< ಯೆರೆಮೀಯನು 19 >
1 ೧ ಯೆಹೋವನು ನನಗೆ ಹೀಗೆ ಹೇಳಿದನು, “ಹೊರಡು, ಕುಂಬಾರನು ಮಾಡಿದ ಮಣ್ಣಿನ ಮಡಕೆಯನ್ನು ಕೊಂಡುಕೊಂಡು, ಜನರ ಹಿರಿಯರಲ್ಲಿಯೂ ಮತ್ತು ಯಾಜಕರ ಹಿರಿಯರಲ್ಲಿಯೂ ಕೆಲವರನ್ನು ಆರಿಸಿಕೋ.
Tak mówi Pan: Idź, a kup dzban gliniany od garncarza, a wziąwszy niektórych z starszych ludu i z starszych kapłanów;
2 ೨ ನೀನು ಬೋಕಿಯ ಬಾಗಿಲಿನ ಸಮೀಪದಲ್ಲಿರುವ ಬೆನ್ ಹಿನ್ನೋಮ್ ತಗ್ಗಿಗೆ ಹೋಗಿ, ನಾನು ನಿನಗೆ ತಿಳಿಸುವ ಮಾತುಗಳನ್ನು ಸಾರು.
Wnijdź do doliny syna Hennomowego, która jest u wrót bramy wschodniej, a tam opowiadaj słowa, które do ciebie mówić będę.
3 ೩ ನೀನು ಅವರಿಗೆ, ‘ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವನ ಮಾತನ್ನು ಕೇಳಿರಿ! ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುವೆನು; ಅದರ ಸುದ್ದಿಯನ್ನು ಕೇಳುವವರ ಎರಡು ಕಿವಿಗಳೂ ಗಿರುಗುಟ್ಟುವವು.
A rzecz: Słuchajcie słowa Pańskiego, królowie Judzcy i obywatele Jeruzalemscy! Tak mówi pan zastępów, Bóg Izraelski: Oto Ja przywiodę złe na to miejsce, o którem ktokolwiek usłyszy, zabrzmi mu w uszach jego.
4 ೪ “‘ಈ ಜನರು ನನ್ನನ್ನು ತೊರೆದು ತಮಗಾಗಲಿ, ತಮ್ಮ ಪೂರ್ವಿಕರಿಗಾಗಲಿ ಅಥವಾ ಯೆಹೂದದ ಅರಸರಿಗಾಗಲಿ ತಿಳಿಯದ ಅನ್ಯದೇವತೆಗಳಿಗೆ ಧೂಪಹಾಕುತ್ತಾ, ಈ ಸ್ಥಳವನ್ನು ಅನ್ಯಸ್ಥಾನವನ್ನಾಗಿ ಮಾಡಿದ್ದಾರೆ.
Przeto, że mię opuścili, a splugawili to miejsce, kadząc na niem bogom cudzym, których nie znali oni i ojcowie ich, i królowie Judzcy, i napełnili to miejsce krwią niewinnych;
5 ೫ ಅವರು ಅದನ್ನು ನಿರ್ದೋಷಿಗಳ ರಕ್ತದಿಂದ ತುಂಬಿಸಿ, ತಮ್ಮ ಮಕ್ಕಳನ್ನು ಬಾಳ್ ದೇವತೆಗೆ ಆಹುತಿ ಕೊಡುವುದಕ್ಕೆ ಬಾಳನ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡಿದ್ದಾರಲ್ಲಾ. ನಾನು ಇಂಥಾ ಆಚಾರವನ್ನು ವಿಧಿಸಲಿಲ್ಲ, ಅದರ ಮಾತನ್ನೇ ಆಡಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ.
I pobudowali wyżyny Baalowi, aby palili synów swych ogniem na całopalenie Baalowi, czegom nie rozkazał, anim oto mówił, ani to wstąpiło na serce moje:
6 ೬ ಆಹಾ, ಈ ಕಾರಣದಿಂದ ಈ ಸ್ಥಳಕ್ಕೆ ತೋಫೆತ್ ಮತ್ತು ಬೆನ್ ಹಿನ್ನೋಮಿನ ತಗ್ಗು ಎಂಬ ಹೆಸರುಗಳು ಹೋಗಿ ಕೊಲೆಯ ತಗ್ಗು ಎಂಬ ಹೆಸರಾಗುವ ಕಾಲ ಬರುವುದು.
Dlatego oto dni idą, mówi Pan, w których nie będzie nazywane więcej to miejsce Tofet, ani doliną syna Hennomowego, ale doliną mordu.
7 ೭ ನಾನು ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಯೆರೂಸಲೇಮಿನವರ ಆಲೋಚನೆಯನ್ನು ಮಣ್ಣುಪಾಲುಮಾಡಿ, ಅವರ ಪ್ರಾಣವನ್ನು ಹುಡುಕುವ ಶತ್ರುಗಳ ಖಡ್ಗದಿಂದ ಅವರನ್ನು ಬೀಳಿಸಿ, ಆ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವನ್ನಾಗಿ ಮಾಡುವೆನು.
Bo wniwecz obrócę radę Judzką i Jeruzalemską na tem miejscu, a sprawię, że oni upadną od miecza przed twarzą nieprzyjaciół swoich, i od ręki szukających duszy ich; i dam trupy ich na pokarm ptastwu niebieskiemu, i zwierzowi ziemskiemu;
8 ೮ ನಾನು ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.
Podam także to miasto na spustoszenie i na świstanie; każdy idący mimo nie zdumieje się, a świstać będzie nad wszystkiemi plagami jego.
9 ೯ ಅವರು ತಮ್ಮ ಗಂಡು ಹೆಣ್ಣು ಮಕ್ಕಳ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಅವರ ಪ್ರಾಣವನ್ನು ಹುಡುಕುವ ಶತ್ರುಗಳು ಅವರನ್ನು ಮುತ್ತಿ, ಸಂಕಟಕ್ಕೆ ಗುರಿಮಾಡುವಾಗ, ಅವರು ತಮ್ಮ ಇಷ್ಟ ಮಿತ್ರರ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಇದು ಯೆಹೋವನಾದ ನನ್ನ ನುಡಿ.’”
I sprawię to, że będą jeść ciała synów swoich, i ciała córek swoich, a każdy z nich ciało bliźniego swego jeść będzie w oblężeniu i w uciśnieniu, którem ich ucisną nieprzyjaciele ich, i ci, którzy szukają duszy ich.
10 ೧೦ ಆಗ ನೀನು ನಿನ್ನ ಸಂಗಡ ಬಂದವರ ಕಣ್ಣೆದುರಿಗೆ ಆ ಮಡಿಕೆಯನ್ನು ಒಡೆದುಬಿಟ್ಟು ಅವರಿಗೆ ಹೀಗೆ ಹೇಳು,
Potem stłucz ten dzban przed oczyma mężów, którzy pójdą z tobą,
11 ೧೧ “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಕುಂಬಾರನು ಒಡೆದು ಸರಿಪಡಿಸಲಾಗದ ಮಣ್ಣಿನ ಪಾತ್ರೆಯಂತೆ ನಾನು ಈ ಜನವನ್ನು ಮತ್ತು ಪಟ್ಟಣವನ್ನು ಒಡೆದುಬಿಡುವೆನು; ಇನ್ನೆಲ್ಲಿಯೂ ಸ್ಥಳವಿಲ್ಲವಾಗಿ ಶವಗಳನ್ನು ತೋಫೆತಿನಲ್ಲಿ ಹೂಣುವರು.
A rzecz do nich: Tak mówi Pan zastępów: Tak stłukę ten lud, i to miasto, jako gdy kto tłucze naczynie garncarskie, które więcej naprawione być nie może: a w Tofet pogrzebywać będą, iż miejsca inszego nie będzie ku pogrzebowi.
12 ೧೨ ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಹೀಗೆ ನಾಶಪಡಿಸಿ, ಈ ಪಟ್ಟಣವನ್ನು ತೋಫೆತಿನ ಸ್ಥಿತಿಗೆ ತರುವೆನು.
Tak uczynię temu miejscu, mówi Pan, i obywatelom jego, i postąpię sobie z tem miastem, tak jako z Tofet.
13 ೧೩ ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ಅಂದರೆ ಯಾವ ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ, ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ, ಆ ಮನೆಗಳೆಲ್ಲಾ ಹೊಲಸಾಗಿ ತೋಫೆತ್ ಎಂಬ ಸ್ಥಳಕ್ಕೆ ಸಮಾನವಾಗುವವು.’”
Bo będą domy Jeruzalemskie i domy królów Judzkich, jako to miejsce Tofet, nieczyste ze wszystkiemi domami temi, na których dachach kadzili wszystkiemu wojsku niebieskiemu, i sprawowali ofiary mokre bogom cudzym.
14 ೧೪ ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಯೆಹೋವನ ಆಲಯದ ಪ್ರಾಕಾರದಲ್ಲಿ ನಿಂತುಕೊಂಡು,
Tedy wróciwszy się Jeremijasz z Tofet, gdzie go był Pan posłał, aby tam prorokował, stanął w sieni domu Pańskiego, i rzekł do wszystkiego ludu:
15 ೧೫ “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ಈ ಪಟ್ಟಣದವರೂ ಮತ್ತು ಇದರ ಸುತ್ತಣ ಎಲ್ಲಾ ಊರುಗಳವರೂ ನನ್ನ ಮಾತುಗಳನ್ನೂ ಕೇಳದೆ, ತಮ್ಮ ಮನಸ್ಸನ್ನು ಕಠಿಣಮಾಡಿಕೊಂಡ ಕಾರಣ, ನಾನು ಈ ಪಟ್ಟಣಕ್ಕೆ ಕೊಟ್ಟ ಶಾಪದ ಕೇಡನ್ನೆಲ್ಲಾ ಇವರಿಗೆ ಬರಮಾಡುವೆನು” ಎಂದು ಸಮಸ್ತ ಜನರಿಗೆ ಸಾರಿದನು.
Tak mówi Pan zastępów, Bóg Izraelski: Oto Ja przywiodę na to miasto i na wszystkie miasto jego wszystko to złe, którem wyrzekł przeciw niemu; bo zatwardzili kark swój, aby nie słuchali słów moich.