< ಇಬ್ರಿಯರಿಗೆ ಬರೆದ ಪತ್ರಿಕೆ 13 >

1 ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ.
Kalume njalo uthando lobuzalwane.
2 ಅತಿಥಿ ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.
Lingakhohlwa ukungenisa izihambi; ngoba ngalokho abanye bangenisa izingilosi bengazi.
3 ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, ಅವರನ್ನು ಜ್ಞಾಪಕಮಾಡಿಕೊಳ್ಳಿರಿ.
Khumbulani izibotshwa, ngokungathi libotshwe kanye lazo; abaphethwe kubi, ngokungathi lani liphethwe kubi emzimbeni.
4 ಎಲ್ಲರೂ ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ.
Umtshado uhlonitshwa kubo bonke, lombheda ungangcoliswa; kodwa uNkulunkulu uzagweba iziphingi lezifebe.
5 ಹಣದಾಸೆಯಿಂದ ದೂರವಿರಿ. ನಿಮಗಿರುವವುಗಳಲ್ಲಿ ತೃಪ್ತರಾಗಿರಿ. “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ.
Indlela yempilo kayingabi ngeyokuthanda imali, yeneliswani yizinto elilazo; ngoba yena utshilo ukuthi: Kangisoze ngakulahla, njalo kangisoze ngakutshiya.
6 ಆದ್ದರಿಂದ, “ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, ಮನುಷ್ಯನು ನನಗೆ ಏನು ಮಾಡಿಯಾನು?” ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
Ngakho singatsho ngesibindi sithi: INkosi ingumsizi wami, njalo kangiyikwesaba umuntu azakwenza kimi.
7 ನಿಮಗೆ ದೇವರ ವಾಕ್ಯವನ್ನು ಬೋಧಿಸಿದ ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು ಅವರ ನಂಬಿಕೆಯನ್ನು ಅನುಸರಿಸಿರಿ.
Khumbulani abakhokheli benu, abakhulume kini ilizwi likaNkulunkulu; liqaphelise ukuphela kokuhamba kwabo, lilingisele ukholo lwabo.
8 ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು. (aiōn g165)
UJesu Kristu unguye izolo lalamuhla lephakadeni. (aiōn g165)
9 ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.
Lingaduhiswa yizimfundiso eziyinhlobonhlobo lezingaziwayo; ngoba kuhle ukuthi inhliziyo iqiniswe ngomusa, kungabi ngokudla, abangasizwanga yikho ababebambelela kukho.
10 ೧೦ ನಮಗೊಂದು ಯಜ್ಞವೇದಿ ಉಂಟು ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ.
Silalo ilathi, abangelalungelo lokudla kulo abakhonza ithabhanekele.
11 ೧೧ ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ.
Ngoba lezozinyamazana, ogazi lazo langeniswa ngumpristi omkhulu endaweni ezingcwele ngenxa yesono, izidumbu zazo zitshiswa ngaphandle kwenkamba.
12 ೧೨ ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು.
Ngakho laye uJesu, ukuze angcwelise abantu ngelakhe igazi, wahlupheka ngaphandle kwesango.
13 ೧೩ ಆದ್ದರಿಂದ ನಾವು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ.
Ngakho-ke asiphumele kuye ngaphandle kwenkamba, sithwele ihlazo lakhe.
14 ೧೪ ಏಕೆಂದರೆ ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ.
Ngoba kasilawo umuzi omiyo lapha, kodwa sidinga ozayo.
15 ೧೫ ಆದ್ದರಿಂದ ಯೇಸುವಿನ ಮೂಲಕವಾಗಿಯೇ ದೇವರಿಗೆ ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.
Ngakho asinikele njalonjalo kuNkulunkulu ngaye umnikelo wendumiso, okutsho isithelo sendebe sivuma ibizo lakhe.
16 ೧೬ ಇದಲ್ಲದೆ ಪರೋಪಕಾರ ಮಾಡುವುದನ್ನು, ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
Kodwa lingakhohlwa ukwenza okuhle lokuphana; ngoba uNkulunkulu uyathokoza ngeminikelo enjalo.
17 ೧೭ ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.
Lalelani abakhokheli benu, lizehlisele ngaphansi kwabo; ngoba laba balinda imiphefumulo yenu, njengabazalandisa; ukuze bakwenze lokhu ngenjabulo, njalo bengabubuli; ngoba kungalisizi lokhu.
18 ೧೮ ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸ್ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.
Sikhulekeleni; ngoba siyathemba ukuthi silesazela esihle, sifisa ukuhamba kuhle ezintweni zonke;
19 ೧೯ ಮತ್ತು ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರುಗಿ ಬರುವಂತೆ ನೀವು ಪ್ರಾರ್ಥಿಸಬೇಕೆಂದು ನಾನು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ.
njalo ngiyalincenga ngokwengezelelwe kakhulu ukuthi likwenze lokhu, ukuze ngibuyiselwe kini ngokuphangisa.
20 ೨೦ ನಿತ್ಯವಾದ ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರಮಾಡಿದ, ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು ನಮ್ಮಲ್ಲಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್. (aiōn g165, aiōnios g166)
Kungathi uNkulunkulu wokuthula owamkhuphula kwabafileyo uMelusi omkhulu wezimvu ngegazi lesivumelwano saphakade, iNkosi yethu uJesu, (aiōnios g166)
21 ೨೧
angaliphelelisa kuwo wonke umsebenzi omuhle ukuze lenze intando yakhe, esebenza kini lokho okumthokozisayo phambi kwakhe, ngoJesu Kristu, kakube kuye ubukhosi kuze kube nini lanini. Ameni. (aiōn g165)
22 ೨೨ ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.
Kodwa ngiyalincenga, bazalwane, lemukeleni ngesineke ilizwi lenkuthazo; ngoba ngilibhalele ngamafitshane.
23 ೨೩ ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
Yazini ukuthi umzalwane uTimothi ukhululwe, uba efika masinyane, ngizalibona ngilaye.
24 ೨೪ ನಿಮ್ಮ ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ.
Bingelelani bonke abakhokheli benu, labo bonke abangcwele. Abavela eIthaliya bayalibingelela.
25 ೨೫ ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.
Umusakawube lani lonke. Ameni.

< ಇಬ್ರಿಯರಿಗೆ ಬರೆದ ಪತ್ರಿಕೆ 13 >