< ಯೆರೆಮೀಯನು 16 >

1 ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
上主的話傳給說:
2 “ನೀನು ಮದುವೆಯಾಗಬೇಡ, ಗಂಡು ಮತ್ತು ಹೆಣ್ಣು ಮಕ್ಕಳು ಈ ಸ್ಥಳದಲ್ಲಿ ಹುಟ್ಟದಿರಲಿ.
「在這地方,你不要取妻,不要有兒女,
3 ಏಕೆಂದರೆ ಈ ಸ್ಥಳದಲ್ಲಿ ಹುಟ್ಟುವ ಗಂಡು ಹೆಣ್ಣು ಮಕ್ಕಳು, ಅವರನ್ನು ಹೆತ್ತ ತಾಯಿಯರು, ಅವರನ್ನು ಈ ದೇಶದಲ್ಲಿ ಪಡೆದ ತಂದೆಯಂದಿರಿಗೆ, ಇವರೆಲ್ಲರ ವಿಷಯವಾಗಿ ಯೆಹೋವನು ಹೀಗೆ ನುಡಿದಿದ್ದಾನೆ,
因為上主關於生在這地方的子女,和這境內生育他們的母親,以及生養他們的父親這樣說:
4 ಅವರು ಘೋರವಾದ ಮರಣಕ್ಕೆ ಗುರಿಯಾಗುವರು, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಹೂಣಿಡುವುದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು. ಖಡ್ಗವೂ, ಕ್ಷಾಮವೂ ಅವರನ್ನು ನಿರ್ಮೂಲ ಮಾಡುವವು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವಾಗುವವು” ಎಂಬುದೇ.
「他們必死於死症,沒有人哀悼,沒有人掩埋,有如地面上的糞土。他們反為戰爭和饑荒所毀滅,他們的屍首,必成為天上飛鳥和地上野獸的食物」。
5 ಯೆಹೋವನು ನನಗೆ, “ಗೋಳಾಟದ ಮನೆಯಲ್ಲಿ ಸೇರಬೇಡ, ಪ್ರಲಾಪಿಸಲಿಕ್ಕೆ ಹೋಗಬೇಡ, ಅವರಿಗಾಗಿ ಎದೆ ಬಡಿದುಕೊಳ್ಳಲೂ ಬೇಡ. ನಾನು ದಯಪಾಲಿಸಿದ ಸಮಾಧಾನವನ್ನು, ಅಂದರೆ ನನ್ನ ಪ್ರೀತಿಯನ್ನೂ ಹಾಗು ಕೃಪೆಯನ್ನೂ ಈ ಜನರಿಂದ ತೆಗೆದುಬಿಟ್ಟಿದ್ದೇನಷ್ಟೆ.
因為上主這樣說:「你不要進入居喪者之家,去舉哀弔唁,因為我已由這人民撤回了我的平安、慈愛和憐憫──上主的斷語──
6 ಈ ದೇಶದಲ್ಲಿನ ದೊಡ್ಡವರೂ. ಅಲ್ಪರೂ ಸಾಯುವರು. ಅವರನ್ನು ಯಾರೂ ಹೂಣಿಡುವುದಿಲ್ಲ, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಗಾಯಮಾಡಿಕೊಳ್ಳುವುದಿಲ್ಲ, ತಲೆಬೋಳಿಸಿಕೊಳ್ಳುವುದಿಲ್ಲ.
無論大小都要死在這地方,無人掩埋,
7 ಸತ್ತವನಿಗೋಸ್ಕರ ದುಃಖಪಡುವವರನ್ನು ಸಂತೈಸುವುದಕ್ಕಾಗಿ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ ತಾಯಿಯನ್ನಾಗಲಿ ಕಳಕೊಂಡವರಿಗೆ ಯಾರೂ ಸಮಾಧಾನದಾಯಕ ಪಾನಪಾತ್ರೆಯನ್ನು ನೀಡುವುದಿಲ್ಲ.
沒有人為他們舉喪,沒有人與居喪者分食喪餅,以相弔慰;沒有人與居喪或父母者飲一杯慰唁酒。
8 ಔತಣದ ಮನೆಯಲ್ಲಿಯೂ ಸೇರಬೇಡ, ಅಲ್ಲಿನವರೊಂದಿಗೆ ಕುಳಿತು ತಿನ್ನಬೇಡ, ಕುಡಿಯಬೇಡ.
有宴會的家,你 也不要進去,與他們一同坐下吃喝,
9 ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗೆಂದಿದ್ದಾನೆ, ‘ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ಮತ್ತು ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು.’
因為萬軍的上主,以色列的天主這樣說:看,我必在你們眼前,在你們的時日內,使這地方再也聽不到歡和喜樂的聲音,新郎和新娘的聲音。
10 ೧೦ ಈ ಮಾತುಗಳನ್ನೆಲ್ಲಾ ಈ ಜನರಿಗೆ ತಿಳಿಸುತ್ತಿರುವ ನಿನಗೆ ಪ್ರತ್ಯುತ್ತರವಾಗಿ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ವಿಧಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಕೇಳುವಾಗ,
當你把這一切話告訴這人民,他們必問你說:為什麼上主對我們宣佈了這一切大災禍﹖我們有什麼過犯,我們有什麼罪惡干犯了上主我們的天主﹖
11 ೧೧ ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪೂರ್ವಿಕರು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ, ಪೂಜಿಸಿ ನನ್ನನ್ನು ಬಿಟ್ಟು, ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ,
你就答應說:是因為你的祖先離棄了我──上主的斷語──跟隨了別的神祗,事奉朝拜,而背棄了我,沒有遵守我的法律。
12 ೧೨ ಇಗೋ, ನೀವೆಲ್ಲರೂ ನಿಮ್ಮ ದುಷ್ಟಹೃದಯದ ಹಟದಂತೆ ನಡೆಯುತ್ತಾ ನನ್ನನ್ನು ಕೇಳದೆ ನಿಮ್ಮ ಪೂರ್ವಿಕರಿಗಿಂತ ಹೆಚ್ಚು ಕೇಡನ್ನು ಮಾಡಿದ್ದರಿಂದಲೂ,
至於你們,你們作惡更甚於你的祖先;看,你們各人隨從自己頑固的惡意生活,不聽從我;
13 ೧೩ ನೀವಾಗಲಿ ಅಥವಾ ನಿಮ್ಮ ಪೂರ್ವಿಕರಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸುವುದಿಲ್ಲ’” ಎಂದು ಹೇಳಿದನು.
所以我必從這地上將你們驅逐,到你們和你的祖先從不認識的地方去,讓你們在那裏日夜事奉別的神祗;我再也不對你們表示憐愛。
14 ೧೪ “ಇಗೋ, ಮುಂದಿನ ಕಾಲದಲ್ಲಿ ಜನರು, ‘ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂಬುದಾಗಿ ಪ್ರಮಾಣಮಾಡುವುದನ್ನು ಬಿಟ್ಟು,
[為此,看,時日必將來臨──上主的斷語──人不再發誓說:領以色列子民由埃及地上來的「上主永在」,
15 ೧೫ ‘ಇಸ್ರಾಯೇಲರನ್ನು ಬಡಗಣ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂದು ಪ್ರಮಾಣಮಾಡುವರು; ನಾನು ಅವರ ಪೂರ್ವಿಕರಿಗೆ ದಯಪಾಲಿಸಿದ ದೇಶಕ್ಕೆ ಅವರನ್ನು ಹಿಂದಿರುಗಿಸುವೆನಷ್ಟೆ” ಎಂದು ಯೆಹೋವನು ಘೋಷಿಸುತ್ತಾನೆ.
卻要說:領以色列子民由北方,並由衪驅逐他們所至的各地回來的「上主永在」;因為我必領他們回到我已賜給他們祖先的地方]。
16 ೧೬ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಜನರನ್ನು ಹಿಡಿಯುವುದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ, ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ, ಬೇಟೆಯಾಡುವುದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು.
看,我必派許多漁夫上主的斷語──來捕捉他們;以後,我又派許多獵人來, 8各山上,各丘陵和岩石的裂縫間,獵取他們,
17 ೧೭ ನಾನು ಅವರ ನಡತೆಯನ್ನೆಲ್ಲಾ ದೃಷ್ಟಿಸುತ್ತೇನೆ, ಅದು ನನ್ನ ಮುಖಕ್ಕೆ ಮರೆಯಾಗಿಲ್ಲ; ಅವರ ಅಧರ್ಮವು ನನಗೆ ಗುಟ್ಟಾಗಿ ಇಲ್ಲ, ಪ್ರತ್ಯಕ್ಷವಾಗೇ ಇದೆ.
因為我的眼注視他們的一切行徑,他們不能由我面前隱藏,他們的過犯在我眼前也不能隱藏。
18 ೧೮ ಅವರ ಅಧರ್ಮಕ್ಕೂ, ಪಾಪಕ್ಕೂ ಎರಡರಷ್ಟು ಶಿಕ್ಷೆಯನ್ನು ಮೊದಲು ಕೊಡುವೆನು; ಹೆಣಗಳಂತಿರುವ ತಮ್ಮ ಹೇಯವಿಗ್ರಹಗಳಿಂದ ನನ್ನ ದೇಶವನ್ನು ಹೊಲಸುಮಾಡಿ, ನನ್ನ ಸ್ವತ್ತನ್ನು ತಮ್ಮ ಅಸಹ್ಯ ವಸ್ತುಗಳಿಂದ ತುಂಬಿಸಿದ್ದಾರಷ್ಟೆ.”
我首先先要加倍報復他們的過犯和罪惡,因為他們以死屍般的偶像玷污了我的土地,使我的的基業上滿是醜惡的神像」。
19 ೧೯ ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ, “ನಮ್ಮ ಪೂರ್ವಿಕರು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ” ಎಂದು ಅರಿಕೆ ಮಾಡುವರು.
上主,我的力量,我的保障,我憂患之日的避難所,萬民必從地極來到你面前說:「我們的祖先承受的只是虛假、空虛和毫無益處的事」。
20 ೨೦ ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೇ? ಇವು ದೇವರುಗಳೇ ಅಲ್ಲ.
人豈能為自己製造神祗﹖凡製造的,絕不是神!
21 ೨೧ ಈ ನಿಮಿತ್ತವಾಗಿ, ಇಗೋ, ಇದೊಂದೇ ಸಲ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು, ಹೌದು, ಗ್ರಹಿಸಮಾಡುವೆನು; ನನ್ನ ನಾಮಧೇಯವು “ಯೆಹೋವ” ಎಂದು ಅವರಿಗೆ ಗೊತ್ತಾಗುವುದು.
為此,看,我必叫他們知道,這此我必叫他們體驗我的手和我的能力,使他們知道我的名字是「上主」。

< ಯೆರೆಮೀಯನು 16 >