< ಆದಿಕಾಂಡ 43 >

1 ಕಾನಾನ್ ದೇಶದಲ್ಲಿ ಬರವು ಬಹು ಘೋರವಾಗಿತ್ತು.
देशमा अति भयानक अनिकाल परेको थियो ।
2 ಅವರು ಐಗುಪ್ತ ದೇಶದಿಂದ ತಂದಿದ್ದ ದವಸಧಾನ್ಯವು ಮುಗಿದ ನಂತರ ಅವರ ತಂದೆಯು ಅವರಿಗೆ, “ನೀವು ಪುನಃ ಹೋಗಿ ಇನ್ನೂ ಸ್ವಲ್ಪ ಧಾನ್ಯವನ್ನು ಖರೀದಿಸಿಕೊಂಡು ಬನ್ನಿರಿ” ಎಂದನು.
तिनीहरूले मिश्रबाट ल्याएका अनाज खाइसकेपछि तिनीहरूका पिताले तिनीहरूलाई भने, “फेरि हाम्रो लागि अन्‍न किन्‍नलाई जाओ ।”
3 ಅದಕ್ಕೆ ಯೆಹೂದನು ತನ್ನ ತಂದೆಗೆ ಹೇಳಿದ್ದೇನಂದರೆ, “ಆ ಮನುಷ್ಯನು ನಮಗೆ ‘ನಿಮ್ಮ ತಮ್ಮನನ್ನು ಕರೆದುಕೊಂಡು ಬಂದ ಹೊರತು ನನ್ನ ಮುಖವನ್ನು ನೋಡಬಾರದು’ ಎಂದು ಖಂಡಿತವಾಗಿ” ಹೇಳಿದ್ದಾನೆ.
यहूदाले भने, “ती मानिसले हामीलाई गम्भीरतापूर्वक चेताउनी दिएका छन्, 'तिमीहरूले आफ्ना भाइलाई सँगै ल्याएनौ भने तिमीहरूले मेरो मुहार हेर्नेछैनौ ।'
4 ನೀನು ನಮ್ಮ ತಮ್ಮನನ್ನು ನಮ್ಮ ಜೊತೆಯಲ್ಲಿ ಕಳುಹಿಸಿದರೆ ನಾವು ಹೋಗಿ, ನಿನಗೆ ಧಾನ್ಯವನ್ನು ಖರೀದಿಸಿಕೊಂಡು ತರುತ್ತೇವೆ.
तपाईंले हाम्रा भाइलाई हामिसितै पठाउनुभयो भने हामी तल झरेर तपाईंका लागि अन्‍न किन्‍नेछौँ ।
5 ಅವನನ್ನು ನೀನು ಕಳುಹಿಸದೆ ಹೋದರೆ ನಾವು ಹೋಗುವುದಿಲ್ಲ. ಏಕೆಂದರೆ ಆ “ಮನುಷ್ಯನು ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಬಾರದು” ಎಂದು ಹೇಳಿದ್ದಾನೆ.
तर तपाईंले तिनलाई पठाउनुभएन भने हामी तल जाँदैनौँ । किनभने ती मानिसले हामीलाई भनेका छन् 'तिमीहरूले आफ्ना भाइलाई सँगै ल्याएनौ भने तिमीहरूले मेरो मुहार हेर्नेछैनौ' ।”
6 ಅದಕ್ಕೆ ಇಸ್ರಾಯೇಲನು, “ಇನ್ನೊಬ್ಬ ತಮ್ಮನಿದ್ದಾನೆಂದು ಆ ಮನುಷ್ಯನಿಗೆ ಹೇಳಿ, ನೀವು ಯಾಕೆ ನನಗೆ ಕೇಡು ಮಾಡಿದಿರಿ?” ಎಂದು ಹೇಳಿದನು.
इस्राएलले भने, “तिमीहरूको अर्को भाइ थियो भनी ती मानिसलाई बताएर तिमीहरूले किन ममाथि सङ्कष्‍ट ल्यायौ?”
7 ಅವರು, “ನಮ್ಮ ವಿಷಯದಲ್ಲಿಯೂ ನಮ್ಮ ಮನೆಯವರ ವಿಷಯದಲ್ಲಿಯೂ ಆ ಮನುಷ್ಯನು ಸೂಕ್ಷ್ಮವಾಗಿ ವಿಚಾರಿಸಿದನು, ಮತ್ತೆ ಅವನು ನಿಮ್ಮ ತಂದೆಯು ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ತಮ್ಮನಿದ್ದಾನೋ? ಎಂದು ಕೇಳಿದನು. ಆ ಪ್ರಶ್ನೆಗಳಿಗೆ ತಕ್ಕಂತೆ ನಾವು ಉತ್ತರಕೊಟ್ಟೆವು. ಅವನು ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ ಎಂದು ಹೇಳುವನೆಂದು ನಮಗೆ ಹೇಗೆ ತಿಳಿಯುವುದು” ಎಂದರು.
तिनीहरूले भने, “ती मानिसले हामी र हाम्रो परिवारको बारेमा सबै कुरा सोधपुछ गरे । तिनले भने, 'के तपाईंका पिता अझै जीवितै हुनुहुन्छ? के तिमीहरूको अर्को भाइ छ?' हामीले तिनका प्रश्‍नहरूको जवाफ मात्र दिएका हौँ । तिनले 'तिमीहरूका भाइलाई पनि सँगै लिएर आओ' भन्छन् भनी हामीले कसरी जान्‍न सक्थ्यौँ र?
8 ಆಗ ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ, “ಆ ಹುಡುಗನನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಡು, ನಾವು ಹೋಗುವೆವು. ಆಗ ನೀನೂ, ನಾವು ಮತ್ತು ನಮ್ಮ ಮಕ್ಕಳೂ ಸಾಯದೆ ಬದುಕುವೆವು.
यहूदाले आफ्ना पिता इस्राएललाई भने, “केटोलाई मसितै पठाउनुहोस् । तपाईं, हामी र हाम्रा छोराछोरीहरू बाँच्न सकून् भनी हामी उठेर गइहाल्नेछौँ ।
9 ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ಅವನ ವಿಷಯ ನನ್ನನ್ನೇ ಕೇಳಬಹುದು. ನಾನು ಅವನನ್ನು ತಿರುಗಿ ಕರೆದುಕೊಂಡು ಬಂದು ನಿನ್ನೆದುರಿನಲ್ಲಿ ನಿಲ್ಲಿಸದೆ ಹೋದರೆ ಆ ಅಪರಾಧ ಎಂದೆಂದಿಗೂ ನನ್ನ ಮೇಲೆ ಇರಲಿ.
म तिनको जमानी हुनेछु । तपाईंले मसित लेखा लिनुहुनेछ । मैले तिनलाई तपाईंकहाँ फर्काएर तपाईंको सामु ल्याइनँ भने म सदाको लागि त्यसको दोषी हुनेछु ।
10 ೧೦ ನಾವು ತಡಮಾಡದೆ ಹೋಗಿದ್ದರೆ ಇಷ್ಟರೊಳಗೆ ಎರಡನೆಯ ಸಾರಿ ಹೋಗಿ ಬರುತ್ತಿದ್ದೆವು” ಎಂದು ಹೇಳಿದನು.
किनकि हामीले ढिला नगरेका भए निश्‍चय नै अहिलेसम्म त हामी दोस्रो पटक यहाँ फर्किसकेका हुने थियौँ ।”
11 ೧೧ ಅದಕ್ಕೆ ಅವರ ತಂದೆಯಾದ ಇಸ್ರಾಯೇಲನು ಅವರಿಗೆ, “ಹಾಗಿದ್ದರೆ, ನೀವು ಹೀಗೆ ಮಾಡಿರಿ. ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಚೀಲದಲ್ಲಿ ಇಟ್ಟುಕೊಂಡು ಆ ಮನುಷ್ಯನಿಗೆ ಕಾಣಿಕೆಯಾಗಿ ತೆಗೆದುಕೊಂಡು ಹೋಗಿರಿ. ಸ್ವಲ್ಪ ತೈಲ, ಜೇನು, ಸುಗಂಧದ್ರವ್ಯ, ಕಾಕಂಬಿ, ಹಾಲುಮಡ್ಡಿ, ರಕ್ತಬೋಳ, ಗೋಡಂಬಿ, ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ.
तिनीहरूका पिता इस्राएलले तिनीहरूलाई भने, “त्यसो हो भने, अब यसो गर । तिमीहरूका झोलाहरूमा यस देशमा सबैभन्दा उत्तम उब्जनीहरू हाल । ती मानिसलाई यी उपहारहरू लिएर जाओः सुगन्धित लेप, मह, मसला र मूर्र, पेस्ता र हाडे-बदाम ।
12 ೧೨ ಇದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ. ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನೂ ತೆಗೆದುಕೊಂಡು ಹೋಗಿರಿ. ಒಂದು ವೇಳೆ ಅದು ಅವರಿಗೆ ತಿಳಿಯದೆ ಇದ್ದಿರಬಹುದು.
तिमीहरूले दुई गुणा रुपियाँ-पैसा पनि लिएर जाओ । तिमीहरूका बोरा खोल्दा मुखमा फेला परेका रुपियाँ-पैसा पनि सँगै लिएर जाओ । सायद त्यो भुल थियो ।
13 ೧೩ ನಿಮ್ಮ ತಮ್ಮನನ್ನೂ ಕರೆದುಕೊಂಡು, ತಿರುಗಿ ಆ ಮನುಷ್ಯನ ಬಳಿಗೆ ಹೋಗಿರಿ.
तिमीहरूका भाइलाई पनि सँगै लैजाओ । उठेर फेरि ती मानिसकहाँ जाओ ।
14 ೧೪ ಸರ್ವಶಕ್ತನಾದ ದೇವರು ನಿಮ್ಮ ಇನ್ನೊಬ್ಬ ಅಣ್ಣನನ್ನೂ, ಬೆನ್ಯಾಮೀನನನ್ನೂ ನಿಮ್ಮೊಂದಿಗೆ ಕಳುಹಿಸಿಕೊಡುವಂತೆ ನಿಮ್ಮ ಮೇಲೆ ಕರುಣೆ ತೋರುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಿರಬೇಕು ಎಂದರೆ ಹಾಗೆಯೇ ಆಗಲಿ” ಎಂದು ಹೇಳಿದನು.
सर्वशक्तिमान् परमेश्‍वरले ती मानिसको सामु तिमीहरूलाई कृपा देखाऊन् ताकि तिनले तिमीहरूका अर्का दाजु र बेन्यामीनलाई छुटकारा दिऊन् । मेरा सन्तानहरूको कारणले म शोकित हुनैपर्छ भने म हुँला ।”
15 ೧೫ ಆಗ ಆ ಮನುಷ್ಯರು ಕಾಣಿಕೆಯನ್ನು ಸಿದ್ಧಮಾಡಿಕೊಂಡು, ಎರಡರಷ್ಟು ಹಣವನ್ನೂ ತೆಗೆದುಕೊಂಡು, ಬೆನ್ಯಾಮೀನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಐಗುಪ್ತ ದೇಶಕ್ಕೆ ಹೋಗಿ ಯೋಸೇಫನ ಎದುರಿನಲ್ಲಿ ನಿಂತುಕೊಂಡರು.
ती मानिसहरूले उपहार, दुई गुणा रुपियाँ-पैसा र बेन्यामीनलाई लिए, र तिनीहरू उठेर मिश्रतर्फ झरे, अनि योसेफको सामु हाजिर भए ।
16 ೧೬ ಬೆನ್ಯಾಮೀನನು ಅವರ ಸಂಗಡ ಇರುವುದನ್ನು ಯೋಸೇಫನು ಕಂಡು ತನ್ನ ಗೃಹನಿರ್ವಾಹಕನನ್ನು ಕರೆಯಿಸಿ, “ಈ ಮನುಷ್ಯರನ್ನು ಮನೆಯೊಳಗೆ ಕರೆದುಕೊಂಡು ಹೋಗು, ಒಳ್ಳೆ ಕೊಬ್ಬಿದ ಪಶುವನ್ನು ಕೊಯ್ದು ಅಡುಗೆ ಸಿದ್ಧಮಾಡು. ಏಕೆಂದರೆ ಈ ಮನುಷ್ಯರು ಈ ಹೊತ್ತು ಮಧ್ಯಾಹ್ನ ನನ್ನ ಸಂಗಡ ಊಟ ಮಾಡುವರು” ಎಂದು ಅಪ್ಪಣೆಕೊಟ್ಟನು.
योसेफले तिनीहरूसँगै बेन्यामीनलाई देखेपछि तिनले आफ्नो घरको भण्डारेलाई भने, “ती मानिसहरूलाई घरभित्र ल्याओ, र एउटा पशु काटेर भोज तयार पार किनकि दिउँसो यी मानिसहरूले मसँगै खानेछन् ।”
17 ೧೭ ಯೋಸೇಫನ ಅಪ್ಪಣೆಯ ಮೇರೆಗೆ ಗೃಹನಿರ್ವಾಹಕನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಹೋದನು.
त्यस भण्डारले योसेफले भनेजस्तो गर्‍यो । त्यसले ती मानिसहरूलाई योसेफको घरभित्र ल्यायो ।
18 ೧೮ ಯೋಸೇಫನ ಮನೆಗೆ ಕರೆತಂದದ್ದರಿಂದ ಅವರು ಭಯಪಟ್ಟು, “ಮೊದಲನೆಯ ಸಾರಿ ನಮ್ಮ ಚೀಲಗಳಲ್ಲಿ ಹಿಂದಕ್ಕೆ ತೆಗೆದುಕೊಂಡು ಹೋದ ಹಣದ ನಿಮಿತ್ತವೇ ಅವನು ನಮ್ಮನ್ನು ತನ್ನ ಮನೆಯೊಳಗೆ ಕರೆಸಿದ್ದಾನೆ. ನಮ್ಮ ಮೇಲೆ ಫಕ್ಕನೆ ಬಿದ್ದು, ನಮ್ಮನ್ನೂ, ನಮ್ಮ ಕತ್ತೆಗಳನ್ನೂ ತೆಗೆದುಕೊಂಡು ನಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳಲು ಇಲ್ಲಿಗೆ ಕರೆಸಿದ್ದಾನೆ” ಎಂದುಕೊಂಡರು.
ती मानिसहरू योसेफको घरमा लगिएकाले तिनीहरू डराए । तिनीहरूले भने, “पहिलो पटक हाम्रा बोराहरूमा फर्काइएको रुपियाँ-पैसाको कारण हामीलाई यहाँ ल्याइएको हो । तिनले हाम्रो विरुद्धमा मौका खोजेका हुन सक्छन् । तिनले हामीलाई गिरफ्तार गरी दास बनाउन सक्छन्, हाम्रा गधाहरू लैजान सक्छन् ।”
19 ೧೯ ಆಗ ಅವರು ಯೋಸೇಫನ ಗೃಹನಿರ್ವಾಹಕನ ಬಳಿಗೆ ಹೋಗಿ ಮನೆಯ ಬಾಗಿಲ ಬಳಿ ನಿಂತುಕೊಂಡು ಅವನ ಸಂಗಡ ಮಾತನಾಡಿ ಅವನಿಗೆ,
तिनीहरू योसेफको घरको भण्डारेकहाँ गए, र घरको ढोकामा तिनीहरूले उसलाई भने,
20 ೨೦ “ಅಯ್ಯಾ, ಮೊದಲನೆಯ ಸಾರಿ ನಾವು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೇವು.
“हजुर, हामी पहिलो पटक अन्‍न किन्‍न आयौँ ।
21 ೨೧ ನಾವು ಹೊರಟುಹೋದ ನಂತರ ಇಳಿದುಕೊಂಡಿದ್ದ ಸ್ಥಳದಲ್ಲಿ ನಮ್ಮ ಚೀಲಗಳನ್ನು ಬಿಚ್ಚಿ ನೋಡಿದಾಗ ಪ್ರತಿಯೊಬ್ಬನ ಹಣವು ತೂಕದಲ್ಲಿ ಏನೂ ಕಡಿಮೆಯಿಲ್ಲದೆ ನಮ್ಮ ನಮ್ಮ ಚೀಲದಲ್ಲೇ ಇತ್ತು. ಅದನ್ನು ಹಿಂತಿರುಗಿಸಲು ತಂದಿದ್ದೇವೆ.
हामी विश्राम स्थलमा पुग्यौँ, अनि बोराहरू खोल्दा हरेकको रुपियाँ-पैसा हरेकको बोराको मुखैमा थियो । त्यहाँ हाम्रा सबै रुपियाँ-पैसा थिए । हामीले ती हामीसँगै ल्याएका छौँ । अन्‍न किन्‍नलाई हामीले थप रुपियाँ-पैसा पनि ल्याएका छौँ ।
22 ೨೨ ದವಸವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣವನ್ನೂ ತಂದಿದ್ದೇವೆ. ಆ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೋ ನಮಗೆ ತಿಳಿಯದು” ಎಂದು ಹೇಳಿದರು.
हाम्रा रुपियाँ-पैसा हाम्रा बोराहरूमा कसले राखिदियो भनी हामीलाई थाहा छैन ।”
23 ೨೩ ಅದಕ್ಕೆ ಅವನು, “ನೀವು ಸಮಾಧಾನವಾಗಿರಿ. ನೀವೇನೂ ಭಯಪಡಬೇಡಿರಿ ನಿಮಗೂ ನಿಮ್ಮ ತಂದೆಗೂ ದೇವರಾಗಿರುವಾತನು ನಿಮ್ಮ ಚೀಲಗಳಲ್ಲಿ ಹಣವನ್ನು ಇಟ್ಟಿರಬೇಕು. ನಿಮ್ಮ ಹಣವು ನನಗೆ ಮುಟ್ಟಿತು” ಎಂದು ಹೇಳಿ, ಅವನು ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು.
भण्डारेले भन्यो, “तपाईंहरूलाई शान्ति होस् । नडराउनुहोस् । तपाईंका परमेश्‍वर र तपाईंका पिताका परमेश्‍वरले नै तपाईंका बोराहरूमा तपाईंहरूको रुपियाँ-पैसा हालिदिएको हुनुपर्छ । मैले तपाईंहरूको रुपियाँ-पैसा त पाएकै थिएँ ।” त्यसपछि भण्डारेले शिमियोनलाई तिनीहरूकहाँ ल्यायो ।
24 ೨೪ ಅವರೆಲ್ಲರನ್ನೂ ಯೋಸೇಫನ ಮನೆಯೊಳಗೆ ಕರೆದುಕೊಂಡು ಬಂದನು. ಕಾಲುಗಳನ್ನು ತೊಳೆಯುವುದಕ್ಕೆ ನೀರನ್ನು ಕೊಡಿಸಿ, ಅವರ ಕತ್ತೆಗಳಿಗೂ ಮೇವು ಹಾಕಿಸಿದನು.
भण्डारेले ती मानिसहरूलाई योसेफको घरभित्र लग्यो । त्यसले पानी दियो, र तिनीहरूले आ-आफ्ना गोडा धोए । त्यसले तिनीहरूका गधाहरूलाई पनि दानापानी दियो ।
25 ೨೫ ತಾವು ಅಲ್ಲೇ ಊಟ ಮಾಡಬೇಕೆಂಬ ಸಂಗತಿಯನ್ನು ಅವರು ಕೇಳಿದ್ದರಿಂದ ತಾವು ತಂದಿದ್ದ ಕಾಣಿಕೆಯನ್ನು ಯೋಸೇಫನಿಗೆ ಕೊಡಲು ಸಿದ್ಧಮಾಡಿಕೊಂಡರು.
तिनीहरूले दिउँसो योसेफको आगमनको लागि उपहारहरू तयार पारिराखे, किनकि तिनीहरूले त्यहाँ सँगसँगै खाने थिए भनी तिनीहरूले सुनेका थिए ।
26 ೨೬ ಯೋಸೇಫನು ಮನೆಗೆ ಬಂದಾಗ, ಅವರು ತಮ್ಮ ಕೈಯಲ್ಲಿದ್ದ ಕಾಣಿಕೆಯನ್ನು ಮನೆಯೊಳಗೆ ತಂದು, ಅವನಿಗೆ ಕೊಟ್ಟು, ಅವನ ಮುಂದೆ ಅಡ್ಡಬಿದ್ದರು.
योसेफ घरमा आउँदा तिनीहरूले आफ्ना हातमा भएका उपहारहरू घरभित्र ल्याए, र भुइँसम्मै निहुरेर तिनलाई ढोग गरे ।
27 ೨೭ ಅವನು ಅವರ ಯೋಗ ಕ್ಷೇಮವನ್ನು ವಿಚಾರಿಸಿ ಅವರಿಗೆ ಹೇಳಿದ್ದೇನೆಂದರೆ, “ನೀವು ಹೇಳಿದ, ಮುದುಕನಾಗಿರುವ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?” ಎಂದು ಕೇಳಿದನು.
तिनले तिनीहरूको भलाकुसारीको बारेमा सोधपुछ गरे, “तपाईंहरूले बताउनुभएका तपाईंहरूका वृद्ध पिता सञ्चै हुनुहुन्छ? के तिनी अझै जीवितै छन्?”
28 ೨೮ ಅವರು ಅದಕ್ಕೆ, “ನಿನ್ನ ಸೇವಕನಾದ ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಬದುಕಿದ್ದಾನೆ” ಎಂದು ಹೇಳಿ, ತಮ್ಮ ತಲೆಗಳನ್ನು ಬಾಗಿಸಿ ಅವನಿಗೆ ಅಡ್ಡಬಿದ್ದರು.
तिनीहरूले भने, “तपाईंका दास हाम्रा पिता सञ्चै हुनुहुन्छ । उहाँ अझै जीवितै हुनुहुन्छ ।” तिनीहरू भुइँमा लमतन्‍न परेर तिनलाई ढोग गरे ।
29 ೨೯ ಆಗ ಅವನು ಕಣ್ಣೆತ್ತಿ ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ನೋಡಿ, “ನೀವು ಹೇಳಿದ ನಿಮ್ಮ ಕಿರಿಯ ತಮ್ಮನು ಇವನೋ?” ಎಂದು ಕೇಳಿ ಅವನಿಗೆ, “ಮಗನೇ, ದೇವರ ದಯೆ ನಿನ್ನ ಮೇಲೆ ಇರಲಿ” ಎಂದು ಹೇಳಿದನು.
तिनले आफ्ना आँखा उठाउँदा तिनले आफ्नी आमाका छोरा आफ्ना भाइ बेन्यामीनलाई देखेपछि तिनले भने, “तिमीहरूले मलाई बताएको तिमीहरूका कान्छा भाइ यिनै हुन्?” त्यसपछि तिनले भने, “मेरा छोरा, तिमीमाथि परमेश्‍वर अनुग्रही हुनुभएको होस्!”
30 ೩೦ ಯೋಸೇಫನು ಅವಸರವಾಗಿ ಎದ್ದು ತನ್ನ ಕೋಣೆಯೊಳಗೆ ಹೋದನು. ಏಕೆಂದರೆ ತನ್ನ ಕರಳು ತಮ್ಮನ ಮೇಲೆ ಮರುಗಿದ್ದರಿಂದ ಅವನು ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು.
योसेफ कोठाबाट बाहिर जान हतारिए किनकि तिनी आफ्ना भाइको बारेमा स्‍नेहले भरिएका थिए । तिनले रुने ठाउँ खोजे । तिनी आफ्नो कोठाभित्र पसी रोए ।
31 ೩೧ ಆ ಮೇಲೆ ಮುಖವನ್ನು ತೊಳೆದುಕೊಂಡು ಹೊರಗೆ ಬಂದು, ಮನಸ್ಸನ್ನು ಬಿಗಿ ಹಿಡಿದು, “ಊಟಕ್ಕೆ ಬಡಿಸಿರಿ” ಎಂದು ಅಪ್ಪಣೆ ಕೊಟ್ಟನು.
आफ्नो मुख धोई तिनी बाहिर आए । आफूलाई नियन्त्रण गर्दै तिनले भने, “खाना ल्याओ ।”
32 ೩೨ ಪರಿಚಾರಕರು ಅವನಿಗೂ ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡವಿದ್ದ ಐಗುಪ್ತರಿಗೂ ಬೇರೆ ಬೇರೆಯಾಗಿ ಊಟಕ್ಕೆ ಬಡಿಸಿದರು. ಏಕೆಂದರೆ ಐಗುಪ್ತರು ಇಬ್ರಿಯರ ಜೊತೆ ಸಹಪಂಕ್ತಿಯಲ್ಲಿ ಊಟಮಾಡುತ್ತಿರಲಿಲ್ಲ. ಅದು ಐಗುಪ್ತರಿಗೆ ಅಸಹ್ಯವಾಗಿತ್ತು.
नोकरहरूले योसेफको लागि छुट्टै र तिनका दाजुहरूका लागि छुट्टै खाना पस्के । मिश्रीहरूले छुट्टै खाना खाए किनकि तिनीहरूले हिब्रूहरूसित खान सक्दैनथे। त्यसो गर्नु मिश्रीहरूका लागि अत्यन्तै घृणित कुरो थियो ।
33 ೩೩ ಯೋಸೇಫನು ತನ್ನ ಅಣ್ಣತಮ್ಮಂದಿರನ್ನು ಹಿರಿಯವನು ಮೊದಲುಗೊಂಡು ಕಿರಿಯವನವರೆಗೂ ಅವರವರ ವಯಸ್ಸಿನ ಪ್ರಕಾರವೇ ಕುಳಿತುಕೊಳ್ಳುವಂತೆ ಮಾಡಿದ್ದರಿಂದ, ಅವರು ತಮ್ಮೊಳಗೆ ಆಶ್ಚರ್ಯಪಟ್ಟರು.
दाजुहरू योसेफका सामु बसे । तिनीहरू जेठादेखि कान्छासम्म मिलेर बसेका थिए । तिनीहरू सबै सँगसँगै छक्‍क परेका थिए ।
34 ೩೪ ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರಗಳಲ್ಲಿ ಭಾಗಗಳನ್ನು ಕಳುಹಿಸಿದಾಗ, ಬೆನ್ಯಾಮೀನನಿಗೆ ಬಂದ ಭಾಗವು ಮಿಕ್ಕಾದವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಪಾನಮಾಡಿ ಅವನ ಸಂಗಡ ಸಂತೋಷದಿಂದ ಇದ್ದರು.
आफ्नो सामु पस्किएको खानाको केही भाग योसेफले तिनीहरूकहाँ पठाए । तर बेन्यामीनको भागचाहिँ अरू कुनै दाजुहरूको भन्दा पाँच गुणा बेसी थियो । तिनीहरूले पिए र तिनीहरू तिनीसँगै खुसी भए ।

< ಆದಿಕಾಂಡ 43 >