< ಯೆಶಾಯನು 28 >
1 ೧ ಅಯ್ಯೋ, ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟದ ಗತಿಯೇ! ದ್ರಾಕ್ಷಾರಸಕ್ಕೆ ಸೋತು ಹೋದವರ ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಬಾಡುತ್ತಿರುವ ಹೂವಿನ ಪಾಡೇ!
We nu sin tokosrai lun Israel! Wolana lal efla oana losr ma oan fin sifen mwet kol sruhi lalos. Insuf filang lalos onola keng na, tusruktu elos sruhilana oan ac tia etalos.
2 ೨ ಆಹಾ, ಕರ್ತನು ಒಬ್ಬ ಮಹಾಬಲಿಷ್ಠನನ್ನು ನೇಮಿಸಿದ್ದಾನೆ; ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ, ನಾಶಕರವಾದ ಬಿರುಗಾಳಿಯಂತೆಯೂ, ಮುಳುಗಿಸುವ ಅತಿಧಾರಾವೃಷ್ಟಿಯಂತೆಯೂ ಬಲಾತ್ಕಾರದಿಂದ ಆ ಪಟ್ಟಣವನ್ನು ತನ್ನ ಕೈಯಿಂದ ಅಧೋಗತಿಗೆ ತರುವನು.
Leum El akoela tari sie su ku ac fokoko in mweun nu selos — sie su fah tuku oana sie paka in af na yohk kosra, oana sie af matol ma oana sie sronot fungme ac afunla acn uh.
3 ೩ ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟವು ಕಾಲಿನಿಂದ ತುಳಿಯಲ್ಪಡುವುದು.
Filang lun mwet kol sruhi lalos ac fah lolongyuki.
4 ೪ ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕೊಡುವ ಕಾಲಕ್ಕೆ, ಮೊದಲು ಮಾಗಿದ ಅಂಜೂರಕ್ಕೆ ಸಮಾನವಾಗುವುದು; ಆ ಹಣ್ಣನ್ನು ನೋಡಿದವನು, ಅದನ್ನು ಕಿತ್ತ ಕೂಡಲೆ ನುಂಗಿಬಿಡುವನು.
Wolana lun mwet kol filang lalos fah wanginla, oana fahko se meet ke sak fig ke pacl la, sifeyukyak ac mongola ke tufahna mwesrla.
5 ೫ ಆ ದಿನದಲ್ಲಿ ಸೇನಾಧೀಶ್ವರನಾದ ಯೆಹೋವನೇ ತನ್ನ ಜನರಲ್ಲಿ ಉಳಿದವರಿಗೆ ಅಂದದ ಕಿರೀಟವೂ, ಸುಂದರ ಮುಕುಟವೂ ಆಗಿರುವನು.
Sie len ac tuku ke LEUM GOD Kulana El ac fah oana sie losr wolana nu sin mwet lal su moulla.
6 ೬ ಆತನೇ ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯಾಗಿಯೂ, ಊರಬಾಗಿಲಲ್ಲಿ ಶತ್ರುಗಳನ್ನು ನಾಶಮಾಡುವವರಿಗೆ ಶೌರ್ಯವಾಗಿಯೂ ಪರಿಣಮಿಸುವನು.
El ac fah sang ngunin nununku suwohs nu sin mwet nununku, ac akpulaikyalos su liyaung mutunpot lun siti in lain mwet lokoalok.
7 ೭ ಈ ನನ್ನ ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ; ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ, ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ.
Finne mwet palu ac mwet tol, elos arulana sruhi, oru elos fahsr tukulkul. Yokla nim wain ac mwe nim ku, oru elos nukanulosla ac fahsr toptop. Mwet palu elos arulana sruhi ac tia kalem ke aruruma ma God El supu, ac mwet tol elos arulana sruhi ac tia ku in oru nununku suwohs nu ke mwe elya lun mwet uh.
8 ೮ ಅವರ ಮೇಜುಗಳ ಮೇಲೆಲ್ಲಾ ವಾಂತಿಯೂ, ಎಂಜಲೂ ತುಂಬಿವೆ, ಶುದ್ಧವಾದ ಸ್ಥಳವೇ ಇಲ್ಲ.
Tepu ma elos muta kac afla ke woht, ac wangin acn nasnas lula fac.
9 ೯ ಇವನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಇವನು ಯಾರಿಗೆ ಯೆಹೋವನ ಬೋಧನೆಯನ್ನು ತಿಳಿಸುತ್ತಾನೆ? ಮೊಲೆಬಿಟ್ಟ ಕೂಸುಗಳಿಗೋ ಅಥವಾ ತಾಯಿಯ ಬೆಚ್ಚನೆಯ ಎದೆಬಿಟ್ಟ ಮಕ್ಕಳಿಗೋ?
Elos torkaskas keik ac fahk, “Ku El nunku mu su El luti uh? Su enenu kas lal? Ma na nu sin tulik fusr ma tufahna liktitla!
10 ೧೦ ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ.
Ma na fisrasr pa El luti nu sesr: El kalweni kais sie leta, lain nu ke lain, mwe luti nu ke mwe luti.”
11 ೧೧ ಹೌದು, ತೊದಲು ಮಾತಿನವರು, ಅನ್ಯಭಾಷಿಗಳು ಇವರ ಮೂಲಕವಾಗಿಯೇ ಯೆಹೋವನು ಈ ಜನರೊಂದಿಗೆ ಮಾತನಾಡುವನು.
Kowos fin tia porongeyu, na God El ac supwaot kutu mwetsac su orekmakin kas sakirik ma kowos tia kalem kac in luti kowos.
12 ೧೨ ಆತನು ಮೊದಲು, “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ, ಬಳಲಿದವರಿಗೆ ವಿಶ್ರಾಂತಿ ನೀಡಿ, ನಿಮಗೆ ಅನುಕೂಲವಾದ ಉಪಶಮನವು ಇದೇ” ಎಂದು ಹೇಳುವಾಗ ಇವರು ಕೇಳದೆ ಹೋದರು.
El kena akwoye kowos ac sot mongla nu suwos nukewa, a kowos srunga porongal.
13 ೧೩ ಹೀಗಿರಲು ಯೆಹೋವನ ಮಾತು ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ ಎಂಬುದಾಗಿ ಇವರಿಗೆ ಪರಿಣಮಿಸುವುದು; ಇವರು ನಡೆದು ಹಿಂದೆ ಬಿದ್ದು ಭಂಗಪಡುವರು, ಬೋನಿಗೆ ಸಿಕ್ಕಿ ವಶವಾಗುವರು.
Pa pwanang LEUM GOD El ac kalweni kais sie leta, lain nu ke lain, ac mwe luti nu ke mwe luti. Na kowos fah tukulkul yen nukewa kowos fahsr we. Kowos ac fah kinkineta, sremla ke kwasrip, ac utukla nu in sruoh.
14 ೧೪ ಆದುದರಿಂದ ಯೆರೂಸಲೇಮಿನ ಈ ಜನರನ್ನು ಆಳುವ ಧರ್ಮನಿಂದಕರೇ, ಯೆಹೋವನ ಮಾತನ್ನು ಕೇಳಿರಿ,
Inge, kowos mwet enum su leum fin mwet inge in acn Jerusalem, porongo ma LEUM GOD El fahk.
15 ೧೫ ನೀವು ನಿಮ್ಮೊಳಗೆ, “ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು; ನಾವು ಸುಳ್ಳನ್ನೇ ಆಶ್ರಯಿಸಿಕೊಂಡು ಮೋಸದಲ್ಲಿ ಮೊರೆಹೊಕ್ಕಿದ್ದೇವೆ” ಎಂದು ಅಂದುಕೊಂಡಿದ್ದೀರಿ. (Sheol )
Kowos konkin mu kowos orala sie wuleang yurin misa, ac kowos insesela yurin mwet in facl sin mwet misa. Kowos nunku mu mwe ongoiya ac fah aliki kowos ke pacl se ac tuku, mweyen kowos lulalfongi ke kikiap ac kutasrik lowos in loangekowos. (Sheol )
16 ೧೬ ಆದುದರಿಂದ ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ, “ಇಗೋ, ಪರೀಕ್ಷೆಗೆ ಒಳಗಾಗಿ, ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ, ಸ್ಥಿರವಾದ ಆಸ್ತಿವಾರವನ್ನಾಗಿ ಇಡುತ್ತೇನೆ; ಭರವಸವಿಡುವವನು ಆತುರಪಡನು.
Pa inge ma LEUM GOD Fulatlana El fahk: “Nga likiya sie pwelung in Zion ma oakwuki ku. Nga filiya sie eot insruwasrik saok ac ku kac, ac kas inge simla fac: ‘Lulalfongi se su ku el oayapa mongfisrasr.’
17 ೧೭ ನಾನು ನ್ಯಾಯವನ್ನು ನೂಲನ್ನಾಗಿಯೂ, ಧರ್ಮವನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು, ಜಲಪ್ರವಾಹವು ಮೋಸದ ಅಡಗು ಸ್ಥಳವನ್ನು ಮುಳುಗಿಸುವುದು.
Nununku suwohs pa mwe srikasrak nu fin pwelung uh, ac pwaya pa mwe srikasrak nu ke siska ah, tenyak nu lucng.” Af yohk kosra fah pokla kikiap nukewa ma kowos lulalfongi, ac sronot ac fah kunausla acn kowos lulalfongi in wikla we.
18 ೧೮ ಮೃತ್ಯುವಿನಿಂದ ನೀವು ಪಡೆದುಕೊಂಡ ಒಡಂಬಡಿಕೆಯು ಸಾಗದು, ಪಾತಾಳದೊಡನೆ ನೀವು ಮಾಡಿಕೊಂಡ ಒಪ್ಪಂದವು ನಿಲ್ಲದು; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ನಿಮ್ಮನ್ನು ತುಳಿದುಬಿಡುವುದು. (Sheol )
Wuleang ma kowos orala yurin misa ac fah sisila, ac insesela lowos yurin mwet in facl lun misa fah ikilyukla wanginla ku la. Ke mwe ongoiya lulap ac tuhme, ac fah afinkowosi ac kunauskowosla. (Sheol )
19 ೧೯ ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು; ಹೊತ್ತಾರೆಯಿಂದ ಹೊತ್ತಾರೆಗೆ ಹಗಲು ರಾತ್ರಿಯೂ ಹಾದುಹೋಗುವುದು; ಆಗ ಯೆಹೋವನ ಮಾತನ್ನು ಗ್ರಹಿಸಿಕೊಳ್ಳುವುದರಿಂದ ಭಯವಾಗುವುದು.
Ac fah kalkalwen in pokkowosla ke lotutang nukewa. Kowos ac fah keokkin ke len ac fong. Kais sie kas sin God me ac fah mwe aksangeng yohk nu suwos!
20 ೨೦ ಒಬ್ಬನು ಕಾಲುಚಾಚಿಕೊಂಡು ಮಲಗುವನೆಂದರೆ ಹಾಸಿಗೆಯ ಉದ್ದವೂ ಸಾಲುವುದಿಲ್ಲ; ಮುದುರಿಕೊಂಡು ಮಲಗುವನೆಂದರೆ ಹೊದಿಕೆಯ ಅಗಲವೂ ಸಾಲುವುದಿಲ್ಲ.”
Kowos ac fah oana mukul se in soakas se inge: mwe oan kial fototola elan asrosrelik fac, ac kaot lal oasriksrikla elan afinilya kac.
21 ೨೧ ಯೆಹೋವನು ಈಗ ಅಪರೂಪವಾದ ತನ್ನ ಕೆಲಸವನ್ನು ನಡೆಸಬೇಕೆಂತಲೂ, ಅಪೂರ್ವವಾದ ತನ್ನ ಕಾರ್ಯವನ್ನು ನೆರವೇರಿಸಬೇಕೆಂತಲೂ ಪೆರಾಚೀಮ್ ಬೆಟ್ಟದಲ್ಲಿ ಎದ್ದಂತೆ ಏಳುವನು, ಗಿಬ್ಯೋನ್ ಕಣಿವೆಯಲ್ಲಿ ರೋಷಗೊಂಡಂತೆ ರೋಷಗೊಳ್ಳುವನು.
LEUM GOD El ac fah mweun in oana El tuh oru Fineol Perazim ac infahlfal lun Gibeon, Elan ku in orala ma El nunku in oru, finne mukuikui lal uh sie liki na ma mwet uh tawi. El fah aksafye orekma lal su mwet uh tia ku in kalem kac.
22 ೨೨ ಆದುದರಿಂದ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಡಿರಿ; ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಳಯವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ನುಡಿಯುವುದನ್ನು ಕೇಳಿದ್ದೇನೆ.
Nimet isrun kas in sensenkakin nga sot nu suwos! Kowos fin isrun, ac fah upala nu suwos in kaingkunla. Nga lohng pwapa lun LEUM GOD Kulana in kunausla mutunfacl nufon se inge.
23 ೨೩ ನನ್ನ ಧ್ವನಿಯನ್ನು ಕಿವಿಗೊಟ್ಟು ಕೇಳಿರಿ, ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.
Porongo ma nga fahk uh, ac lohang nu ke ma nga fahk nu suwos.
24 ೨೪ ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ಪ್ರತಿನಿತ್ಯವೂ ಮಣ್ಣನ್ನು ಕೆಳಮೇಲು ಮಾಡುತ್ತಾ ಕುಂಟೆಹೊಡೆಯುವನೋ?
Wangin mwet ima kalwenina in akfisrasrye acn in ima lal ac tia yukwiya.
25 ೨೫ ಅಂತು ಭೂಮಿಯನ್ನು ಹಸನು ಮಾಡಿದ ಮೇಲೆ ಅಗಸೆಯನ್ನು, ಜೀರಿಗೆಯನ್ನು ಬಿತ್ತಿ, ಗೋದಿಯನ್ನು ಸಾಲು ಸಾಲಾಗಿ ತಕ್ಕ ಸ್ಥಳದಲ್ಲಿಯೂ, ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೆ?
Ke pacl se el akoela fohk uh wo, na el yukwiya fiten mahsrik oana dill ac cumin. El yukwi tah in wheat ac barley, ac ke sisken ima lal el yukwi kutu pac kain fita.
26 ೨೬ ಅವನ ದೇವರು ಇದನ್ನೆಲ್ಲಾ ಅವನಿಗೆ ಸರಿಯಾಗಿ ಕಲಿಸಿ, ತಿದ್ದುತ್ತಾನೆ.
El etu lah el ac oru orekma lal fuka, mweyen God El lotel.
27 ೨೭ ಆದುದರಿಂದ ಅವನು ಜೀರಿಗೆಯನ್ನು ಒಕ್ಕುವುದು ಯಂತ್ರದಿಂದಲ್ಲ ಅಥವಾ ಗಾಡಿಯ ಚಕ್ರದಿಂದಲ್ಲ ಆದರೆ ಕೋಲಿನಿಂದಲೇ; ಅಗಸೆಯನ್ನು ಒಕ್ಕುವುದು ಕೋಲಿನಿಂದಲೇ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದಲೇ, ಕಣದ ಗುಂಡಿನಿಂದಲ್ಲ.
El tia orekmakin sak toasr in puokla fiten dill ku fiten cumin; a el orekmakin sak mulala ac fal lupa.
28 ೨೮ ಗೋದಿಯ ಕಾಳನ್ನು ನುಚ್ಚು ಮಾಡುವನೋ? ತನ್ನ ಕುದುರೆಗಳ ಗಾಡಿಯ ಚಕ್ರವನ್ನು ಹೊಡೆಯುತ್ತಾ ಗುಂಡನ್ನು ಉರುಳಿಸುತ್ತಾ ಯಾವಾಗಲೂ ಒಕ್ಕುತ್ತಿರುವುದಿಲ್ಲ, ನುಚ್ಚು ಮಾಡುವುದಿಲ್ಲ.
El ac tia puok na puok wheat uh nwe ke na mukutkuti, a el etu lah el ac srungulla kolo uh ke el patok sie mwe wiwa fac in mau tia itungya wheat uh.
29 ೨೯ ಈ ವಿವೇಕವು ಸಹ ಅತಿಶಯವಾದ ಆಲೋಚನಾಪರನೂ, ಸುಜ್ಞಾನ ಶ್ರೇಷ್ಠನೂ ಆಗಿರುವ, ಸೇನಾಧೀಶ್ವರನಾದ ಯೆಹೋವನಿಂದಲೇ ಉಂಟಾಗುತ್ತದೆ.
Lalmwetmet inge nukewa tuku sin LEUM GOD Kulana. Lemlem ma God El oru uh lalmwetmet, ac pacl nukewa safla tuh na wo.