< ಇಬ್ರಿಯರಿಗೆ ಬರೆದ ಪತ್ರಿಕೆ 3 >

1 ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ.
ಹೇ ಸ್ವರ್ಗೀಯಸ್ಯಾಹ್ವಾನಸ್ಯ ಸಹಭಾಗಿನಃ ಪವಿತ್ರಭ್ರಾತರಃ, ಅಸ್ಮಾಕಂ ಧರ್ಮ್ಮಪ್ರತಿಜ್ಞಾಯಾ ದೂತೋಽಗ್ರಸರಶ್ಚ ಯೋ ಯೀಶುಸ್ತಮ್ ಆಲೋಚಧ್ವಂ|
2 ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ.
ಮೂಸಾ ಯದ್ವತ್ ತಸ್ಯ ಸರ್ವ್ವಪರಿವಾರಮಧ್ಯೇ ವಿಶ್ವಾಸ್ಯ ಆಸೀತ್, ತದ್ವತ್ ಅಯಮಪಿ ಸ್ವನಿಯೋಜಕಸ್ಯ ಸಮೀಪೇ ವಿಶ್ವಾಸ್ಯೋ ಭವತಿ|
3 ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ.
ಪರಿವಾರಾಚ್ಚ ಯದ್ವತ್ ತತ್ಸ್ಥಾಪಯಿತುರಧಿಕಂ ಗೌರವಂ ಭವತಿ ತದ್ವತ್ ಮೂಸಸೋಽಯಂ ಬಹುತರಗೌರವಸ್ಯ ಯೋಗ್ಯೋ ಭವತಿ|
4 ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ ಸಮಸ್ತವನ್ನು ಕಟ್ಟಿದಾತನು ದೇವರೇ.
ಏಕೈಕಸ್ಯ ನಿವೇಶನಸ್ಯ ಪರಿಜನಾನಾಂ ಸ್ಥಾಪಯಿತಾ ಕಶ್ಚಿದ್ ವಿದ್ಯತೇ ಯಶ್ಚ ಸರ್ವ್ವಸ್ಥಾಪಯಿತಾ ಸ ಈಶ್ವರ ಏವ|
5 ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ ಸಾಕ್ಷಿಕೊಟ್ಟಿದ್ದಾನೇ.
ಮೂಸಾಶ್ಚ ವಕ್ಷ್ಯಮಾಣಾನಾಂ ಸಾಕ್ಷೀ ಭೃತ್ಯ ಇವ ತಸ್ಯ ಸರ್ವ್ವಪರಿಜನಮಧ್ಯೇ ವಿಶ್ವಾಸ್ಯೋಽಭವತ್ ಕಿನ್ತು ಖ್ರೀಷ್ಟಸ್ತಸ್ಯ ಪರಿಜನಾನಾಮಧ್ಯಕ್ಷ ಇವ|
6 ಆದರೆ ಕ್ರಿಸ್ತನಾದರೋ ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ, ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ.
ವಯಂ ತು ಯದಿ ವಿಶ್ವಾಸಸ್ಯೋತ್ಸಾಹಂ ಶ್ಲಾಘನಞ್ಚ ಶೇಷಂ ಯಾವದ್ ಧಾರಯಾಮಸ್ತರ್ಹಿ ತಸ್ಯ ಪರಿಜನಾ ಭವಾಮಃ|
7 ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ, “ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ,
ಅತೋ ಹೇತೋಃ ಪವಿತ್ರೇಣಾತ್ಮನಾ ಯದ್ವತ್ ಕಥಿತಂ, ತದ್ವತ್, "ಅದ್ಯ ಯೂಯಂ ಕಥಾಂ ತಸ್ಯ ಯದಿ ಸಂಶ್ರೋತುಮಿಚ್ಛಥ|
8 ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
ತರ್ಹಿ ಪುರಾ ಪರೀಕ್ಷಾಯಾ ದಿನೇ ಪ್ರಾನ್ತರಮಧ್ಯತಃ| ಮದಾಜ್ಞಾನಿಗ್ರಹಸ್ಥಾನೇ ಯುಷ್ಮಾಭಿಸ್ತು ಕೃತಂ ಯಥಾ| ತಥಾ ಮಾ ಕುರುತೇದಾನೀಂ ಕಠಿನಾನಿ ಮನಾಂಸಿ ವಃ|
9 ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ, ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು.
ಯುಷ್ಮಾಕಂ ಪಿತರಸ್ತತ್ರ ಮತ್ಪರೀಕ್ಷಾಮ್ ಅಕುರ್ವ್ವತ| ಕುರ್ವ್ವದ್ಭಿ ರ್ಮೇಽನುಸನ್ಧಾನಂ ತೈರದೃಶ್ಯನ್ತ ಮತ್ಕ್ರಿಯಾಃ| ಚತ್ವಾರಿಂಶತ್ಸಮಾ ಯಾವತ್ ಕ್ರುದ್ಧ್ವಾಹನ್ತು ತದನ್ವಯೇ|
10 ೧೦ ಆದ್ದರಿಂದ, ನಾನು ಈ ಸಂತತಿಯವರ ಮೇಲೆ ಬಹಳ ಬೇಸರಗೊಂಡು, ‘ಅವರು ಯಾವಾಗಲೂ ತಪ್ಪಿಹೋಗುವ ಹೃದಯವುಳ್ಳವರೂ, ಅವರು ನನ್ನ ಮಾರ್ಗಗಳನ್ನು ತಿಳಿಯದವರೂ’ ಎಂದು ನಾನು ಹೇಳಿದೆ.
ಅವಾದಿಷಮ್ ಇಮೇ ಲೋಕಾ ಭ್ರಾನ್ತಾನ್ತಃಕರಣಾಃ ಸದಾ| ಮಾಮಕೀನಾನಿ ವರ್ತ್ಮಾನಿ ಪರಿಜಾನನ್ತಿ ನೋ ಇಮೇ|
11 ೧೧ ಹೀಗಿರಲು ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು.’”
ಇತಿ ಹೇತೋರಹಂ ಕೋಪಾತ್ ಶಪಥಂ ಕೃತವಾನ್ ಇಮಂ| ಪ್ರೇವೇಕ್ಷ್ಯತೇ ಜನೈರೇತೈ ರ್ನ ವಿಶ್ರಾಮಸ್ಥಲಂ ಮಮ|| "
12 ೧೨ ಸಹೋದರರೇ, ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ.
ಹೇ ಭ್ರಾತರಃ ಸಾವಧಾನಾ ಭವತ, ಅಮರೇಶ್ವರಾತ್ ನಿವರ್ತ್ತಕೋ ಯೋಽವಿಶ್ವಾಸಸ್ತದ್ಯುಕ್ತಂ ದುಷ್ಟಾನ್ತಃಕರಣಂ ಯುಷ್ಮಾಕಂ ಕಸ್ಯಾಪಿ ನ ಭವತು|
13 ೧೩ ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.
ಕಿನ್ತು ಯಾವದ್ ಅದ್ಯನಾಮಾ ಸಮಯೋ ವಿದ್ಯತೇ ತಾವದ್ ಯುಷ್ಮನ್ಮಧ್ಯೇ ಕೋಽಪಿ ಪಾಪಸ್ಯ ವಞ್ಚನಯಾ ಯತ್ ಕಠೋರೀಕೃತೋ ನ ಭವೇತ್ ತದರ್ಥಂ ಪ್ರತಿದಿನಂ ಪರಸ್ಪರಮ್ ಉಪದಿಶತ|
14 ೧೪ ಮೊದಲಿನಿಂದಲೂ ಇರುವ ನಮ್ಮ ಭರವಸೆಯನ್ನು ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳುವುದಾದರೆ ನಾವು ಕ್ರಿಸ್ತನಲ್ಲಿ ಪಾಲುಗಾರರಾಗುತ್ತೇವೆ.
ಯತೋ ವಯಂ ಖ್ರೀಷ್ಟಸ್ಯಾಂಶಿನೋ ಜಾತಾಃ ಕಿನ್ತು ಪ್ರಥಮವಿಶ್ವಾಸಸ್ಯ ದೃಢತ್ವಮ್ ಅಸ್ಮಾಭಿಃ ಶೇಷಂ ಯಾವದ್ ಅಮೋಘಂ ಧಾರಯಿತವ್ಯಂ|
15 ೧೫ “ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ, ಪೂರ್ವಿಕರು ಮೊಂಡುತನದಿಂದ ಮಾಡಿದಂತೆ, ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.”
ಅದ್ಯ ಯೂಯಂ ಕಥಾಂ ತಸ್ಯ ಯದಿ ಸಂಶ್ರೋತುಮಿಚ್ಛಥ, ತರ್ಹ್ಯಾಜ್ಞಾಲಙ್ಘನಸ್ಥಾನೇ ಯುಷ್ಮಾಭಿಸ್ತು ಕೃತಂ ಯಥಾ, ತಥಾ ಮಾ ಕುರುತೇದಾನೀಂ ಕಠಿನಾನಿ ಮನಾಂಸಿ ವ ಇತಿ ತೇನ ಯದುಕ್ತಂ,
16 ೧೬ ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ?
ತದನುಸಾರಾದ್ ಯೇ ಶ್ರುತ್ವಾ ತಸ್ಯ ಕಥಾಂ ನ ಗೃಹೀತವನ್ತಸ್ತೇ ಕೇ? ಕಿಂ ಮೂಸಸಾ ಮಿಸರದೇಶಾದ್ ಆಗತಾಃ ಸರ್ವ್ವೇ ಲೋಕಾ ನಹಿ?
17 ೧೭ ಮತ್ತು ದೇವರು ನಲವತ್ತು ವರ್ಷ ಯಾರ ಮೇಲೆ ಬಹಳವಾಗಿ ಕೋಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದುಹೋದವು.
ಕೇಭ್ಯೋ ವಾ ಸ ಚತ್ವಾರಿಂಶದ್ವರ್ಷಾಣಿ ಯಾವದ್ ಅಕ್ರುಧ್ಯತ್? ಪಾಪಂ ಕುರ್ವ್ವತಾಂ ಯೇಷಾಂ ಕುಣಪಾಃ ಪ್ರಾನ್ತರೇ ಽಪತನ್ ಕಿಂ ತೇಭ್ಯೋ ನಹಿ?
18 ೧೮ ನನ್ನ ವಿಶ್ರಾಂತಿಯಲ್ಲಿ ನೀವು ಸೇರುವುದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನೂ? ಅವಿಧೇಯರನ್ನು ಕುರಿತಲ್ಲವೇ?
ಪ್ರವೇಕ್ಷ್ಯತೇ ಜನೈರೇತೈ ರ್ನ ವಿಶ್ರಾಮಸ್ಥಲಂ ಮಮೇತಿ ಶಪಥಃ ಕೇಷಾಂ ವಿರುದ್ಧಂ ತೇನಾಕಾರಿ? ಕಿಮ್ ಅವಿಶ್ವಾಸಿನಾಂ ವಿರುದ್ಧಂ ನಹಿ?
19 ೧೯ ಅವರು ವಿಶ್ರಾಂತಿಯಲ್ಲಿ ಸೇರಲಾರದೇ ಹೋದದ್ದು ಅವರ ಅಪನಂಬಿಕೆಯಿಂದಲೇ ಎಂದು ನಾವು ಅರಿತಿದ್ದೇವೆ.
ಅತಸ್ತೇ ತತ್ ಸ್ಥಾನಂ ಪ್ರವೇಷ್ಟುಮ್ ಅವಿಶ್ವಾಸಾತ್ ನಾಶಕ್ನುವನ್ ಇತಿ ವಯಂ ವೀಕ್ಷಾಮಹೇ|

< ಇಬ್ರಿಯರಿಗೆ ಬರೆದ ಪತ್ರಿಕೆ 3 >