< ಹೋಶೇಯನು 4 >
1 ೧ ಇಸ್ರಾಯೇಲರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದ ಹಾಕಿದ್ದಾನೆ. ಏಕೆಂದರೆ ಪ್ರೀತಿ, ಸತ್ಯ, ದೇವಜ್ಞಾನಗಳು ದೇಶದಲ್ಲಿಲ್ಲ.
Fanongo ki he folofola ʻa Sihova ʻe fānau ʻa ʻIsileli: He ʻoku ai ʻae fakakikihi ʻa Sihova mo e kakai ʻoe fonua ni, “Koeʻuhi ʻoku ʻikai ha moʻoni, pe ha ʻaloʻofa, pe ha ʻilo ki he ʻOtua ʻi he fonua.
2 ೨ ಸುಳ್ಳುಸಾಕ್ಷಿ, ನರಹತ್ಯ, ಕಳ್ಳತನ, ವ್ಯಭಿಚಾರ, ಇವುಗಳೇ ನಡೆಯುತ್ತವೆ; ದೊಂಬಿಗಳು ನಡೆಯುತ್ತಿವೆ, ದೇಶವೆಲ್ಲಾ ರಕ್ತಮಯವಾಗಿದೆ.
Ko e kape, mo e loi, mo e fakapō, mo e feʻauaki, ʻoku hā mai mei ai, pea ʻoku ala ʻae toto ki he toto.
3 ೩ ಹೀಗಿರಲು ದೇಶವು ನರಳುವುದು, ಅದರಲ್ಲಿ ವಾಸಿಸುವ ಸಕಲ ಭೂಜಂತುಗಳೂ ಮತ್ತು ಆಕಾಶದ ಪಕ್ಷಿಗಳೂ ಬಳಲಿ ಹೋಗುವವು; ಸಮುದ್ರದ ಮೀನುಗಳು ಸಹ ನಶಿಸಿ ಹೋಗುವವು.
Ko ia, ʻe tangi ʻae fonua, pea ko ia taki taha ʻoku nofo ai ʻe feinga, fakataha mo e fanga manu ʻoe vao, pea mo e fanga manupuna ʻoe ata; ʻio, naʻa mo e ika ʻoe tahi ʻe ʻave mei ai.
4 ೪ ಯಾರೂ ಪ್ರತಿಭಟಿಸದಿರಲಿ, ಯಾರೂ ಖಂಡಿಸದಿರಲಿ; ನಿಮ್ಮ ಜನರು ಯಾಜಕನೊಂದಿಗೆ ಹೋರಾಡುವವರಂತಿದ್ದಾರೆ.
“Kae ʻoua naʻa fakakikihi mo valoki ʻe ha tangata ha taha kehe: he ko hoʻo kakai ʻoku hangē ko kinautolu ʻoku fakakikihi mo e taulaʻeiki.
5 ೫ ಆಹಾ, ಯಾಜಕರೇ, ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.
Ko ia te ke hinga ʻi he [kei ]ʻaho; pea mo e palōfita, te ne tō foki mo koe ʻi he pō, pea te u fakaʻauha hoʻo faʻē.
6 ೬ ನನ್ನ ಜನರು ಜ್ಞಾನಹೀನರಾಗಿ ಹಾಳಾಗಿದ್ದಾರೆ; ನೀವು ಜ್ಞಾನವನ್ನು ತಳ್ಳಿಬಿಟ್ಟಿದ್ದರಿಂದ ಇನ್ನು ನನಗೆ ಯಾಜಕಸೇವೆ ಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು. ನೀವು ನಿಮ್ಮ ದೇವರ ಧರ್ಮೋಪದೇಶವನ್ನು ಮರೆತ ಕಾರಣ, ನಾನು ನಿಮ್ಮ ಸಂತತಿಯವರನ್ನು ಮರೆತು ಬಿಡುವೆನು.
ʻOku ʻauha hoku kakai ʻi he masiva ʻilo: koeʻuhi kuo ke liʻaki ʻae ʻilo, te u liʻaki foki koe, ke ʻoua naʻa ke taulaʻeiki kiate au; ko e meʻa ʻi hoʻo fakangaloʻi ʻae fono ʻa ho ʻOtua, te u fakangaloʻi foki hoʻo fānau.
7 ೭ ಅವರು ಹೆಚ್ಚಿದ ಹಾಗೆಲ್ಲಾ ನನ್ನ ವಿರುದ್ಧ ಹೆಚ್ಚೆಚ್ಚಾಗಿ ಪಾಪಮಾಡುತ್ತಾ ಬಂದರು; ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.
ʻI henau tupu naʻa nau fai angahala kiate au: ko ia te u liliu ʻenau ongoongolelei ko e mā.
8 ೮ ನನ್ನ ಜನರ ಪಾಪವೇ ಅವರಿಗೆ ಜೀವನ; ಅವರು ಅಧರ್ಮವನ್ನು ಆಶಿಸುತ್ತಾರೆ.
ʻOku nau kai hake ʻae angahala ʻa hoku kakai, pea ʻoku nau tukupau honau loto ki heʻenau angakovi.
9 ೯ ಜನರೂ, ಯಾಜಕರೂ ಒಂದೇ; ಅವರ ದುಷ್ಕಾರ್ಯಗಳಿಗೆ ಅವರನ್ನು ದಂಡಿಸುವೆನು, ಅವರ ದುಷ್ಕೃತ್ಯಗಳನ್ನು ಅವರಿಗೆ ಕಟ್ಟುವೆನು.
Pea ʻe pehē ʻi ai, hangē ko e kakai, ʻe pehē ʻae taulaʻeiki: pea te u tautea ʻakinautolu koeʻuhi ko honau ngaahi hala, pea totongi kiate kinautolu ʻenau ngaahi faianga.
10 ೧೦ ಅವರು ಉಣ್ಣುತ್ತಿದ್ದರೂ ತೃಪ್ತಿ ದೊರೆಯದು, ಹಾದರ ಮಾಡುತ್ತಿದ್ದರೂ ಪ್ರಜಾಭಿವೃದ್ಧಿಯಾಗದು; ಯೆಹೋವನ ಕಡೆಗೆ ಗಮನಿಸುವುದನ್ನು ಬಿಟ್ಟುಬಿಟ್ಟಿದ್ದಾರಷ್ಟೆ.
He te nau kai ka ʻe ʻikai mākona, te nau feʻauaki ka ʻe ʻikai tupu: koeʻuhi kuo nau tuku ʻenau tokanga kia Sihova.
11 ೧೧ ವ್ಯಭಿಚಾರ, ದ್ರಾಕ್ಷಾರಸ ಮತ್ತು ಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.
Ko e feʻauaki mo e uaine mo e uaine foʻou, ʻoku kavea ʻae loto.
12 ೧೨ ನನ್ನ ಜನರು ತಮ್ಮ ಮರದ ತುಂಡನ್ನು ಹಿಡಿದು ಕಣಿಕೇಳುತ್ತಾರೆ, ಅವರು ಮರದ ತುಂಡಿನಿಂದ ಪರಿಹಾರ ನಿರೀಕ್ಷಿಸುತ್ತಾರೆ. ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.
“ʻOku fehuʻi ʻe hoku kakai ki heʻenau fuʻu ʻakau, pea ko honau tokotoko ʻoku fakahā ia kiate kinautolu: he ko e laumālie ʻoe feʻauaki kuo ne fakahēʻi ʻakinautolu, pea kuo nau ʻalu ʻo feʻauaki mei honau ʻOtua.
13 ೧೩ ಪರ್ವತಾಗ್ರಗಳಲ್ಲಿ ಯಜ್ಞ ಮಾಡುತ್ತಾರೆ, ಗುಡ್ಡಗಳ ಮೇಲೆ ಧೂಪ ಹಾಕುತ್ತಾರೆ. ಅಲ್ಲೋನ್, ಲಿಬ್ನೆ, ಏಲಾ ಮರಗಳ ನೆರಳು ದಟ್ಟವಾಗಿರುವುದರಿಂದ ಅವುಗಳ ಕೆಳಗೆ ಇವುಗಳನ್ನು ನಡೆಸುತ್ತಾರೆ. ಹೀಗಿರಲು ನನ್ನ ಜನರೇ, ನಿಮ್ಮ ಕುಮಾರಿಯರು ವ್ಯಭಿಚಾರಿಗಳಾಗಿ ನಡೆಯುವುದೂ, ನಿಮ್ಮ ವಧುಗಳು ವ್ಯಭಿಚಾರ ಮಾಡುವುದೂ ಏನಾಶ್ಚರ್ಯ?
ʻOku nau feilaulau ʻi he funga ʻoe ngaahi moʻunga, pea tutu ʻae ʻakau namu lelei ʻi he ngaahi māʻolunga, ʻi he lalo ʻoke mo e popila mo e elemi, koeʻuhi ʻoku lelei hono malu ʻo ia: ko ia ʻe feʻauaki ho ngaahi ʻofefine, pea ʻe tono tangata homou ngaahi uaifi.
14 ೧೪ ವ್ಯಭಿಚಾರಿಣಿಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರ ಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವುದಿಲ್ಲ; ನೀವೇ ವ್ಯಭಿಚಾರಿಗಳನ್ನು ಕರೆದುಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.
ʻIkai te u tautea homou ngaahi ʻofefine ʻi heʻenau feʻauaki, mo homou ngaahi uaifi ʻi heʻenau tono tangata? He ʻoku nau kau taha mo e kau fefine feʻauaki, pea ʻoku nau feilaulau mo e kau feʻauaki: ko ia, ʻE hinga ki lalo ʻae kakai ʻoku ʻikai ʻi ai ha poto.
15 ೧೫ ಇಸ್ರಾಯೇಲೇ, ನೀನು ವ್ಯಭಿಚಾರಿಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಸೇರಬೇಡಿರಿ, ಬೇತ್ ಅವೆನಿಗೆ ಯಾತ್ರೆ ಹೋಗಬೇಡಿರಿ, “ಯೆಹೋವನ ಜೀವದಾಣೆ” ಎಂದು ಶಪಥ ಮಾಡಬಾರದು.
“Neongo ʻe ʻIsileli ʻa hoʻo fai ʻae feʻauaki, kaeʻoua naʻa hala ai mo Siuta; pea ʻoua naʻa ke haʻu ki Kilikali, pe ʻalu hake ki Peteaveni, pe fuakava, ʻo pehē, ‘ʻOku moʻui ʻa Sihova.’
16 ೧೬ ಇಸ್ರಾಯೇಲು ಮೊಂಡ ಹಸುವಿನಂತೆ ಮೊಂಡುತನದಿಂದ ನಡೆದಿದೆ; ಈಗ ಯೆಹೋವನು ಅದನ್ನು ಕುರಿಯಂತೆ ವಿಶಾಲ ಸ್ಥಳದಲ್ಲಿ ಮೇಯಿಸುವನೋ?
He ʻoku fakaholomui ʻa ʻIsileli, ʻo hangē ko e pulu mui ʻoku fakaholomui: ko eni, ʻe fafanga ʻakinautolu ʻe Sihova, ʻo hangē ko e lami ʻi he potu ʻataʻatā.
17 ೧೭ ಎಫ್ರಾಯೀಮು ವಿಗ್ರಹಗಳಲ್ಲಿ ಬೆರತುಹೋಗಿದೆ; ಅದನ್ನು ಬಿಟ್ಟುಬಿಡಿರಿ.
Kuo pikitai ʻa ʻIfalemi ki heʻene ngaahi tamapua: tuku ai pe ia.
18 ೧೮ ಮದ್ಯಪಾನ ಮುಗಿದ ಕೂಡಲೆ ವ್ಯಭಿಚಾರದಲ್ಲಿ ತೊಡಗುತ್ತಾರೆ; ದೇಶಪಾಲಕರು ಅವಮಾನದಲ್ಲಿ ಅತ್ಯಾಶೆಪಡುತ್ತಾರೆ.
Kuo nau muimui ki he inu kona: kuo nau fai maʻuaipē ʻae feʻauaki: ko honau kau pule ʻoku manako ki he fakamā.
19 ೧೯ ಗಾಳಿಯು ಅವರನ್ನು ತನ್ನ ರೆಕ್ಕೆಗಳಲ್ಲಿ ಸುತ್ತಿಕೊಂಡು ಹೋಗುವುದು; ತಾವು ಮಾಡುತ್ತಿದ್ದ ವಿಗ್ರಹದ ಯಜ್ಞಗಳಿಗೆ ನಾಚಿಕೆಪಡುವರು.
Kuo tākai hake ia ʻe he matangi ʻi hono kapakau, pea te nau mā ʻi heʻenau ngaahi feilaulau.