< ಯೆಶಾಯನು 24 >

1 ಇಗೋ, ಯೆಹೋವನು ಭೂಮಿಯನ್ನು ಬರಿದುಮಾಡಿ, ಎಲ್ಲಾ ಪ್ರದೇಶವನ್ನು ನಿರ್ಜನಮಾಡಿ, ಅದನ್ನು ವಿಕಾರಪಡಿಸಿ, ಅದರ ನಿವಾಸಿಗಳನ್ನು ಚದುರಿಸಿಬಿಡುವವನಾಗಿದ್ದಾನೆ.
Se, Herren udtømmer Landet og gør det øde, og han forvender dets Skikkelse og adspreder dets Indbyggere.
2 ಪ್ರಜೆಗಳು ಯಾಜಕ, ದಾಸ ಯಜಮಾನ, ದಾಸಿ, ಯಜಮಾನಿ, ಕೊಳ್ಳುವವನು, ಮಾರುವವನು, ಸಾಲ ಕೊಡುವವನು ಸಾಲ ಪಡೆಯುವವನು, ಬಡ್ಡಿ ಪಡೆಯುವವನು ಬಡ್ಡಿ ತೆರುವವನು, ಇವರೆಲ್ಲರಿಗೂ ಒಂದೇ ಗತಿಯಾಗುವುದು.
Og det skal gaa Præsten som Folket, Herren som Tjeneren, Fruen som Tjenestepigen; den, der sælger, som den, der køber; den, der laaner, som den, der udlaaner; den, som modtager paa Aager, som den, der sætter ud paa Aager.
3 ಭೂಮಿಯು ಬಟ್ಟಬರಿದಾಗುವುದು, ಅದು ಸಂಪೂರ್ಣ ಸುಲಿಗೆಯಾಗುವುದು, ಯೆಹೋವನೇ ಇದನ್ನು ನುಡಿದಿದ್ದಾನೆ.
Landet skal blive helt udtømt og helt udplyndret; thi Herren har talt dette Ord.
4 ಭೂಮಿಯು ಪ್ರಲಾಪಿಸುತ್ತಾ ಬಳಲಿದೆ, ಲೋಕವು ಕುಗ್ಗಿಹೋಗಿದೆ, ಲೋಕದ ಉನ್ನತರು ಕಂಗೆಟ್ಟಿದ್ದಾರೆ.
Landet sørger, det forsmægter, Jorderige er afmægtigt, det forsmægter; de høje iblandt Folket i Landet ere blevne afmægtige.
5 ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ನಿಯಮಗಳನ್ನು ಬದಲಾಯಿಸಿ, ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಅವರ ಹೆಜ್ಜೆಯಿಂದ ಅಪವಿತ್ರವಾಯಿತು.
Thi Landet er besmittet for dets Indbyggeres Skyld; thi de have overtraadt Love, forvendt Skikke, gjort den evige Pagt til intet.
6 ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ. ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.
Derfor fortærer Forbandelsen Landet, og de, som bo deri, maa bøde; derfor hensvinde de, som bo i Landet, og der blive faa Mennesker tilovers
7 ದ್ರಾಕ್ಷಾರಸವು ಬತ್ತಿ ಹೋಗುವುದು, ದ್ರಾಕ್ಷಿಯ ಬಳ್ಳಿಯು ಕ್ಷೀಣಿಸುವುದು, ಹರ್ಷ ಹೃದಯರೆಲ್ಲಾ ನರಳುತ್ತಾರೆ.
Mosten sørger, Vintræet vansmægter, alle de, som vare glade af Hjertet, sukke.
8 ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸಿಗಳ ಕೋಲಾಹಲವು ಕೊನೆಗೊಂಡಿದೆ, ಕಿನ್ನರಿಯ ಆನಂದವು ಅಡಗಿದೆ.
Trommernes Glædeslyd er ophørt, de glades Bulder har ladet af, Harpes Glædesklang er ophørt.
9 ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಮದ್ಯವು ಕುಡಿಯುವವರಿಗೆ ಕಹಿಯಾಗುವುದು.
De drikke ikke Vin med Sang; den stærke Drik er besk for dem, som drikke den.
10 ೧೦ ಹಾಳುಪಟ್ಟಣವು ಬಿದ್ದುಹೋಗಿದೆ, ಯಾರೂ ಹೋಗದಂತೆ ಪ್ರತಿಯೊಂದು ಮನೆಯೂ ಮುಚ್ಚಿದೆ.
Den øde Stad er nedbrudt; hvert Hus er tillukket, at ingen gaar ind.
11 ೧೧ ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲಾ ಕೊನೆಗೊಂಡಿದೆ; ಲೋಕದ ಸಡಗರವು ಸೆರೆಯಾಗಿ ತೊಲಗಿದೆ.
Man jamrer paa Gaderne for Vinen; al Glæde er formørket, Landets Fryd er dragen bort.
12 ೧೨ ಪಟ್ಟಣಗಳು ಹಾಳೂರಾಗಿ ಉಳಿದಿದೆ; ನಾಶವು ಹೆಬ್ಬಾಗಿಲಿಗೆ ಬಡಿದಿದೆ.
Det, som er bleven tilovers i Staden, er kun Ødelæggelse, og Porten sønderslaas med Bulder.
13 ೧೩ ಎಣ್ಣೆಯ ಮರವನ್ನು ಕಡಿದ ಬಳಿಕ, ದ್ರಾಕ್ಷಿಯ ಸುಗ್ಗಿಯು ತೀರಿದ ನಂತರ ಉಳಿದ ಕಾಯಿಗಳ ಹಾಗೆ ಭೂಮಂಡಲದಲ್ಲಿ ಜನಾಂಗಗಳೊಳಗೆ ಉಳಿದಿರುವುದು.
Thi saa skal det gaa midt i Landet, midt iblandt Folkene, som naar man har rystet et Olietræ, og som med Efterhøsten, naar Vinhøsten er endt.
14 ೧೪ ಅವರು ತಮ್ಮ ಧ್ವನಿ ಎತ್ತಿ ಯೆಹೋವನ ಮಹಿಮೆಯನ್ನು ಕುರಿತು ಹಾಡುವರು. ಸಮುದ್ರದ ಕಡೆಯಿಂದ ಆರ್ಭಟಿಸುವರು.
De skulle opløfte deres Røst, de skulle synge med Fryd, de skulle raabe højere end; Havet for Herrens Herligheds Skyld.
15 ೧೫ ಮೂಡಣದವರೇ, “ಯೆಹೋವನನ್ನು ಸನ್ಮಾನಿಸಿರಿ. ದ್ವೀಪ ನಿವಾಸಿಗಳೇ, ಇಸ್ರಾಯೇಲರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ” ಎಂದು ಕೂಗುವರು.
Derfor ærer; nu Herren, I, som bo i Østen! Herren Israels Guds Navn paa Øerne i Havet.
16 ೧೬ ಭೂಮಂಡಲದ ಕಟ್ಟಕಡೆಯಿಂದ, “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿ ಬಂದಿವೆ, ಆದರೆ “ನಾನಾದರೋ ಕ್ಷಯಿಸಿ ಹೋಗಿದ್ದೇನೆ, ನನ್ನ ಗತಿಯನ್ನು ಏನು ಹೇಳಲಿ! ಬಾಧಕರು ಬಾಧಿಸುತ್ತಾರೆ, ಹೌದು, ಬಾಧಕರು ಬಾಧಿಸೇ ಬಾಧಿಸುತ್ತಾರೆ” ಎಂದುಕೊಂಡೆನು.
Vi høre Lovsange fra Jordens yderste Ende: „Herlighed for den retfærdige!‟ men jeg maa sige: Jeg ulykkelige, jeg ulykkelige, ve mig! Røvere røve, ja Røvere røve Rov.
17 ೧೭ ಭೂನಿವಾಸಿಗಳೇ, ಭಯವೂ, ಗುಂಡಿಯೂ, ಬಲೆಯೂ ನಿಮಗೆ ಕಾದಿವೆ.
Forfærdelse og Grav og Snare over dig, du Landets Indbygger!
18 ೧೮ ಭಯದ ಸಪ್ಪಳದಿಂದ ಓಡಿ ಹೋಗುವವನು ಗುಂಡಿಯಲ್ಲಿ ಬೀಳುವನು, ಗುಂಡಿಯನ್ನು ಹತ್ತಿ ಬರುವವನು ಬಲೆಗೆ ಸಿಕ್ಕುವನು. ನೋಡು, ಆಕಾಶದ ದ್ವಾರಗಳು ತೆರೆದಿವೆ, ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.
Og det skal ske, om nogen flyr for Forfærdelsens Røst, skal han falde i Graven, og den, som kommer op af Graven, skal fanges i Snaren; thi Sluserne af det høje have opladt sig, og Jordens Grundvold bæver.
19 ೧೯ ಭೂಮಿಯು ಒಡೆದೇ ಇದೆ, ಬಿರಿದಿದೆ, ಕದಲಿಯೇ ಹೋಗಿದೆ.
Jorden sønderslaas aldeles, Jorden sønderrives aldeles, Jorden bevæges did og did.
20 ೨೦ ಭೂಮಿಯು ಅಮಲೇರಿದವನ ಹಾಗೆ ಓಲಾಡುತ್ತದೆ, ಗುಡಿಸಲಂತೆ ತೂಗಾಡುತ್ತದೆ; ಅದರ ದ್ರೋಹವು ಅದಕ್ಕೆ ಭಾರವಾಗಿದೆ, ಅದು ಬಿದ್ದು ಹೋಗುತ್ತಿದೆ, ತಿರುಗಿ ಏಳುವುದೇ ಇಲ್ಲ.
Jorden raver som den drukne og svajer som Hængekøjen; dens Overtrædelse er svar over den, og den falder og staar ikke op ydermere.
21 ೨೧ ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ, ಭೂಮಂಡಲದ ಒಡೆಯರನ್ನೂ ದಂಡಿಸುವನು.
Og det skal ske paa den Dag, at Herren skal hjemsøge de højes Hær i det høje og Jordens Konger paa Jorden.
22 ೨೨ ಅವರು ಕೈದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಲ್ಪಟ್ಟು ಅದರಲ್ಲಿ ಮುಚ್ಚಲ್ಪಡುವರು. ಬಹಳ ದಿನಗಳ ನಂತರ ದಂಡನೆಗೆ ಗುರಿಯಾಗುವರು.
Og de skulle samles til Hobe, som Fanger samles til en Hule og blive indelukkede i Fængsel; og efter mange Dage blive de hjemsøgte.
23 ೨೩ ಆಮೇಲೆ ಚಂದ್ರನು ನಾಚಿಕೆಪಡುವನು, ಸೂರ್ಯನು ಲಜ್ಜೆಗೊಳ್ಳುವನು; ಸೇನಾಧೀಶ್ವರನಾದ ಯೆಹೋವನು ಚೀಯೋನ್ ಪರ್ವತದಲ್ಲಿ ಯೆರೂಸಲೇಮನ್ನು ಆಳುವನು. ಆತನ ಪರಿವಾರದ ಹಿರಿಯರ ಮುಂದೆ ಪ್ರಭಾವವು ಪ್ರತ್ಯಕ್ಷವಾಗುವುದು.
Og Maanen skal beskæmmes og Sølen skamme sig; thi den Herre Zebaoth skal regere paa Zions Bjerg og i Jerusalem, og for hans Ældstes Ansigt; er der Herlighed.

< ಯೆಶಾಯನು 24 >