< ಯೆಶಾಯನು 46 >
1 ೧ ಬೇಲ್ ದೇವತೆಯು ಬಾಗಿದೆ, ನೆಬೋ ದೇವತೆಯು ಕುಗ್ಗಿದೆ, ಅವುಗಳ ವಿಗ್ರಹಗಳು ಪಶುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳು ಬಳಲಿದವು.
Bel bɔ ne mu ase, Nebo brɛ ne dibea ase; mfurum soa wɔn ahoni. Nsɛsode a wɔso nenam no mu yɛ duru, ɛyɛ adesoa ma nea wabrɛ.
2 ೨ ಒಟ್ಟಿಗೆ ಕುಗ್ಗಿ, ಬಗ್ಗಿವೆ, ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ, ಬಂಧನಕ್ಕೆ ಸ್ವಇಚ್ಛೆಯಿಂದ ಒಳಗಾದವು.
Wɔbɔ mu kotow, bɔ wɔn mu ase; wontumi nsiw amanehunu ano, wɔn ankasa kɔ nkoasom mu.
3 ೩ ಯಾಕೋಬವಂಶವೇ, ಇಸ್ರಾಯೇಲ್ ಮನೆತೆನದವರಲ್ಲಿ ಉಳಿದ ಸಂತಾನವೇ, ನಿಮ್ಮನ್ನು ಗರ್ಭದಿಂದ ಹೊತ್ತು, ಹುಟ್ಟಿದಂದಿನಿಂದ ಪಾಲಿಸುತ್ತಿದ್ದ ನನ್ನ ಮಾತಿಗೆ ಕಿವಿಗೊಡಿರಿ.
“Muntie me, Yakobfifo, mo a moaka wɔ Israelfi nyinaa, mo a maso mo mu fi mo nyinsɛn mu, na maturu mo afi bere a wɔwoo mo.
4 ೪ ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು. ನಾನೇ ಉಂಟುಮಾಡಿದೆನು, ನಾನೇ ಹೊರುವೆನು. ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.
Mpo kosi mo nkwakoraa bere ne bere a mubefuw dwen mu, Me ne no, Me ne nea obeso mo mu. Mabɔ mo na meturu mo; mɛwowaw mo na megye mo.
5 ೫ ನನ್ನನ್ನು ಯಾರಿಗೆ ಸಮಾನ ಎಂದು ತಿಳಿದಿದ್ದೀರಿ? ನಾನು ಯಾರಿಗೆ ಸಮಾನನೆಂದು, ನನ್ನನ್ನು ಯಾರೊಡನೆ ಹೊಲಿಸುತ್ತೀರಿ?
“Hena ho na mode me bɛto, anaa mubebu no me sɛso? Hena na mode me besusuw no, na mode no atoto me ho?
6 ೬ ಚೀಲದಿಂದ ಚಿನ್ನವನ್ನು ಸುರಿದು, ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೊಟ್ಟು ಕೂಲಿಯನ್ನು ಗೊತ್ತುಮಾಡಿದಾಗ, ಅವನು ಅದನ್ನು ದೇವರನ್ನಾಗಿ ಮಾಡಲು, ಅವರು ಅದಕ್ಕೆ ಎರಗಿ ಪೂಜೆಮಾಡುವರು.
Ebinom hwie sikakɔkɔɔ fi wɔn nkotoku mu na wɔkari dwetɛ wɔ nsania so; wɔbɔ sika dwumfo paa, ma ɔde yɛ onyame bi, na wɔkotow sɔre no.
7 ೭ ಅವರು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರುಗದು. ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರಕೊಡಲಾರದು. ಇಲ್ಲವೆ ಅವನನ್ನು ಕಷ್ಟದಿಂದ ಬಿಡಿಸಲಾರದು.
Wɔsoa no wɔ wɔn mmati so, wɔde kosi nʼafa, na ɛka hɔ ara. Ɛrentumi mfi faako a esi. Obi teɛ mu frɛ no de, nanso ommua; ɛrentumi nyi no mfi ne haw mu.
8 ೮ “ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಗಮನಿಸಿ ಮನುಷ್ಯರಿಗೆ ತಕ್ಕಂತೆ ನಡೆಯಿರಿ!
“Monkae yiye, momma ɛnka mo tirim, munnwen ho mo atuatewfo.
9 ೯ ಪುರಾತನವಾದ ಹಳೆಯ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಇಲ್ಲ; ನಾನೇ ದೇವರು, ನನಗೆ ಸರಿಸಮಾನನು ಇಲ್ಲ.
Monkae nneɛma a atwam no, teteete nneɛma no; Mene Onyankopɔn, na obi nni hɔ; Mene Onyankopɔn, na obiara nte sɛ me.
10 ೧೦ ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ. ‘ನನ್ನ ಸಂಕಲ್ಪವು ನಿಲ್ಲುವುದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು’ ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.
Meda awiei adi fi mfiase, efi tete, meka nea ɛbɛba. Meka se: ‘Mʼatirimpɔw begyina, na mɛyɛ nea mepɛ nyinaa.’
11 ೧೧ ಮೂಡಲಿಂದ ಒಂದು ಪಕ್ಷಿಯನ್ನು ಬರಮಾಡು, ದೂರದೇಶದಿಂದ ನನ್ನ ಸಂಕಲ್ಪವನ್ನು ನೆರವೇರಿಸುವ ಮನುಷ್ಯನು ಬರಲಿ ಎಂದು ಕರೆದಿದ್ದೇನೆ. ಎಂದು ನಾನೇ ನುಡಿದಿದ್ದೇನೆ, ನಾನು ಅದನ್ನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಸಾಧಿಸುವೆನು.
Mɛfrɛ anomaa a ɔkyere mmoa afi apuei fam; afi akyirikyiri asase so, onipa a ɔbɛhyɛ me botae ma. Nea maka no, ɛno na mɛma aba mu; nea madwen ho no, ɛno na mɛyɛ.
12 ೧೨ ಕಠಿಣ ಹೃದಯದವರೇ, ನೀತಿಗೆ ದೂರವಾದವರೇ, ನನ್ನ ಮಾತಿಗೆ ಕಿವಿಗೊಡಿರಿ.
Muntie me, mo a moyɛ akokodurufo, mo a mo ne trenee ntam kwan ware;
13 ೧೩ ನನ್ನ ನೀತಿಯನ್ನು ಹತ್ತಿರಕ್ಕೆ ಬರ ಮಾಡುವೆನು. ಅದು ಇನ್ನು ದೂರವಾಗಿರದು, ನನ್ನ ರಕ್ಷಣೆಯು ತಡವಾಗದು, ಚೀಯೋನಿನಲ್ಲಿ ರಕ್ಷಣಾ ಕಾರ್ಯವನ್ನು ನಡೆಸಿ ಇಸ್ರಾಯೇಲಿಗೆ ನನ್ನ ಮಹಿಮೆಯನ್ನು ದಯಪಾಲಿಸುವೆನು.”
Mede me trenee rebɛn, enni akyirikyiri; na me nkwagye nso renkyɛ. Mɛma Sion nkwagye, na mede mʼanuonyam ama Israel.