< ಯೆಶಾಯನು 31 >

1 ಅಯ್ಯೋ, ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವಬಲವನ್ನು ಆಶ್ರಯಿಸುವವರ ಗತಿಯನ್ನು ಏನು ಹೇಳಲಿ! ರಥಗಳು ಬಹಳವೆಂದು ಅವುಗಳಲ್ಲಿ ನಂಬಿಕೆಯಿಟ್ಟು, ಸವಾರರು ಬಹು ಬಲಿಷ್ಠರೆಂದು ಅವರ ಮೇಲೆ ಭರವಸವಿಡುತ್ತಾರೆ. ಆದರೆ ಇಸ್ರಾಯೇಲರ ಸದಮಲಸ್ವಾಮಿಯ ಕಡೆಗೆ ದೃಷ್ಟಿಯಿಡುವುದಿಲ್ಲ, ಯೆಹೋವನನ್ನು ಆಶ್ರಯಿಸುವುದಿಲ್ಲ.
Тешко онима који иду у Мисир за помоћ, који се ослањају на коње, и уздају се у кола што их је много, и у коњанике што их је велико мноштво, а не гледају на Свеца Израиљевог и не траже Господа.
2 ಇಗೋ, ಆತನು ವಿವೇಕಿ, ತನ್ನ ಮಾತನ್ನು ಹಿಂದಕ್ಕೆ ತೆಗೆಯದೆ ಕೇಡನ್ನು ಬರಮಾಡುವನು. ಕೆಡುಕರ ಮನೆತನಕ್ಕೂ, ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.
Али је и он мудар, и навући ће зло, и неће порећи своје речи, него ће устати на дом неваљалих људи и на оне који помажу онима који чине безакоње.
3 ಐಗುಪ್ತ್ಯರು ಮನುಷ್ಯ ಮಾತ್ರದವರೇ, ದೇವರಲ್ಲ. ಅವರ ಅಶ್ವಗಳು ಆತ್ಮವಲ್ಲ, ಮಾಂಸಮಯವಾದವುಗಳು. ಯೆಹೋವನು ತನ್ನ ಕೈ ಚಾಚುವಾಗ ಸಹಾಯ ಮಾಡಿದವನು ಮತ್ತು ಸಹಾಯಪಡೆದವನು ಬಿದ್ದುಹೋಗುವನು. ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
А Мисирци су људи а не Бог, и коњи су њихови тело а не Дух; и зато ће Господ махнути руком својом, те ће пасти помагач, пашће и онај коме помаже, и сви ће заједно погинути.
4 ಯೆಹೋವನು ನನಗೆ ಹೀಗೆ ಹೇಳಿದ್ದಾನೆ, “ಸಿಂಹವು, ಪ್ರಾಯದ ಸಿಂಹವು, ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ, ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿಬಂದರೂ ಅದು ಅವರ ಕೂಗಾಟಕ್ಕೆ ಹೆದರದೆ, ಅವರ ಗದ್ದಲದಿಂದ ಹೇಗೆ ಧೈರ್ಯಗುಂದುವುದಿಲ್ಲವೋ ಹಾಗೆಯೇ ಸೇನಾಧೀಶ್ವರನಾದ ಯೆಹೋವನು ಯುದ್ಧಮಾಡಲು ಚೀಯೋನ್ ಪರ್ವತದ ಶಿಖರದ ಮೇಲೆ ಇಳಿಯುವನು.
Јер овако ми рече Господ: Као што лав и лавић риче над ловом својим, и ако се и свиче на њ мноштво пастира, он се не плаши од вике њихове нити се покорава на буку њихову, тако ће Господ над војскама сићи да војује за гору сионску и за хум њен.
5 ಹಾರುವ ಪಕ್ಷಿಯಂತೆ ಸೇನಾಧೀಶ್ವರನಾದ ಯೆಹೋವನು ಯೆರೂಸಲೇಮನ್ನು ಕಾಪಾಡುವನು. ಅದನ್ನು ರಕ್ಷಿಸಿ ಕಾಯುವನು ಮತ್ತು ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವನು.
Као птице крилима Господ ће над војскама заклањати Јерусалим, и заклањајући избавиће, и обилазећи сачуваће.
6 “ಇಸ್ರಾಯೇಲರೇ, ನೀವು ಯಾರಿಗೆ ಅಗಾಧ ದ್ರೋಹವನ್ನು ಮಾಡಿದಿರೋ ಆತನ ಕಡೆಗೆ ತಿರುಗಿಕೊಳ್ಳಿರಿ.
Вратите се к Њему, од ког се сасвим одвргосте, синови Израиљеви!
7 ಏಕೆಂದರೆ ನೀವು ನಿಮ್ಮ ಸ್ವಂತ ಕೈಯಿಂದ ರೂಪಿಸಿಕೊಂಡಿರುವ ಪಾಪದ ಗುರುತಾದ ಬೆಳ್ಳಿಯ ಮತ್ತು ಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನೂ ಬಿಸಾಡುವನು.
Јер ће у онај дан сваки одбацити идоле своје сребрне, и златне своје идоле, које вам руке ваше начинише на грех.
8 ಆಗ ಅಶ್ಶೂರ್ಯರು ಕತ್ತಿಯಿಂದ ಬೀಳುವರು. ಅದು ಮನುಷ್ಯರ ಕತ್ತಿಯಲ್ಲ, ಖಡ್ಗವು ಅವರನ್ನು ನುಂಗುವುದು, ಅದು ಮಾನವ ಖಡ್ಗವಲ್ಲ. ಅವರು ಕತ್ತಿಯಿಂದ ತಪ್ಪಿಸಿಕೊಳ್ಳಲು ಓಡುವರು. ಅವರ ಯೌವನಸ್ಥರು ಬಿಟ್ಟಿಯಾಗಿ ಹಿಡಿಯಲ್ಪಡುವರು.
И Асирац ће пасти од мача не човечјег, и мач не човечји појешће га, и бежаће испред мача, и младићи ће његови плаћати данак.
9 ಅವರು ಭಯದಿಂದ ತಮ್ಮ ಭರವಸೆಯನ್ನು ಕಳೆದುಕೊಳ್ಳುವರು. ಅವರ ಪ್ರಧಾನರು ಹೆದರಿ ಧ್ವಜಸ್ಥಾನದಿಂದ ದಿಕ್ಕಾಪಾಲಾಗುವರು” ಚೀಯೋನಿನಲ್ಲಿ ಅಗ್ನಿಯನ್ನೂ, ಯೆರೂಸಲೇಮಿನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಯೆಹೋವನ ನುಡಿ ಇದೇ.
И стена ће његова проћи од страха, и кнезови ће се његови препасти од заставе, вели Господ, чији је огањ на Сиону и пећ у Јерусалиму.

< ಯೆಶಾಯನು 31 >