< ಯೆರೆಮೀಯನು 21 >
1 ೧ ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ, ಯಾಜಕನು ಮಾಸೇಯನ ಮಗನು ಆದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ,
परमप्रभुको यो वचन यर्मियाकहाँ त्यति बेला आयो, जति बेला सिदकियाह राजाले मल्कियाहका छोरा पशहूर र मासेयाहका छोरा पुजारी सपन्याहलाई तिनीकहाँ पठाए, र तिनीहरूले भने,
2 ೨ “ದಯಮಾಡಿ ಯೆಹೋವನ ಚಿತ್ತವೇನೆಂದು ಆತನನ್ನು ನಮಗೋಸ್ಕರ ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮ್ಮ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನಲ್ಲಾ; ಒಂದು ವೇಳೆ ಯೆಹೋವನು ತನ್ನ ಸಮಸ್ತ ಅದ್ಭುತಕಾರ್ಯಗಳಿಗೆ ಅನುಗುಣವಾಗಿ ನಮ್ಮ ಪಕ್ಷವನ್ನು ವಹಿಸಿ ಈ ಶತ್ರುವು ನಮ್ಮ ಕಡೆಯಿಂದ ತೊಲಗುವಂತೆ ಮಾಡಿಯಾನು” ಎಂದು ಅವರ ಮೂಲಕ ವಿಜ್ಞಾಪಿಸಿದಾಗ ಯೆಹೋವನಿಂದ ಯೆರೆಮೀಯನಿಗೆ ದೈವೋಕ್ತಿಯು ದೊರೆಯಿತು.
“हाम्रो पक्षमा परमप्रभुबाट सल्लाह खोज, किनकि बेबिलोनका राजा नबूकदनेसरले हामीमाथि युद्ध गर्देछन् । सायद विगतको समयमा जस्तै परमप्रभुले हाम्रो लागि आश्चर्यकर्म गर्नुहुनेछ र उसलाई हामीबाट फिर्ता जाने बनाउनुहुनेछ ।”
3 ೩ ಆಗ ಯೆರೆಮೀಯನು, “ಈ ಉತ್ತರವನ್ನು ಚಿದ್ಕೀಯನಿಗೆ ತಿಳಿಸಿರಿ” ಎಂದು ಅವರಿಗೆ ಹೇಳಿದನು.
त्यसैले यर्मियाले तिनीहरूलाई भने, “तिमीहरूले सिदकियाहलाई यसो भन्नुपर्छ,
4 ೪ ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಿಮ್ಮನ್ನು ಮುತ್ತುವ ಕಸ್ದೀಯರಿಗೂ ಬಾಬೆಲಿನ ಅರಸನಿಗೂ ವಿರುದ್ಧವಾಗಿ ಪೌಳಿಗೋಡೆಯ ಹೊರಗೆ ಯುದ್ಧಮಾಡುವುದಕ್ಕೆ ನೀವು ಹಿಡಿದಿರುವ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ, ಈ ಪಟ್ಟಣದೊಳಗೆ ಕೂಡಿಹಾಕುವೆನು.
'परमप्रभु इस्राएलका परमेश्वर यसो भन्नुहुन्छः हेर्, तेरो हातमा लडाइँका जुन हतियारहरू छन्, जसद्वारा तैंले बेबिलोनका राजा र तँलाई पर्खालबाहिर घेराबन्दी गर्ने कल्दीहरूको विरुद्धमा लड्दैछस्, ती हतियारहरू म तेरै विरुद्धमा चलाउन लागेकोछु । किनकि म तिनलाई यस सहरको बिचमा जम्मा गर्नेछु ।
5 ೫ ನಾನೇ ಕೋಪ, ರೋಷ, ಮಹಾಕ್ರೋಧಭರಿತನಾಗಿ ಶಿಕ್ಷಾಹಸ್ತದಿಂದಲೂ ಮತ್ತು ಭುಜಪರಾಕ್ರಮದಿಂದಲೂ ನಿಮ್ಮ ವಿರುದ್ಧವಾಗಿ ಯುದ್ಧಮಾಡುವೆನು.
तब पसारिएको हात, शक्तिशाली पाखुरा, क्रोध, बदला र भयङ्कर रिसले म आफै तेरो विरुद्धमा लड्नेछु ।
6 ೬ ಈ ಪಟ್ಟಣದಲ್ಲಿ ವಾಸಿಸುವ ಮನುಷ್ಯರನ್ನೂ ಮತ್ತು ಪಶುಗಳನ್ನೂ ಬಾಧಿಸುವೆನು, ಘೋರವ್ಯಾಧಿಯು ಅವರನ್ನು ಸಾಯಿಸುವುದು.
किनकि म यस सहरका बासिन्दाहरू, मानिस जनावरहरू दुवैलाई आक्रमण गर्नेछु । भयङ्कर रुढीले तिनीहरू मर्नेछन् ।
7 ೭ ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಮತ್ತು ಅವರ ಸೇವಕರನ್ನೂ ವ್ಯಾಧಿ, ಖಡ್ಗ ಮತ್ತು ಕ್ಷಾಮಗಳಿಂದ ಹತರಾಗದೆ ಉಳಿದ ಪ್ರಜೆಗಳನ್ನೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ, ಅವರ ಪ್ರಾಣವನ್ನು ಹುಡುಕುತ್ತಿರುವ ಅವರ ಶತ್ರುಗಳ ಕೈಗೂ ಕೊಟ್ಟುಬಿಡುವೆನು. ಅವನು ಅವರನ್ನು ಕರುಣಿಸದೆ, ಕನಿಕರದಿಂದ ಉಳಿಸದೆ ಕತ್ತಿಯಿಂದ ಸಂಹರಿಸುವನು.
यो परमप्रभुको घोषणा हो, यसपछि यहूदाका राजा सिदकियाह, त्यसका सेवकहरू, मानिसहरू अनि रुढी, तरवार र अनिकालको प्रहारद्वारा पछि यस सहरमा बाँकी रहेकाहरू सबैलाई बेबिलोनका राजा नबूकदनेसर, र तिनीहरूको जीवन लिन खोज्ने तिनीहरूका शत्रुहरूको हातमा म दिनेछु । त्यसपछि उसले तिनीहरूलाई तरवारले मार्नेछ । उसले तिनीहरूलाई दया देखाउने, छोडिदिने वा कृपा गर्नेछैन ।'
8 ೮ “ನೀನು ಈ ಜನರಿಗೆ ಹೀಗೆ ಹೇಳು” ಎಂದು ಯೆಹೋವನು ನನಗೆ ಅಪ್ಪಣೆಕೊಟ್ಟಿದ್ದಾನೆ. ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಜೀವಿಸುವ ಮಾರ್ಗವನ್ನೂ ಮತ್ತು ಸಾಯುವ ಮಾರ್ಗವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ.
“यी मानिसलाई तैंले यसो भन्नुपर्छ, 'परमप्रभु यसो भन्नुहुन्छः हेर, मैले तिमीहरूका सामु जीवनको मार्ग र मृत्यको मार्ग प्रस्तुत गर्न लागेको छु ।
9 ೯ ಪಟ್ಟಣದಲ್ಲಿ ನಿಲ್ಲುವವನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವನು. ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮೊರೆಹೋಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.
यस सहरमा बस्ने कुनै पनि व्यक्ति तरवार, अनिकाल र विपत्तिले मर्नेछ, तर यहाँबाट बाहिर निस्केर जाने र तिमीहरूका विरुद्धमा घेराबन्दी गर्ने कल्दीहरूका सामु आफ्ना घुँडा टेक्ने कुनै पनि व्यक्ति बाँच्नेछ । उसले आफ्नो प्राण बचाउनेछ ।
10 ೧೦ ಮೇಲಿಗಲ್ಲ, ಕೇಡಿಗಾಗಿಯೇ ಈ ಪಟ್ಟಣದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಇದು ಬಾಬೆಲಿನ ಅರಸನ ಕೈವಶವಾಗುವುದು, ಅವನು ಅದನ್ನು ಸುಟ್ಟುಬಿಡುವನು; ಇದು ಯೆಹೋವನ ನುಡಿ.”
किनकि भलाइ होइन र विपत्ति ल्याउनलाई मैले यस सहरको विरुद्धमा आफ्नो अनुहार फर्काएको छु, यो परमप्रभुको घोषणा हो । यसलाई बेबिलोनका राजाको हातमा दिइएको छ, र उसले यसमा आगो लगाउनेछ ।'
11 ೧೧ ಯೆಹೂದದ ಅರಸನ ಮನೆತನದ ವಿಷಯವಾಗಿ ಯೆಹೋವನು ಹೇಳಿರುವ ಈ ಮಾತನ್ನು ಕೇಳಿರಿ.
“यहूदाका राजाको घरानाको विषयमा परमप्रभुको वचन सुन ।
12 ೧೨ ದಾವೀದನ ಮನೆತನದವರೇ, ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು, ಯಾರೂ ಆರಿಸಲಾಗದಷ್ಟು ರಭಸವಾಗಿ ದಹಿಸಬಾರದಾಗಿದ್ದರೆ, ಮುಂಜಾನೆಯಲ್ಲಿ ನ್ಯಾಯತೀರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ” ಎಂಬುದೇ.
ए दाऊदका घराना हो, परमप्रभु भन्नुहुन्छ, 'बिहान न्याय कायम गर । अत्याचार गर्नेको हातबाट लुटिएको व्यक्तिलाई बचाओ, नत्रता मेरो क्रोध आगोझैं निस्केर जानेछ र जलाउनेछ, र तिमीहरूका दुष्ट कामहरूका कारणले यसलाई निभाउन सक्ने त्यहाँ कोही छैन ।
13 ೧೩ ಆಹಾ, ತಗ್ಗಿನ ನಗರವೇ, ಬಯಲು ಭೂಮಿಯ ಶಿಖರದ ಮೇಲಣ ಪುರಿಯೇ, ನಾನು ನಿನ್ನ ವಿರುದ್ಧವಾಗಿದ್ದೇನೆ. “ಯಾರು ಇಳಿದು ನಮ್ಮ ಮೇಲೆ ಬಂದಾರು? ನಮ್ಮ ನಿವಾಸಗಳಲ್ಲಿ ಯಾರು ನುಗ್ಗುವರು?” ಎಂದು ಹೇಳುವವರೇ,
ए बेँसीका बासिन्दा हो, मैदानका चट्टानमा बस्ने हो, म तिमीहरूको विरुद्धमा छु, यो परमप्रभुको घोषणा हो— यसो भन्ने कुनै पनि व्यक्तिको विरुद्धमा म छु, 'हामीलाई आक्रमण गर्नलाई को ओर्लेर आउनेछ र?' वा 'हाम्रा घरहरूमा को पस्नेछ र?'
14 ೧೪ ನಿಮ್ಮ ದುಷ್ಕೃತ್ಯಗಳಿಗೆ ಪ್ರತಿಫಲವಾಗಿ ನಿಮ್ಮನ್ನು ದಂಡಿಸುವೆನು; ನಿಮ್ಮ ಪುರವೆಂಬ ವನಕ್ಕೆ ಬೆಂಕಿ ಹಚ್ಚುವೆನು, ಅದು ಸುತ್ತುಮುತ್ತಣದ ಪ್ರದೇಶವನ್ನೆಲ್ಲಾ ನುಂಗಿಬಿಡುವುದು.
तिमीहरूका विरुद्धमा आउनलाई मैले तिमीहरूका अभ्यासको फल तोकेको छु, यो परमप्रभुको घोषणा हो— र झाडीहरूमा म आगो सल्काउनेछु, र त्यसले आफ्नो वरिपरि भएका हरेक कुरालाई भस्म पार्नेछ ।”