< ಯೆಶಾಯನು 17 >
1 ೧ ದಮಸ್ಕದ ವಿಷಯವಾದ ದೈವೋಕ್ತಿ. “ಆಹಾ, ದಮಸ್ಕವು ಇನ್ನು ಪಟ್ಟಣವಾಗಿರದೇ ಹಾಳು ದಿಬ್ಬವಾಗಿರುವುದು.
Adehunu a ɛfa Damasko ho: “Hwɛ, Damasko renyɛ kuropɔn bio ɛbɛdane ayɛ mmubuiɛ sie.
2 ೨ ಆರೋಯೇರಿನ ಪಟ್ಟಣಗಳು ನಿರ್ಜನವಾಗಿ, ಮಂದೆಗಳಿಗೆ ಆಸರೆಯಾಗುವವು. ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ತಂಗುವವು.
Aroer nkuropɔn bɛdane nkurofon na wɔagya ama nnwankuo ama wɔadeda hɔ, a obiara renyi wɔn hu.
3 ೩ ಎಫ್ರಾಯೀಮಿಗೆ ರಕ್ಷಣೆಯಾಗಿರುವ ಕೋಟೆಯೂ, ದಮಸ್ಕವು ನಡೆಸುವ ರಾಜ್ಯಾಧಿಕಾರವೂ ಇಲ್ಲವಾಗುವವು. ಅರಾಮ್ಯರಲ್ಲಿ ಉಳಿದವರು ಇಸ್ರಾಯೇಲರ ಮಕ್ಕಳ ವೈಭವದಂತೆ ಇರುವರು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
Kuropɔn a wɔabɔ ho ban bɛyera wɔ Efraim, adehyetumi nso bɛfiri Damasko; Aram nkaeɛfoɔ bɛyɛ Israelfoɔ animuonyam,” Sɛdeɛ Asafo Awurade seɛ nie.
4 ೪ “ಆ ದಿನದಲ್ಲಿ, ಯಾಕೋಬಿನ ಮಾಂಸದ ಕೊಬ್ಬು ಕರಗಿ, ಅದರ ಮಹಿಮೆಯೂ ಕ್ಷೀಣವಾಗುವುದು.
“Ɛda no, Yakob animuonyam bɛpa; na ne mu sradeɛ bɛsa.
5 ೫ ಹೊಲದಲ್ಲಿ ಬೆಳೆ ಕೊಯ್ಯುವವನು ಪೈರುಗಳನ್ನು ಒಟ್ಟುಗೂಡಿಸಿ ಕೈಯಿಂದ ತೆನೆಗಳನ್ನು ಕತ್ತರಿಸುವ ಹಾಗಿರುವುದು. ಹೌದು, ರೆಫಾಯೀಮ್ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆ ಇರುವುದು.
Ɛbɛyɛ sɛdeɛ otwafoɔ twa aburoo a ɛgyina afuo so na ɔde ne nsa pempan sɛ ɛberɛ a obi redi mpɛpɛwa wɔ Refaim Bɔnhwa mu.
6 ೬ ಆದರೂ ಎಣ್ಣೆಯ ಮರದ ಕಾಯಿಗಳನ್ನು ಉದುರಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ, ಎರಡು ಮೂರು ಕಾಯಿಗಳು, ಫಲವತ್ತಾದ ಆ ಮರದ ಕೊಂಬೆಗಳಲ್ಲೆಲ್ಲಾ ನಾಲ್ಕೈದು ಕಾಯಿಗಳು ಉಳಿದಿರುವಂತೆ ಹಕ್ಕಲುಹಣ್ಣುಗಳು ಅದರಲ್ಲಿ ಉಳಿದಿರುವುದು” ಎಂದು ಇಸ್ರಾಯೇಲರ ದೇವರಾದ ಯೆಹೋವನು ನುಡಿಯುತ್ತಾನೆ.
Nanso mpɛpɛwa no mu bi bɛka, sɛdeɛ wɔwoso ngo dua a ɛyɛ no; ɛka aba no mmienu anaa mmiɛnsa wɔ atifi mman no so, ne ɛnan anaa enum wɔ mman a ɛsoɔ no so,” sɛdeɛ Awurade, Israel Onyankopɔn seɛ nie.
7 ೭ ಆ ದಿನದಲ್ಲಿ ಜನರು ತಮ್ಮ ಸೃಷ್ಟಿಕರ್ತನನ್ನೇ ದೃಷ್ಟಿಸುವರು ಮತ್ತು ಇಸ್ರಾಯೇಲಿನ ಸದಮಲಸ್ವಾಮಿಯ ಕಡೆಗೆ ಕಣ್ಣುಗಳನ್ನು ತಿರುಗಿಸುವರು.
Saa ɛda no, nnipa de wɔn ani bɛto wɔn Yɛfoɔ so na wɔadane wɔn ani ahwɛ Israel Ɔkronkronni no.
8 ೮ ತಮ್ಮ ಕೈಯಿಂದ ಮಾಡಿದ ಬಲಿಪೀಠಗಳನ್ನು ಲಕ್ಷಿಸದೆ, ತಮ್ಮ ಬೆರಳುಗಳಿಂದ ನಿರ್ಮಿಸಿದ ಅಶೇರವೆಂಬ ವಿಗ್ರಹಸ್ತಂಭಗಳನ್ನಾಗಲಿ, ಸೂರ್ಯಸ್ತಂಭಗಳನ್ನಾಗಲಿ ದೃಷ್ಟಿಸುವುದಿಲ್ಲ.
Wɔremfa wɔn ho nto afɔrebukyia a ɛyɛ wɔn nsa ano adwuma no so, na wɔbɛbu Asera afɔrebukyia ne nnuhwan afɔrebukyia a wɔde wɔn nsateaa ayɛ no animtia.
9 ೯ ಆ ದಿನದಲ್ಲಿ ದೇಶದ ಬಲವಾದ ಕೋಟೆಗಳು ಪೂರ್ವದಲ್ಲಿ ಇಸ್ರಾಯೇಲರ ಭಯದಿಂದ ನಿರ್ಜನವಾಗಿದ್ದ, ಅದು ಅಡವಿಯಲ್ಲಿಯೂ, ಬೆಟ್ಟಗಳ ತುದಿಯ ಮೇಲೂ ಕಾಣುವ ಹಾಳು ನಿವೇಶನಗಳಂತಿರುವವು, ಅಂತೂ ದೇಶವೆಲ್ಲಾ ಹಾಳಾಗಿರುವುದು.
Ɛda no, wɔn nkuropɔn a ɛwɔ banbɔ denden a Israelfoɔ enti wɔgyaa hɔ no bɛyɛ sɛ mmeammea a wɔagya ama nnɔtɔ ne wira. Ne nyinaa bɛda mpan.
10 ೧೦ ಏಕೆಂದರೆ ನೀನು ನಿನ್ನ ರಕ್ಷಕನಾದ ದೇವರನ್ನು ಮರೆತುಬಿಟ್ಟು, ನಿನ್ನ ಆಶ್ರಯಗಿರಿಯನ್ನು ಸ್ಮರಿಸಲಿಲ್ಲ. ಹೀಗಿರಲು ನೀನು ಇಷ್ಟವಾದ ದ್ರಾಕ್ಷಿಯ ಗಿಡಗಳನ್ನು ನೆಟ್ಟು, ನಿನ್ನ ದೇಶದಲ್ಲಿ ದೇಶಾಂತರದ ಸಸಿಗಳನ್ನು ನೆಟಿದ್ದಿ.
Mo werɛ afiri Onyankopɔn, mo Agyenkwa, na monkaee Ɔbotan no, mo aban no. Enti ɛwom sɛ mopɛ nnua papa na modua bobe a moatɔ afiri amanɔne.
11 ೧೧ ಬೀಜವನ್ನು ನೆಟ್ಟ ದಿನದಲ್ಲಿಯೇ ಬೇಲಿಕಟ್ಟಿ, ಮರುದಿನ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವಾಗಿರುತ್ತದೆ.
Ɛwom sɛ ɛda a moduaeɛ no, momaa ɛnyiniiɛ anɔpa a moduaeɛ no, na moma ɛguu nhwiren. Nanso otwa no renyɛ hwee sɛ yadeɛ ne ɔyea a wɔntumi nsa.
12 ೧೨ ಆಹಾ, ಸಮುದ್ರವು ಭೋರ್ಗರೆಯುವಂತೆ ಭೋರ್ಗರೆಯುವ ಬಹು ಜನಾಂಗಗಳ ಗದ್ದಲ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಗಳ ಘೋಷ!
Ao aman dodoɔ no nhurusoɔ, wɔhuruso te sɛ ɛpo a ɛrebɔ asorɔkye! Ao nnipa dodoɔ nworosoɔ, wɔworoso sɛ nsuo akɛseɛ!
13 ೧೩ ಹೌದು, ಮಹಾ ಜಲಪ್ರವಾಹಗಳು ಘೋಷಿಸುವಂತೆ ಜನಾಂಗಗಳು ಘೋಷಿಸುತ್ತಿವೆ. ಆದರೆ ಆತನು ಅವರನ್ನು ಗದರಿಸುವಾಗ ಅವರು ದೂರ ಓಡಿಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ, ಸುಂಟರ ಗಾಳಿಯಿಂದ ಸುತ್ತಾಡುವ ಧೂಳಿನಂತೆಯೂ ಅಟ್ಟಲ್ಪಡುವರು.
Ɛwom sɛ nnipa dodoɔ no woro so te sɛ nsuo a ɛresene mmirika so, nanso, Onyankopɔn bɛka wɔn anim ama wɔadwane akɔ akyirikyiri, te sɛ ntɛtɛ a mframa bɔ gu wɔ bepɔ so te sɛ anweatam so wira a mframa den rebɔ no.
14 ೧೪ ಇಗೋ, ಸಂಜೆಯಲ್ಲಿ ಹೆದರಿ ಉದಯದೊಳಗಾಗಿ ಇಲ್ಲವಾಗುವರು! ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.
Anwummerɛ, wɔbɔ yɛn hu awerɛfirie mu. Nanso ansa na adeɛ bɛkye no, na wɔkɔ dada! Wɔn a wɔfo yɛn nneɛma, ne wɔn a wɔbɔ yɛn korɔno kyɛfa nie.