< ಯೆರೆಮೀಯನು 20 >
1 ೧ ಯೆರೆಮೀಯನು ಈ ಪ್ರವಾದನೆ ಮಾಡುವುದನ್ನು ಯಾಜಕನಾದ ಇಮ್ಮೇರನ ಮಗನೂ ಯೆಹೋವನ ಆಲಯದ ಮುಖ್ಯಾಧಿಕಾರಿಯೂ ಆದ ಪಷ್ಹೂರನು ಕೇಳಿದನು.
Ni Pasur a putot ni Immer a padi-isuna ket kangatoan nga opisial-nangngegna nga ipadpadto ni Jeremias dagitoy a sasao iti sangoanan ti balay ni Yahweh.
2 ೨ ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ, ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲಲ್ಲಿದ್ದ ಕೋಳಕ್ಕೆ ಹಾಕಿಸಿದನು.
Isu a kinabil ni Pasur ni Jeremias a profeta ket kalpasanna, inkabilna isuna kadagiti tul-ong nga adda iti akinngato a Ruangan ti Benjamin iti balay ni Yahweh.
3 ೩ ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ ಹೀಗೆ ಹೇಳಿದನು, “ಯೆಹೋವನು ನಿನ್ನ ಹೆಸರನ್ನು ಪಷ್ಹೂರ್ ಎಂದು ಹೇಳದೆ ಮಾಗೋರ್ ಮಿಸ್ಸಾಬೀಬ್ ಎಂದು ಹೇಳಿದ್ದಾನೆ.
Ket napasamak nga iti sumaruno nga aldaw, rinuk-atan ni Pasur ni Jeremias manipud iti tul-ong. Ket kinuna ni Jeremias kenkuana, “Saan a Pasur ti pangawag ni Yahweh iti naganmo, no di ket sika ni Magor Missabib.
4 ೪ ಏಕೆಂದರೆ, ಇಗೋ, ನಾನು ನಿನ್ನನ್ನು ನಿನಗೂ ಮತ್ತು ನಿನ್ನ ಎಲ್ಲಾ ಸ್ನೇಹಿತರಿಗೂ ದಿಗಿಲಿಗಿ ಆಸ್ಪದನನ್ನಾಗಿ ಮಾಡುವೆನು; ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು, ನೀನು ಅದನ್ನು ಕಣ್ಣಾರೆ ಕಾಣುವಿ. ನಾನು ಯೆಹೂದ್ಯರನ್ನೆಲ್ಲಾ ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದು ಕತ್ತಿಯಿಂದ ಕಡಿಯುವನು.
Ta kastoy ti kuna ni Yahweh, 'Makitamto, pagbalinenkanto a nakaal-alainggaget-sika ken dagiti amin nga ipatpategmo-ta mapasagdanto babaen kadagiti kampilan dagiti kabusorda ket maimatangamto daytoy. Iyawatkonto ti entero a Juda iti ima ti ari ti Babilonia. Pagbalinennanto ida a balud idiay Babilonia wenno rautenna ida babaen iti kampilan.
5 ೫ ಈ ಪಟ್ಟಣದ ಎಲ್ಲಾ ಆಸ್ತಿಯನ್ನೂ, ಆದಾಯವನ್ನೂ ಮತ್ತು ಸಂಪತ್ತನ್ನೂ ಯೆಹೂದದ ಅರಸರ ಸಕಲ ನಿಧಿ, ನಿಕ್ಷೇಪಗಳನ್ನೂ ಅವರ ಶತ್ರುಗಳ ಕೈವಶಮಾಡುವೆನು; ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು.
Itedkonto kenkuana amin a sanikua daytoy a siudad, amin a kinabaknang daytoy, amin a napapateg a banbanag nga adda iti daytoy, ken dagiti amin a gameng dagiti ari ti Juda. Ipaimakto amin dagitoy a banbanag kadagiti kabusoryo, ket samsamendanto dagitoy. Alaendanto dagitoy nga ipan idiay Babilonia.
6 ೬ ಪಷ್ಹೂರನೇ, ನೀನೋ ನಿನ್ನ ಮನೆಯವರೆಲ್ಲರೊಡನೆ ಸೆರೆಗೆ ಹೋಗುವಿ. ನೀನೂ ಮತ್ತು ನಿನ್ನ ಮಿಥ್ಯಾ ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಸ್ನೇಹಿತರೂ ಬಾಬಿಲೋನಿಗೆ ಸೇರಿ ಅಲ್ಲೇ ಸತ್ತು ಮಣ್ಣಾಗುವಿರಿ” ಎಂದು ನುಡಿದಿದ್ದಾನೆ.
Ngem sika, Pasur, ken dagiti amin nga agnanaed iti balaymo ket maitalawto a kas balud. Maipankanto idiay Babilonia ket sadiayto ti pakatayam. Sika ken amin dagiti ipatpategmo a nangipadtoam kadagiti inuulbod a banbanag ket maitanemto sadiay.'”
7 ೭ ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದಿ, ನಾನು ಮರುಳಾದೆನು; ನೀನು ನನಗಿಂತ ಬಲಿಷ್ಠನಾಗಿ ಗೆದ್ದುಕೊಂಡಿ; ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ.
“Inallukoynak, O Yahweh. Pudno a naallukoyak. Sinakup ken pinarmeknak. Nagbalinak a pagkakatawaan. Inaldaw a linalaisdak dagiti tattao.
8 ೮ ನಾನು ಮಾತನಾಡುವುದೆಲ್ಲಾ ಅರಚಾಟವೇ. “ಬಲಾತ್ಕಾರ, ಕೊಳ್ಳೆ” ಎಂದೇ ಕೂಗಿಕೊಳ್ಳುತ್ತೇನೆ. ನಾನು ಸಾರುವ ಯೆಹೋವನ ವಾಕ್ಯವು ನನ್ನನ್ನು ಜನರ ದೂಷಣೆಗೂ ಪರಿಹಾಸ್ಯಕ್ಕೂ ಗುರಿಮಾಡಿದೆ.
Ta tunggal agsaoak, ipukkawko nga iwaragawag, 'Kinaranggas ken pannakadadael.' Ket dagiti sasao ni Yahweh ket nagbalin a pannakaibabain ken pannakalalaisko iti inaldaw.
9 ೯ “ನಾನು ಯೆಹೋವನ ವಿಷಯವನ್ನು ಪ್ರಕಟಿಸುವುದಿಲ್ಲ, ಆತನ ಹೆಸರಿನಲ್ಲಿ ಇನ್ನು ಮಾತನಾಡುವುದಿಲ್ಲ” ಎಂದುಕೊಂಡರೆ, ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ, ಸಹಿಸಿ ಸಹಿಸಿ ಆಯಾಸಗೊಂಡಿದ್ದೇನೆ, ಇನ್ನು ಸಹಿಸಲಾರೆ.
No ibagak a, 'Saankon a panpanunoten ti maipanggep kenni Yahweh. Saankon nga iwaragawag ti naganna.' Ket kasla maysa nga apuy daytoy iti pusok, naipupok iti uneg dagiti tultulangko. Isu nga inkarigatak nga inibturan daytoy ngem saanko a kabaelan.
10 ೧೦ “ಇವನ ಮೇಲೆ ದೂರು ಹೇಳಿರಿ, ನಾವೂ ಹೇಳುವೆವು” ಎಂದು ಬಹು ಜನರು ಗುಸುಗುಟ್ಟುವುದನ್ನು ಕೇಳಿದ್ದೇನೆ. ಸುತ್ತುಮುತ್ತಲೂ ದಿಗಿಲು; ನನ್ನ ಆಪ್ತ ಸ್ನೇಹಿತರೆಲ್ಲರೂ “ಇವನು ಎಡವಿ ಬೀಳಲಿ” ಎಂದು ನನ್ನನ್ನು ಹೊಂಚಿನೋಡುತ್ತಾ, “ಒಂದು ವೇಳೆ ಸಿಕ್ಕಿಬಿದ್ದಾನು, ಇವನನ್ನು ಗೆದ್ದು ಮುಯ್ಯಿತೀರಿಸಿಕೊಳ್ಳುವೆವು” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳುತ್ತಿದ್ದಾರೆ.
Nangngegko dagiti dakes a panggepda kaniak manipud kadagiti amin a tattao iti aglawlaw. Ipulongtayo! Masapul nga ipulongtayo daytoy!' Dagiti nasinged kaniak, sipsiputanda ti panagbiddutko. Bareng no maallilaw isuna. Ta no kasta maparmektayo isuna ket makaibalestayo kenkuana.'
11 ೧೧ ಯೆಹೋವನಾದರೋ ಭಯಂಕರಶೂರನಾಗಿ ನನ್ನ ಸಂಗಡ ಇದ್ದಾನೆ. ಆದುದರಿಂದ ನನ್ನ ಹಿಂಸಕರು ಗೆಲ್ಲದೆ ಮುಗ್ಗರಿಸುವರು. ತಮ್ಮ ಇಷ್ಟಾರ್ಥವು ನೆರವೇರದ ಕಾರಣ ದೊಡ್ಡ ನಾಚಿಕೆಗೆ ಈಡಾಗುವರು, ಎಂದಿಗೂ ಮರೆಯದ ಶಾಶ್ವತ ಅವಮಾನಕ್ಕೆ ಒಳಗಾಗುವರು.
Ngem adda kaniak ni Yahweh a kasla maysa a nasiglat a mannakigubat, isu a maitibkolto dagiti mangkamkamat kaniak. Saandak a maparmek. Kastanto unay ti pannakaibabainda, gapu ta saanda nga agballigi. Saanto nga agpatingga ti pannakaibabainda, saanto a pulos a malipatan daytoy.
12 ೧೨ ಹೃದಯವನ್ನೂ ಮತ್ತು ಅಂತರಿಂದ್ರಿಯವನ್ನೂ ಪರೀಕ್ಷಿಸಿ ಶಿಷ್ಟರನ್ನು ಶೋಧಿಸುವ ಸೇನಾಧೀಶ್ವರನಾದ ಯೆಹೋವನೇ, ನೀನು ನನ್ನ ಹಿಂಸಕರಿಗೆ ಕೊಡುವ ಪ್ರತಿಫಲವನ್ನು ನನ್ನ ಕಣ್ಣು ನೋಡಲಿ; ನಿನಗೇ ನನ್ನ ವ್ಯಾಜ್ಯವನ್ನು ಅರಿಕೆಮಾಡಿದ್ದೇನಷ್ಟೆ.
Ngem Sika, O Yahweh a Mannakabalin-amin, sika a mangsuksukimat iti nalinteg ken mangkitkita iti panunot ken iti puso. Ipakitam koma kaniak ti panagibalesmo kadakuada agsipud ta imparangko kenka ti kasasaadko.
13 ೧೩ ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ; ಆತನು ಕೆಡುಕರ ಕೈಯಿಂದ ದೀನನ ಪ್ರಾಣವನ್ನು ರಕ್ಷಿಸಿದ್ದಾನೆ.
Agkantakayo para kenni Yahweh! Idaydayawyo ni Yahweh! Ta inispalna dagiti biag dagiti naparparigat manipud iti ima dagiti managdakdakes.
14 ೧೪ ನಾನು ಹುಟ್ಟಿದ ದಿನ ಶಾಪಗ್ರಸ್ತವಾಗಲಿ, ತಾಯಿಯು ನನ್ನನ್ನು ಹೆತ್ತ ದಿನವು ಅಶುಭವೆನ್ನಿಸಿಕೊಳ್ಳಲಿ!
Mailunod koma ti aldaw a pannakaiyanakko. Saanmo koma nga impalubos a mabendisionan ti aldaw a panangipasngay ti inak kaniak.
15 ೧೫ “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ ಅವನಿಗೆ ಕೇವಲ ಆನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ!
Mailunod koma ti tao a nangipakaammo iti amak, ti nagkuna a, 'Maysa a lalaki ti putotmo, 'a makagapu iti nalaus a panagrag-o.
16 ೧೬ ಯೆಹೋವನು ಕನಿಕರಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ. ಮುಂಜಾನೆಯಲ್ಲಿ ಅರಚಾಟವು, ಮಧ್ಯಾಹ್ನದಲ್ಲಿ ಕೂಗಾಟವು ಅವನ ಕಿವಿಗೆ ಬೀಳಲಿ!
Agbalin koma dayta a lalaki a kas kadagiti siudad a dinadael ni Yahweh, idi saanna dagitoy a kinaasian. Mangngegna koma ti asug iti parbangon ken mangngegna koma ti ariwawa ti gubat iti tengnga ti aldaw.
17 ೧೭ ಅವನು ನನ್ನನ್ನು ಗರ್ಭದಲ್ಲೇ ಕೊಲ್ಲಲಿಲ್ಲವಲ್ಲಾ; ಹೀಗೆ ಮಾಡಿದ್ದರೆ ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು, ಆಕೆಯ ಗರ್ಭವು ಯಾವಾಗಲೂ ಬಸುರಾಗಿಯೇ ಇರುತ್ತಿತ್ತು.
Mapasamak koma daytoy, agsipud ta saannak a pinapatay ni Yahweh iti aanakan wenno pinagbalin a tanemko ti tian ti inak, aanakan a masikog iti agnanayon.
18 ೧೮ ನಾನು ಶ್ರಮದುಃಖಗಳನ್ನು ನೋಡುವುದಕ್ಕೂ, ನನ್ನ ಆಯುಸ್ಸು ಅವಮಾನದಿಂದ ಕ್ಷಯಿಸುವುದಕ್ಕೂ ಗರ್ಭದಿಂದ ಏಕೆ ಹೊರಟು ಬಂದೆನು?
Apay pay laeng a naiyanakak isu a naimatangak dagiti riribuk ken ladingit, isu a napnoan dagiti aldawko iti pannakaibabain?”