< ಹೋಶೇಯನು 3 >
1 ೧ ಯೆಹೋವನು ನನಗೆ, “ನೀನು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು, ದೀಪದ್ರಾಕ್ಷೆಯ ಅಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವನು ಪ್ರೀತಿಸುವ ಪ್ರಕಾರ, ನೀನು ಜಾರನಿಗೆ ಪ್ರಿಯಳೂ, ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸುತ್ತಾ ಬಾ” ಎಂದು ಅಪ್ಪಣೆ ಕೊಟ್ಟನು.
Le hoe t’Iehovà amako; Akia irehe: Ikokò ty rakemba ikokoan-tsakeza’e, ie toe karapilo, manahake ty fikokoa’ Iehovà o ana’ Israeleo, ie mitolik’ aman-drahare ila’e vaho mpitea mofom-balòboke.
2 ೨ ಆಗ ನಾನು ಹದಿನೈದು ಬೆಳ್ಳಿ ನಾಣ್ಯಗಳನ್ನೂ ಮತ್ತು ಒಂದುವರೆ ಹೋಮೆರ್ ಜವೆಗೋದಿಯನ್ನೂ ಕೊಟ್ಟು ಅವಳನ್ನು ಕೊಂಡುಕೊಂಡೆನು.
Aa le viniliko ho ahiko re ami’ty volafoty folo-lim’amby naho ampemba omere raike naho tampa’e;
3 ೩ ನಾನು ಅವಳಿಗೆ, “ನನಗಾಗಿ ಬಹು ದಿನಗಳು ತಾಳಿಕೊಂಡಿರು; ವ್ಯಭಿಚಾರ ಮಾಡಬೇಡ, ಯಾರೊಂದಿಗೂ ವ್ಯಭಿಚಾರಮಾಡಬೇಡ. ನಾನು ಸಹ ನಿನ್ನವನೇ, ನಿನ್ನ ಸಂಗಡ ವಾಸಿಸುವೆನು” ಎಂದು ಹೇಳಿದೆನು.
le hoe iraho ama’e, Himoneñe amako andro maro irehe; fa tsy hihisa ankarapiloañe ka, naho tsy hiharo amy t’indaty ila’e; le hoe izay ka izaho ama’o.
4 ೪ ಇದರಂತೆ ರಾಜಮುಖಂಡ, ಯಜ್ಞ, ಸ್ತಂಭ, ಏಫೋದು, ವಿಗ್ರಹಗಳಿಲ್ಲದೆ ಇಸ್ರಾಯೇಲರು ಬಹಳ ದಿನಗಳು ತಾಳಿಕೊಂಡಿರುವರು.
Amy te himoneñe andro maro tsy amam-panjàka tsy aman-Talè, tsy aman-tsòroñe, tsy aman-tsamposampo, tsy aman’efode vaho tsy aman-terafeme o nte-Israeleo.
5 ೫ ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ಮತ್ತು ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು. ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ, ಆತನ ದಯೆಯನ್ನೂ ಭಯಭಕ್ತಿಯಿಂದ ಪಡೆಯುವರು.
Ie modo izay, le himpoly o ana’ Israeleo, hipay Iehovà Andrianañahare’ iareo, naho i Davide mpanjaka’ iareo; vaho hañeveñe am’ Iehovà naho i fatariha’ey amo andro sehanga’eo.