< ಯೆಶಾಯನು 2 >
1 ೧ ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಕಂಡು ಬಂದ ದೈವೋಕ್ತಿ ಇದೇ.
verbum quod vidit Isaias filius Amos super Iudam et Hierusalem
2 ೨ ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.
et erit in novissimis diebus praeparatus mons domus Domini in vertice montium et elevabitur super colles et fluent ad eum omnes gentes
3 ೩ ಹೊರಟು ಬಂದ ಬಹು ಜನಾಂಗದವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು. ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವುದು.
et ibunt populi multi et dicent venite et ascendamus ad montem Domini et ad domum Dei Iacob et docebit nos vias suas et ambulabimus in semitis eius quia de Sion exibit lex et verbum Domini de Hierusalem
4 ೪ ಆತನು ದೇಶದೇಶಗಳ ವ್ಯಾಜ್ಯವನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು; ಅವರೋ ತಮ್ಮ ಆಯುಧಗಳನ್ನು ಕುಲುಮೆಗೆ ಹಾಕಿ, ಕತ್ತಿಗಳನ್ನು ನೇಗಿಲ ಗುಳಗಳನ್ನಾಗಿಯೂ, ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗಕ್ಕೆ ವಿರುದ್ಧವಾಗಿ ಜನಾಂಗವು ಕತ್ತಿಯನ್ನೆತ್ತದು. ಇನ್ನು ಮೇಲೆ ಯುದ್ಧಾಭ್ಯಾಸವು ನಡೆಯುವುದೇ ಇಲ್ಲ.
et iudicabit gentes et arguet populos multos et conflabunt gladios suos in vomeres et lanceas suas in falces non levabit gens contra gentem gladium nec exercebuntur ultra ad proelium
5 ೫ ಯಾಕೋಬಿನ ವಂಶದವರೇ ಬನ್ನಿರಿ, ಯೆಹೋವನ ಜ್ಞಾನದ ಬೆಳಕಿನಲ್ಲಿ ನಡೆಯೋಣ.
domus Iacob venite et ambulemus in lumine Domini
6 ೬ ಯಾಕೋಬಿನ ಮನೆತನದವರು ಪೂರ್ವದೇಶಗಳಲ್ಲಿ ಮಂತ್ರತಂತ್ರಗಳಲ್ಲಿ ಮಗ್ನರೂ, ಫಿಲಿಷ್ಟಿಯರ ಹಾಗೆ ಕಣಿ ಹೇಳುವವರೂ, ಅನ್ಯದೇಶಗಳವರ ಸಂಗಡ ಒಪ್ಪಂದ ಮಾಡುವವರೂ ಆಗಿರುವುದರಿಂದ ಯೆಹೋವನೇ ಈ ನಿನ್ನ ಜನರನ್ನು ಕೈಬಿಟ್ಟಿದ್ದೀ.
proiecisti enim populum tuum domum Iacob quia repleti sunt ut olim et augures habuerunt ut Philisthim et pueris alienis adheserunt
7 ೭ ಅವರ ದೇಶವು ಬೆಳ್ಳಿಬಂಗಾರಗಳಿಂದ ತುಂಬಿದೆ. ಅವರ ನಿಧಿನಿಕ್ಷೇಪಗಳಿಗೆ ಮಿತಿಯಿಲ್ಲ. ಅವರ ದೇಶವು ಅಶ್ವಬಲದಿಂದ ತುಂಬಿದೆ. ಅವರ ರಥಗಳಿಗೆ ಮಿತಿಯೇ ಇಲ್ಲ.
repleta est terra argento et auro et non est finis thesaurorum eius
8 ೮ ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ. ತಮ್ಮ ಕೈಯಿಂದಲೇ, ತಮ್ಮ ಬೆರಳುಗಳಿಂದಲೇ ಮಾಡಿದ ಕೆಲಸಕ್ಕೆ ನಮಸ್ಕರಿಸುತ್ತಾರೆ.
et repleta est terra eius equis et innumerabiles quadrigae eius et repleta est terra eius idolis opus manuum suarum adoraverunt quod fecerunt digiti eorum
9 ೯ ಹೀಗಿರಲು ಜನರು ಅಧರ್ಮಿಗಳಾಗಲಿ, ಉತ್ತಮರಾಗಲಿ ತಗ್ಗಿಸಲ್ಪಡುವರು, ಪ್ರತಿ ಮನುಷ್ಯನು ಬಿದ್ದುಹೋಗುವನು. ನೀನು ಅವರನ್ನು ಸ್ವೀಕರಿಸಬೇಡ.
et incurvavit se homo et humiliatus est vir ne ergo dimittas eis
10 ೧೦ ಗವಿಯೊಳಗೆ ನುಗ್ಗು, ಯೆಹೋವನ ಭಯಂಕರತನಕ್ಕೂ, ಅತ್ಯುನ್ನತ ಮಹಿಮೆಗೂ ಹೆದರಿ ಭೂಮಿಯಲ್ಲಿ ಅವಿತುಕೋ.
ingredere in petram abscondere fossa humo a facie timoris Domini et a gloria maiestatis eius
11 ೧೧ ಮನುಷ್ಯನ ಗರ್ವದೃಷ್ಟಿಯು ತಗ್ಗಿಹೋಗುವುದು, ಮನುಷ್ಯರ ಅಹಂಕಾರವು ತಗ್ಗುವುದು. ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.
oculi sublimis hominis humiliati sunt et incurvabitur altitudo virorum exaltabitur autem Dominus solus in die illa
12 ೧೨ ಸೇನಾಧೀಶ್ವರನಾದ ಯೆಹೋವನ ನ್ಯಾಯನಿರ್ಣಯದ ದಿನವು ಗರ್ವದಿಂದ ಹೆಚ್ಚಿಕೊಂಡಿರುವ ಪ್ರತಿಯೊಬ್ಬನ ಮೇಲೆ ಬರುವುದು. ಆಗ ಅವನು ತಗ್ಗಿಸಲ್ಪಡುವನು.
quia dies Domini exercituum super omnem superbum et excelsum et super omnem arrogantem et humiliabitur
13 ೧೩ ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳ ಮತ್ತು ಬಾಷಾನಿನ ಎಲ್ಲಾ ಅಲ್ಲೋನ ಮರಗಳ ಮೇಲೆಯೂ,
et super omnes cedros Libani sublimes et erectas et super omnes quercus Basan
14 ೧೪ ಶಿಖರಗಳನ್ನು ಉನ್ನತವಾಗಿ ಎತ್ತಿಕೊಂಡಿರುವ ಸಮಸ್ತ ಬೆಟ್ಟಗುಡ್ಡಗಳ ಮೇಲೆಯೂ,
et super omnes montes excelsos et super omnes colles elevatos
15 ೧೫ ಎತ್ತರವಾದ ಸಕಲ ಗೋಪುರಗಳ ಮೇಲೆಯೂ, ಭದ್ರವಾದ ಸಮಸ್ತ ಕೋಟೆಗಳ ಮೇಲೆಯೂ,
et super omnem turrem excelsam et super omnem murum munitum
16 ೧೬ ಎಲ್ಲಾ ದೊಡ್ಡ ದೊಡ್ಡ ತಾರ್ಷೀಷ್ ನ ಹಡಗುಗಳ ಮೇಲೆಯೂ, ಅಂತೂ ನೋಡತಕ್ಕ ಮನೋಹರವಾದ ಪ್ರತಿಯೊಂದು ವಸ್ತುವಿನ ಮೇಲೆಯೂ ಆ ದಿನವೂ ತಪ್ಪದೇ ಬರುವುದು.
et super omnes naves Tharsis et super omne quod visu pulchrum est
17 ೧೭ ಮನುಷ್ಯರ ಗರ್ವವು ಕುಗ್ಗುವುದು. ಮನುಷ್ಯರ ಅಹಂಕಾರವು ತಗ್ಗುವುದು. ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.
et incurvabitur sublimitas hominum et humiliabitur altitudo virorum et elevabitur Dominus solus in die illa
18 ೧೮ ವಿಗ್ರಹಗಳು ಸಂಪೂರ್ಣವಾಗಿ ನಾಶವಾಗಿ ಹೋಗುವವು.
et idola penitus conterentur
19 ೧೯ ಯೆಹೋವನು ಭೂಮಂಡಲವನ್ನು ನಡುಗಿಸಲು ಏಳುವಾಗ, ಮನುಷ್ಯರು ಆತನ ಭಯಂಕರ ಕೋಪಕ್ಕೂ, ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಗವಿಗಳಲ್ಲಿಯೂ, ನೆಲದ ಹಳ್ಳಕೊಳ್ಳಗಳಲ್ಲಿಯೂ ಅಡಗಿಕೊಳ್ಳುವರು.
et introibunt in speluncas petrarum et in voragines terrae a facie formidinis Domini et a gloria maiestatis eius cum surrexerit percutere terram
20 ೨೦ ಆ ದಿನದಲ್ಲಿ ಮನುಷ್ಯರು ತಮ್ಮ ಪೂಜೆಗೋಸ್ಕರ ಮಾಡಿಸಿಕೊಂಡ ಬೆಳ್ಳಿಯ ಬೊಂಬೆಗಳನ್ನೂ, ಬಂಗಾರದ ವಿಗ್ರಹಗಳನ್ನೂ, ಇಲಿ, ಬಾವಲಿಗಳಿಗಾಗಿ ಬಿಸಾಡಿ ಬಿಡುವರು.
in die illa proiciet homo idola argenti sui et simulacra auri sui quae fecerat sibi ut adoraret talpas et vespertiliones
21 ೨೧ ಯೆಹೋವನು ಭೂಮಂಡಲವನ್ನು ನಡುಗಿಸಲು ಏಳುವಾಗ, ಆತನ ಭಯಂಕರಕ್ಕೂ, ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಸಂದುಗೊಂದುಗಳಲ್ಲಿಯೂ, ಚೂಪಾದ ಶಿಖರಗಳ ಕಡಿದಾದ ಸ್ಥಳಗಳಿಗೂ ನುಗ್ಗುವರು.
et ingredietur fissuras petrarum et cavernas saxorum a facie formidinis Domini et a gloria maiestatis eius cum surrexerit percutere terram
22 ೨೨ ಮೂಗಿನಿಂದ ಉಸಿರಾಡುವ ತನಕ ಬದುಕುವ ನರಮನುಷ್ಯನ ಮೇಲಿನ ಭರವಸೆಯನ್ನು ಬಿಟ್ಟು ಬಿಡಿರಿ. ಏಕೆಂದರೆ ಅವನು ಯಾವ ಲೆಕ್ಕಕ್ಕೂ ಸಮಾನನಲ್ಲ.
quiescite ergo ab homine cuius spiritus in naribus eius quia excelsus reputatus est ipse