< ಯಾಕೋಬನು ಬರೆದ ಪತ್ರಿಕೆ 1 >

1 ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬನು ಅನ್ಯದೇಶಗಳಲ್ಲಿ ಚದುರಿರುವ ಇಸ್ರಾಯೇಲ್ಯರ ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.”
ঈশ্ৱৰস্য প্ৰভো ৰ্যীশুখ্ৰীষ্টস্য চ দাসো যাকূব্ ৱিকীৰ্ণীভূতান্ দ্ৱাদশং ৱংশান্ প্ৰতি নমস্কৃত্য পত্ৰং লিখতি|
2 ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.
হে মম ভ্ৰাতৰঃ, যূযং যদা বহুৱিধপৰীক্ষাষু নিপতত তদা তৎ পূৰ্ণানন্দস্য কাৰণং মন্যধ্ৱং|
3 ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.
যতো যুষ্মাকং ৱিশ্ৱাসস্য পৰীক্ষিতৎৱেন ধৈৰ্য্যং সম্পাদ্যত ইতি জানীথ|
4 ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ.
তচ্চ ধৈৰ্য্যং সিদ্ধফলং ভৱতু তেন যূযং সিদ্ধাঃ সম্পূৰ্ণাশ্চ ভৱিষ্যথ কস্যাপি গুণস্যাভাৱশ্চ যুষ্মাকং ন ভৱিষ্যতি|
5 ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.
যুষ্মাকং কস্যাপি জ্ঞানাভাৱো যদি ভৱেৎ তৰ্হি য ঈশ্ৱৰঃ সৰলভাৱেন তিৰস্কাৰঞ্চ ৱিনা সৰ্ৱ্ৱেভ্যো দদাতি ততঃ স যাচতাং ততস্তস্মৈ দাযিষ্যতে|
6 ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.
কিন্তু স নিঃসন্দেহঃ সন্ ৱিশ্ৱাসেন যাচতাং যতঃ সন্দিগ্ধো মানৱো ৱাযুনা চালিতস্যোৎপ্লৱমানস্য চ সমুদ্ৰতৰঙ্গস্য সদৃশো ভৱতি|
7 ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ.
তাদৃশো মানৱঃ প্ৰভোঃ কিঞ্চিৎ প্ৰাপ্স্যতীতি ন মন্যতাং|
8 ಏಕೆಂದರೆ ಅವನು ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ.
দ্ৱিমনা লোকঃ সৰ্ৱ্ৱগতিষু চঞ্চলো ভৱতি|
9 ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ.
যো ভ্ৰাতা নম্ৰঃ স নিজোন্নত্যা শ্লাঘতাং|
10 ೧೦ ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು.
১০যশ্চ ধনৱান্ স নিজনম্ৰতযা শ্লাঘতাংযতঃ স তৃণপুষ্পৱৎ ক্ষযং গমিষ্যতি|
11 ೧೧ ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಹುಲ್ಲು ಬಾಡಿ, ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು.
১১যতঃ সতাপেন সূৰ্য্যেণোদিত্য তৃণং শোষ্যতে তৎপুষ্পঞ্চ ভ্ৰশ্যতি তেন তস্য ৰূপস্য সৌন্দৰ্য্যং নশ্যতি তদ্ৱদ্ ধনিলোকোঽপি স্ৱীযমূঢতযা ম্লাস্যতি|
12 ೧೨ ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು.
১২যো জনঃ পৰীক্ষাং সহতে স এৱ ধন্যঃ, যতঃ পৰীক্ষিতৎৱং প্ৰাপ্য স প্ৰভুনা স্ৱপ্ৰেমকাৰিভ্যঃ প্ৰতিজ্ঞাতং জীৱনমুকুটং লপ্স্যতে|
13 ೧೩ ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ “ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು” ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ.
১৩ঈশ্ৱৰো মাং পৰীক্ষত ইতি পৰীক্ষাসমযে কোঽপি ন ৱদতু যতঃ পাপাযেশ্ৱৰস্য পৰীক্ষা ন ভৱতি স চ কমপি ন পৰীক্ষতে|
14 ೧೪ ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ.
১৪কিন্তু যঃ কশ্চিৎ স্ৱীযমনোৱাঞ্ছযাকৃষ্যতে লোভ্যতে চ তস্যৈৱ পৰীক্ষা ভৱতি|
15 ೧೫ ಆ ಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ.
১৫তস্মাৎ সা মনোৱাঞ্ছা সগৰ্ভা ভূৎৱা দুষ্কৃতিং প্ৰসূতে দুষ্কৃতিশ্চ পৰিণামং গৎৱা মৃত্যুং জনযতি|
16 ೧೬ ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.
১৬হে মম প্ৰিযভ্ৰাতৰঃ, যূযং ন ভ্ৰাম্যত|
17 ೧೭ ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.
১৭যৎ কিঞ্চিদ্ উত্তমং দানং পূৰ্ণো ৱৰশ্চ তৎ সৰ্ৱ্ৱম্ ঊৰ্দ্ধ্ৱাদ্ অৰ্থতো যস্মিন্ দশান্তৰং পৰিৱৰ্ত্তনজাতচ্ছাযা ৱা নাস্তি তস্মাদ্ দীপ্ত্যাকৰাৎ পিতুৰৱৰোহতি|
18 ೧೮ ದೇವರು ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು.
১৮তস্য সৃষ্টৱস্তূনাং মধ্যে ৱযং যৎ প্ৰথমফলস্ৱৰূপা ভৱামস্তদৰ্থং স স্ৱেচ্ছাতঃ সত্যমতস্য ৱাক্যেনাস্মান্ জনযামাস|
19 ೧೯ ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ ಕಿವಿಗೊಡುವುದರಲ್ಲಿ ಚುರುಕಾಗಿಯೂ, ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.
১৯অতএৱ হে মম প্ৰিযভ্ৰাতৰঃ, যুষ্মাকম্ একৈকো জনঃ শ্ৰৱণে ৎৱৰিতঃ কথনে ধীৰঃ ক্ৰোধেঽপি ধীৰো ভৱতু|
20 ೨೦ ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
২০যতো মানৱস্য ক্ৰোধ ঈশ্ৱৰীযধৰ্ম্মং ন সাধযতি|
21 ೨೧ ಆದಕಾರಣ ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ.
২১অতো হেতো ৰ্যূযং সৰ্ৱ্ৱাম্ অশুচিক্ৰিযাং দুষ্টতাবাহুল্যঞ্চ নিক্ষিপ্য যুষ্মন্মনসাং পৰিত্ৰাণে সমৰ্থং ৰোপিতং ৱাক্যং নম্ৰভাৱেন গৃহ্লীত|
22 ೨೨ ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.
২২অপৰঞ্চ যূযং কেৱলম্ আত্মৱঞ্চযিতাৰো ৱাক্যস্য শ্ৰোতাৰো ন ভৱত কিন্তু ৱাক্যস্য কৰ্ম্মকাৰিণো ভৱত|
23 ೨೩ ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು.
২৩যতো যঃ কশ্চিদ্ ৱাক্যস্য কৰ্ম্মকাৰী ন ভূৎৱা কেৱলং তস্য শ্ৰোতা ভৱতি স দৰ্পণে স্ৱীযশাৰীৰিকৱদনং নিৰীক্ষমাণস্য মনুজস্য সদৃশঃ|
24 ೨೪ ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.
২৪আত্মাকাৰে দৃষ্টে স প্ৰস্থায কীদৃশ আসীৎ তৎ তৎক্ষণাদ্ ৱিস্মৰতি|
25 ೨೫ ಆದರೆ ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು.
২৫কিন্তু যঃ কশ্চিৎ নৎৱা মুক্তেঃ সিদ্ধাং ৱ্যৱস্থাম্ আলোক্য তিষ্ঠতি স ৱিস্মৃতিযুক্তঃ শ্ৰোতা ন ভূৎৱা কৰ্ম্মকৰ্ত্তৈৱ সন্ স্ৱকাৰ্য্যে ধন্যো ভৱিষ্যতি|
26 ೨೬ ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ.
২৬অনাযত্তৰসনঃ সন্ যঃ কশ্চিৎ স্ৱমনো ৱঞ্চযিৎৱা স্ৱং ভক্তং মন্যতে তস্য ভক্তি ৰ্মুধা ভৱতি|
27 ೨೭ ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.
২৭ক্লেশকালে পিতৃহীনানাং ৱিধৱানাঞ্চ যদ্ অৱেক্ষণং সংসাৰাচ্চ নিষ্কলঙ্কেন যদ্ আত্মৰক্ষণং তদেৱ পিতুৰীশ্ৱৰস্য সাক্ষাৎ শুচি ৰ্নিৰ্ম্মলা চ ভক্তিঃ|

< ಯಾಕೋಬನು ಬರೆದ ಪತ್ರಿಕೆ 1 >