< ಹಗ್ಗಾಯನು 1 >

1 ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಆರನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೂ, ಯೆಹೋಚಾದಾಕನಿಗೆ ಜನಿಸಿದ ಮಹಾಯಾಜಕನಾದ ಯೆಹೋಶುವನಿಗೂ ಪ್ರವಾದಿಯಾದ ಹಗ್ಗಾಯನ ಮೂಲಕ ಹೇಳಿಕಳುಹಿಸಿದನು.
दारा राजाको दोस्रो बर्षको छैटौँ महिनाको पहिलो दिनमा, शालतिएलका छोरा यहूदाका राज्यपाल यरुबाबेल, र यहोसादाकका छोरा प्रधान पूजाहारी यहोशूकहाँ अगमवक्ता हाग्गैद्धारा परमप्रभुको यस्तो वचन आयो,
2 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಸಮಯವು ಇನ್ನು ಬಂದಿಲ್ಲ” ಎಂದು ಜನರು ಅಂದುಕೊಳ್ಳುತ್ತಾರಲ್ಲಾ.
“सेनाहरूका परमप्रभु यस्तो भन्‍नुहुन्छ: यी मानिसहरू भन्छन्, ‘हामी आएर परमप्रभुको भवन निर्माण गर्ने समय अझै आएको छैन’ ।”
3 ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಹೇಳಿದನು,
त्यसपछि अगमवक्ता हाग्गैद्धारा परमप्रभुको यस्तो वचन आयो,
4 “ಈ ನನ್ನ ಆಲಯವು ಹಾಳು ಬಿದ್ದಿರುವಾಗ, ನೀವು ನಿಮ್ಮ ಒಳಗೋಡೆಗೆಲ್ಲಾ ಸುಂದರ ಹಲಿಗೆ ಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವುದಕ್ಕೆ ಈ ಸಮುಯವು ತಕ್ಕದ್ದೋ?”
“यो मन्दिर ध्वस्त हुँदा के यो तिमीहरू आफ्ना सुन्दर घरहरूमा बस्‍ने समय हो?
5 ಈ ಸಮಯದಲ್ಲಿ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.
यसैकारण सेनाहरूका परमप्रभु यस्तो भन्‍नुहुन्छ: आफ्ना मार्गहरूमाथि ध्यान देओ!
6 ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ಅದನ್ನು ಸೇವಿಸುವಿರಿ ತೃಪ್ತಿಯಾಗದು, ಕುಡಿಯುತ್ತೀರಿ ಆನಂದವಾಗದು; ಹೊದ್ದುಕೊಳ್ಳುವಿರಿ ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಾಗಿದೆ.”
तिमीहरूले प्रशस्त बीऊ छरेका छौ, तर फसल भने थोरै मात्र ल्याउँछौ, तिमीहरू खान्छौ तर तिमीहरूसँग पर्याप्‍त छैन । तिमीहरू पिउँछौ, तर प्रशस्त मद्य तिमीहरूसँग छैन । तिमीहरू लुगा लगाउँछौ तर आफैँलाई तातो राख्‍न सक्दैनौ, र ज्यालादारीमा काम गर्नेहरूले पैसा कमाउँछन् तर तिनीहरूले ती प्वालहरू भएका झोलामा राख्दछन् ।”
7 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ; “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.
सेनाहरूका परमप्रभु यस्तो भन्‍नुहुन्छ: “आफ्ना मार्गहरूमाथि ध्यान देओ ।
8 ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ; ನಾನು ಅದಕ್ಕೆ ಮೆಚ್ಚಿ ನನ್ನ ಪ್ರಭಾವವನ್ನು ಅಲ್ಲಿ ಪ್ರಕಾಶಗೊಳಿಸುವೆನು” ಇದು ಯೆಹೋವನ ನುಡಿ.
माथि पर्वतमा जाओ, काठहरू ल्याओ, र मेरो भवन बनाओ, अनि म त्यसमा आनन्द मनाउनेछु, र म महिमित हुनेछु - परमप्रभु भन्‍नुहुन्छ ।”
9 ನೀವು ಬಹು ಬೆಳೆಯನ್ನು ನಿರೀಕ್ಷಿಸಿದಿರಿ, ಆದರೆ, ಸ್ವಲ್ಪ ಮಾತ್ರ ಮನೆಗೆ ಸಾಗಿಸಲು ಸಾಧ್ಯವಾಯಿತು; ಯಾಕೆಂದರೆ ನಾನು ಅದನ್ನು ಫಲಿಸಲು ಬಿಡಲಿಲ್ಲ. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇದಕ್ಕೆಲ್ಲಾ ಕಾರಣವೇನು? ನನ್ನ ಆಲಯವು ಪಾಳು ಬಿದ್ದಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಮನೆಯ ಕೆಲಸಕ್ಕೆ ತವಕಪಡುತ್ತಿದ್ದಾನೆ, ಇದೇ ಕಾರಣ.”
“तिमीहरूले धेरै कुराको खोजी गर्‍यौ, तर हेर! तिमीहरूले घरमा थोरै कुरा ल्यायौ, कनभने मैले ती उडाइदिएँ । किन?” सेनाहरूका परमप्रभु घोषणा गर्नुहुन्छ । “किनभने मेरो भवन भग्‍नावशेषको बिचमा छ, तर तिमीहरू हरेक भने आफ्नै घर बनाउन लागिपरेका छौ ।
10 ೧೦ ನಿಮ್ಮ ನಿಮಿತ್ತವೇ ಆಕಾಶವು ಇಬ್ಬನಿಯನ್ನು ತಡೆದುಬಿಟ್ಟಿದೆ, ಭೂಮಿಯು ತನ್ನ ಫಲವನ್ನು ನಿಲ್ಲಿಸಿಬಿಟ್ಟಿದೆ;
यसैकारण आकाशले आफ्नो शीत रोकिदिनेछ, र पृथ्वीले आफ्नो उब्जनी दिनेछैन ।
11 ೧೧ ಇದಲ್ಲದೆ ನಾನು ದೇಶ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ಎಣ್ಣೆ, ಭೂಮಿಯ ಉತ್ಪತ್ತಿ, ಮನುಷ್ಯ, ಪಶು, ನಾನಾ ಕೈದುಡಿತ ಇವುಗಳಿಗೆಲ್ಲಾ ಕ್ಷಾಮವನ್ನು ತಂದಿದ್ದೇನೆ.
मैले भूमि, पर्वतहरू, अन्‍न, नयाँ मद्य, तेल, पृथ्वीका उब्जनीहरू, मानिसहरू, पशुहरू, र तिमीहरूका हातका परिश्रममाथि अनिकाल बोलाएको छु ।”
12 ೧೨ ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಸಮಸ್ತ ಇಸ್ರಾಯೇಲ್ ಜನಶೇಷ, ಇವರೆಲ್ಲಾ ಯೆಹೋವನೆಂಬ ತಮ್ಮ ದೇವರ ನುಡಿಗೂ, ಯೆಹೋವನೆಂಬ ತಮ್ಮ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಯಾದ ಹಗ್ಗಾಯನು ಹೇಳಿದ ಮಾತುಗಳಿಗೂ ಕಿವಿಗೊಟ್ಟು ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು.
अनि शालतिएलका छोरा यरुबाबेल, र येहोसादाकका छोरा प्रधान पूजाहारी यहोशूले, बाँकी रहेका सबै मानिसका साथमा तिनीहरूका परमेश्‍वर परमप्रभुको आवाज र अगमवक्ता हाग्‍गैका वचनलाई पालन गरे, किनभने तिनीहरूका परमेश्‍वर परमप्रभुले तिनलाई पठाउनुभएको थियो र मानिसहरूले परमप्रभुको भय मान्थे ।
13 ೧೩ ಯೆಹೋವನ ದೂತನಾದ ಹಗ್ಗಾಯನು ಯೆಹೋವನ ಸಂದೇಶವನ್ನು ಜನರಿಗೆ ಈ ರೀತಿಯಾಗಿ ನುಡಿದನು, “ನಿಮ್ಮೊಂದಿಗೆ ಇದ್ದೇನೆ ಎಂದು ಯೆಹೋವನು ನುಡಿಯುತ್ತಿದ್ದಾನೆ.”
त्यसपछि परमप्रभुका समाचारवाहक, हाग्‍गैले मानिसहरूलाई यसो भनी परमप्रभुको सन्देश सुनाए, “म तिमीहरूसँग छु - परमप्रभु घोषणा गर्नुहुन्छ ।”
14 ೧೪ ಕೂಡಲೇ ಶೆಯಲ್ತೀಯೇಲನು ಮಗನೂ, ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಮತ್ತು ಸಮಸ್ತ ಜನರೆಲ್ಲರ ಮನಸ್ಸುಗಳನ್ನು ಸೇನಾಧೀಶ್ವರನಾದ ಯೆಹೋವನು ಪ್ರೇರೇಪಿಸಲು,
यसकारण परमप्रभुले यहूदाका राज्यपाल, शालतिएलका छोरा यरुबाबेल, येहोसादाकका छोरा प्रधान पुजारी यहोशू, र सबै बाँकी रहेका मानिसहरूका आत्मालाई उत्तेजित गरिदिनुभयो, अनि तिनीहरू गए र तिनीहरूका परमेश्‍वर सेनाहरूका परमप्रभुको भवनमा काम गरे ।
15 ೧೫ ಅವರು ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಆರನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಬಂದು ತಮ್ಮ ದೇವರಾದ ಯೆಹೋವನ ಆಲಯದ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದರು.
दारा राजाको दोस्रो वर्षको छैटौँ महिनाको चौबीसौँ दिनमा यो भयो ।

< ಹಗ್ಗಾಯನು 1 >