< ಯೆಶಾಯನು 39 >
1 ೧ ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕ ಬಲದಾನನೆಂಬುವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರವನ್ನೂ, ಬಹುಮಾನವನ್ನೂ ಕಳುಹಿಸಿದನು.
Saa bere no Merodak-Baladan a ɔyɛ Babiloniahene Baladan babarima soma ma wɔde krataa ne akyɛde kɔmaa Hesekia, efisɛ na wate sɛ wayare ama ne ho atɔ no.
2 ೨ ಹಿಜ್ಕೀಯನು ಬಂದ ದೂತರನ್ನು ಸಂತೋಷದಿಂದ ನೋಡಿ ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದಲಾದ ಪದಾರ್ಥಗಳಿರುವ ಮನೆಯನ್ನೂ, ಆಯುಧಶಾಲೆಯನ್ನೂ, ತನ್ನ ಭಂಡಾರದಲ್ಲಿದುದ್ದೆಲ್ಲವನ್ನೂ ತೋರಿಸಿದನು. ಅವನ ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
Hesekia gyee asomafo no fɛw so, na afei ɔde nea ɔwɔ wɔ ne adekoradan mu kyerɛɛ wɔn; dwetɛ, sikakɔkɔɔ, nnuhuam, ngohuam, nʼakode akorae ne biribiara a ɛka nʼademude ho. Biribiara nni nʼahemfi ne nʼahenni mu a Hesekia amfa ankyerɛ wɔn.
3 ೩ ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಯವರು? ಏನು ಹೇಳಿದರು?” ಎಂದು ಕೇಳಲು ಅವನು, “ಅವರು ಬಹುದೂರ ದೇಶದಿಂದ ಬಾಬೆಲಿನಿಂದ ನನ್ನ ಬಳಿಗೆ ಬಂದವರು” ಎಂದು ಉತ್ತರಕೊಟ್ಟನು.
Afei Odiyifo Yesaia kɔɔ ɔhene Hesekia nkyɛn, kobisaa no se, “Asɛm bɛn na saa mmarima no kae na he na wofi bae?” Hesekia buae se, “Wofi akyirikyiri asase bi so. Wofi Babilonia, na wɔbaa me nkyɛn.”
4 ೪ ಯೆಶಾಯನು ತಿರುಗಿ ಹಿಜ್ಕೀಯನಿಗೆ, “ಅವರು ನಿನ್ನ ಅರಮನೆಯಲ್ಲಿ ಏನು ನೋಡಿದರು?” ಎಂದು ಕೇಳಲು ಅವನು, “ಅರಮನೆಯಲ್ಲಿರುವುದೆಲ್ಲವನ್ನೂ ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದಿದ್ದ ವಸ್ತು ಒಂದೂ ಇರುವುದಿಲ್ಲ” ಎಂದನು.
Odiyifo no bisae se, “Dɛn na wohuu wɔ wʼahemfi hɔ?” Hesekia buae se, “Wohuu biribiara a ɛwɔ mʼahemfi ha. Biribiara nni mʼademude mu a mamfa ankyerɛ wɔn.”
5 ೫ ಆಗ ಪ್ರವಾದಿಯಾದ ಯೆಶಾಯನು ಹಿಜ್ಕೀಯನಿಗೆ, “ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳು.
Afei Yesaia ka kyerɛɛ Hesekia se, “Tie asɛm a efi Asafo Awurade nkyɛn:
6 ೬ ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಒಯ್ಯಲ್ಪಡುವ ದಿನವು ಬರುವುದು, ಇಲ್ಲೇನೂ ಉಳಿಯುವುದಿಲ್ಲ.
Nokware, bere bi bɛba a, wɔbɛsoa biribiara a ɛwɔ wʼahemfi ne agyapade a wʼagyanom akora de abedu nnɛ no akɔ Babilonia. Biribiara renka, sɛɛ na Awurade se.
7 ೭ “ಬಾಬೆಲಿನ ಅರಸನು ಬಂದು, ನೀನು ಪಡೆದ ಮಕ್ಕಳನ್ನು ತೆಗೆದುಕೊಂಡು ಹೋಗಿ ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು ಅನ್ನುತ್ತಾನೆ” ಎಂದು ಹೇಳಿದನು.
Wʼankasa wʼasefo bi mpo, wɔbɛfa wɔn nnommum. Wɔbɛyɛ piamfo a wɔbɛsom wɔ Babiloniahene ahemfi.”
8 ೮ “ಹೇಗೂ ನನ್ನ ಜೀವಮಾನದಲ್ಲಿ ತಪ್ಪದೆ ಸೌಭಾಗ್ಯವಿರುವುದು” ಎಂದುಕೊಂಡು ಹಿಜ್ಕೀಯನು ಯೆಶಾಯನಿಗೆ, “ನೀನು ತಿಳಿಸಿದ ಯೆಹೋವನ ಮಾತು ಒಳ್ಳೆಯದಾಗಿದೆ” ಎಂದು ಉತ್ತರಕೊಟ್ಟನು.
Na Hesekia ka kyerɛɛ Yesaia se, “Saa asɛm yi a efi Awurade nkyɛn a woaka akyerɛ me yi yɛ asɛm papa.” Nanso na ɔhene no redwene sɛ, ne bere so de, obenya asomdwoe ne bammɔ.