< ಯೆಶಾಯನು 19 >
1 ೧ ಐಗುಪ್ತದ ವಿಷಯವಾದ ದೈವೋಕ್ತಿ. ಇಗೋ, ಯೆಹೋವನು ವೇಗವಾದ ಮೇಘವಾಹನವಾಗಿ ಐಗುಪ್ತಕ್ಕೆ ಬರುವನು. ಆತನು ಅವರಿಗೆ ಎದುರಾದಾಗ ಐಗುಪ್ತದ ವಿಗ್ರಹಗಳು ನಡುಗುವವು. ಐಗುಪ್ತರ ಹೃದಯವು ತಮ್ಮೊಳಗೆ ಕರಗಿ ನೀರಾಗುವುದು.
Tamko kuhusu Misri. Ona, Yahwe atasafiri katika mawimbi mepesi na anakuja Misri; Sanamu za Misri zitatemeka mbele yake, na mioyo ya Wamisri itayeyuka ndani yao wenyewe.
2 ೨ “ಐಗುಪ್ತರನ್ನು ಐಗುಪ್ತ್ಯರ ಮೇಲೆಯೇ ಎಬ್ಬಿಸುವೆನು: ಸಹೋದರನಿಗೆ ವಿರುದ್ಧವಾಗಿ ಸಹೋದರನು, ನೆರೆಯವನಿಗೆ ವಿರುದ್ಧವಾಗಿ ನೆರೆಯವನೂ, ಪಟ್ಟಣಕ್ಕೆ ವಿರುದ್ಧವಾಗಿ ಪಟ್ಟಣವೂ, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಹೋರಾಡುವವು.
Nitawachanganya Wamisri juu dhidi ya Wamisiri: Mtu atapigana dhidi ya ndugu yake, mji dhidi ya miji, na ufalme dhidi ya ufalme.
3 ೩ ಐಗುಪ್ತದ ಅಂತರಾತ್ಮವು ಬರಿದಾಗುವುದು. ಅದರ ಆಲೋಚನೆಯನ್ನು ಕೆಡಿಸಿಬಿಡುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಂತ್ರಗಾರರನ್ನೂ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನು ಆಶ್ರಯಿಸುವರು.
Roho ya Misri itadhohofishwa kutoka ndani. Nitauharibu ushauri wake, japo wanafikiria ushauri wa sanamu, roho za watu waliokufa, na mizimu, na
4 ೪ ಇದಲ್ಲದೆ ಐಗುಪ್ತ್ಯರನ್ನು ಕ್ರೂರವಾದ ಒಡೆಯನ ಕೈಗೆ ಒಪ್ಪಿಸುವೆನು. ಭಯಂಕರನಾದ ರಾಜನು ಅವರನ್ನು ಆಳುವನು” ಎಂದು ಸೇನಾಧೀಶ್ವರನಾದ ಯೆಹೋವನು ನುಡಿಯುತ್ತಾನೆ.
Nitawacha Wamisiri kwenye mikono ya viongozi wakatili, kiongozi imara atawaongoza wao- Hili ni tamko la Yahwe Bwana wa majehi.''
5 ೫ ಮಹಾನದಿಯ ನೀರು ಬತ್ತಿಹೋಗುವುದು. ನದಿಗಳ ತೀರಗಳು ಇಂಗಿ ಒಣಗುವುದು.
Maji ya bahari yatakauka juu, na mto uakauka na kuwa mtupu.
6 ೬ ಕಾಲುವೆಗಳು ನಾರುವವು. ಐಗುಪ್ತದ ಹೊಳೆಗಳು ಇಳಿದು, ನೀರಿಲ್ಲದೆ ಒಣಗಿ ಹೋಗುವವು. ಆಪು ಮತ್ತು ಜಂಬುಹುಲ್ಲುಗಳು ಬಾಡುವವು.
Mito itakuwa michafu; mikondo ya Misri itakuwa dhii na kukauka; mwanzi na bendera zake zitapeperushwa mbali.
7 ೭ ನೈಲ್ ನದಿಯ ತೀರ, ನೈಲ್ ನದಿಯ ತೀರದಲ್ಲಿ ಇರುವ ಬಯಲುಗಳು, ನೈಲ್ ನದಿಯ ತೀರದಲ್ಲಿ ಬಿತ್ತಿದ ಹೊಲಗಳೆಲ್ಲವೂ ಒಣಗಿ, ಗಾಳಿಗೆ ಸಿಕ್ಕಿ ಮಾಯವಾಗುವವು.
Mianzi ya Nile, kwa mdomo wa mto Nile, na mbegu zote zitakazo katika mashamba ya Nilezitakauka zote, zitageuka kuwa mavumbi, na kupeperukia mbali.
8 ೮ ಬೆಸ್ತರು ದುಃಖಿಸುವರು ಮತ್ತು ನೈಲ್ ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು. ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿ ಹೋಗುವರು.
Wavuvi watalia na kuomboleza, na wale watakao shusha neti kwenye maji watauzunika.
9 ೯ ನಯವಾದ ಸೆಣಬಿನ ಕೆಲಸದವರೂ, ಬಿಳಿ ಬಟ್ಟೆಯನ್ನು ನೇಯುವವರೂ ಹತಾಶರಾಗುವರು.
Wafanyakazi ya kuchana kitani watafaidika na hao washonao nguo nyeupe watajeuka kuwa mchonaji.
10 ೧೦ ಐಗುಪ್ತದಲ್ಲಿ ಬಟ್ಟೆಯನ್ನು ನೇಯುವವರೂ ನಿರಾಶರಾಗುವರು. ಕೂಲಿಯವರು ಮನಮರಗುವರು.
Washona nguo wa Misri wataangamizwa; na wote waloajiriwa watahuzunika nafsini mwao.
11 ೧೧ ಚೋಯನಿನ ಪ್ರಭುಗಳು ಕೇವಲ ಬುದ್ಧಿಹೀನರು. ಫರೋಹನ ಮಂತ್ರಿಗಳಲ್ಲಿ ಜ್ಞಾನವುಳ್ಳ ಸಲಹೆಗಾರರ ಆಲೋಚನೆಯೂ ಜ್ಞಾನರಹಿತವಾಗಿರುತ್ತದೆ. ನೀನು ಫರೋಹನಿಗೆ, “ನಾನು ಜ್ಞಾನಿಗಳ ಸಂತಾನದವನು, ಪುರಾತನ ರಾಜನ ವಂಶದವನು? ಎಂದು ಹೇಗೆ ತಾನೆ ಹೇಳಿಕೊಳ್ಳುವಿರಿ.
Wakuu wa Zoana ni wajinga kabisa. Washauri wenye busara wa Farao ni wapumbavu. Unawezaje kumwambia Farao, ''Mimi ni mtoto wa watu wenye busara,
12 ೧೨ ನಿನ್ನ ಜ್ಞಾನಿಗಳು ಎಲ್ಲಿ?” ಎಂದು ಅವರು ನಿನಗೆ ತಿಳಿ ಹೇಳಲಿ. ಸೇನಾಧೀಶ್ವರನಾದ ಯೆಹೋವನು ಐಗುಪ್ತದ ವಿಷಯವಾಗಿ ಉದ್ದೇಶಿಸಿದ್ದನ್ನು ಅವರು ಅರಿತುಕೊಳ್ಳಲಿ.
''Wako wapi hao watu wenye busara? mtoto wa mfalme wa zamani? Waache wakuambie? na ijulikane kitu ambacho Yahwe wa majeshi amekipanga kuhusiana na Misri.
13 ೧೩ ಚೋಯನಿನ ಪ್ರಭುಗಳು ಮೂರ್ಖರಾಗಿದ್ದಾರೆ. ನೋಫಿನ ಪ್ರಧಾನರು ಮೋಸ ಹೋಗಿದ್ದಾರೆ. ಐಗುಪ್ತದ ಕುಲಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿದ್ದಾರೆ.
Wakuu wa Zoani wamekuwa wajinga, wakuu wa Memphisi wamegawanyika; wameifanya Misri iende kinyume, na mawe ya pembeni ya makabila yao.
14 ೧೪ ಯೆಹೋವನು ಅವರ ಅಂತರಾತ್ಮದಲ್ಲಿ ವಕ್ರಬುದ್ಧಿಯನ್ನು ಕಲ್ಪಸಿದ್ದಾನೆ. ಅಮಲೇರಿದವನು ಕಕ್ಕುತ್ತಾ ಓಡಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.
Yahwe amechanganya roho wa kuvurugwa katika yao, na wamefanya Wamisri kwenda kinyume kwa yote wanoyafanya, kama mlevi anavyoyumbayumba uku akitapika.
15 ೧೫ ಐಗುಪ್ತದಲ್ಲಿ ತಲೆಯಾಗಲಿ, ಬಾಲವಾಗಲಿ, ಖರ್ಜೂರದ ಕೊಂಬೆಯಾಗಲಿ ಅಥವಾ ಹುಲ್ಲಾಗಲಿ ಸಾಧಿಸಲು ಸಾಧ್ಯವಾಗದ ಯಾವ ಕೆಲಸವೂ ಇರುವುದಿಲ್ಲ.
Hakuna kitu ambacho mtu yeyote anaweza kukifanya kwa ajili ya Misri, kama kichwa au mkia, tawi au mwanzi.
16 ೧೬ ಆ ದಿನದಲ್ಲಿ, ಐಗುಪ್ತ್ಯರು ಅಶ್ರಯವಿಲ್ಲದ ಹೆಂಗಸರ ಹಾಗೆ ಭಯಗ್ರಸ್ತರಾಗಿರುವರು. ಸೇನಾಧೀಶ್ವರನಾದ ಯೆಹೋವನು ಅವರ ಮೇಲೆ ತನ್ನ ಕೈಯನ್ನು ಬೀಸುತ್ತಿರುವುದರಿಂದ ಅವರು ಭಯಪಟ್ಟು ನಡುಗುವರು.
Siku hiyo, Wamisri watakuwa kama wanawake. watatemeka na kuogopa mkono wa Yahwe wa majeshi ulioinuliwa juu yao.
17 ೧೭ ಐಗುಪ್ತವು ಬೆಚ್ಚಿಬೀಳುವುದಕ್ಕೆ ಯೆಹೂದ ದೇಶವೇ ಕಾರಣವಾಗುವುದು. ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೇನಾಧೀಶ್ವರನಾದ ಯೆಹೋವನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಸಂಕಲ್ಪವನ್ನು ತಿಳಿದು ಬೆರಗಾಗುವನು.
Nchi ya Yuda itakuwa sababu ya utisho kwa Misri. Yeyote atakao wakumbusha wao kuhusu yeye, wataogopa sana, kwa sababu ya mpango wa Yahwe, anaoukusudia juu yao.
18 ೧೮ ಆ ದಿನದಲ್ಲಿ, ಸೇನಾಧೀಶ್ವರನಾದ ಯೆಹೋವನ ಭಕ್ತರೆಂದು ಪ್ರಮಾಣಮಾಡಿ, ಕಾನಾನಿನ ಭಾಷೆಯನ್ನು ಆಡುವವರಿಂದ ತುಂಬಿದ ಐದು ಪಟ್ಟಣಗಳು ಐಗುಪ್ತ ದೇಶದಲ್ಲಿರುವವು. ಇವುಗಳಲ್ಲಿ ಒಂದರ ಹೆಸರು “ನಾಶಪುರ.”
Siku hiyo kutakuwa na miji mitano katika nchi ya Misri wanaozungumza lugha ya Kanaani na kuapa kimtii Yahwe wa majeshi. Moja kati ya miji hii itaitwa mji wa ulioharibiwa.
19 ೧೯ ಅ ದಿನದಲ್ಲಿ ಐಗುಪ್ತ ದೇಶದ ಮಧ್ಯದಲ್ಲಿ ಯೆಹೋವನಿಗೆ ಒಂದು ಯಜ್ಞಪೀಠವು, ದೇಶದ ಮೇರೆಯಲ್ಲಿ ಯೆಹೋವನಿಗೆ ಒಂದು ಸ್ತಂಭವೂ ಇರುವುದು.
Siku hiyo kutakuwa madhabahu kwa ajili ya Yahwe katika ya nchi ya Misri, na jiwe la chumvi karibu na Yahwe.
20 ೨೦ ಅವು ಐಗುಪ್ತ ದೇಶದಲ್ಲಿ ಸೇನಾಧೀಶ್ವರನಾದ ಯೆಹೋವನ ಗುರುತಾಗಿಯೂ, ಸಾಕ್ಷಿಯಾಗಿಯೂ ಇರುವವು. ಹಿಂಸಕರ ದೆಸೆಯಿಂದ ಯೆಹೋವನನ್ನು ಕೂಗಿಕೊಳ್ಳಲು ಆತನು ಅವರಿಗಾಗಿ ಹೋರಾಡುವ ಶೂರನಾದ ರಕ್ಷಕನನ್ನು ಕಳುಹಿಸಿ ಅವರನ್ನು ಬಿಡುಗಡೆ ಮಾಡುವನು.
Itakuwa kama ishara na ushahidi kwa Yahwe wa majeshi katika nchi ya Misri. Atawatumia mkombozi na mlinzi, na atawokoa wao.
21 ೨೧ ಯೆಹೋವನು ತನ್ನನ್ನು ಐಗುಪ್ತ್ಯರಿಗೆ ತಿಳಿಯಪಡಿಸಲು, ಅವರು ಆ ದಿನದಲ್ಲಿ ಯೆಹೋವನನ್ನು ತಿಳಿದುಕೊಳ್ಳುವರು ಮತ್ತು ಯಜ್ಞನೈವೇದ್ಯಗಳಿಂದ ಸೇವೆ ಮಾಡುವರು. ಹೌದು, ಯೆಹೋವನಿಗೆ ಪ್ರಮಾಣ ಮಾಡಿಕೊಂಡು ಅದನ್ನು ನೆರವೇರಿಸುವರು.
Yahwe atajulikana Misri, na Wamisri watamkubali Yahwe siku hiyo. Watamuabudu kwa sadaka na matoleo, na wataweka agano na kulitimiza.
22 ೨೨ ಇದಲ್ಲದೆ ಯೆಹೋವನು ಐಗುಪ್ತವನ್ನು ಹೊಡೆಯುವನು. ಗಾಯಮಾಡಿ ವಾಸಿಮಾಡುವವನಾಗಿಯೇ ಹೊಡೆಯುವನು. ಅವರು ಯೆಹೋವನ ಕಡೆಗೆ ತಿರುಗಿಕೊಳ್ಳುವರು. ಆತನು ಅವರ ವಿಜ್ಞಾಪನೆಯನ್ನು ಲಾಲಿಸಿ ಅವರನ್ನು ಗುಣಪಡಿಸುವನು.
Yahwe ataipga Misri, ataipiga na kuiponya. Halafu watamrudia Yahwe; atasikiliza maombi yao na kuwaponya.
23 ೨೩ ಆ ದಿನದಲ್ಲಿ, ಐಗುಪ್ತದಿಂದ ಅಶ್ಶೂರಕ್ಕೆ ಹೋಗಲು ರಾಜಮಾರ್ಗವಿರುವುದು. ಅಶ್ಶೂರ್ಯರು ಐಗುಪ್ತಕ್ಕೂ, ಐಗುಪ್ತರು ಅಶ್ಶೂರಕ್ಕೂ ಹೋಗಿ ಬರುವರು. ಐಗುಪ್ತರು ಅಶ್ಶೂರ್ಯರೊಂದಿಗೆ ಯೆಹೋವನನ್ನು ಆರಾಧಿಸುವರು.
Siku hiyo kutakuwa na njia kuu kutoka Misri kwenda Asiria, na Waasira watakuja Misri, na Wamisri watakwenda Asira; na Wamisri wataabudu pamoja na Waasiria.
24 ೨೪ ಆ ದಿನದಲ್ಲಿ, ಇಸ್ರಾಯೇಲರು ಐಗುಪ್ತ, ಅಶ್ಶೂರಗಳೊಂದಿಗೆ ಮೂರನೆಯದಾಗಿ ಬೆರೆತು ಲೋಕದ ಮಧ್ಯದಲ್ಲಿ ಆಶೀರ್ವಾದ ನಿಧಿಯಾಗಿರುವುದು.
Siku hiyo, Israeli itakuwa ya tatu pamoja na Misri na Asiria, baraka katikati ya nchi;
25 ೨೫ “ನನ್ನ ಪ್ರಜೆಯಾದ ಐಗುಪ್ತಕ್ಕೂ, ನನ್ನ ಕೈಯಿಂದ ಸೃಷ್ಟಿಸಲ್ಪಟ್ಟ ಅಶ್ಶೂರಕ್ಕೂ, ನನ್ನ ಸ್ವತ್ತಾದ ಇಸ್ರಾಯೇಲಿಗೂ ಶುಭವಾಗಲಿ” ಎಂದು ಸೇನಾಧೀಶ್ವರನಾದ ಯೆಹೋವನು ಅವುಗಳನ್ನು ಆಶೀರ್ವದಿಸುವನು.
Yahwe wa majeshi atawabariki na kusema, '' wabarikiwe Wamisri, watu wangu; Wasiria, kazi ya mikono yangu; na Israeli urithi wangu.