< ಇಬ್ರಿಯರಿಗೆ ಬರೆದ ಪತ್ರಿಕೆ 9 >

1 ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ ದೇವಾಲಯವಿತ್ತು.
ស ប្រថមោ និយម អារាធនាយា វិវិធរីតិភិរៃហិកបវិត្រស្ថានេន ច វិឝិឞ្ដ អាសីត៑។
2 ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಮತ್ತು ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು.
យតោ ទូឞ្យមេកំ និរមីយត តស្យ ប្រថមកោឞ្ឋស្យ នាម បវិត្រស្ថានមិត្យាសីត៑ តត្រ ទីបវ្ឫក្ឞោ ភោជនាសនំ ទឝ៌នីយបូបានាំ ឝ្រេណី ចាសីត៑។
3 ಮತ್ತು ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು.
តត្បឝ្ចាទ៑ ទ្វិតីយាយាស្តិរឞ្ករិណ្យា អភ្យន្តរេ ៜតិបវិត្រស្ថានមិតិនាមកំ កោឞ្ឋមាសីត៑,
4 ಅದರಲ್ಲಿ ಚಿನ್ನದ ಧೂಪಾರತಿಯು ಮತ್ತು ಚಿನ್ನದ ತಗಡಿನಿಂದ ಹೊದಿಸಿದ ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ ಚಿನ್ನದ ಪಾತ್ರೆಯೂ, ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು.
តត្រ ច សុវណ៌មយោ ធូបាធារះ បរិតះ សុវណ៌មណ្ឌិតា និយមមញ្ជូឞា ចាសីត៑ តន្មធ្យេ មាន្នាយាះ សុវណ៌ឃដោ ហារោណស្យ មញ្ជរិតទណ្ឌស្តក្ឞិតៅ និយមប្រស្តរៅ,
5 ಅದರ ಮೇಲೆ ಕೃಪಾಸನವನ್ನು ಮುಚ್ಚುವ ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ.
តទុបរិ ច ករុណាសនេ ឆាយាការិណៅ តេជោមយៅ កិរូពាវាស្តាម៑, ឯតេឞាំ វិឝេឞវ្ឫត្តាន្តកថនាយ នាយំ សមយះ។
6 ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು.
ឯតេឞ្វីទ្ឫក៑ និម៌្មិតេឞុ យាជកា ឦឝ្វរសេវាម៑ អនុតិឞ្ឋនតោ ទូឞ្យស្យ ប្រថមកោឞ្ឋំ និត្យំ ប្រវិឝន្តិ។
7 ಆದರೆ ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು.
កិន្តុ ទ្វិតីយំ កោឞ្ឋំ ប្រតិវឞ៌ម៑ ឯកក្ឫត្វ ឯកាកិនា មហាយាជកេន ប្រវិឝ្យតេ កិន្ត្វាត្មនិមិត្តំ លោកានាម៑ អជ្ញានក្ឫតបាបានាញ្ច និមិត្តម៑ ឧត្សជ៌្ជនីយំ រុធិរម៑ អនាទាយ តេន ន ប្រវិឝ្យតេ។
8 ಈ ಗುಡಾರದ ಮೊದಲನೆಯ ಭಾಗವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.
ឥត្យនេន បវិត្រ អាត្មា យត៑ ជ្ញាបយតិ តទិទំ តត៑ ប្រថមំ ទូឞ្យំ យាវត៑ តិឞ្ឋតិ តាវត៑ មហាបវិត្រស្ថានគាមី បន្ថា អប្រកាឝិតស្តិឞ្ឋតិ។
9 ಇದು ಈಗಿನ ಕಾಲಕ್ಕೆ ಒಂದು ನಿದರ್ಶನವಾಗಿದೆ. ಅದೇನೆಂದರೆ ಅದರ ಕ್ರಮದ ಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳೂ ಮತ್ತು ಯಜ್ಞಗಳೂ ಆರಾಧನೆ ಮಾಡುವವರ ಮನಸ್ಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಆಗಲಿಲ್ಲ.
តច្ច ទូឞ្យំ វត៌្តមានសមយស្យ ទ្ឫឞ្ដាន្តះ, យតោ ហេតោះ សាម្ប្រតំ សំឝោធនកាលំ យាវទ៑ យន្និរូបិតំ តទនុសារាត៑ សេវាការិណោ មានសិកសិទ្ធិករណេៜសមត៌្ហាភិះ
10 ೧೦ ಅವು ಅನ್ನಪಾನಗಳೂ ಮತ್ತು ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.
កេវលំ ខាទ្យបេយេឞុ វិវិធមជ្ជនេឞុ ច ឝារីរិករីតិភិ រ្យុក្តានិ នៃវេទ្យានិ ពលិទានានិ ច ភវន្តិ។
11 ೧೧ ಕ್ರಿಸ್ತನಾದರೋ ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ,
អបរំ ភាវិមង្គលានាំ មហាយាជកះ ខ្រីឞ្ដ ឧបស្ថាយាហស្តនិម៌្មិតេនាត៌្ហត ឯតត្ស្ឫឞ្ដេ រ្ពហិព៌្ហូតេន ឝ្រេឞ្ឋេន សិទ្ធេន ច ទូឞ្យេណ គត្វា
12 ೧೨ ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ ಸ್ವಂತ ರಕ್ತದ ಮೂಲಕ ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ ನಿತ್ಯ ವಿಮೋಚನೆಯನ್ನು ಸಾಧಿಸಿದನು. (aiōnios g166)
ឆាគានាំ គោវត្សានាំ វា រុធិរម៑ អនាទាយ ស្វីយរុធិរម៑ អាទាយៃកក្ឫត្វ ឯវ មហាបវិត្រស្ថានំ ប្រវិឝ្យានន្តកាលិកាំ មុក្តិំ ប្រាប្តវាន៑។ (aiōnios g166)
13 ೧೩ ಹೋತ ಹೋರಿಗಳ ರಕ್ತವೂ ಅಶುದ್ಧರಾದವರ ಮೇಲೆ ಚಿಮುಕಿಸುವ ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ,
វ្ឫឞឆាគានាំ រុធិរេណ គវីភស្មនះ ប្រក្ឞេបេណ ច យទ្យឝុចិលោកាះ ឝារីរិឝុចិត្វាយ បូយន្តេ,
14 ೧೪ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, ನಮ್ಮನ್ನು ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುತ್ತದಲ್ಲವೇ? (aiōnios g166)
តហ៌ិ កិំ មន្យធ្វេ យះ សទាតនេនាត្មនា និឞ្កលង្កពលិមិវ ស្វមេវេឝ្វរាយ ទត្តវាន៑, តស្យ ខ្រីឞ្ដស្យ រុធិរេណ យុឞ្មាកំ មនាំស្យមរេឝ្វរស្យ សេវាយៃ កិំ ម្ឫត្យុជនកេភ្យះ កម៌្មភ្យោ ន បវិត្រីការិឞ្យន្តេ? (aiōnios g166)
15 ೧೫ ದೇವರಿಂದ ಕರೆಯಲ್ಪಟ್ಟ ಜನರು, ದೇವರ ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು. (aiōnios g166)
ស នូតននិយមស្យ មធ្យស្ថោៜភវត៑ តស្យាភិប្រាយោៜយំ យត៑ ប្រថមនិយមលង្ឃនរូបបាបេភ្យោ ម្ឫត្យុនា មុក្តៅ ជាតាយាម៑ អាហូតលោកា អនន្តកាលីយសម្បទះ ប្រតិជ្ញាផលំ លភេរន៑។ (aiōnios g166)
16 ೧೬ ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ.
យត្រ និយមោ ភវតិ តត្រ និយមសាធកស្យ ពលេ រ្ម្ឫត្យុនា ភវិតវ្យំ។
17 ೧೭ ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ.
យតោ ហតេន ពលិនា និយមះ ស្ថិរីភវតិ កិន្តុ និយមសាធកោ ពលិ រ្យាវត៑ ជីវតិ តាវត៑ និយមោ និរត៌្ហកស្តិឞ្ឋតិ។
18 ೧೮ ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ.
តស្មាត៑ ស បូវ៌្វនិយមោៜបិ រុធិរបាតំ វិនា ន សាធិតះ។
19 ೧೯ ಮೋಶೆಯು ದೇವರ ಪ್ರತಿಯೊಂದು ಆಜ್ಞೆಯನ್ನು ಧರ್ಮಶಾಸ್ತ್ರದ ಪ್ರಕಾರ ಜನರೆಲ್ಲರಿಗೆ ತಿಳಿಸಿದ ಮೇಲೆ, ಅವನು ನೀರು, ಕೆಂಪು ಉಣ್ಣೆ, ಹಿಸ್ಸೋಪುಕಡ್ಡಿ ಇವುಗಳೊಂದಿಗೆ ಹೋರಿಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿದನು.
ផលតះ សវ៌្វលោកាន៑ ប្រតិ វ្យវស្ថានុសារេណ សវ៌្វា អាជ្ញាះ កថយិត្វា មូសា ជលេន សិន្ទូរវណ៌លោម្នា ឯឞោវត្ឫណេន ច សាទ៌្ធំ គោវត្សានាំ ឆាគានាញ្ច រុធិរំ គ្ឫហីត្វា គ្រន្ថេ សវ៌្វលោកេឞុ ច ប្រក្ឞិប្យ ពភាឞេ,
20 ೨೦ “ಇದು ದೇವರು ನಿಮಗೋಸ್ಕರ ಆಜ್ಞಾಪಿಸಿದ ಒಡಂಬಡಿಕೆಯ ರಕ್ತವಾಗಿದೆ” ಎಂದು ಹೇಳಿದನು.
យុឞ្មាន៑ អធីឝ្វរោ យំ និយមំ និរូបិតវាន៑ តស្យ រុធិរមេតត៑។
21 ೨೧ ಇದಲ್ಲದೆ ಗುಡಾರದ ಮೇಲೆಯೂ ದೇವರ ಸೇವೆಗೆ ಬೇಕಾಗಿರುವ ಎಲ್ಲಾ ಪಾತ್ರೆಗಳ ಮೇಲೆಯೂ ಅದೇ ರೀತಿಯಾಗಿ ರಕ್ತವನ್ನು ಪ್ರೋಕ್ಷಿಸಿದನು.
តទ្វត៑ ស ទូឞ្យេៜបិ សេវាត៌្ហកេឞុ សវ៌្វបាត្រេឞុ ច រុធិរំ ប្រក្ឞិប្តវាន៑។
22 ೨೨ ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. ರಕ್ತಧಾರೆ ಇಲ್ಲದೆ ಪಾಪ ಕ್ಷಮಾಪಣೆಯು ಉಂಟಾಗುವುದಿಲ್ಲ.
អបរំ វ្យវស្ថានុសារេណ ប្រាយឝះ សវ៌្វាណិ រុធិរេណ បរិឞ្ក្រិយន្តេ រុធិរបាតំ វិនា បាបមោចនំ ន ភវតិ ច។
23 ೨೩ ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ ಛಾಯೆಯಂತಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಪರಲೋಕದವುಗಳನ್ನು ಶುದ್ಧೀಕರಿಸಲು ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯ.
អបរំ យានិ ស្វគ៌ីយវស្តូនាំ ទ្ឫឞ្ដាន្តាស្តេឞាម៑ ឯតៃះ បាវនម៑ អាវឝ្យកម៑ អាសីត៑ កិន្តុ សាក្ឞាត៑ ស្វគ៌ីយវស្តូនាម៑ ឯតេភ្យះ ឝ្រេឞ្ឋេ រ្ពលិទានៃះ បាវនមាវឝ្យកំ។
24 ೨೪ ಯಾಕೆಂದರೆ ಕ್ರಿಸ್ತನು ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು.
យតះ ខ្រីឞ្ដះ សត្យបវិត្រស្ថានស្យ ទ្ឫឞ្ដាន្តរូបំ ហស្តក្ឫតំ បវិត្រស្ថានំ ន ប្រវិឞ្ដវាន៑ កិន្ត្វស្មន្និមិត្តម៑ ឥទានីម៑ ឦឝ្វរស្យ សាក្ឞាទ៑ ឧបស្ថាតុំ ស្វគ៌មេវ ប្រវិឞ្ដះ។
25 ೨೫ ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ.
យថា ច មហាយាជកះ ប្រតិវឞ៌ំ បរឝោណិតមាទាយ មហាបវិត្រស្ថានំ ប្រវិឝតិ តថា ខ្រីឞ្ដេន បុនះ បុនរាត្មោត្សគ៌ោ ន កត៌្តវ្យះ,
26 ೨೬ ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಒಂದೇ ಸಾರಿ, ಯುಗಗಳ ಸಮಾಪ್ತಿಯವರೆಗೂ, ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು. (aiōn g165)
កត៌្តវ្យេ សតិ ជគតះ ស្ឫឞ្ដិកាលមារភ្យ ពហុវារំ តស្យ ម្ឫត្យុភោគ អាវឝ្យកោៜភវត៑; កិន្ត្វិទានីំ ស អាត្មោត្សគ៌េណ បាបនាឝាត៌្ហម៑ ឯកក្ឫត្វោ ជគតះ ឝេឞកាលេ ប្រចកាឝេ។ (aiōn g165)
27 ೨೭ ಒಂದೇ ಸಾರಿ ಸಾಯುವುದೂ ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ,
អបរំ យថា មានុឞស្យៃកក្ឫត្វោ មរណំ តត៑ បឝ្ចាទ៑ វិចារោ និរូបិតោៜស្តិ,
28 ೨೮ ಹಾಗೆಯೇ ಕ್ರಿಸ್ತನು ಸಹ ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.
តទ្វត៑ ខ្រីឞ្ដោៜបិ ពហូនាំ បាបវហនាត៌្ហំ ពលិរូបេណៃកក្ឫត្វ ឧត្សស្ឫជេ, អបរំ ទ្វិតីយវារំ បាបាទ៑ ភិន្នះ សន៑ យេ តំ ប្រតីក្ឞន្តេ តេឞាំ បរិត្រាណាត៌្ហំ ទឝ៌នំ ទាស្យតិ។

< ಇಬ್ರಿಯರಿಗೆ ಬರೆದ ಪತ್ರಿಕೆ 9 >