< ಯೆಶಾಯನು 18 >
1 ೧ ಓಹೋ, ಕೂಷಿನ ನದಿಗಳ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡು,
Ole kwa nchi ya wezi wa mabawa, iliyoko mbali kupitia mito ya Ethiopia;
2 ೨ ರಾಯಭಾರಿಗಳನ್ನು ನೀರಿನ ಮೇಲೆ ಬೆಂಡಿನ ದೋಣಿಗಳಲ್ಲಿ ನದಿಯ ಮಾರ್ಗವಾಗಿ ಕಳುಹಿಸುವ ದೇಶ, ವೇಗವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನಯವಾದ ಚರ್ಮವುಳ್ಳವರೂ, ಸರ್ವ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರ ಬಳಿಗೆ ಹೋಗಿರಿ.
wanowatuma mabalozi wao kwa kupitia bahari, na vyombo vya majani juu ya maji. Nendeni enyi wajumbe wepesi, kwa watu warefu na laini waishio kwenye nchi, kwa watu wanogopa mbali na karibu, taifa lenye nguvu, wakanyagao watu, ambao mito imegawanya nchi yao.
3 ೩ ಸಮಸ್ತ ಭೂನಿವಾಸಿಗಳೇ, ಲೋಕದ ಸಕಲ ಜನರೇ, ಬೆಟ್ಟಗಳಲ್ಲಿ ಧ್ವಜವನ್ನು ಹಾರಿಸುವಾಗ ನೋಡಿರಿ, ತುತ್ತೂರಿಯನ್ನೂದುವಾಗ ಕೇಳಿರಿ!
Watu wote wakaao duniani nao wakaao katika nchi, pale ishara itakaponyanyuliwa juu ya milima, angalia; na sikilizeni mbiu itakapopulizwa.
4 ೪ ಯೆಹೋವನು ನನಗೆ ಹೇಳುವುದೇನೆಂದರೆ, “ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ, ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು” ಎಂಬುದೇ.
Yahwe asema hivi, ''nitachunguza kimyakimya kutoka nyumbani kwangu, kama kupika joto kwenye jua, na kama ukungu kwenye joto la mavuno.
5 ೫ ಕೊಯ್ಲಿನ ಕಾಲಕ್ಕೆ ಮೊದಲು ಮೊಗ್ಗು ಬಿಟ್ಟಾದ ಮೇಲೆ, ಹೂವಿನಿಂದ ಹೀಚು ದ್ರಾಕ್ಷಿ ದೋರೆ ಕಾಯಿಯಾಗುವಾಗ, ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು.
Kabla ya mavuno, pale kipindi cha maua kinapoisha, na maua yako tayari kuwa zabibu. Atakata matawi kwa kupogoa ndoano, na atakatiwa chini na kuchukua matawi yaliyotawanyika.
6 ೬ ಅವೆಲ್ಲವು ಬೆಟ್ಟದ ಪಕ್ಷಿಗಳಿಗೂ, ಭೂಮಿಯ ಕಾಡುಮೃಗಗಳಿಗೂ ಆಹಾರವಾಗಿ ಬಿದ್ದಿರುವವು. ಬೇಸಿಗೆಯಲ್ಲಿ ಪಕ್ಷಿಗಳಿಗೂ, ಹಿಮಕಾಲದಲ್ಲಿ ಕಾಡುಮೃಗಗಳಿಗೂ ಆಹಾರವಾಗುವುದು.
Wataachwa kwa pamoja maana ndege wa milimani na wanyama wa duniani. Ndege watatua kwao majira ya joto, na wanyama wote watakuwa kwao kipindi cha baridi.''
7 ೭ ಆ ಕಾಲದಲ್ಲಿ ಎತ್ತರವಾದವರೂ, ನುಣುಪಾದ ಚರ್ಮವುಳ್ಳವರೂ, ಸರ್ವದಾ ಭಯಂಕರರೂ, ಮಹಾ ಬಲದಿಂದ ಶತ್ರುಗಳನ್ನು ತುಳಿಯುವವರೂ, ನದಿಗಳಿಂದ ವಿಭಾಗವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರು ಸೇನಾಧೀಶ್ವರನಾದ ಯೆಹೋವನ ನಾಮ ಮಹತ್ವದ ಚೀಯೋನ್ ಪರ್ವತಕ್ಕೆ, ಆತನಿಗೋಸ್ಕರ ಕಾಣಿಕೆಯನ್ನು ತರುವರು.
Kwa mda huo kodi italetwa kwa Yahwe wa majeshi kwa watu warefu na laini, kwa watu wanohofia umbali na ukaribu, taifa imara na kukanyagwa chini, ambayo nchi yao imegawanjwa na mito, Kwa sehemu ya jina la Yahwe wa majeshi, mpaka mlima Sayuni.