niya, “We janabi man-gi lek owach lekne, to we ngʼat man giwachna owache gadiera. Nimar en angʼo ma miudhwe nyalo timo gi cham?”
29 ೨೯ ಹೊಟ್ಟೆಲ್ಲಿ? ಕಾಳೆಲ್ಲಿ? ನನ್ನ ವಾಕ್ಯವು ಬೆಂಕಿಗೂ, ಬಂಡೆಯನ್ನು ಒಡೆದುಬಿಡುವ ಚಮಟಿಗೆಗೂ ಸಮಾನವಾಗಿದೆಯಲ್ಲಾ. ಯೆಹೋವನೇ ಇದನ್ನು ನುಡಿದಿದ್ದಾನೆ.
Jehova Nyasaye wacho niya, “Donge wachna chalo gi mach kendo ka nyundo matoyo kidi matindo tindo?”
30 ೩೦ ಆಹಾ, ನನ್ನ ಮಾತುಗಳನ್ನು ತಮ್ಮ ತಮ್ಮ ನೆರೆಯವರಿಂದ ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧನಾಗಿದ್ದೇನೆ. ಇದು ಯೆಹೋವನ ನುಡಿ.
Jehova Nyasaye wacho niya, “Emomiyo amon gi jonabi makwalo weche ma giwacho ni oa kuoma e kindgi giwegi.”
31 ೩೧ ಆಹಾ, ತಮ್ಮ ನಾಲಿಗೆಗಳನ್ನು ಚಾಚಿ “ಯೆಹೋವನು ನುಡಿಯುತ್ತಾನೆ” ಎಂದು ಹೇಳುವ ಪ್ರವಾದಿಗಳಿಗೆ ನಾನು ಪ್ರತಿಭಟಿಸುವವನಾಗಿದ್ದೇನೆ. ಇದು ಯೆಹೋವನ ನುಡಿ.
Jehova Nyasaye wacho niya, “Ee, ok ahero jonabi ma milo lewgi giwegi kagiwacho ni, ‘Jehova Nyasaye owacho.’”
32 ೩೨ ಆಹಾ, ಸುಳ್ಳು ಕನಸುಗಳನ್ನು ಪ್ರಕಟಿಸಿ, ವಿವರಿಸಿ ತಮ್ಮ ಸುಳ್ಳು ಮಾತುಗಳಿಂದಲೂ, ನಿರ್ಲಕ್ಷದಿಂದಲೂ ನನ್ನ ಜನರಿಗೆ ದಾರಿತಪ್ಪಿಸುವ ಪ್ರವಾದಿಗಳನ್ನು ಎದುರಿಸುವವನಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಆಜ್ಞಾಪಿಸಲಿಲ್ಲ. ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಇದು ಯೆಹೋವನ ನುಡಿ.
Jehova Nyasaye wacho niya, “Adiera, ok ahero jogo makoro lek mag miriambo. Ginyisogi kendo giwito joga gi miriambo mag-gi maonge korgi gi atachgi, to ne ok aorogi kata yierogi. Ok gimi jogi ohala kata matin,” Jehova Nyasaye owacho.
33 ೩೩ ಪ್ರವಾದಿಯಾಗಲಿ ಅಥವಾ ಯಾಜಕನಾಗಲಿ ಈ ಜನರಲ್ಲಿ ಯಾರೇ ಆಗಲಿ “ಯೆಹೋವನು ದಯಪಾಲಿಸಿರುವ ವಾಕ್ಯದ ಆಧಾರವೇನು?” ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು, “ಯೆಹೋವನು ಇಂತೆನ್ನುತ್ತಾನೆ, ನೀವೇ ನನ್ನ ಹೊರೆ, ನಾನು ನಿಮ್ಮನ್ನು ಎಸೆದುಬಿಡುವೆನು.
“Ka jogi, kata janabi kata jadolo, openji ni, ‘Wach mar Jehova Nyasaye en mane?’ To penjgi ni, ‘Wach mane? Anajwangʼu, Jehova Nyasaye owacho.’
34 ೩೪ ಪ್ರವಾದಿ, ಯಾಜಕ, ಸಾಧಾರಣ ಜನ, ಇವರಲ್ಲಿ ಯಾರೂ, ‘ಯೆಹೋವನ ಹೊರೆ’ ಎಂದು ಉಚ್ಚರಿಸುವನೋ ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.
Ka janabi kata jadolo kata ngʼato angʼata owacho ni, ‘Ma en wach mar Jehova Nyasaye,’ to anakum ngʼatno kod joode duto.
35 ೩೫ ನೀವು ನಿಮ್ಮ ನಿಮ್ಮ ನೆರೆಹೊರೆಯವರನ್ನೂ ಮತ್ತು ಅಣ್ಣತಮ್ಮಂದಿರನ್ನೂ, ‘ಯೆಹೋವನ ಉತ್ತರವೇನು, ಯೆಹೋವನು ಏನು ನುಡಿದಿದ್ದಾನೆ?’
Ma e gima ngʼato ka ngʼato kuomu siko wachone osiepne kata watne: ‘Dwoko Jehova Nyasaye en angʼo?’ kata, ‘En angʼo ma Jehova Nyasaye wacho?’
36 ೩೬ ಎಂದು ಕೇಳಬೇಕೇ ಹೊರತು ಯೆಹೋವನ ಹೊರೆ ಎಂಬ ಮಾತನ್ನು ಇನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿಯೇ ಅವನವನಿಗೆ ಹೊರೆಯಾಗಿರುವುದು; ಜೀವಸ್ವರೂಪನಾದ ದೇವರ ನುಡಿಗಳನ್ನು, ಹೌದು, ನಮ್ಮ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿಗಳನ್ನು ತಲೆ ಕೆಳಗೆ ಮಾಡಿದ್ದೀರಷ್ಟೆ.
To kik ichak iwach kendo ni, ‘wach mar Jehova Nyasaye,’ nikech wach ngʼato ka ngʼato owuon ema bedone wach maber bangʼe ijaro weche Nyasaye mangima, Jehova Nyasaye Maratego ma Nyasachwa.
37 ೩೭ ನೀವು ‘ಯೆಹೋವನಿಂದ ನಿನಗೆ ಯಾವ ಉತ್ತರವಾಯಿತು, ಯೆಹೋವನು ಏನು ನುಡಿದಿದ್ದಾನೆ’ ಎಂದು ಪ್ರವಾದಿಯನ್ನು ಕೇಳಿರಿ.
Ma e gima usebedo ka unyiso janabi: ‘Jehova Nyasaye miyi dwoko mane?’ kata, ‘Jehova Nyasaye osewacho angʼo?’
38 ೩೮ ಒಂದು ವೇಳೆ ನೀವು ‘ಯೆಹೋವನ ಹೊರೆ’ ಎಂದು ಉಚ್ಚರಿಸಿದರೆ ಯೆಹೋವನು ಇಂತೆನ್ನುತ್ತಾನೆ, ‘ನಾನು ನಿಮಗೆ ಯೆಹೋವನ ಹೊರೆ ಎಂಬ ಮಾತನ್ನು ಎತ್ತಲೇ ಕೂಡದು ಎಂದು ಹೇಳಿಕಳುಹಿಸಿರುವಲ್ಲಿ ನೀವು ಯೆಹೋವನ ಹೊರೆ ಎಂದು ಹೇಳಿದ ಕಾರಣ ಇಗೋ,
Kata obedo ni iwacho ni, ‘Ma e wach mar Jehova Nyasaye,’ to ma e gima Jehova Nyasaye wacho: Ne itiyo gi weche ka iwacho ni, ‘Ma e wach mar Jehova Nyasaye,’ kata obedoni ne awachonu ni kik uwach ni, ‘Ma e wach mar Jehova Nyasaye.’
39 ೩೯ ಖಂಡಿತವಾಗಿ ನಿಮ್ಮನ್ನೂ ನಾನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ದಯಪಾಲಿಸಿದ ಪಟ್ಟಣವನ್ನೂ ಹೊರೆಯೆಂದು ಎತ್ತಿ ನನ್ನೆದುರಿನಿಂದ ಎಸೆದುಬಿಡುವೆನು.
Emomiyo, adiera wiya nowil kodu kendo ma agolu oko e nyim wangʼa kaachiel gi dala maduongʼ mane amiyou kod wuoneu.
40 ೪೦ ಮತ್ತು ನಾನು ನಿತ್ಯನಿಂದೆಯನ್ನೂ ಎಂದಿಗೂ ಮರೆಯದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.’”
Anakelnu wichkuot manyaka chiengʼ ma en wichkuot ma wich ok nowilgo.”