< ಯೆಶಾಯನು 60 >
1 ೧ ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.
“Tuʻu hake, pea ulo; he kuo hoko mai hoʻo maama, pea kuo hā hake ʻiate koe ʻae nāunau ʻo Sihova,
2 ೨ ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವುದು.
He vakai, ʻe ʻufiʻufi ʻe he poʻuli ʻa māmani, mo e poʻuli matolu ʻae kakai: ka e hopo hake ʻa Sihova kiate koe, pea ʻe hā hono nāunau ʻiate koe.
3 ೩ ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು.
Pea ʻe haʻu ʻae kakai Senitaile ki hoʻo maama, mo e ngaahi tuʻi ki he maama lahi ʻo hoʻo ʻalu hake.
4 ೪ ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರಿಬರುತ್ತಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.
“Hiki hake ho mata ʻo sio takatakai, pea mamata: ʻoku nau tānaki fakataha ʻakinautolu kotoa pē, ʻoku nau haʻu kiate koe: ʻe haʻu ho ngaahi foha mei he mamaʻo, pea ʻe faʻaki ki ho vakavaka ho ngaahi ʻofefine.
5 ೫ ನೀನು ಅವರನ್ನು ನೋಡಿ ಸಂತೋಷ ಸಂಭ್ರಮ ಪಡುವೆ, ನಿನ್ನ ಹೃದಯವು ಹರ್ಷಿಸಿ ಉಲ್ಲಾಸಿಸುವುದು; ಏಕೆಂದರೆ ಸಮುದ್ರ ವ್ಯಾಪಾರದ ಸಮೃದ್ಧಿಯು ನಿನಗೆ ಅತಿಯಾದ ಲಾಭತರುವುದು. ಕಡೆಗೆ ತಿರುಗುವುದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವುದು.
Pea te ke toki mamata, pea tānaki fakataha, pea ʻe manavahē ho loto, pea ʻe fakalahi ia; koeʻuhi ʻe fakatafoki kiate koe ʻae koloa ʻoe tahi, ʻe haʻu kiate koe ʻae koloa ʻoe ngaahi Senitaile.
6 ೬ ಉಷ್ಟ್ರಸಮೂಹವೂ, ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಅವೆಲ್ಲವೂ ಬಂಗಾರವನ್ನೂ, ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.
ʻE ʻufiʻufi ʻaki koe ʻae fanga kāmeli lahi, ko e fanga kāmeli ʻo Mitiani mo ʻEfaa; ʻakinautolu kotoa pē mei Sipa te nau haʻu: te nau ʻomi ʻae koula mo e meʻa namu kakala; pea te nau fakahā ʻae ongoongolelei ʻo Sihova.
7 ೭ ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು. ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು.
ʻE tānaki kiate koe ʻae fanga manu kotoa pē ʻo Keta, ʻae fanga sipitangata ʻo Nepeoti te nau tokoni kiate koe: te u fiemālie ʻi he ʻohake ia ki hoku feilaulauʻanga, pea te u fakaongoongolelei ʻae fale ʻo hoku nāunau.
8 ೮ ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ! ಮೇಘದೋಪಾದಿಯಲ್ಲಿ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆ ಹಾರಿ ಬರುತ್ತಿರುವ ಇವರು ಯಾರು?
“Ko hai ʻakinautolu na ʻoku puna ʻo hangē ha ʻao, pea hangē ko e fanga kulukulu ki honau ngaahi matapā?
9 ೯ ಯೆಹೋವನು ನಿನ್ನನ್ನು ವೈಭವಪಡಿಸಿರುವುದನ್ನು ಕೇಳಿ ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ, ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವುದರಲ್ಲಿ ಮುಂದಾಗುತ್ತಿವೆ.
Ko e moʻoni ʻe tatali kiate koe ʻae ʻotu motu, pea ʻe muʻomuʻa ʻae ngaahi vaka ʻo Tasisi, ke ʻomi ho ngaahi foha mei he mamaʻo, ʻa ʻenau siliva mo ʻenau koula fakataha mo kinautolu, ki he huafa ʻo Sihova ko ho ʻOtua, pea ki he tokotaha māʻoniʻoni ʻo ʻIsileli, koeʻuhi kuo ne fakaongoongoleleiʻi koe.
10 ೧೦ ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಪುನಃ ಕಟ್ಟುವರು, ಅವರ ಅರಸರು ನಿನ್ನನ್ನು ಆರಾಧಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದು, ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ.
“Pea ʻe toe langa ho ʻa ʻe he ngaahi foha ʻoe muli, pea ʻe tauhi kiate koe honau ngaahi tuʻi: he naʻaku taaʻi koe ʻi hoku houhau, ka ʻi heʻeku ʻofa kuo u ʻaloʻofa kiate koe.
11 ೧೧ ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು. ಅವುಗಳ ಅರಸರು ಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.
Ko ia ʻe ava maʻuaipē ho ngaahi matapā; ʻe ʻikai tāpuni ia ʻi he ʻaho pe ʻi he pō; koeʻuhi ke ʻomi kiate koe ʻae koloa ʻoe ngaahi puleʻanga, pea ke ʻomi mo honau ngaahi tuʻi.
12 ೧೨ ನಿನ್ನನ್ನು ಆರಾಧಿಸದ ಜನಾಂಗ ಮತ್ತು ರಾಜ್ಯಗಳು ನಾಶವಾಗುವವು; ಹೌದು, ಆ ಜನಾಂಗಗಳು ಹಾಳಾಗಿ ಹೋಗುವವು.
He ko e kakai mo e puleʻanga ʻe ʻikai tauhi kiate koe ʻe ʻauha ia; ʻio, ʻe lala ʻaupito ʻae ngaahi puleʻanga ko ia.
13 ೧೩ ನನ್ನ ಪವಿತ್ರಾಲಯವನ್ನು ಭೂಷಿಸುವುದಕ್ಕಾಗಿ ತುರಾಯಿ, ತಪಸಿ, ತಿಲಕ ಈ ವೃಕ್ಷರೂಪವಾದ ಲೆಬನೋನಿನ ಮಹಿಮೆಯು ನಿನಗಾಗುವುದು; ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.
“ʻE ʻomi kiate koe ʻae nāunau ʻo Lepanoni, ʻae ʻakau ko e fea, mo e ʻakau ko e paini, fakataha mo e pokesi, ke teuteu ʻaki ʻae potu ʻo hoku fale tapu; pea te u ngaohi ʻae potu ʻo hoku tuʻunga vaʻe ke nāunauʻia.
14 ೧೪ ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್ ಎಂದು ಕೊಂಡಾಡುವರು.
Pea ko e ngaahi foha ʻokinautolu naʻe fakamamahiʻi koe, te nau haʻu ʻo hū kiate koe; pea ko kinautolu naʻe fehiʻa kiate koe te nau punou ʻakinautolu ki ho ʻaofivaʻe; pea te nau ui koe, Ko e kolo ʻa Sihova, Ko e Saione ʻoe tokotaha māʻoniʻoni ʻo ʻIsileli.
15 ೧೫ ನಿವಾಸಿಗಳು ತ್ಯಜಿಸಿದ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು, ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರದವರೆಗೆ ಉಲ್ಲಾಸಕರವಾಗುವಂತೆ ಮಾಡುವೆನು.
“Ko e meʻa ʻi he liʻaki koe mo e fehiʻa kiate koe, koeʻuhi ʻikai fou ha tangata ʻiate koe, te u ngaohi koe ko e lelei taʻengata, ko e fiefiaʻanga ʻoe toʻutangata toko lahi.
16 ೧೬ ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.
Pea te ke huhu ʻi he huʻahuhu ʻoe ngaahi Senitaile, pea mimisi ʻi he huhu ʻoe ngaahi tuʻi: pea te ke ʻilo ko au ko Sihova ko ho Fakamoʻui, mo ho Huhuʻi, ko e Toko Taha Māfimafi ʻo Sēkope.
17 ೧೭ ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.
Te u ʻomi ʻae koula ko e fetongi ʻoe palasa, pea te u ʻomi ʻae siliva ko e fetongi ʻoe ukamea, pea ko e palasa ko e fetongi ʻoe ʻakau, pea ko e ukamea ko e fetongi ʻoe maka: pea te u ngaohi ho kau fakamaau ko e melino, pea mo ho kau pule ko e māʻoniʻoni.
18 ೧೮ ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತ್ಯಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಿಬರುವುದಿಲ್ಲ; ಆಗ ದೇವರಕ್ಷಣೆಯು ನನ್ನ ಪೌಳಿಗೋಡೆಗಳು, ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.
ʻE ʻikai toe fanongo ki ha fakamālohi ʻi ho fonua, ʻae maumau pe ʻae fakaʻauha ʻi ho ngataʻanga; he te ke ui ho ngaahi ʻā koe Fakamoʻui, mo ho ngaahi matapā ko e Fakamālō.
19 ೧೯ ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗುಂದುವುದಿಲ್ಲ; ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು.
ʻE ʻikai toe hoko ʻae laʻā ko hoʻo maama ʻi he ʻaho; pe ko e ulo ʻoe māhina ko e maama kiate koe: ka e hoko ʻa Sihova ko e maama taʻengata kiate koe, pea ko ho nāunau ʻa ho ʻOtua.
20 ೨೦ ನಿನ್ನ ಸೂರ್ಯನು ಇನ್ನು ಮುಳುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಯಾಗುವುದು.
ʻE ʻikai toe tō hifo hoʻo laʻā, pea ʻe ʻikai toe fufū ʻe ia hoʻo māhina: koeʻuhi ʻe hoko ʻa Sihova ko hoʻo maama taʻengata, pea ʻe ngata ʻae ngaahi ʻaho ʻo hoʻo mamahi.
21 ೨೧ ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ, ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು.
Pea ʻe māʻoniʻoni foki ʻa hoʻo kakai kotoa pē; te nau maʻu ʻae fonua ʻo taʻengata, ko e vaʻa naʻaku tō, ko e ngāue ʻa hoku nima, koeʻuhi ke u ongoongolelei ai.
22 ೨೨ ಚಿಕ್ಕವನಿಂದ ಒಂದು ಕುಲವಾಗುವುದು, ಅಲ್ಪನಿಂದ ಬಲವಾದ ಜನಾಂಗವಾಗುವುದು. ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.
ʻE hoko ʻae tokotaha ʻoku siʻi ko e toko afe, mo e tokotaha ʻoku iiki ko e puleʻanga mālohi: ko au ko Sihova te u fakavave ia ʻi hono kuonga.”