< ಇಬ್ರಿಯರಿಗೆ ಬರೆದ ಪತ್ರಿಕೆ 7 >
1 ೧ ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು.
It was this Melchizedek, king of Salem and priest of the Most High God, who met Abraham returning from the slaughter of the kings, and gave him his blessing;
2 ೨ ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. “ಮೆಲ್ಕಿಜೆದೇಕ್”, ಎಂಬ ಹೆಸರಿಗೆ ಮೊದಲು “ನೀತಿಯ ರಾಜ” ಎಂದೂ, ಅನಂತರ “ಸಾಲೇಮಿನ ರಾಜ” ಎಂದರೆ “ಸಮಾಧಾನದ ರಾಜ” ಎಂದೂ ಅರ್ಥ.
and it was to him that Abraham allotted a tithe of all the spoil. The meaning of his name is ‘king of righteousness,’ and besides that, he was also king of Salem, which means ‘king of peace.’
3 ೩ ಅವನಿಗೆ ತಂದೆಯಿಲ್ಲ, ತಾಯಿಯಿಲ್ಲ, ವಂಶಾವಳಿಯೂ ಇಲ್ಲ. ಹುಟ್ಟು, ಸಾವು ಇಲ್ಲ. ಆತನು ದೇವರ ಕುಮಾರನಿಗೆ ಹೋಲಿಕೆಯಾಗಿದು, ನಿರಂತರವಾಗಿ ಯಾಜಕನಾಗಿರುವನು.
There is no record of his father, or mother, or lineage, nor again of any beginning of his days, or end of his life. In this he resembles the Son of God, and stands before us as a priest whose priesthood is continuous.
4 ೪ ಈತನು ಎಷ್ಟು ಮಹಾನ್ ಆಗಿದ್ದನೆಂದು ಯೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು ತಾನು ಯುದ್ಧದಲ್ಲಿ ಗೆದ್ದು ತಂದ ಶ್ರೇಷ್ಠ ವಸ್ತುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಅವನಿಗೆ ಕೊಟ್ಟನಲ್ಲಾ.
Consider, then the importance of this Melchizedek, to whom even the patriarch Abraham himself gave a tithe of the choicest spoils.
5 ೫ ನಿಜವಾಗಿಯೂ ಲೇವಿಯ ಕುಲದವರಲ್ಲಿ ಯಾಜಕೋದ್ಯೋಗವನ್ನು ಹೊಂದುವವರು, ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವುದಕ್ಕೆ ಧರ್ಮಶಾಸ್ತ್ರದಲ್ಲಿ ಅಪ್ಪಣೆಯಿದೆ.
Those descendants of Levi, who are from time to time appointed to the priesthood, are directed to collect tithes from the people in accordance with the Law – that is from their own kindred, although they also are descended from Abraham.
6 ೬ ಆದರೆ ಮೆಲ್ಕಿಜೆದೇಕನು ಲೇವಿಯ ವಂಶಾವಳಿಗೆ ಸೇರಿದವನಲ್ಲ, ಆದರೂ ಅಬ್ರಹಾಮನಿಂದ ದಶಮ ಭಾಗಗಳನ್ನು ತೆಗೆದುಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನನ್ನು ಆಶೀರ್ವದಿಸಿದನು.
But Melchizedek, although not of this lineage, received tithes from Abraham, and gave his blessing to the man who had God’s promises.
7 ೭ ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ಹೆಚ್ಚಿನವನು ಎಂಬುದನ್ನು ನಿರಾಕರಿಸುವಂತಿಲ್ಲ.
Now no one can dispute that it is the superior who blesses the inferior.
8 ೮ ದಶಮ ಭಾಗವನ್ನು ತೆಗೆದುಕೊಳ್ಳುವ ಯಾಜಕರು ಒಂದಲ್ಲಾ ಒಂದು ದಿನ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ದಶಮ ಭಾಗವನ್ನು ತೆಗೆದುಕೊಂಡಾತನು ಚಿರಂಜೀವಿಯಾಗಿರುವನು.
In the one case the tithes are received by people who are mortal; in the other case by one about whom there is the statement that his life still continues.
9 ೯ ಮತ್ತು ದಶಮ ಭಾಗಗಳನ್ನು ತೆಗೆದುಕೊಳ್ಳುವ ಲೇವಿಯು ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿತು.
Moreover, in a sense, even Levi, who is the receiver of the tithes, has, through Abraham, paid tithes;
10 ೧೦ ಹೇಗೆಂದರೆ, ಮೆಲ್ಕಿಜೆದೇಕನು ಲೇವಿಯ ಮೂಲಪುರುಷನಾದ ಅಬ್ರಹಾಮನನ್ನು ಸಂಧಿಸಿದಾಗ ಲೇವಿಯು ತತ್ವರೂಪವಾಗಿ ಅಬ್ರಹಾಮನ ದೇಹದಲ್ಲಿದ್ದನು.
for Levi was still in the body of his ancestor when Melchizedek met Abraham.
11 ೧೧ ಇಸ್ರಾಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿದ್ದಾದರೆ, ಆರೋನನ ಪರಂಪರೆಗೆ ಸೇರದ, ಮೆಲ್ಕಿಜೆದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಬರುವುದರ ಅಗತ್ಯವೇನಿತ್ತು?
If, then, perfection had been attainable through the Levitical priesthood – and it was under this priesthood that the people received the Law – why was it still necessary that a priest of a different order should appear, a priest of the order of Melchizedek and not of the order of Aaron?
12 ೧೨ ಯಾಜಕತ್ವವು ಬದಲಾಗುವುದಾದರೆ ಧರ್ಮಶಾಸ್ತ್ರವೂ ಸಹ ಬದಲಾಗುವುದು ಅಗತ್ಯವಾಗಿದೆ.
With the change of the priesthood a change of the Law became a necessity.
13 ೧೩ ಆದರೆ ಇವು ಯಾರ ಕುರಿತಾಗಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಒಬ್ಬನೂ ಯಜ್ಞವೇದಿಯ ಬಳಿ ಸೇವೆಮಾಡಿದ್ದಿಲ್ಲ.
And he of whom all this is said belonged to quite a different tribe, no member of which has ever served at the altar.
14 ೧೪ ನಮ್ಮ ಕರ್ತನು ಯೆಹೂದ ಗೋತ್ರದಲ್ಲಿ ಜನಿಸಿಬಂದವನೆಂಬುದು ಸ್ಪಷ್ಟವಾಗಿದೆ. ಈ ಗೋತ್ರಕ್ಕೆ ಸಂಬಂಧಿಸಿದಂತೆ ಮೋಶೆಯು ಯಾಜಕರ ಕುರಿತಾಗಿ ಏನನ್ನೂ ಹೇಳಲಿಲ್ಲ.
For it is plain that our Lord had sprung from the tribe of Judah, though of that tribe Moses said nothing about their being priests.
15 ೧೫ ಈ ಯಾಜಕನು ಶರೀರದ ಸಂಬಂಧಪಟ್ಟಿರುವ ನಿಯಮದ ಪ್ರಕಾರವಾಗಿರದೆ, ಲಯವಾಗದ ಜೀವಶಕ್ತಿಯ ಮೇರೆಗೆ, ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಎಳುತ್ತಾನೆಂಬುದಾದರೆ ಅದು ಇನ್ನೂ ಹೆಚ್ಚು ಸ್ಪಷ್ಟವಾಗಿ ವ್ಯಕ್ತವಾಗುತ್ತದಲ್ಲಾ.
All this becomes even yet plainer when we remember that a new priest has appeared, resembling Melchizedek,
and that he was appointed, not under a Law regulating only earthly matters, but by virtue of a life beyond the reach of death;
17 ೧೭ ಆತನ ವಿಷಯದಲ್ಲಿ “ನೀನು ಸದಾಕಾಲಕ್ಕೂ ಮೆಲ್ಕಿಜೆದೇಕನ ತರಹದ ಯಾಜಕನೇ” ಎಂಬುದಾಗಿ ಧರ್ಮಶಾಸ್ತ್ರವು ಸಾಕ್ಷಿಕರಿಸುತ್ತದೆ. (aiōn )
for that is the meaning of the declaration – ‘You are for all time a priest of the order of Melchizedek.’ (aiōn )
18 ೧೮ ಯಾಕೆಂದರೆ ಮೊದಲಿದ್ದ ಆಜ್ಞೆಯು ದುರ್ಬಲವೂ, ನಿಷ್ಪ್ರಯೋಜಕವೂ ಆಗಿರುವ ಕಾರಣದಿಂದ ಅದು ರದ್ದಾಯಿತು.
On the one hand, we have the abolition of a previous regulation as being both inefficient and useless
19 ೧೯ ಧರ್ಮಶಾಸ್ತ್ರವು ಯಾವುದನ್ನೂ ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಬದಲಾಗಿ ದೇವರ ಸಮೀಪಕ್ಕೆ ನಡೆಸಲ್ಪಡುವಂಥ ಉತ್ತಮವಾದ ಹೊಸ ನಿರೀಕ್ಷೆಯೊಂದು ಕೊಡಲ್ಪಟ್ಟಿದೆ.
(for the Law never brought anything to perfection); and, on the other hand, we have the introduction of a better hope, which enables us to draw near to God.
20 ೨೦ ಇದು ಪ್ರತಿಜ್ಞೆ ರಹಿತವಾದ್ದದು ಅಲ್ಲ. ಇದಲ್ಲದೆ ಲೇವಿಯರು ಪ್ರತಿಜ್ಞೆಯಿಲ್ಲದೆ ಯಾಜಕರಾದರು.
Then again, the appointment of this new priest was ratified by an oath, which is not so with the Levitical priests,
21 ೨೧ ಆತನಾದರೋ, ಪ್ರತಿಜ್ಞೆಯೊಡನೆ ಯಾಜಕನಾಗಿ ಮಾಡಲ್ಪಟ್ಟನು. ಆದರೆ ದೇವರು ಆತನಿಗೆ “‘ನೀನು ಸದಾಕಾಲವೂ ಯಾಜಕನಾಗಿದ್ದೀ’ ಎಂದು ನಾನು ಪ್ರಮಾಣಮಾಡಿ ನುಡಿದಿದ್ದೇನೆ ಮತ್ತು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ” ಎಂಬುದಾಗಿ ಹೇಳಿದ್ದಾನೆ. (aiōn )
but his appointment was ratified by an oath, when God said to him – ‘The Lord has sworn, and will not change, “You are a priest for all time.”’ (aiōn )
22 ೨೨ ಯೇಸು ಪ್ರತಿಜ್ಞೆಯೊಡನೆಯೇ ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಆಧಾರನಾದನು.
And the oath shows the corresponding superiority of the covenant of which Jesus is appointed the surety.
23 ೨೩ ಲೇವಿಯರು ಶಾಶ್ವತವಾಗಿ ಉದ್ಯೋಗನಡಿಸುವುದಕ್ಕೆ ಮರಣವು ಅಡ್ಡಿಯಾಗಿರುವುದರಿಂದ ಅವರಲ್ಲಿ ಅನೇಕರು ಯಾಜಕರಾದರು.
Again, new Levitical priests are continually being appointed, because death prevents their remaining in office;
24 ೨೪ ಆತನಾದರೋ ಸದಾಕಾಲ ಜೀವಿಸುವುದರಿಂದ ಆತನ ಯಾಜಕತ್ವವನ್ನು ಶಾಶ್ವತವಾದ್ದದು. (aiōn )
but Jesus remains for all time, and therefore the priesthood that he holds will never pass to another. (aiōn )
25 ೨೫ ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾಗಿದ್ದಾನೆ. ಯಾಕೆಂದರೆ ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.
And that is why he is able to save perfectly those who come to God through him, living for ever, as he does, to intercede of their behalf.
26 ೨೬ ಇಂಥವನೇ ನಮಗೆ ಬೇಕಾಗಿರುವ ಮಹಾಯಾಜಕನು, ಈತನು ಪರಿಶುದ್ಧನೂ, ನಿರ್ದೋಷಿಯೂ, ನಿಷ್ಕಳಂಕನೂ, ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನು, ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು.
This was the high priest that we needed – holy, innocent, spotless, withdrawn from sinners, exalted above the highest heaven,
27 ೨೭ ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಯಜ್ಞ ಸಮರ್ಪಣೆಮಾಡುವ ಲೇವಿ ಮಹಾಯಾಜಕರಂತೆ ಈತನು ಪ್ರತಿದಿನವೂ ಯಜ್ಞಗಳನ್ನು ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಈತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.
one who has no need to offer sacrifices daily as those high priests have, first for their own sins, and then for those of the people. For this he did once and for all, when he offered himself as the sacrifice.
28 ೨೮ ಧರ್ಮಶಾಸ್ತ್ರವು ದುರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಕ ಮಾಡುತ್ತದೆ. ಆದರೆ ಧರ್ಮಶಾಸ್ತ್ರದ ತರುವಾಯ ಪ್ರತಿಜ್ಞೆಯೊಡನೆ ಬಂದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ಯಾಜಕನನ್ನಾಗಿ ನೇಮಕ ಮಾಡಿದೆ. (aiōn )
The Law appoints as high priests men who are weak, but the words of God’s oath, which was later than the Law, name the Son as, for all time, the perfect priest. (aiōn )