< ಆದಿಕಾಂಡ 5 >
1 ೧ ಆದಾಮನ ವಂಶದವರ ದಾಖಲೆ: ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿ ಮಾಡಿದನು.
आदमका सन्तानहरूका विवरण यही हो । परमेश्वरले मानिसलाई सृष्टि गर्नुहुँदा उहाँले तिनलाई आफ्नै स्वरूपमा सृष्टि गर्नुभयो ।
2 ೨ ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟು ಮಾಡಿದನು. ಇದಲ್ಲದೆ, ಅವರನ್ನು ಸೃಷ್ಟಿಸಿದ ದಿನದಲ್ಲಿ, ಅವರನ್ನು ಆಶೀರ್ವದಿಸಿ ಅವರಿಗೆ “ಮನುಷ್ಯ” ಎಂದು ಹೆಸರಿಟ್ಟನು.
उहाँले तिनीहरूलाई नर र नारी सृष्टि गर्नुभयो । उहाँले तिनीहरूलाई सृष्टि गर्नु हुँदा, तिनीहरूलाई आशिष् दिनुभयो र तिनीहरूलाई मानवजाति नाउँ दिनुभयो ।
3 ೩ ಆದಾಮನು ನೂರಮೂವತ್ತು ವರ್ಷದವನಾದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.
आदम १३० वर्षको हुँदा तिनी आफ्नै स्वरूपमा जन्मेका छोरोको बुबा भए, र तिनले उनको नाउँ शेत राखे ।
4 ೪ ಸೇತನು ಹುಟ್ಟಿದ ಮೇಲೆ, ಆದಾಮನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರ್ಷ ಬದುಕಿದನು.
आदम शेतको बुबा भएपछि, तिनी आठ सय वर्ष बाँचे । तिनी अझ अरू धेरै छोराहरू र छोरीहरूका बुबा भए ।
5 ೫ ಆದಾಮನು ಒಟ್ಟು ಒಂಭೈನೂರ ಮೂವತ್ತು ವರ್ಷ ಬದುಕಿ ನಂತರ ಸತ್ತನು.
आदम ९३० वर्ष बाँचे अनि तिनी मरे ।
6 ೬ ಸೇತನು ನೂರ ಐದು ವರ್ಷದವನಾದಾಗ, ಎನೋಷನನ್ನು ಪಡೆದನು.
शेत १०५ वर्षको हुँदा तिनी एनोशको बुबा भए ।
7 ೭ ಎನೋಷನು ಹುಟ್ಟಿದ ಮೇಲೆ, ಸೇತನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರ ಏಳು ವರ್ಷ ಬದುಕಿದನು.
तिनी एनोशको बुबा भएपछि, तिनी ८०७ वर्ष बाँचे र अरू धेरै छोराहरू र छोरीहरूका बुबा भए ।
8 ೮ ಸೇತನು ಒಟ್ಟು ಒಂಭೈನೂರ ಹನ್ನೆರಡು ವರ್ಷ ಬದುಕಿ ನಂತರ ಸತ್ತನು.
शेत ९१२ वर्ष बाँचे र तिनी मरे ।
9 ೯ ಎನೋಷನು ತೊಂಭತ್ತು ವರ್ಷದವನಾದಾಗ, ಕೇನಾನನನ್ನು ಪಡೆದನು.
एनोश ९० वर्षको हुँदा, तिनी केनानका बुबा भए ।
10 ೧೦ ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರ್ಷ ಬದುಕಿದನು.
तिनी केनानको बुबा भएपछि, एनोश ८१५ वर्ष बाँचे । तिनी अरू धेरै छोराहरू र छोरीहरूका बुबा भए ।
11 ೧೧ ಎನೋಷನು ಒಟ್ಟು ಒಂಭೈನೂರ ಐದು ವರ್ಷ ಬದುಕಿ ನಂತರ ಸತ್ತನು.
एनोश ९०५ वर्ष बाँचे र तिनी मरे ।
12 ೧೨ ಕೇನಾನನು ಎಪ್ಪತ್ತು ವರ್ಷದವನಾದಾಗ, ಮಹಲಲೇಲನನ್ನು ಪಡೆದನು.
केनान ७० वर्षको हुँदा, तिनी महलालेलको बुबा भए ।
13 ೧೩ ಮಹಲಲೇಲನು ಹುಟ್ಟಿದ ಮೇಲೆ ಕೇನಾನನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ನಲ್ವತ್ತು ವರ್ಷ ಬದುಕಿದನು.
तिनी महलालेलका बुबा भएपछि, केनान ८४० वर्ष बाँचे । तिनी अरू धेरै छोराहरू र छोरीहरूका बुबा भए ।
14 ೧೪ ಕೇನಾನನು ಒಟ್ಟು ಒಂಭೈನೂರ ಹತ್ತು ವರ್ಷ ಬದುಕಿ ನಂತರ ಸತ್ತನು.
केनान ९१० वर्ष बाँचे र तिनी मरे ।
15 ೧೫ ಮಹಲಲೇಲನು ಅರವತ್ತೈದು ವರ್ಷದವನಾದಾಗ ಯೆರೆದನನ್ನು ಪಡೆದನು.
महलालेल ६५ वर्षको हुँदा, तिनी येरेदको बुबा भए ।
16 ೧೬ ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಮೂವತ್ತು ವರ್ಷ ಬದುಕಿದನು.
तिनी येरेदका बुबा भएपछि, तिनी ८३० वर्ष बाँचे । तिनी अरू धेरै छोराहरू र छोरीहरूका बुबा भए ।
17 ೧೭ ಮಹಲಲೇಲನು ಒಟ್ಟು ಎಂಟುನೂರ ತೊಂಭತ್ತೈದು ವರ್ಷ ಬದುಕಿ ನಂತರ ಸತ್ತನು.
महलालेल ८९५ वर्ष बाँचे र तिनी मरे ।
18 ೧೮ ಯೆರೆದನು ನೂರ ಅರುವತ್ತೆರಡು ವರ್ಷದವನಾದಾಗ ಹನೋಕನನ್ನು ಪಡೆದನು.
येरेद १६२ वर्षको हुँदा, तिनी हनोकका बुबा भए ।
19 ೧೯ ಹನೋಕನು ಹುಟ್ಟಿದ ಮೇಲೆ ಯೆರೆದನು ಎಂಟುನೂರು ವರ್ಷ ಬದುಕಿದನು.
तिनी हनोकको बुबा भएपछि येरेद ८०० वर्ष बाँचे । तिनी अरू धेरै छोराहरू र छोरीहरूका बुबा भए ।
20 ೨೦ ಯೆರೆದನು ಒಟ್ಟು ಒಂಭೈನೂರ ಅರುವತ್ತೆರಡು ವರ್ಷ ಬದುಕಿ ನಂತರ ಸತ್ತನು.
येरेद ९६२ बाँचे र तिनी मरे ।
21 ೨೧ ಹನೋಕನು ಅರುವತ್ತೈದು ವರ್ಷದವನಾದಾಗ ಮೆತೂಷೆಲಹನನ್ನು ಪಡೆದನು.
हनोक ६५ वर्षको हुँदा, तिनी मतूशेलहको बुबा भए ।
22 ೨೨ ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ದೇವರ ಅನ್ಯೋನ್ಯತೆಯಲ್ಲಿ ಮುನ್ನೂರು ವರ್ಷ ಬದುಕಿದನು.
हनोक मतूशेलहको बुबा भएपछि तिनी ३०० वर्षसम्म परमेश्वरसँगै हिँडे ।
23 ೨೩ ಹನೋಕನು ಬದುಕಿದ ಒಟ್ಟು ಕಾಲ ಮುನ್ನೂರ ಅರುವತ್ತೈದು ವರ್ಷಗಳು.
तिनी अरू धेरै छोराहरू र छोरीहरूका बुबा भए ।
24 ೨೪ ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾಗಿ ಕಾಣದೆ ಹೋದನು.
हनोक परमेश्वरसँगै हिँडे, र तिनी गए, किनकि परमेश्वरले तिनलाई लानुभयो ।
25 ೨೫ ಮೆತೂಷೆಲಹನು ನೂರ ಎಂಭತ್ತೇಳು ವರ್ಷದವನಾದಾಗ ಲೆಮೆಕನನ್ನು ಪಡೆದನು.
मतूशेलह १८७ वर्षको हुँदा, तिनी लेमेकको बुबा भए ।
26 ೨೬ ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಏಳುನೂರ ಎಂಭತ್ತೆರಡು ವರ್ಷ ಬದುಕಿದನು.
तिनी लेमेकको बुबा भएपछि, मतूशेलह ७८२ वर्ष बाँचे । तिनी अरू धेरै छोराहरू र छोरीहरूका बुबा भए ।
27 ೨೭ ಮೆತೂಷೆಲಹನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರ್ಷ ಬದುಕಿ ನಂತರ ಸತ್ತನು.
मतूशेलह ९६९ वर्ष बाँचे अनि तिनी मरे ।
28 ೨೮ ಲೆಮೆಕನು ನೂರ ಎಂಭತ್ತೆರಡು ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು.
लेमेक १८२ वर्षको हुँदा, तिनी एउटा छोरोको बुबा भए ।
29 ೨೯ ಅವನಿಗೆ “ನೋಹ” ಎಂದು ಹೆಸರಿಟ್ಟು, “ಯೆಹೋವನು ಶಾಪಕೊಟ್ಟ ಭೂಮಿಯಲ್ಲಿ ನಾವು ಕೈಕೆಸರಾಗಿಸಿಕೊಂಡು ಅನುಭವಿಸುತ್ತಿರುವ ಶ್ರಮೆಗೆ ಈ ಮಗನಿಂದ ಆದರಣೆ ಸಿಕ್ಕುವುದು” ಎಂದು ಹೇಳಿದನು.
तिनले उनलाई यसो भन्दै नोआ नाउँ राखे, “यसले हामीलाई हाम्रा काम र हाम्रा हातका पिडादायी श्रमबाट विश्राम दिनेछ, जुन परमप्रभुले जमिनलाई सराप दिनुभएको कारण हामीले गर्नैपर्छ ।”
30 ೩೦ ನೋಹನು ಹುಟ್ಟಿದ ಮೇಲೆ ಲೆಮೆಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರ ತೊಂಭತ್ತೈದು ವರ್ಷ ಬದುಕಿದನು.
लेमेक नोआको बुबा भएपछि ५९५ वर्ष बाँचे । तिनी अरू धेरै छोराहरू र छोरीहरूका बुबा भए ।
31 ೩೧ ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿ ನಂತರ ಸತ್ತನು.
लेमेक ७७७ वर्ष बाँचे, अनि तिनी मरे ।
32 ೩೨ ನೋಹನು ಐನೂರು ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಗಂಡು ಮಕ್ಕಳನ್ನು ಪಡೆದನು.
नोआ ५०० वर्ष बाँचेपछि, तिनी शेम, हाम र येपेतका बुबा भए ।