< ಹೋಶೇಯನು 14 >
1 ೧ ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ.
Vrati se, Izraele, Jahvi Bogu svome, jer zbog svojeg si bezakonja posrnuo.
2 ೨ ಪಶ್ಚಾತ್ತಾಪದ ಮಾತುಗಳಿಂದ ಯೆಹೋವನ ಬಳಿಗೆ ಹಿಂದಿರುಗಿ ಬಂದು ಆತನಿಗೆ, “ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ, ನಮ್ಮಲ್ಲಿನ ಒಳ್ಳೆಯದನ್ನು ಅಂಗೀಕರಿಸು; ನಮ್ಮ ತುಟಿಗಳ ಫಲಗಳನ್ನು ಅರ್ಪಿಸುವೆವು.
Uzmite sa sobom riječi i Jahvi se vratite. Recite mu: “Skini sa nas bezakonje i dobrohotno primi da ti prinesemo plod svojih usana.
3 ೩ ಅಶ್ಶೂರವು ನಮ್ಮನ್ನು ರಕ್ಷಿಸುವುದೆಂದು ನಂಬುವುದಿಲ್ಲ, ಐಗುಪ್ತದ ಕುದುರೆಗಳನ್ನು ಹತ್ತುವುದಿಲ್ಲ, ನಮ್ಮ ಕೈಕೆಲಸದ ಬೊಂಬೆಗಳಿಗೆ, ‘ನೀವು ನಮ್ಮ ದೇವರುಗಳು’ ಎಂದು ಇನ್ನು ಹೇಳುವುದಿಲ್ಲ; ನೀನೇ ದಿಕ್ಕಿಲ್ಲದ ಈ ಅನಾಥರನ್ನು ಕರುಣಿಸುವವನು” ಎಂಬುದಾಗಿ ಅರಿಕೆಮಾಡಿಕೊಳ್ಳಿರಿ.
Asirac nas neće izbavljati i nećemo konje više jahati niti ćemo djelu ruku svojih govoriti: 'Bože naš!' - jer u tebe sirota milost nalazi.”
4 ೪ ನಾನು ನನ್ನ ಜನರ ಭ್ರಷ್ಟತ್ವವನ್ನು ಪರಿಹರಿಸಿ ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು; ನನ್ನ ಕೋಪವು ಅವರಿಂದ ತೊಲಗಿಹೋಯಿತು.
Iscijelit ću ih od njihova otpada, od svega ću ih srca ljubiti; jer gnjev se moj odvratio od njih.
5 ೫ ನಾನು ಇಸ್ರಾಯೇಲಿಗೆ ಇಬ್ಬನಿಯಂತಾಗುವೆನು; ಅದು ತಾವರೆಯಂತೆ ಅರಳುವುದು; ಲೆಬನೋನಿನ ದೇವದಾರು ಮರಗಳ ಹಾಗೆ ಬೇರು ಬಿಟ್ಟುಕೊಳ್ಳುವುದು.
Bit ću kao rosa Izraelu; kao ljiljan on će cvasti, pustit će korijen poput jablana,
6 ೬ ಅದರ ರೆಂಬೆಗಳು ಹರಡುವವು, ಅದರ ಅಂದವು ಒಲೀವ್ ಮರದಂತೆ ಕಂಗೊಳಿಸುವುದು, ಅದರ ಪರಿಮಳವು ಲೆಬನೋನಿನ ಹಾಗೆ ಮನೋಹರವಾಗಿರುವುದು.
nadaleko pružat će izdanke. Ljepota će mu biti kao u masline, miris poput libanonskog.
7 ೭ ಅದರ ನೆರಳನ್ನು ಆಶ್ರಯಿಸಿರುವವರು ಹಿಂದಿರುಗಿ ಬೆಳೆಯನ್ನು ಬೆಳೆದು ದ್ರಾಕ್ಷಿಯಂತೆ ಫಲಪ್ರದರಾಗಿ ಫಲ ಕೊಡುವರು; ಅದರ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಸ್ವಾರಸ್ಯವಾಗಿರುವುದು.
Opet će u mojoj sjeni boraviti, uzgajat će svoju pšenicu, vinograde gajit' što će steći ime vina helbonskog.
8 ೮ ಎಫ್ರಾಯೀಮು, “ವಿಗ್ರಹಗಳ ಗೊಡವೆ ನನಗೆ ಇನ್ನೇಕೆ?” ಎಂದು ಅವುಗಳನ್ನು ತ್ಯಜಿಸುವುದು; ನಾನು ಅದಕ್ಕೆ ಒಲಿದು ಕಟಾಕ್ಷಿಸುವೆನು; ನಾನು ಸೊಂಪಾದ ತುರಾಯಿ ಮರದಂತಿದ್ದೇನೆ; ನನ್ನಿಂದಲೇ ನೀನು ಫಲಿಸುವಿ.
Efrajime, što ti imaš još s kumirima? Ja sam ga uslišao i pogledao. Ja sam poput zelena čempresa: po meni si rodan plodovima.
9 ೯ ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು. ಯೆಹೋವನ ಮಾರ್ಗಗಳು ಸತ್ಯವಾದವುಗಳು; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಅವುಗಳನ್ನು ಬಿಟ್ಟು ಎಡವಿ ಬೀಳುವರು.
Tko je mudar neka shvati ovo, i čovjek razuman neka spozna! Jer pravi su putovi Jahvini: pravednici hode po njima, grešnici na njima posrću.