< ಆದಿಕಾಂಡ 44 >

1 ಯೋಸೇಫನು ತರುವಾಯ ತನ್ನ ಗೃಹನಿರ್ವಾಹಕನಿಗೆ, “ಆ ಮನುಷ್ಯರು ಚೀಲಗಳನ್ನು ಹೊರುವಷ್ಟು ಧಾನ್ಯವನ್ನು ತುಂಬಿಸಿ, ಒಬ್ಬೊಬ್ಬನ ಚೀಲದ ಬಾಯಲ್ಲಿ ಅವನವನ ಹಣದ ಗಂಟನ್ನು ಇಡಿರಿ.
योसेफले तिनको घरको भण्डारेलाई आज्ञा दिए, “ती मानिसहरूले लैजान सक्‍नेजति अनाज तिनीहरूका बोराहरूमा भरिदेऊ, र हरेकको बोराको मुखमा हरेकको रुपियाँ-पैसा पनि हालिदेऊ ।
2 ಕಿರಿಯವನ ಚೀಲದಲ್ಲಿ ಅವನು ದವಸಕ್ಕೆ ತಂದ ಹಣವನ್ನಲ್ಲದೇ, ತನ್ನ ಬೆಳ್ಳಿಯ ಪಾನ ಪಾತ್ರೆಯನ್ನು ಇಡಬೇಕು” ಎಂದು ಅಪ್ಪಣೆಕೊಡಲು, ಗೃಹನಿರ್ವಾಹಕನು ಹಾಗೆಯೇ ಮಾಡಿದನು.
कान्छोको बोराको मुखमा मेरो चाँदीको कचौरा र तिनले अनाजको लागि ल्याएको रुपियाँ-पैसा पनि हालिदेऊ ।” भण्डारेले योसेफले भनेझैँ गर्‍यो ।
3 ಅವರೆಲ್ಲರೂ ಬೆಳಿಗ್ಗೆ ಹೊತ್ತು ಮೂಡುವಾಗ ಅಪ್ಪಣೆ ಪಡೆದು, ಕತ್ತೆಗಳ ಸಹಿತವಾಗಿ ಹೊರಟುಹೋದರು.
बिहान भएपछि ती मानिसहरू आ-आफ्ना गधाहरूसँगै पठाइए ।
4 ಅವರು ಪಟ್ಟಣವನ್ನು ಬಿಟ್ಟು ಸ್ವಲ್ಪ ದೂರ ಹೋಗುವಷ್ಟರಲ್ಲಿ, ಯೋಸೇಫನು ತನ್ನ ಗೃಹನಿರ್ವಾಹಕನಿಗೆ, “ನೀನು ಎದ್ದು ಆ ಮನುಷ್ಯರನ್ನು ಹಿಂದಟ್ಟು, ಅವರು ಸಿಕ್ಕಿದಾಗ ನೀವು ಉಪಕಾರಕ್ಕೆ ಪ್ರತಿಯಾಗಿ ಯಾಕೆ ಅಪಕಾರ ಮಾಡಿದ್ದೀರಿ?
तिनीहरू सहरबाट केही पर पुग्दा योसेफले आफ्नो भण्डारेलाई भने, “उठ, र ती मानिसहरूको पिछा गर । तिनीहरूलाई भेट्टाएपछि यसो भन्‍नू, 'किन तिमीहरूले भलाइको सट्टा खराबी गर्‍यौ?
5 ಆ ಪಾತ್ರೆಯಲ್ಲಿ ನನ್ನ ದಣಿಯು ಪಾನಮಾಡುತ್ತಾನಲ್ಲವೇ? ಅವನು ದೈವೋಕ್ತಿಯನ್ನು ಹೇಳುವವನಲ್ಲವೆ? ನೀವು ಹೀಗೆ ಮಾಡಿದ್ದು ಕೆಟ್ಟಕೆಲಸ” ಎಂದು ಅವರಿಗೆ ಹೇಳು ಎಂದನು.
के यो त्यही कचौरा होइन जसबाट मेरा मालिकले पिउनुहुन्छ र शकून-अपशकूनको लागि प्रयोग गर्नुहुन्छ? तपाईंहरूले जे गर्नुभएको छ त्यो खराब छ' ।”
6 ಗೃಹನಿರ್ವಾಹಕನು ಅವರನ್ನು ಹಿಂದಟ್ಟಿ, ಅವರಿಗೆ ಈ ಮಾತುಗಳನ್ನು ಹೇಳಿದನು.
भण्डारेले तिनीहरूलाई भेट्टायो, र तिनहरूलाई ती वचनहरू भन्यो ।
7 ಅವರು ಅವನಿಗೆ, “ನಮ್ಮ ಒಡೆಯನೇ, ಇಂಥಾ ಮಾತುಗಳನ್ನು ಹೇಳುವುದೇನು? ನಿನ್ನ ಸೇವಕರು ಇಂಥಾ ಕೃತ್ಯವನ್ನು ಎಂದಿಗೂ ಮಾಡುವವರಲ್ಲ.
तिनीहरूले त्यसलाई भने, “किन मेरा मालिकले यस्ता कुराहरू गर्नुहुन्छ? तपाईंका दासहरूले कहिल्यै यस्तो कुरा गर्न सक्दैनन् ।
8 ಮೊದಲು ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಾವು ಕಾನಾನ್ ದೇಶದಿಂದ ತಿರುಗಿ ನಿಮಗೆ ಕೊಡಲು ತಂದೆವು. ಹೀಗಿರುವಾಗ ನಾವು ನಿನ್ನ ದಣಿಯ ಮನೆಯೊಳಗಿಂದ ಬೆಳ್ಳಿ ಬಂಗಾರವನ್ನು ಹೇಗೆ ಕದ್ದುಕೊಂಡೇವು?
हामीले हाम्रा बोराहरूका मुखमा फेला पारेका रुपियाँ-पैसा त हामीले कनान देशबाट फेरि तपाईंकहाँ फर्काएर ल्यायौँ । तब कसरी हामीले हाम्रा मालिकको घरबाट चाँदी वा सुन चोर्न सक्छौँ?
9 ಆ ಪಾತ್ರೆಯು ನಿನ್ನ ಸೇವಕರೊಳಗೆ ಯಾರ ಬಳಿಯಲ್ಲಿ ಸಿಕ್ಕುತ್ತದೋ, ಅವನು ಮರಣ ದಂಡನೆಯನ್ನು ಹೊಂದಲಿ. ಅದಲ್ಲದೆ ನಾವೆಲ್ಲರೂ ನಮ್ಮ ಸ್ವಾಮಿಗೆ ದಾಸರಾಗುವೆವು” ಎಂದರು.
तपाईंको कुनै पनि दाससित त्यो कचौरा फेला पारियो भने त्यो मारियोस्, र हामी आफै पनि तपाईंका दास हुनेछौँ ।”
10 ೧೦ ಅದಕ್ಕೆ ಅವನು, “ಒಳ್ಳೆಯದು, ನೀವು ಹೇಳಿದಂತೆ ಆಗಲಿ. ಆ ಪಾತ್ರೆ ಯಾವನ ಬಳಿಯಲ್ಲಿ ಸಿಕ್ಕುತ್ತದೋ, ಅವನು ನನಗೆ ದಾಸನಾಗಬೇಕು. ಉಳಿದವರು ನಿರಪರಾಧಿಗಳು” ಎಂದು ಹೇಳಿದಾಗ,
भण्डारेले भन्यो, “अब तपाईंहरूकै वचनअनुसार नै होस् । जससित त्यो कचौरा पाइन्छ, त्यो मेरो दास बनोस्, र अरूहरू निर्दोष हुनेछन् ।”
11 ೧೧ ಅವರು ತಟ್ಟನೆ, ಪ್ರತಿಯೊಬ್ಬನೂ ತನ್ನ ತನ್ನ ಚೀಲವನ್ನು ನೆಲಕ್ಕಿಳಿಸಿ ಅವುಗಳನ್ನು ಬಿಚ್ಚಿದರು.
त्यसपछि हरेक मानिसले हतार-हतारमा आ-आफ्नो बोरा भुइँमा झारी तिनीहरूले आ-आफ्ना बोरा खोल्यो ।
12 ೧೨ ಅವನು ಹಿರಿಯವನಿಂದ ಹಿಡಿದು ಕಿರಿಯವನ ತನಕ ಪರೀಕ್ಷಿಸಿ ನೋಡಿದನು. ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು.
भण्डारेले खोजी गर्‍यो । त्यसले जेठोबाट सुरु गरेर कान्छोमा टुङ्ग्यायो, अनि त्यो कचौरा बेन्यामीनको बोरामा फेला पारियो ।
13 ೧೩ ಸಿಕ್ಕಿದಾಗ, ಅವರು ದುಃಖಾಕ್ರಾಂತರಾಗಿ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಪಟ್ಟಣಕ್ಕೆ ಹಿಂತಿರುಗಿ ಬಂದರು.
त्यसपछि तिनीहरूले आफ्ना लुगा च्याते । हरेकले आ-आफ्नो गधा लादेर तिनीहरू सहर फर्के ।
14 ೧೪ ಯೆಹೂದನೂ ಅವನ ಅಣ್ಣತಮ್ಮಂದಿರೂ ಯೋಸೇಫನ ಮನೆಗೆ ಬಂದಾಗ ಅವನು ಇನ್ನು ಅಲ್ಲೇ ಇದ್ದನು. ಅವರು ಅವನೆದುರಿಗೆ ಅಡ್ಡಬಿದ್ದರು.
यहूदा र तिनका दाजुभाइहरू योसेफको घरमा फर्के । तिनी अझै पनि त्यहीँ नै थिए र तिनीहरूले भुइँसम्मै निहुरेर तिनलाई ढोग गरे ।
15 ೧೫ ಯೋಸೇಫನು ಅವರಿಗೆ, “ನೀವು ಮಾಡಿರುವ ಈ ಕೃತ್ಯವು ಏನು? ನನ್ನಂಥ ಮನುಷ್ಯನು ದೈವೋಕ್ತಿಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ?” ಎಂದು ಕೇಳಲು,
योसेफले तिनीहरूलाई भने, “तिमीहरूले यो के गरेको? मजस्तो मानिसले शकून-अपशकून गर्छ भनी के तिमीहरूलाई थाहा छैन?”
16 ೧೬ ಯೆಹೂದನು, “ನಾವು ನಮ್ಮ ಸ್ವಾಮಿಗೆ ಏನು ಹೇಳೋಣ? ನಾವು ಏನು ಮಾತನಾಡೋಣ? ನಾವು ನೀತಿವಂತರಾಗಿ ತೋರುವಂತೆ ಏನು ಮಾಡೋಣ? ನಿನ್ನ ಸೇವಕರ ಪಾಪಕೃತ್ಯವನ್ನು ದೇವರು ಹೊರಪಡಿಸಿದ್ದಾನೆ. ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲದೆ ನಾವೆಲ್ಲರೂ ನಮ್ಮ ಸ್ವಾಮಿಗೆ ಗುಲಾಮರಾದೆವು” ಎಂದನು.
यहूदाले भने, “मेरा मालिकलाई हामी के भनौँ? हामी के बोलौँ? वा हामीले आफूलाई कसरी सफाइ दिऔँ? परमेश्‍वरले तपाईंका दासहरूको अपराध पत्ता लगाउनुभएको छ । हेर्नुहोस्, हामी मेरा मालिकहरूका दास हुन्छौँ– हामी र त्यो व्यक्ति जसको हातमा त्यो कचौरा फेला पर्‍यो ।
17 ೧೭ ಯೋಸೇಫನು, “ಹಾಗೆ ಎಂದಿಗೂ ಆಗಬಾರದು. ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವೇ ನನಗೆ ಗುಲಾಮನಾಗಿರಲಿ. ನೀವಾದರೋ ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ” ಎಂದನು.
योसेफले भने, “मबाट यस्तो कहिल्यै हुनेछैन । त्यो मानिस जसको हातमा कचौरा फेरा पारियो, त्यो मात्रै मेरो दास हुनेछ । तर तिमीहरूचाहिँ शान्तिसित आफ्ना पिताकहाँ जाओ ।”
18 ೧೮ ಯೆಹೂದನು ಹತ್ತಿರಕ್ಕೆ ಬಂದು, “ನನ್ನ ಒಡೆಯನೇ, ನಿನ್ನ ಸೇವಕನಾದ ನಾನು ಒಂದು ಮಾತನ್ನು ನನ್ನ ಒಡೆಯನಿಗೆ ಬಿಡಿಸಿ ಹೇಳುವುದಕ್ಕೆ ಅಪ್ಪಣೆಯಾಗಬೇಕು. ನಿನ್ನ ದಾಸನ ಮೇಲೆ ಕೋಪಗೊಳ್ಳಬಾರದು. ಏಕೆಂದರೆ ನೀನು ಫರೋಹನಿಗೆ ಸಮಾನನು ಎಂದು ನಾನು ಬಲ್ಲೇ.
त्यसपछि यहूदा योसेफको नजिक आएर भने, “मेरा मालिक, बिन्ती छ, कि हजुरको दासलाई एउटा वचन बोल्न दिनुहोस् किनकि तपाईं फारोसमान हुनुहुन्छ ।
19 ೧೯ ತಾವು ತಮ್ಮ ಸೇವಕರಾದ ನಮ್ಮನ್ನು ಕುರಿತು, ‘ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾನೋ?’ ಎಂದು ಕೇಳಲು,
मेरा मालिकले आफ्ना दासहरूलाई यसो भनी सोध्‍नुभयो, 'के तिमीहरूका पिता वा भाइ छ?'
20 ೨೦ ನಾವು ‘ನಮಗೆ ಮುದುಕನಾದ ತಂದೆಯಿದ್ದಾನೆ, ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಒಬ್ಬ ಚಿಕ್ಕ ಮಗನೂ ಇದ್ದಾನೆ, ಅವನ ಒಡಹುಟ್ಟಿದವನು ಸತ್ತು ಹೋಗಿದ್ದಾನೆ. ಆದುದರಿಂದ ಅವನ ತಾಯಿಯಲ್ಲಿ ಹುಟ್ಟಿದವರೊಳಗೆ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಬಹಳ ಪ್ರೀತಿಯುಂಟು’ ಎಂದು ಹೇಳಿದೆವು.
हामीले हजुरलाई भन्यौँ, 'हाम्रा वृद्ध पिता हुनुहुन्छ, र उहाँले बुढेसकालमा जन्माउनुभएको उहाँको एउटा छोरो पनि छ । तर तिनका दाजु मरिसके, र तिनकी आमापट्टिबाट तिनी मात्रै बाँकी छन्, र तिनका पिताले तिनलाई माया गर्नुहुन्छ ।'
21 ೨೧ “ಅದಕ್ಕೆ ತಾವು, ‘ನಾನು ಆ ಹುಡುಗನನ್ನು ನೋಡಬೇಕು ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ’ ಎಂದು ಅಪ್ಪಣೆಕೊಡಲು,
त्यसपछि तपाईंले आफ्ना दासहरूलाई भन्‍नुभयो, 'तिनलाई लिएर आओ ताकि मैले तिनलाई देख्‍न सकूँ ।'
22 ೨೨ ನಾವು ಸ್ವಾಮಿಯವರಿಗೆ, ‘ಆ ಹುಡುಗನು ತನ್ನ ತಂದೆಯನ್ನು ಬಿಟ್ಟು ಬರುವುದಿಲ್ಲ. ಅವನು ತಂದೆಯನ್ನು ಅಗಲಿದರೆ ತಂದೆಯು ಸಾಯುವನು’ ಎಂದು ಹೇಳಿದೆವು.
त्यसपछि हामीले हजुरलाई भन्यौँ, 'ठिटोले आफ्ना पितालाई छाड्न सक्दैनन् । किनकि तिनले आफ्ना पितालाई छाड्नुपर्‍यो भने तिनका पिता मर्नेछन् ।'
23 ೨೩ ಅದಕ್ಕೆ ನೀವು, ‘ನಿಮ್ಮ ತಮ್ಮನು ನಿಮ್ಮ ಸಂಗಡ ಬಾರದಿದ್ದರೆ ನೀವು ಇನ್ನೊಂದು ಸಾರಿ ನನ್ನ ಮುಖವನ್ನು ನೋಡಬಾರದು’ ಎಂದು ಅಪ್ಪಣೆಕೊಟ್ಟಿರಿ.
तब तपाईंले आफ्ना दासहरूलाई भन्‍नुभयो, तिमीहरूको कान्छो छोरो तिमीहरूसँगै नआएसम्म तिमीहरूले मेरो अनुहार हेर्नेछैनौ ।'
24 ೨೪ ನಾವು ನಿಮ್ಮ ಸೇವಕನಾದ ನಮ್ಮ ತಂದೆಯ ಬಳಿಗೆ ಹೋಗಿ ಸ್ವಾಮಿಯ ಮಾತುಗಳನ್ನು ತಿಳಿಸಿದೆವು.
त्यसपछि हामी तपाईंका दास मेरा पिताकहाँ जाँदा हामीले उहाँलाई तपाईंका वचनहरू सुनायौँ ।
25 ೨೫ “ನಮ್ಮ ತಂದೆಯು, ‘ನೀವು ಪುನಃ ಹೋಗಿ ನಮಗೆ ಧಾನ್ಯವನ್ನು ಕೊಂಡು ಕೊಂಡು ಬನ್ನಿ’ ಎಂದು ಹೇಳಿದಾಗ,
हाम्रा पिताले भन्‍नुभयो, 'फेरि गएर हाम्रा लागि अनाज किन ।'
26 ೨೬ ನಾವು ಆತನಿಗೆ, ‘ಹೇಗೆ ಹೋಗುವುದು, ತಮ್ಮನು ನಮ್ಮ ಸಂಗಡ ಇದ್ದರೆ ಮಾತ್ರ ನಾವು ಹೋಗುತ್ತೇವೆ. ಇಲ್ಲವಾದರೇ, ನಾವು ಆ ಮನುಷ್ಯನ ಮುಖವನ್ನು ನೋಡಲು ಆಗುವುದಿಲ್ಲ’ ಎಂದು ಹೇಳಿದೆವು.
त्यसपछि हामीले भन्यौँ, 'हामी तल जान सक्दैनौँ । हाम्रो कान्छो भाइ हामीसित गयो भने मात्र हामी तल जान सक्छौँ किनकि कान्छो भाइ हामीसित नगएसम्म हामीले ती मानिसको अनुहार हेर्न सक्दैनौँ ।'
27 ೨೭ ಅದಕ್ಕೆ ನಿನ್ನ ಸೇವಕನಾದ, ನಮ್ಮ ತಂದೆಯು, ‘ನನ್ನ ಪತ್ನಿಯಲ್ಲಿ ನನಗೆ ಇಬ್ಬರು ಗಂಡು ಮಕ್ಕಳು ಹುಟ್ಟಿರುವುದು ನಿಮಗೆ ತಿಳಿದೇ ಇದೆ.
तपाईंका दास मेरा पिताले हामीलाई भन्‍नुभयो, 'मेरी पत्‍नीले मेरा लागि दुई जना छोरा जन्माएकी कुरा त तिमीहरूलाई थाहै छ ।
28 ೨೮ ಅವರಲ್ಲಿ ಒಬ್ಬನು ನನ್ನ ಬಳಿಯಿಂದ ಹೊರಟು ಹೋದನು. ಅವನು ಸಂದೇಹವಿಲ್ಲದೆ ಮೃಗದಿಂದ ಸೀಳಿ ಹಾಕಲ್ಪಟ್ಟಿರಬೇಕೆಂದು ತಿಳಿದೆನು. ಅಂದಿನಿಂದ ನಾನು ಅವನನ್ನು ಕಾಣಲಿಲ್ಲ.
एउटाले मलाई छाडेर गइसकेपछि मैले भनेँ, 'निश्‍चय नै, त्यसलाई धुजाधुजा पारिएको छ, र त्यस बेलादेखि मैले त्यसलाई देखेको छैनँ ।
29 ೨೯ ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಕೇಡು ಬಂದರೆ ಈ ಮುದಿ ತಲೆಯು ದುಃಖದಿಂದ ಸಮಾಧಿಗೆ ಸೇರಲು ನೀವು ಕಾರಣರಾಗುವಿರಿ’ ಎಂದನು. (Sheol h7585)
अब तिमीहरूले यसलाई पनि मबाट लिएर गयौ र यसमाथि कुनै हानि आइपर्‍यो भने तिमीहरूले मेरो फुलेको कपाललाई शोकमै पातालमा पुर्‍याउने‍छौ ।' (Sheol h7585)
30 ೩೦ “ನಮ್ಮ ತಂದೆಯ ಪ್ರಾಣವು ಇವನ ಪ್ರಾಣವು ಒಂದೇ ಆಗಿರುವುದರಿಂದ ನಾವು ನಿನ್ನ ಸೇವಕನಾದ ನಮ್ಮ ತಂದೆಯ ಬಳಿಗೆ ಹೋದಾಗ,
त्यसकारण म हजुरका दास मेरा पिताकहाँ पुग्दा ती ठिटा मसित छैनन् भने उहाँको जीवन ती ठिटाको जीवनमा जोडिएकाले
31 ೩೧ ಈ ಹುಡುಗನು ನಮ್ಮ ಸಂಗಡ ಇಲ್ಲದೆ ಇರುವುದನ್ನು ತಿಳಿದ ಕೂಡಲೇ ನಮ್ಮ ತಂದೆಯು ಸಾಯುವನು. ತಮ್ಮ ಸೇವಕರಾದ ನಾವು ನಮ್ಮ ಮುಪ್ಪಾದ ತಂದೆ ದುಃಖದಿಂದಲೇ ಸಮಾಧಿಗೆ ಸೇರಲು ಕಾರಣರಾಗುವೆವು. (Sheol h7585)
उहाँले मेरो साथमा ती ठिटालाई नदेख्‍नुहुँदा उहाँ मर्नुहुनेछ । तपाईंका दासहरूले हाम्रा पिताको फुलेको कपाललाई शोकमै पातलामा पुर्‍याउनेछन् । (Sheol h7585)
32 ೩೨ ಸೇವಕನಾದ ನಾನು ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿ, ‘ನಾನು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಾರದೆ ಹೋದರೆ, ಎಂದೆಂದಿಗೂ ತಂದೆಗೆ ದೋಷಿಯಾಗಿರುವೆನು’ ಎಂದು ಮಾತು ಕೊಟ್ಟಿದ್ದೇನೆ.
किनकि तपाईंका दास मेरा पिताको अगि म ती ठिटाको जमानी बसेको छु, र भनेको छु, 'मैले तिनलाई तपाईंकहाँ ल्याइनँ भने म मेरा पिताको सामु सदाको लागि दोषी ठहरिनेछु ।'
33 ೩೩ “ಆದುದರಿಂದ ಸೇವಕನಾದ ನಾನು ಈ ಹುಡುಗನ ಬದಲಾಗಿ ಸ್ವಾಮಿಗೆ ಗುಲಾಮನಾಗುವಂತೆಯೂ ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆಯೂ ಅನುಗ್ರಹ ಮಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.
त्यसकारण ती ठिटाको साटोमा तपाईंका दासलाई नै हजुरको दासको रूपमा बस्‍न दिनुहोस्, र ती ठिटालाई तिनका दाजुहरूसँगै जान दिनुहोस् ।
34 ೩೪ ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗಲಿ? ಹೋದರೆ, ನನ್ನ ತಂದೆಗೆ ಆಗುವ ಆಘಾತ, ದುಃಖ ನನ್ನಿಂದ ನೋಡಲಾಗದು” ಎಂದನು.
किनकि ठिटालाई नलिईकन म कसरी मेरा पिताकहाँ जान सक्छु र? मेरा पितामाथि आइपर्ने खराबी हेर्नदेखि म डराएको छु ।”

< ಆದಿಕಾಂಡ 44 >