< ಯೆಶಾಯನು 66 >
1 ೧ ಯೆಹೋವನು ಹೀಗೆನ್ನುತ್ತಾನೆ: “ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ, ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು?
Yahwe asema hivi, ''Mbinguni ni makao yangu, na nchi ni miguu yangu. Iko wapi nyumba uliyonitengenezea mimi? iko wapi sehemu amabayo ninaweza kupumzika?
2 ೨ ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, ನನ್ನ ಕೈಯಿಂದಲೇ ಇವುಗಳೆಲ್ಲಾ ಉಂಟಾದವು. ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ, ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ.
Mkono wangu umeyafanya haya yote; hivi ndovyo jinsi ambavyo vitu vitatokeavyo—hili ndilo tamko la Yahwe. Mtu niliyempitisha, mwenye roho iliyopondeka na mwenye kujutia roho, na atetemekaye kwa ajili ya neno langu.
3 ೩ ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;
Yeyote achinjae ng'ombe humuua mtu pia; yeye anayetoa sadaka ya kondoo huvunja shingo ya mbwa pia; yeye anayetoa sadaka ya mavuno anatoa sadaka ya damu yangurue; yeye anayetoa kumbukumbuvumba huwabariki wakosaji pia. Wamechagua njia zao wenyewe wanachukua radhi kwa uchafu wao wenyewe.
4 ೪ ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು; ಏಕೆಂದರೆ ನಾನು ಕೂಗಿದಾಗ ಯಾರೂ ಉತ್ತರಕೊಡಲಿಲ್ಲ, ನಾನು ಹೇಳಿದಾಗ ಇವರು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡರು.”
Katika njia hiyo hiyo nitachagua adhabu yao wenyewe; Nitaleta juu yao kitu wanachokiogopa, maana niilpowaita, hakuna aliyeitika; nilipozungumza aliyenisikiliza mimi. Walifanya yaliyo maovu mbele yangu, na kuchagua yasiyo nipenindeza mimi.''
5 ೫ ಯೆಹೋವನ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, “ಯೆಹೋವನು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ” ಎಂದು ಹೇಳಿದ್ದಾರಲ್ಲಾ; ಅವರಿಗಂತು ಅವಮಾನವಾಗುವುದು.
Sikiliza neno la Yahwe, ewe utemekae kwa neno lake, ''Kaka zako wanaonichukia na kukutenga wewe kwa ajili ya jina langu walisema, 'Na atukuzwe Yahwe, halafu tutaiona furaha yenu; lakini mtatiwa katika aibu.
6 ೬ ಇಗೋ, ಪಟ್ಟಣದ ಕಡೆಯಿಂದ ಗದ್ದಲದ ಶಬ್ದ! ದೇವಾಲಯದಲ್ಲಿ ಶಬ್ದ! ಯೆಹೋವನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ಶಬ್ದ!
Sauti ya vita vya ghasi vinakuja katika mji, sauti kutoka hekaluni, sauti ya Yahwe anawarudia maadui zake.
7 ೭ ಆಹಾ, ಬೇನೆ ತಿನ್ನುವುದರೊಳಗೆ ಹೆರಿಗೆಯಾಯಿತು, ಪ್ರಸವವೇದನೆ ಇನ್ನು ಕಾಣದಿರುವಲ್ಲಿ ಗಂಡು ಮಗುವನ್ನು ಹೆತ್ತಳು.
Kabla ajaenda katika chumba, hujifungua; kabla ya uchungu kumtoka hujifungua mtoto wa kiume.
8 ೮ ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಂಥಾ ಸಂಗತಿಯನ್ನು ಕಂಡವರಾರು? ಒಂದು ದಿನದಲ್ಲಿ ರಾಷ್ಟ್ರವು ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ? ಹೌದು, ಚೀಯೋನೆಂಬಾಕೆಯು ಬೇನೆತಿಂದು ತನಗಾಗಿ ಮಕ್ಕಳನ್ನು ಹೆತ್ತಿದ್ದಾಳೆ.
Ni nani asikiaye mambo haya? Ni nani aonae mambo haya? Je taifa linaweza kuanzishwa kwa wakati mmoja? lakini kwa haraka Sayuni inapokwenda katika chumba, hujifungua watoto wake.
9 ೯ “ನಾನು ಗರ್ಭದ್ವಾರವನ್ನು ತೆರೆದ ಮೇಲೆ ಪ್ರಸವವಾಗದೆ ಇರಲು ಬಿಡುವೆನೆ?” ಎಂದು ಯೆಹೋವನು ಹೇಳುತ್ತಾನೆ. “ಪ್ರಸವಮಾಡಿಸುವವನಾದ ನಾನು ಗರ್ಭವನ್ನು ಮುಚ್ಚೇನೋ?” ಎಂದು ನಿನ್ನ ದೇವರು ನುಡಿಯುತ್ತಾನೆ.
Ninawezaje kumleta mtoto azaliwe na nisimruhusu mtoto azaliwe? Yahwe auliza? — au Je ninamleta mtoto wakati tu wa kujifungua na halafu nimshikilie tena - anauliza Yahwe.''
10 ೧೦ ಯೆರೂಸಲೇಮ್ ನಗರವನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ, ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ!
Furahia na Yerusalemu na fuhahia kwa ajili yake, ninyi nyote mnaopenda yeye; furahia pamoja na yeye, ninyi mnaomboleza juu yake!
11 ೧೧ ಆಕೆಯ ನಿಮಿತ್ತ ದುಃಖಿಸುವವರೇ, ನೀವೆಲ್ಲರೂ, ಆಕೆಯ ಸಮಾಧಾನದ ಸ್ತನ್ಯವನ್ನು ಕುಡಿದು ತೃಪ್ತಿಗೊಳ್ಳುವೆವು ಎಂದುಕೊಳ್ಳುವಿರಿ. ಹೌದು, ಆಕೆಯ ವೈಭವದ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು ಎಂದು ಆಕೆಯೊಂದಿಗೆ ಉತ್ಸಾಹದಿಂದ ಉಲ್ಲಾಸಿಸಿರಿ.
Maana utamuuguza na ataridhika, katika maziwa yake atakufariji; utakunywa mpaka ushibe na kufurahia kwa wingi wa utukufu wake.
12 ೧೨ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಆಕೆಗೆ ಸುಖವನ್ನು ನದಿಯಂತೆ ದಯಪಾಲಿಸಿ, ತುಂಬಿ ತುಳುಕುವ ತೊರೆಯನ್ನೋ ಎಂಬಂತೆ ಜನಾಂಗಗಳ ವೈಭವವನ್ನು ನೀಡುವೆನು; ನೀವು ಪಾನಮಾಡುವಿರಿ; ನಿಮ್ಮನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುವರು, ತೊಡೆಯ ಮೇಲೆ ನಲಿದಾಡಿಸುವರು.
Yahwe asema hivi, ''Ni nanakaribia kutawanya mafanikio juu katika mto, na utajiri wa mataifa kama wingi wa mkondo wa maji. Utamuuguza kwa upande wake, na kubebwa katika mikono yake, mtabebwa juu ya magoti yake.
13 ೧೩ ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು; ಯೆರೂಸಲೇಮಿನಲ್ಲೇ ನಿಮಗೆ ದುಃಖಶಮನವಾಗುವುದು.
Kama vile mama anavyomfariji mtoto wake, hivyo basi nami nitawafariji ninyi, na mtapata faraja katika Yerusalemu.''
14 ೧೪ ನೀವು ಇದನ್ನು ಕಣ್ಣಾರೆ ಕಾಣುವಿರಿ, ನಿಮ್ಮ ಹೃದಯವು ಉಲ್ಲಾಸಿಸುವುದು, ನಿಮ್ಮ ಎಲುಬುಗಳು ಹಸಿ ಹುಲ್ಲಿನಂತೆ ರಸವತ್ತಾಗುವವು; ಆಗ ಯೆಹೋವನು ತನ್ನ ಸೇವಕರ ಮೇಲೆ ಕೃಪಾಹಸ್ತವನ್ನು ವ್ಯಕ್ತಪಡಿಸಿ ತನ್ನ ಶತ್ರುಗಳ ಮೇಲೆ ರೋಷಗೊಳ್ಳುವನು.
Utayaona haya, na moyo wako utafurahia, na mifupa yako itachipukia kama zabuni ya nyasi. Aridhi ya Yahweitajulikana kwa watumishi wake, lakini atawaonyesha hasira yake dhidi ya maadui zake.
15 ೧೫ ಆಹಾ, ಯೆಹೋವನು ಬೆಂಕಿಯನ್ನು ಕಟ್ಟಿಕೊಂಡು ಬರುವನು; ಆತನ ರಥಗಳು ಬಿರುಗಾಳಿಯಂತಿರುವವು; ರೌದ್ರಾವೇಶದಿಂದ ತನ್ನ ಸಿಟ್ಟನ್ನು ತೀರಿಸುವನು, ಅಗ್ನಿ ಜ್ವಾಲೆಯಿಂದ ಖಂಡಿಸುವನು.
Kwa kutazama, Yahwe anakuja kwa moto, na gari lake linakuja kama upepo wa dhoruba kuleta joto katika hasira yake na kukemea kwake ni kama moto uwakao.
16 ೧೬ ಯೆಹೋವನು ಅಗ್ನಿಯಿಂದಲೂ ಮತ್ತು ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹು ಜನರು.
Maana Yahwe ametekeleza hukumu juu ya watu kwa moto na kwa upanga wake. Wale watakaouliwa na Yahwe watakuwa wengi.
17 ೧೭ ತಮ್ಮ ಮಧ್ಯದಲ್ಲಿನ ಒಬ್ಬನನ್ನು ಅನುಸರಿಸಿ, ತೋಟಗಳೊಳಗೆ ಪ್ರವೇಶಿಸುವುದಕ್ಕೆ ತಮ್ಮನ್ನು ಪವಿತ್ರಮಾಡಿಕೊಂಡು, ಹಂದಿಯ ಮಾಂಸವನ್ನು, ಅಶುದ್ಧಪದಾರ್ಥವನ್ನೂ, ಇಲಿಯನ್ನೂ ತಿನ್ನುವವರು ಒಟ್ಟಿಗೆ ಅಂತ್ಯ ಕಾಣುವರು” ಎಂದು ಯೆಹೋವನು ನುಡಿಯುತ್ತಾನೆ.
Watajiweka wakfu wenyewe na kujisafisha wenywe, ili waweze kuingia katika bustani, kumfuata aliyeko katikati ya wale walao nyama ya nguruwe na vitu haramu kama panya. ''Watafika mwisho - hili ni tamko la Yahwe.
18 ೧೮ “ಅವರ ಕೃತ್ಯಗಳಿಗೂ, ಆಲೋಚನೆಗಳಿಗೂ ತಕ್ಕದ್ದನ್ನು ಮಾಡುವೆನು; ನಾನು ಇನ್ನು ಮುಂದೆ ಸಮಸ್ತ ಜನಾಂಗಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು; ಅವರು ಬಂದು ನನ್ನ ಮಹಿಮೆಯನ್ನು ನೋಡುವರು.
Maana ninayajua matendo yao na mawazo yao. Wakatiutafika nitakapoyakusanya mataifa yote na lugha zote. Watakuja na kuona utukufu wangu.
19 ೧೯ ಅವರ ಮಧ್ಯದಲ್ಲಿ ಒಂದು ಸೂಚಕಕಾರ್ಯವನ್ನು ಮಾಡುವೆನು; ನನ್ನ ಸುದ್ದಿಯನ್ನು ಕೇಳದೆಯೂ, ನನ್ನ ಮಹಿಮೆಯನ್ನು ನೋಡದೆಯೂ ಇರುವ ತಾರ್ಷೀಷ್, ಪೂಲ್, ಬಿಲ್ಲುಗಾರರಿಗೆ ಪ್ರಸಿದ್ಧಸ್ಥಳವಾದ ಲೂದ್, ತೂಬಲ್, ಯಾವಾನ್ ಎಂಬ ಜನಾಂಗಗಳು ಮತ್ತು ದೂರವಾದ ದ್ವೀಪನಿವಾಸಿಗಳು ಇವರೆಲ್ಲರ ಬಳಿಗೆ ಹತಶೇಷರನ್ನು ಕಳುಹಿಸುವೆನು; ಇವರು ಜನಾಂಗಗಳಲ್ಲಿ ನನ್ನ ಮಹಿಮೆಯನ್ನು ಪ್ರಕಟಿಸುವರು.”
Nitaweka ishara ya ukuu wangu miongoni mwao. Halafu nitawatuma wakazi kutoka miongoni mwao kwa mataifa. Kwa Tarshishi, Puti, na Ludi, upinde wale wanaochukua upinde wao, kwa Tubali, Javani, na umbali kuelekea katika pwani kule ambapo hawajasikia chochote kuhusu mimi wala kuona utukufu wangu. Watatangaza utukufu wangu miongoni mwa mataifa.
20 ೨೦ ಯೆಹೋವನು ಹೀಗೆನ್ನುತ್ತಾನೆ, “ಇಸ್ರಾಯೇಲರು ಯೆಹೋವನ ಆಲಯಕ್ಕೆ ಶುದ್ಧಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವ ಪ್ರಕಾರ ಸಮಸ್ತ ಜನಾಂಗಗಳಲ್ಲಿ ಚದರಿಹೋಗಿರುವ ನಮ್ಮ ಸಹೋದರರನ್ನು ಕುದುರೆ, ತೇರು, ಪಲ್ಲಕಿ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಯೆಹೋವನ ನೈವೇದ್ಯಕ್ಕಾಗಿ ಯೆರೂಸಲೇಮೆಂಬ ನನ್ನ ಪರಿಶುದ್ಧಪರ್ವತಕ್ಕೆ ಕರೆತರುವರು.
Watawaleta kaka zako wote nje ya mataifa yote, kama sadaka kwa Yahwe. Watakuja kwa farasi na kwa gari, na kwa gari, juu ya nyumbu na juu ya ngamia, kuelekea mlima wangu mtakatifu Yerusalemu - asema Yahwe. Maana watu wangu wa Israeli wataleta sadaka ya mavuno kwenye vyombo visafi katika nyumba ya Yahwe.
21 ೨೧ ಇದಲ್ಲದೆ ಇವರಲ್ಲಿ ಯಾಜಕರು ಮತ್ತು ಲೇವಿಯರು ಆಗತಕ್ಕವರನ್ನು ಆರಿಸಿಕೊಳ್ಳುವೆನು” ಎಂದು ಯೆಹೋವನು ಹೇಳುತ್ತಾನೆ.
Baadhi ya vitu hivi nitavichagua kama makuhani na walawi — asema Yahwe.
22 ೨೨ “ನಾನು ಸೃಷ್ಟಿಸಿದ ನೂತನ ಆಕಾಶಮಂಡಲವೂ ಮತ್ತು ನೂತನ ಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ಹಾಗು ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು.
Maana itakuwa mbingu mpya na nchi mpya ambayo nitakayoifanya ibaki mbele zangu— Hili ndilo tamko la Yahwe— Hivyo ndivyo ukoo wenu utakavyobakia, na jina lenu litabaki.
23 ೨೩ ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ, ಒಂದೊಂದು ಸಬ್ಬತ್ ದಿನದಲ್ಲಿಯೂ, ಸಕಲ ನರಜನ್ಮದವರೂ ನನ್ನ ಸನ್ನಿಧಿಯಲ್ಲಿ ಆರಾಧಿಸುವುದಕ್ಕೆ ಬರುವರು” ಇದು ಯೆಹೋವನ ನುಡಿ.
Kutoka mwenzi mmoja mpaka mwingine, na kutoka sabato moja mpaka nyingine, watu wote watakuja kukuinamia chini— asema Yahwe.
24 ೨೪ “ಅವರು ಹೊರಗೆ ಹೋಗಿ ನನಗೆ ದ್ರೋಹ ಮಾಡಿದವರ ಹೆಣಗಳನ್ನು ನೋಡುವರು; ಅವುಗಳನ್ನು ಕಡಿಯುವ ಹುಳವು ಸಾಯುವುದಿಲ್ಲ, ಸುಡುವ ಬೆಂಕಿಯು ಆರುವುದಿಲ್ಲ; ಅವುಗಳು ಲೋಕದವರಿಗೆಲ್ಲಾ ಅಸಹ್ಯವಾಗಿರುವವು.”
Watakwenda nje na kuona miili ya wafu ya watu walioniasi mimi, maana wadudu wawalao wao hatakufa, na moto huwaunguzao hautazimika; na itakuwa ni chuki kwa wale wote wenye mwili.''