< ಯೆರೆಮೀಯನು 16 >
1 ೧ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
Kalpasanna immay kaniak ti sao ni Yahweh, kunana,
2 ೨ “ನೀನು ಮದುವೆಯಾಗಬೇಡ, ಗಂಡು ಮತ್ತು ಹೆಣ್ಣು ಮಕ್ಕಳು ಈ ಸ್ಥಳದಲ್ಲಿ ಹುಟ್ಟದಿರಲಿ.
“Saanka a mangasawa ken saanka a pumutot iti daytoy a lugar.
3 ೩ ಏಕೆಂದರೆ ಈ ಸ್ಥಳದಲ್ಲಿ ಹುಟ್ಟುವ ಗಂಡು ಹೆಣ್ಣು ಮಕ್ಕಳು, ಅವರನ್ನು ಹೆತ್ತ ತಾಯಿಯರು, ಅವರನ್ನು ಈ ದೇಶದಲ್ಲಿ ಪಡೆದ ತಂದೆಯಂದಿರಿಗೆ, ಇವರೆಲ್ಲರ ವಿಷಯವಾಗಿ ಯೆಹೋವನು ಹೀಗೆ ನುಡಿದಿದ್ದಾನೆ,
Ta kastoy ti kuna ni Yahweh kadagiti annak a lallaki ken babbai a naiyanak iti daytoy a lugar, kadagiti inna a nangipasngay ken kadagiti amma a nangiputot kadakuada iti daytoy a daga,
4 ೪ ಅವರು ಘೋರವಾದ ಮರಣಕ್ಕೆ ಗುರಿಯಾಗುವರು, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಹೂಣಿಡುವುದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು. ಖಡ್ಗವೂ, ಕ್ಷಾಮವೂ ಅವರನ್ನು ನಿರ್ಮೂಲ ಮಾಡುವವು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವಾಗುವವು” ಎಂಬುದೇ.
'Mataydanto gapu kadagiti nakaro a sakit. Saandanto a madung-awan wenno maipunpon. Maiyarigdanto iti takki iti daga. Ta aggibusdanto babaen iti kampilan ken panagbisin, ket dagiti bangkayda, agbalinto a taraon dagiti billit iti tangatang ken dagiti narungsot nga ayup iti daga.
5 ೫ ಯೆಹೋವನು ನನಗೆ, “ಗೋಳಾಟದ ಮನೆಯಲ್ಲಿ ಸೇರಬೇಡ, ಪ್ರಲಾಪಿಸಲಿಕ್ಕೆ ಹೋಗಬೇಡ, ಅವರಿಗಾಗಿ ಎದೆ ಬಡಿದುಕೊಳ್ಳಲೂ ಬೇಡ. ನಾನು ದಯಪಾಲಿಸಿದ ಸಮಾಧಾನವನ್ನು, ಅಂದರೆ ನನ್ನ ಪ್ರೀತಿಯನ್ನೂ ಹಾಗು ಕೃಪೆಯನ್ನೂ ಈ ಜನರಿಂದ ತೆಗೆದುಬಿಟ್ಟಿದ್ದೇನಷ್ಟೆ.
Ta kastoy ti kuna ni Yahweh, 'Saanka a sumrek iti aniaman a balay nga adda panagladingit. Saanka a makipagladingit ken makipagrikna para kadagitoy a tattao. Ta inikkatkon ti kapiak, ti kinapudnok iti tulag, ken ti kinamanangngaasik kadagitoy a tattao! -kastoy ti kuna ni Yahweh-
6 ೬ ಈ ದೇಶದಲ್ಲಿನ ದೊಡ್ಡವರೂ. ಅಲ್ಪರೂ ಸಾಯುವರು. ಅವರನ್ನು ಯಾರೂ ಹೂಣಿಡುವುದಿಲ್ಲ, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಗಾಯಮಾಡಿಕೊಳ್ಳುವುದಿಲ್ಲ, ತಲೆಬೋಳಿಸಿಕೊಳ್ಳುವುದಿಲ್ಲ.
isu a matayto dagiti nangato ken nababa iti daytoy a daga. Saandanto a maitabon wenno awanto ti agladingit gapu kadakuada. Awanto ti mangsugat iti bagbagida wenno mangkuskos kadagiti uloda gapu kadakuada.
7 ೭ ಸತ್ತವನಿಗೋಸ್ಕರ ದುಃಖಪಡುವವರನ್ನು ಸಂತೈಸುವುದಕ್ಕಾಗಿ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ ತಾಯಿಯನ್ನಾಗಲಿ ಕಳಕೊಂಡವರಿಗೆ ಯಾರೂ ಸಮಾಧಾನದಾಯಕ ಪಾನಪಾತ್ರೆಯನ್ನು ನೀಡುವುದಿಲ್ಲ.
Masapul nga awan ti mangibingay iti aniaman a makan kadagiti agladladingit tapno maliwliwada gapu kadagiti natay ken masapul nga awan ti mangted iti ama wenno iti inana iti kopa a makaliwliwa tapno maliwliwada.
8 ೮ ಔತಣದ ಮನೆಯಲ್ಲಿಯೂ ಸೇರಬೇಡ, ಅಲ್ಲಿನವರೊಂದಿಗೆ ಕುಳಿತು ತಿನ್ನಬೇಡ, ಕುಡಿಯಬೇಡ.
Masapul a saanka a mapan iti balay a pagrambakan a makitugaw kadakuada tapno mangan ken uminom.'
9 ೯ ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗೆಂದಿದ್ದಾನೆ, ‘ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ಮತ್ತು ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು.’
Ta kastoy ti kuna ni Yahweh a Mannakabalin-amin a Dios ti Israel, 'Kitaenyo, iti imatangyo, kadagiti al-aldawyo ken iti daytoy a lugar, umadanin ti panangpasardengko iti ariwawa gapu iti panagragragsak ken panagrambak, iti timek dagiti nobio ken nobia.
10 ೧೦ ಈ ಮಾತುಗಳನ್ನೆಲ್ಲಾ ಈ ಜನರಿಗೆ ತಿಳಿಸುತ್ತಿರುವ ನಿನಗೆ ಪ್ರತ್ಯುತ್ತರವಾಗಿ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ವಿಧಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಕೇಳುವಾಗ,
Ket mapasamakto nga ipakaammomto amin dagitoy a sasao kadagitoy a tattao, ket ibagadanto kenka, 'Apay nga inkeddeng ni Yahweh amin daytoy a nakaro a didigra maibusor kadakami? Ania ti nakaro a kinadakes ken nakabasolanmi kenni Yahweh a Diostayo?
11 ೧೧ ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪೂರ್ವಿಕರು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ, ಪೂಜಿಸಿ ನನ್ನನ್ನು ಬಿಟ್ಟು, ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ,
Ibagam ngarud kadakuada, 'Gapu ta tinallikudandak dagiti kapuonanyo-kastoy ti pakaammo ni Yahweh-ken dagiti didiosen ti sinurotda ket nagdaydayaw ken nagrukbabda kadagitoy. Tinallikudandak ken saanda a tinungpal ti lintegko.
12 ೧೨ ಇಗೋ, ನೀವೆಲ್ಲರೂ ನಿಮ್ಮ ದುಷ್ಟಹೃದಯದ ಹಟದಂತೆ ನಡೆಯುತ್ತಾ ನನ್ನನ್ನು ಕೇಳದೆ ನಿಮ್ಮ ಪೂರ್ವಿಕರಿಗಿಂತ ಹೆಚ್ಚು ಕೇಡನ್ನು ಮಾಡಿದ್ದರಿಂದಲೂ,
Ngem dakayo a mismo ket nakarkaro pay a kinadangkes ti inaramidyo ngem kadagiti kapuonanyo, ta kitaenyo, tunggal tao ket agbibiag babaen iti kinasukir ti nadangkes a pusona; awan a pulos ti uray maysa a dumdumngeg kaniak.
13 ೧೩ ನೀವಾಗಲಿ ಅಥವಾ ನಿಮ್ಮ ಪೂರ್ವಿಕರಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸುವುದಿಲ್ಲ’” ಎಂದು ಹೇಳಿದನು.
Isu a manipud iti daytoy a daga, ipankayonto iti daga a saanyo pay a napanan a kasla ibellengkayo sadiay, uray dakayo ken dagiti kapuonanyo, ket agdaydayawkayonto sadiay kadagiti didiosen, iti aldaw ken rabii, ta saankayonto a kaasian.'
14 ೧೪ “ಇಗೋ, ಮುಂದಿನ ಕಾಲದಲ್ಲಿ ಜನರು, ‘ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂಬುದಾಗಿ ಪ್ರಮಾಣಮಾಡುವುದನ್ನು ಬಿಟ್ಟು,
Isu a kitaenyo! Umadanin dagiti al-aldaw-kastoy ti pakaammo ni Yahweh-inton saanen a maibaga nga, 'Iti nagan ni Yahweh nga adda iti agnanayon a nangiruar kadagiti tattao ti Israel manipud iti daga ti Egipto.'
15 ೧೫ ‘ಇಸ್ರಾಯೇಲರನ್ನು ಬಡಗಣ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂದು ಪ್ರಮಾಣಮಾಡುವರು; ನಾನು ಅವರ ಪೂರ್ವಿಕರಿಗೆ ದಯಪಾಲಿಸಿದ ದೇಶಕ್ಕೆ ಅವರನ್ನು ಹಿಂದಿರುಗಿಸುವೆನಷ್ಟೆ” ಎಂದು ಯೆಹೋವನು ಘೋಷಿಸುತ್ತಾನೆ.
Ta iti nagan ko, Siak a ni Yahweh nga adda iti agnanayon, a nangummong kadagiti tattao ti Israel manipud iti daga ti amianan ken manipud kadagiti daga a nangiwarasanna kadakuada, isublikto ida iti daga nga intedko kadagiti kapuonanda.
16 ೧೬ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಜನರನ್ನು ಹಿಡಿಯುವುದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ, ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ, ಬೇಟೆಯಾಡುವುದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು.
Kitaenyo, mangibaonakto iti adu a mangngalap-kastoy ti pakaammo ni Yahweh-tapno kalapenda dagiti tattao. Kalpasan daytoy, mangayabakto iti adu a mangnganop tapno anopenda ida kadagiti amin a kabanbantayan ken katurturodan, ken kadagiti rengngat dagiti dakkel a bato.
17 ೧೭ ನಾನು ಅವರ ನಡತೆಯನ್ನೆಲ್ಲಾ ದೃಷ್ಟಿಸುತ್ತೇನೆ, ಅದು ನನ್ನ ಮುಖಕ್ಕೆ ಮರೆಯಾಗಿಲ್ಲ; ಅವರ ಅಧರ್ಮವು ನನಗೆ ಗುಟ್ಟಾಗಿ ಇಲ್ಲ, ಪ್ರತ್ಯಕ್ಷವಾಗೇ ಇದೆ.
Ta sikikita dagiti matak kadagiti amin nga ar-aramidenda; saanda a mailemmeng dagitoy iti imatangko. Saan a mailemmeng ti nagkuranganda iti imatangko.
18 ೧೮ ಅವರ ಅಧರ್ಮಕ್ಕೂ, ಪಾಪಕ್ಕೂ ಎರಡರಷ್ಟು ಶಿಕ್ಷೆಯನ್ನು ಮೊದಲು ಕೊಡುವೆನು; ಹೆಣಗಳಂತಿರುವ ತಮ್ಮ ಹೇಯವಿಗ್ರಹಗಳಿಂದ ನನ್ನ ದೇಶವನ್ನು ಹೊಲಸುಮಾಡಿ, ನನ್ನ ಸ್ವತ್ತನ್ನು ತಮ್ಮ ಅಸಹ್ಯ ವಸ್ತುಗಳಿಂದ ತುಂಬಿಸಿದ್ದಾರಷ್ಟೆ.”
Supapakak nga umuna iti mamindua a daras ti nagkurangan ken basolda gapu iti panangtulawda iti dagak gapu kadagiti makarimon nga imahen dagiti didiosenda ken iti panangpunnoda iti impatawidko babaen kadagiti makarimon a didiosen.
19 ೧೯ ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ, “ನಮ್ಮ ಪೂರ್ವಿಕರು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ” ಎಂದು ಅರಿಕೆ ಮಾಡುವರು.
O Yahweh, sika ti sarikedkedko ken pagkamangak, natalged a lugar a pagsammakedak iti aldaw ti panagrigatko. Umayto kenka dagiti nasion manipud kadagiti pungto iti daga ket ibagada, “Awan duadua a tinawid dagiti kapuonantayo ti kinaulbod. Ubbawda; awan iti magungona kadakuada.
20 ೨೦ ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೇ? ಇವು ದೇವರುಗಳೇ ಅಲ್ಲ.
Iyaramidan kadi dagiti tattao dagiti bagbagida kadagiti dios? Ngem saanda met a pudno a dios.
21 ೨೧ ಈ ನಿಮಿತ್ತವಾಗಿ, ಇಗೋ, ಇದೊಂದೇ ಸಲ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು, ಹೌದು, ಗ್ರಹಿಸಮಾಡುವೆನು; ನನ್ನ ನಾಮಧೇಯವು “ಯೆಹೋವ” ಎಂದು ಅವರಿಗೆ ಗೊತ್ತಾಗುವುದು.
Isu a makitayonto! Ipakaammokto kadakuada iti daytoy a tiempo, ipakaammokto kadakuada ti ima ken pannakabalinko, tapno maammoandanto a Yahweh ti naganko.