< ಯೆರೆಮೀಯನು 11 >
1 ೧ ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು,
Šis ir tas vārds, kas no Tā Kunga tā notika uz Jeremiju:
2 ೨ “ಈ ನಿಬಂಧನವಚನಗಳನ್ನು ಕೇಳಿ ಯೆಹೂದ್ಯರಿಗೂ ಹಾಗೂ ಯೆರೂಸಲೇಮಿನ ನಿವಾಸಿಗಳಿಗೂ,
Klausiet šās derības vārdus un runājiet uz Jūda vīriem un uz Jeruzālemes iedzīvotājiem.
3 ೩ ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರಿಗೆ ವಿಧಿಸಿದ ನಿಬಂಧನ ವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ.
Un saki uz tiem: tā saka Tas Kungs, Israēla Dievs: nolādēts lai ir tas cilvēks, kas neklausa šās derības vārdiem,
4 ೪ ಕಬ್ಬಿಣ ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತ ದೇಶದಿಂದ ನಿಮ್ಮ ಪೂರ್ವಿಕರನ್ನು ಬರಮಾಡಿದಾಗ ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ಈ ವಿಧಿಗಳನ್ನೆಲ್ಲಾ ಕೈಕೊಂಡರೆ ನೀವು ನನ್ನ ಪ್ರಜೆಯಾಗಿರುವಿರಿ, ನಾನು ನಿಮ್ಮ ದೇವರಾಗಿರುವೆನು.
Ko Es jūsu tēviem esmu pavēlējis, kad tos izvedu no Ēģiptes zemes, no tā dzelzs cepļa, un sacīju: klausiet Manu balsi, un dariet to, tā kā Es jums pavēlu, tad jūs Man būsiet par ļaudīm, un Es jums būšu par Dievu,
5 ೫ ನಾನು ಹಾಲೂ ಮತ್ತು ಜೇನೂ ಹರಿಯುವ ದೇಶವನ್ನು ನಿಮಗೆ ಕೊಡುವುದಾಗಿ ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು’ ಎಂದು ಹೇಳಿದೆನಷ್ಟೆ. ಆ ನನ್ನ ಮಾತು ಈಗ ಕೈಗೂಡಿದೆ” ಎಂದು ಸಾರಬೇಕು ಎಂದನು. ಆಗ ನಾನು, “ಅಪ್ಪಣೆಯಂತಾಗಲಿ, ಯೆಹೋವನೇ” ಎಂದು ಉತ್ತರಕೊಟ್ಟೆನು.
Lai Es to zvērestu piepildu, ko Es jūsu tēviem esmu zvērējis, viņiem dot zemi, kur piens un medus tek, tā kā tas šodien ir. Tad es atbildēju un sacīju: Āmen, Kungs!
6 ೬ ಯೆಹೋವನು ನನಗೆ, “ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಈ ಮಾತುಗಳನ್ನೆಲ್ಲಾ ಸಾರು, ‘ಈ ನಿಬಂಧನ ವಾಕ್ಯಗಳನ್ನೆಲ್ಲಾ ಕೇಳಿ ಕೈಕೊಳ್ಳಿರಿ.
Un Tas Kungs sacīja uz mani: izsauc visus šos vārdus pa Jūda pilsētām un pa Jeruzālemes ielām, un saki: klausiet šās derības vārdus un dariet tos.
7 ೭ ನಿಮ್ಮ ಪೂರ್ವಿಕರನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ದಿನದಿಂದ ಇಂದಿನವರೆಗೂ ನಾನು ಅವರಿಗೆ, ನನ್ನ ಮಾತನ್ನು ಕೇಳಿರಿ ಎಂದು ತಡ ಮಾಡದೆ ಖಂಡಿತವಾಗಿ ಆಜ್ಞಾಪಿಸುತ್ತಾ ಬಂದೆನಷ್ಟೆ.
Jo Es jūsu tēviem skaidri esmu apliecinājis tai dienā, kad tos izvedu no Ēģiptes zemes, līdz šai dienai, tikuši(vienmēr) liecību dodams, un sacīju: klausiet Manu balsi.
8 ೮ ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಪ್ರತಿಯೊಬ್ಬನೂ ತನ್ನ ತನ್ನ ದುಷ್ಟಹೃದಯದ ಹಟಕ್ಕೆ ತಕ್ಕ ಹಾಗೆ ನಡೆದನು; ಆದಕಾರಣ ಕೈಕೊಳ್ಳಬೇಕೆಂದು ನಾನು ಆಜ್ಞಾಪಿಸಿದರೂ ಅವರು ಕೈಗೊಳ್ಳದ ಈ ನಿಬಂಧನೆಯ ಶಾಪಗಳನ್ನೆಲ್ಲಾ ಅವರ ಮೇಲೆ ಬರಮಾಡಿದೆನು’” ಎಂದು ಹೇಳಿದನು.
Bet tie nav klausījuši nedz savas ausis atgriezuši, bet staigājuši ikviens pēc savas niknās sirds stūrgalvības. Tāpēc Es liku pār tiem nākt visiem šīs derības vārdiem, ko Es pavēlēju darīt, un tie nav darījuši.
9 ೯ ಯೆಹೋವನು ನನಗೆ, “ಯೆಹೂದ್ಯರಲ್ಲಿಯೂ ಮತ್ತು ಯೆರೂಸಲೇಮಿನ ನಿವಾಸಿಗಳಲ್ಲಿಯೂ ಒಳಸಂಚು ಕಂಡು ಬಂದಿದೆ.
Un Tas Kungs uz mani sacīja: sabiedrība rodas starp Jūda vīriem un Jeruzālemes iedzīvotājiem.
10 ೧೦ ನನ್ನ ಮಾತುಗಳನ್ನು ಕೇಳದಿದ್ದ ತಮ್ಮ ಪೂರ್ವಿಕರ ದುಷ್ಕೃತ್ಯಗಳ ಕಡೆಗೆ ತಿರುಗಿಕೊಂಡು, ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸಿದ್ದಾರೆ. ಇಸ್ರಾಯೇಲ್ ವಂಶದವರೂ ಮತ್ತು ಯೆಹೂದ ವಂಶದವರೂ ನಾನು ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ.
Tie ir atgriezušies pie savu vectēvu noziegumiem, kas liegušies Maniem vārdiem klausīt, un citiem dieviem dzinušies pakaļ, tiem kalpot. Israēla nams un Jūda nams pārkāpuši Manu derību, ko Es ar viņu tēviem esmu cēlis.
11 ೧೧ ಆದಕಾರಣ ಯೆಹೋವನೆಂಬ ನಾನು ಹೀಗೆನ್ನುತ್ತೇನೆ, ‘ಇಗೋ, ಅವರು ತಪ್ಪಿಸಿಕೊಳ್ಳಲಾರದ ಕೇಡನ್ನು ಅವರ ಮೇಲೆ ಬರಮಾಡುವೆನು; ನನಗೆ ಮೊರೆಯಿಟ್ಟರೂ ಕೇಳೆನು.
Tādēļ tā saka Tas Kungs: redzi Es pār tiem vedīšu ļaunumu, no kā tie nevarēs izbēgt; kad tie tad uz Mani brēks, tad Es tos neklausīšu.
12 ೧೨ ಆಗ ಯೆಹೂದದ ಪಟ್ಟಣಗಳವರೂ ಹಾಗು ಯೆರೂಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಹೋಮಮಾಡಿದರೋ ಅವುಗಳನ್ನು ಮೊರೆಹೊಕ್ಕಿ ಕೂಗಿಕೊಳ್ಳುವರು, ಆದರೆ ಅಂಥ ಕೇಡಿನ ಕಾಲದಲ್ಲಿ ಅವುಗಳಿಂದ ಅವರಿಗೆ ಎಷ್ಟು ಮಾತ್ರವೂ ರಕ್ಷಣೆಯಾಗುವುದಿಲ್ಲ.’
Un Jūda pilsētas un Jeruzālemes iedzīvotāji noies un brēks uz tiem dieviem, kam tie kvēpinājuši; bet pestīt tie tos neatpestīs viņu nelaimes laikā.
13 ೧೩ ಯೆಹೂದದವರೇ, ನಿಮ್ಮ ಪಟ್ಟಣಗಳೆಷ್ಟೋ ನಿಮ್ಮ ದೇವರುಗಳೂ ಅಷ್ಟು. ಯೆರೂಸಲೇಮಿನ ಬೀದಿಗಳೆಷ್ಟೋ ತುಚ್ಛ ದೇವತೆಯಾದ ಬಾಳನಿಗೆ ಹೋಮ ಮಾಡುವುದಕ್ಕಾಗಿ ನೀವು ಮಾಡಿಕೊಂಡಿರುವ ಬಲಿಪೀಠಗಳೂ ಅಷ್ಟು.
Jo cik tev pilsētu, Jūda, tik arī tavu dievu, un cik Jeruzālemē ielu, tik altāru jūs esat cēluši par kaunu, altārus Baālam kvēpināt.
14 ೧೪ ಆದಕಾರಣ ಈ ಜನರಿಗೋಸ್ಕರ ಬೇಡಿಕೊಳ್ಳಬೇಡ, ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಲೂ ಬೇಡ. ಅವರು ತಮ್ಮ ಕೇಡಿನ ನಿಮಿತ್ತ ನನಗೆ ಮೊರೆಯಿಡುವಾಗ ನಾನು ಕೇಳುವುದಿಲ್ಲ” ಎಂದು ಹೇಳಿದನು.
Tu tad nelūdz par šiem ļaudīm un nenes par tiem piesaukšanu un lūgšanu, jo Es neklausīšu, kad tie Mani piesauks par savu nelaimi.
15 ೧೫ ನನ್ನ ಆಪ್ತಜನವು ನನ್ನ ಮನೆಯಲ್ಲಿ ಅಸಹ್ಯ ಕಾರ್ಯವನ್ನು ಮಾಡಿದ್ದೇಕೆ? ವ್ರತಗಳೂ, ಮೀಸಲಿನ ಮಾಂಸವೂ ನಿನ್ನ ದುಷ್ಟತನವನ್ನು ಪರಿಹರಿಸುವುದೋ? ಇಂಥವುಗಳ ಮೂಲಕ ತಪ್ಪಿಸಿಕೊಂಡೆಯಾ?
Kas Manam mīļam ir Manā namā, kur tā top darīts, tāda blēdība no tāda pulka! Vai solījumi un upura gaļa atņems nelaimi no tevis? Tad tu varētu gavilēt.
16 ೧೬ ಯೆಹೋವನು ನಿನಗೆ ಸುಂದರವಾದ ಫಲದಿಂದ ಕೂಡಿದ ಹಸಿರಾದ ಒಲೀವ್ ಮರವೆಂದು ಹೆಸರಿಟ್ಟಿದ್ದನು. ಆದರೆ ಅವನು ಆ ಮರಕ್ಕೆ ಬೆಂಕಿ ಹಚ್ಚಿ ಬಲು ಧಗಧಗಿಸುವಂತೆ ಮಾಡಿದ್ದಾನೆ; ಅದರ ರೆಂಬೆಗಳು ಮುರಿದುಹೋಗಿವೆ.
Tas Kungs tevi nosauca par zaļu eļļas koku, kas jauks un auglīgs, bet nu Viņš tam uguni pielicis ar lielu trokšņa skaņu, un viņa zari lūst.
17 ೧೭ ಇಸ್ರಾಯೇಲ್ ವಂಶವೂ ಮತ್ತು ಯೆಹೂದ ವಂಶವೂ ಬಾಳನಿಗೆ ಹೋಮವನ್ನರ್ಪಿಸಿ, ನನ್ನನ್ನು ಕೆಣಕಿ ತಮಗೆ ಕೆಡುಕನ್ನು ಮಾಡಿಕೊಂಡಿದ್ದರಿಂದ ನಿನ್ನನ್ನು ನೆಟ್ಟ ಸೇನಾಧೀಶ್ವರನಾದ ಯೆಹೋವನು, “ನಿನಗೆ ಕೆಡುಕಾಗಲಿ” ಎಂದು ಶಪಿಸಿದ್ದಾನೆ.
Jo Tas Kungs Cebaot, kas tevi dēstījis, tas par tevi nospriedis nelaimi, Israēla nama un Jūda nama niknuma dēļ, ko tie savā starpā dara, Mani apkaitināt, Baālam kvēpinādami.
18 ೧೮ ಯೆಹೋವನು ತಿಳಿಸಿದ್ದರಿಂದ ಅವರ ಕುತಂತ್ರವು ನನಗೆ ಗೊತ್ತಾಯಿತು; ಆಗಲೇ ಅವರ ಕೃತ್ಯಗಳನ್ನು ನನಗೆ ತೋರಿಸಿದಿ.
Nu Tas Kungs man to ir zināmu darījis, un es to zinu; Tu man esi rādījis viņu padomu.
19 ೧೯ ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಗೆ ಸಮಾನನಾಗಿದ್ದೆನು. “ಮರವನ್ನು ಫಲಸಹಿತವಾಗಿ ನಾಶಪಡಿಸೋಣ, ಇವನು ನಿರ್ನಾಮವಾಗುವಂತೆ ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ” ಎಂದು ಅವರು ನನಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಕಲ್ಪಿಸಿದ್ದು ನನಗೆ ತಿಳಿದಿರಲಿಲ್ಲ.
Un es biju tā kā lēna avs, ko ved pie kaušanas, un es nezināju, ka tie pret mani bija domājuši tādas domas: lai to koku ar viņa augļiem maitājam un viņu izdeldam no dzīvo zemes, ka viņa vārdu vairs nepieminētu.
20 ೨೦ ಹೃದಯವನ್ನೂ, ಅಂತರಿಂದ್ರಿಯವನ್ನೂ ಪರೀಕ್ಷಿಸಿ, ನ್ಯಾಯವಾಗಿ ತೀರ್ಪುಮಾಡುವ ಸೇನಾಧೀಶ್ವರನಾದ ಯೆಹೋವನೇ, ನೀನು ಅವರಿಗೆ ಕೊಡುವ ಪ್ರತಿಫಲವನ್ನು ನಾನು ಕಾಣುವೆನು; ನನ್ನ ವ್ಯಾಜ್ಯವನ್ನು ನಿನಗೇ ಅರಿಕೆಮಾಡಿದ್ದೇನಷ್ಟೆ ಎಂದು ಹೇಳಿದೆನು.
Bet Tu, Kungs Cebaot, taisnais soģi, kas pārbaudi īkstis un sirdis, liec man redzēt Tavu atriebšanu pie viņiem, jo Tev es esmu pavēlējis savu tiesas lietu.
21 ೨೧ ಹೀಗಿರಲು ಸೇನಾಧೀಶ್ವರನಾದ ಯೆಹೋವನು ನನಗೆ, “ನಮ್ಮ ಕೈಯಿಂದ ನೀನು ಸಾಯಬಾರದೆಂದರೆ ಯೆಹೋವನ ಹೆಸರೆತ್ತಿ ಪ್ರವಾದಿಸಬೇಡ ಎಂದು ನಿನ್ನ ಪ್ರಾಣಕ್ಕೆ ಹೊಂಚುಹಾಕುತ್ತಿರುವ ಅನಾತೋತಿನವರ ವಿಷಯದಲ್ಲಿ ನನ್ನ ತೀರ್ಮಾನವು ಇದೇ.
Tādēļ tā saka Tas Kungs pret Anatotas vīriem, kas tavu dvēseli meklē un saka: nesludini pret mums Tā Kunga Vārdā, ja negribi mirt caur mūsu rokām.
22 ೨೨ ಇಗೋ, ಅವರನ್ನು ದಂಡಿಸುವೆನು, ಯೌವನಸ್ಥರು ಖಡ್ಗದಿಂದ ನಾಶವಾಗುವರು. ಅವರ ಗಂಡು ಮತ್ತು ಹೆಣ್ಣುಮಕ್ಕಳು ಕ್ಷಾಮದಿಂದ ಸಾಯುವರು.
Tādēļ tā saka Tas Kungs Cebaot: redzi, Es tos piemeklēšu un tiem jaunekļiem būs mirt caur zobenu, viņu dēli un viņu meitas mirs badā, ka no tiem nekas neatliks.
23 ೨೩ ದಂಡನೆಯ ವರ್ಷದಲ್ಲಿ ಅನಾತೋತಿನವರಿಗೆ ಕೇಡನ್ನು ಬರಮಾಡುವೆನು, ಅವರಲ್ಲಿ ಯಾರೂ ಉಳಿಯರು” ಎಂದು ಹೇಳಿದ್ದಾನೆ.
Jo nelaimei Es likšu nākt pār Anatotas vīriem viņu piemeklēšanas gadā.