< ಆದಿಕಾಂಡ 32 >

1 ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು.
యాకోబు తన దారిలో వెళ్తూ ఉండగా దేవదూతలు అతనికి ఎదురయ్యారు.
2 ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೇನಾನಿವೇಶ” ಎಂದು ಹೇಳಿ ಆ ಸ್ಥಳಕ್ಕೆ “ಮಹನಯಿಮ್” ಎಂದು ಹೆಸರಿಟ್ಟನು.
యాకోబు వారిని చూసి “ఇది దేవుని సేన” అని చెప్పి ఆ చోటికి మహనయీము అని పేరు పెట్టాడు.
3 ಬಳಿಕ ಯಾಕೋಬನು ತನಗಿಂತ ಮೊದಲು ಎದೋಮ್ಯರ ಪ್ರದೇಶವಾಗಿರುವ ಸೇಯೀರ್ ಸೀಮೆಗೆ ತನ್ನ ಅಣ್ಣನಾದ ಏಸಾವನ ಬಳಿಗೆ ಸೇವಕರನ್ನು ಕಳುಹಿಸಿದನು.
యాకోబు ఎదోము ప్రాంతంలో, అంటే శేయీరు దేశంలో ఉన్న తన సోదరుడు ఏశావు దగ్గరికి తనకు ముందుగా దూతలను పంపి,
4 ಕಳುಹಿಸುವಾಗ ಅವರಿಗೆ “ನೀವು ನನ್ನ ಪ್ರಭುವಾದ ಏಸಾವನ ಬಳಿಗೆ ಹೋಗಿ ಅವನಿಗೆ, ‘ನಿನ್ನ ಸೇವಕನಾದ ಯಾಕೋಬನು ಇಷ್ಟು ದಿನ ಲಾಬಾನನ ಬಳಿಯಲ್ಲಿ ವಾಸವಾಗಿದ್ದನು
“మీరు నా ప్రభువైన ఏశావుతో, ‘ఇంతవరకూ నేను లాబాను దగ్గర నివసించాను.
5 ಈಗ ಅವನಿಗೆ ಎತ್ತು, ಕತ್ತೆ ಮುಂತಾದ ಪಶುಗಳ ಹಿಂಡುಗಳೂ ದಾಸದಾಸಿಯರು ಇದ್ದಾರೆ. ಅವನು ತಮ್ಮ ದಯೆ ಆತನ ಮೇಲೆ ಇರಬೇಕೆಂದು ತಿಳಿಸುವುದಕ್ಕೆ ನಿಮ್ಮನ್ನು ಕಳುಹಿಸಿದ್ದಾನೆ’” ಎಂದು ಹೇಳಿರಿ ಅಂದನು.
నాకు పశువులూ గాడిదలూ మందలూ దాసదాసీజనమూ ఉన్నారు. నీ అనుగ్రహం నాపైనఉండాలని నా ప్రభువుకు తెలపడానికి పంపాను అని నీ సేవకుడైన యాకోబు అన్నాడు’ అని చెప్పండి” అని వారికి ఆజ్ఞాపించాడు.
6 ತರುವಾಯ ಆ ಸೇವಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಹತ್ತಿರಕ್ಕೆ ಹೋಗಿ ಬಂದಿದ್ದೇವೆ, ಅವನು ನಾನೂರು ಜನರ ಸಮೇತ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ” ಎಂದು ಹೇಳಿದಾಗ,
ఆ దూతలు యాకోబు దగ్గరికి తిరిగివచ్చి “మేము నీ సోదరుడైన ఏశావు దగ్గరికి వెళ్ళాం, అతడు నాలుగు వందల మందితో నీకు ఎదురు వస్తున్నాడు” అని చెప్పారు.
7 ಯಾಕೋಬನಿಗೆ ಬಹು ಭಯವೂ ಕಳವಳವೂ ಉಂಟಾದವು. ಅವನು ತನ್ನೊಂದಿಗಿದ್ದ ಜನರನ್ನು, ಕುರಿದನಗಳನ್ನು ಹಾಗೂ ಒಂಟೆಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿದನು.
అప్పుడు యాకోబు చాలా భయపడి, హతాశుడై,
8 ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ಬಿದ್ದರೂ ಮತ್ತೊಂದು ಗುಂಪು ತಪ್ಪಿಸಿಕೊಂಡು ಹೋಗಬಹುದು” ಅಂದುಕೊಂಡನು.
“ఏశావు ఒక గుంపు మీదికి వచ్చి దాన్ని హతం చేస్తే మిగిలిన గుంపు తప్పించుకుని పోవచ్చు” అనుకుని, తనతో ఉన్న ప్రజలనూ మందలనూ పశువులనూ ఒంటెలనూ రెండు గుంపులు చేశాడు.
9 ಇದಲ್ಲದೆ ಯಾಕೋಬನು ದೇವರನ್ನು ಪ್ರಾರ್ಥಿಸಿ, “ಯೆಹೋವನೇ, ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ‘ನಿನ್ನ ಸ್ವದೇಶಕ್ಕೂ, ಬಂಧುಗಳ ಬಳಿಗೂ ತಿರುಗಿ ಹೋಗಬೇಕೆಂದು ನನಗೆ ಆಜ್ಞಾಪಿಸಿ ನಿನಗೆ ಒಳ್ಳೆಯದನ್ನು ಮಾಡುವೆನೆಂದು’ ನನಗೆ ವಾಗ್ದಾನ ಮಾಡಿದ ಯೆಹೋವನೇ,
అప్పుడు యాకోబు “నా తండ్రి అబ్రాహాము దేవా, నా తండ్రి ఇస్సాకు దేవా, ‘నీ దేశానికీ, నీ బంధువుల దగ్గరికీ తిరిగి వెళ్ళు, నీకు మేలు చేస్తాను’ అని నాతో చెప్పిన యెహోవా,
10 ೧೦ ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ನಂಬಿಕೆಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಯೋಗ್ಯನು. ನಾನು ಮೊದಲು ಈ ಯೊರ್ದನ್ ನದಿಯನ್ನು ದಾಟಿದಾಗ ನನ್ನ ಬಳಿಯಲ್ಲಿ ಒಂದು ಕೋಲು ಮಾತ್ರವೇ ಇತ್ತು. ಈಗ ಎರಡು ಗುಂಪುಗಳಿಗೆ ಒಡೆಯನಾಗಿದ್ದೇನೆ.
౧౦నువ్వు నీ సేవకుడికి చేసిన ఉపకారాలన్నిటికీ నమ్మకత్వమంతటికీ నేను పాత్రుణ్ణి కాను. ఎందుకంటే, కేవలం ఈ నా చేతి కర్రతో ఈ యొర్దాను దాటాను. ఇప్పుడు నేను రెండు గుంపులయ్యాను.
11 ೧೧ ನನ್ನ ಅಣ್ಣನಾದ ಏಸಾವನು ಬಂದು ನನ್ನನ್ನೂ, ನನ್ನ ಮಕ್ಕಳನ್ನೂ, ಅವರ ತಾಯಿಯರನ್ನೂ ಕೊಂದುಹಾಕುವನೋ ಎಂದು ನನಗೆ ಭಯವಿದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ,
౧౧నా సోదరుడు ఏశావు చేతి నుండి దయచేసి నన్ను తప్పించు. అతడు వచ్చి పిల్లలనీ వారి తల్లులనూ నన్నూ చంపుతాడేమో అని భయపడుతున్నాను.
12 ೧೨ ‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡಿ, ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿ ಮಾಡುವೆನೆಂದು ನೀನು ನನಗೆ ಹೇಳಿದ್ದೀಯಲ್ಲಾ?’” ಎಂದನು.
౧౨నాతో, ‘నేను నీకు తోడై తప్పకుండా మేలు చేస్తూ వారి సంఖ్యను బట్టి లెక్కించలేని సముద్రపు ఇసకలాగా నీ సంతానాన్ని విస్తరింపజేస్తాను’ అని నువ్వు సెలవిచ్చావు కదా” అన్నాడు.
13 ೧೩ ಯಾಕೋಬನು ಆ ರಾತ್ರಿ ಅಲ್ಲೇ ತಂಗಿದನು. ತಾನು ತಂದದ್ದರಲ್ಲಿ ಕೆಲವನ್ನು ಸಹೋದರನಾದ ಏಸಾವನಿಗೆ ಕಾಣಿಕೆಯಾಗಿ ತೆಗೆದುಕೊಂಡನು.
౧౩అతడు అక్కడ ఆ రాత్రి గడిపి తాను సంపాదించిన దానిలో తన అన్న ఏశావు కోసం ఒక కానుకను సిద్ధం చేశాడు.
14 ೧೪ ಇನ್ನೂರು ಆಡುಕುರಿ, ಇಪ್ಪತ್ತು ಹೋತ, ಇಪ್ಪತ್ತು ಟಗರು, ಮರಿಯೊಡನೆ ಹಾಲು ಕರೆಯುವ
౧౪అతడు రెండువందల మేకలూ ఇరవై మేక పోతులూ రెండువందల గొర్రెలూ ఇరవై పొట్టేళ్ళూ
15 ೧೫ ಮೂವತ್ತು ಒಂಟೆ, ನಲ್ವತ್ತು ಆಕಳು, ಹತ್ತು ಹೋರಿ ಇಪ್ಪತ್ತು ಹೆಣ್ಣುಕತ್ತೆ, ಹತ್ತು ಗಂಡುಕತ್ತೆ ಇವುಗಳನ್ನು ತೆಗೆದುಕೊಂಡನು.
౧౫ముప్ఫై పాడి ఒంటెలూ వాటి పిల్లలూ నలభై ఆవులూ పది ఆబోతులూ ఇరవై ఆడ గాడిదలూ పది గాడిద పిల్లలూ తీసుకు మందమందను వేరు వేరుగా ఉంచాడు.
16 ೧೬ ಇವುಗಳಲ್ಲಿ ಪ್ರತಿಯೊಂದು ಹಿಂಡನ್ನು ತನ್ನ ಸೇವಕನಿಗೆ ಒಪ್ಪಿಸಿ, “ನೀವು ನನಗಿಂತ ಮುಂಚಿತವಾಗಿ ನದಿಯನ್ನು ದಾಟಿ ಹೋಗಿರಿ ಮತ್ತು ಪ್ರತಿ ಹಿಂಡು ಹಿಂಡಿಗೂ ಮಧ್ಯದಲ್ಲಿ ಅಂತರವಿರಲಿ” ಎಂದನು.
౧౬వాటిని అతడు తన దాసులకు అప్పగించి “మీరు మంద మందకు మధ్య ఖాళీ ఉంచి నాకంటే ముందుగా నడవండి” అని వారితో చెప్పాడు.
17 ೧೭ ಮೊದಲನೆಯ ಹಿಂಡಿನ ಮೇಲ್ವಿಚಾರಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಸೇವಕನು? ಎಲ್ಲಿಗೆ ಹೋಗುತ್ತೀ? ನಿನ್ನ ಮುಂದೆ ಇರುವ ಇವೆಲ್ಲಾ ಯಾರದು?’” ಎಂದು ಕೇಳಿದರೆ,
౧౭వారిలో మొదటివాడితో “నా సోదరుడు ఏశావు నీకు ఎదురుగా వచ్చి, ‘నీవెవరి వాడివి? ఎక్కడికి వెళ్తున్నావు? నీ ముందు ఉన్నవి ఎవరివి?’ అని నిన్ను అడిగితే
18 ೧೮ ಆಗ ನೀನು, “ಇವು ನಿಮ್ಮ ಸೇವಕನಾದ ಯಾಕೋಬನದು. ತನ್ನ ಪ್ರಭುಗಳಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾನೆ. ಅವನೂ ನಮ್ಮ ಹಿಂದೆ ಬರುತ್ತಿದ್ದಾನೆ” ಎಂದು ಉತ್ತರಕೊಡಬೇಕು ಎಂಬುದಾಗಿ ಅಪ್ಪಣೆಕೊಟ್ಟನು.
౧౮నువ్వు, ‘ఇవి నీ సేవకుడైన యాకోబువి, ఇది నా ప్రభువైన ఏశావు కోసం అతడు పంపిన కానుక. అదిగో అతడు మా వెనక వస్తున్నాడు’ అని చెప్పు” అని ఆజ్ఞాపించాడు.
19 ೧೯ ಹಾಗೆಯೇ ಎರಡನೆಯವನಿಗೂ ಮೂರನೆಯವನಿಗೂ ಹಿಂಡುಗಳ ಹಿಂದೆ ಹೋದವರೆಲ್ಲರಿಗೂ, “ನೀವು ಏಸಾವನನ್ನು ನೋಡುವಾಗ ಇದೇ ರೀತಿಯಾಗಿ ಹೇಳಬೇಕು. ನಿನ್ನ ಸೇವಕನಾದ ಯಾಕೋಬನೇ ನಮ್ಮ ಹಿಂದೆ ಬರುತ್ತಿದ್ದಾನೆ ಎನ್ನಿರಿ” ಎಂದು ಅಪ್ಪಣೆಕೊಟ್ಟನು.
౧౯“నేను ముందుగా పంపుతున్న కానుకల వలన అతనిని శాంతింపజేసిన తరువాత నేను అతనికి కనబడతాను. అప్పుడతడు ఒకవేళ నా పైన దయ చూపుతాడేమో.
20 ೨೦ ಯಾಕೋಬನು ತನ್ನೊಳಗೆ, “ನನ್ನ ಮುಂದೆ ಹೋಗುವ ಈ ಕಾಣಿಕೆಯಿಂದ ಏಸಾವನನ್ನು ಸಮಾಧಾನಪಡಿಸುವೆನು. ಆಮೇಲೆ ಅವನನ್ನು ಸಂಧಿಸುವಾಗ, ಒಂದು ವೇಳೆ ನನ್ನನ್ನು ಪ್ರೀತಿಯಿಂದ ಸ್ವೀಕರಿಸುವನೇನೋ” ಎಂದುಕೊಂಡನು.
౨౦కాబట్టి మీరు ఏశావును చూసి, ‘ఇదిగో నీ సేవకుడైన యాకోబు మా వెనకాలే వస్తున్నాడు’ అని చెప్పాలి” అని వారికి చెప్పాడు. రెండవ గుంపుకు, మూడవ గుంపుకు, మందల వెంబడి వెళ్ళిన వారికందరికీ అతడు ఇదే విధంగా ఆజ్ఞాపించాడు.
21 ೨೧ ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟು ಹೋಯಿತು. ತಾನು ಆ ರಾತ್ರಿ ತನ್ನ ಪಾಳೆಯದಲ್ಲೇ ಉಳಿದುಕೊಂಡನು.
౨౧అతడు ఆ కానుకను తనకు ముందుగా పంపి తాను గుంపులో ఆ రాత్రి నిలిచిపోయాడు.
22 ೨೨ ಆ ರಾತ್ರಿ ಅವನು ತನ್ನ ಇಬ್ಬರು ಹೆಂಡತಿಯರನ್ನು, ಇಬ್ಬರು ದಾಸಿಯರನ್ನು ಹಾಗೂ ಹನ್ನೊಂದು ಮಂದಿ ಮಕ್ಕಳನ್ನು ಕರೆದುಕೊಂಡು ಯಬ್ಬೋಕ್ ಹೊಳೆಯನ್ನು ದಾಟಿದನು.
౨౨ఆ రాత్రి అతడు లేచి తన ఇద్దరు భార్యలనూ తన ఇద్దరు దాసీలనీ తన పదకొండు మంది పిల్లలనూ తీసుకు యబ్బోకు రేవు దాటిపోయాడు.
23 ೨೩ ಅವರನ್ನೂ, ತನ್ನ ಆಸ್ತಿಯೆಲ್ಲವನ್ನೂ ದಾಟಿಸಿದ ಮೇಲೆ
౨౩యాకోబు వారిని ఆ యేరు దాటించి తనకు కలిగిందంతా వారితో పంపేశాడు.
24 ೨೪ ಯಾಕೋಬನು ಒಂಟಿಯಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು.
౨౪యాకోబు ఒక్కడు మిగిలి పోయాడు. ఒక మనిషి తెల్లవారేదాకా అతనితో పెనుగులాడాడు.
25 ೨೫ ಆ ಪುರುಷನು ತಾನು ಗೆಲ್ಲದೆ ಇರುವುದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು.
౨౫తాను గెలవకపోవడం చూసి అతడు యాకోబు తొడ గూటి మీద కొట్టాడు. అప్పుడు ఆయనతో పెనుగులాడ్డం వలన యాకోబు తొడ గూడు జారిపోయింది.
26 ೨೬ ಆ ಪುರುಷನು, “ನನ್ನನ್ನು ಬಿಡು, ಬೆಳಗಾಗುತ್ತಿದೆ” ಎನ್ನಲು, ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡುವುದಿಲ್ಲ” ಎಂದನು.
౨౬ఆయన “తెల్లవారుతున్నది, నన్ను పోనియ్యి” అన్నప్పుడు, యాకోబు “నువ్వు నన్ను ఆశీర్వదిస్తేనే గాని నిన్ను పోనియ్యను” అన్నాడు.
27 ೨೭ ಆ ಪುರುಷನು, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಅವನು, “ಯಾಕೋಬನು” ಎಂದಾಗ,
౨౭ఆయన “నీ పేరేమిటి?” అని అడిగాడు. అతడు “యాకోబు” అని చెప్పాడు.
28 ೨೮ ಅವನು ಯಾಕೋಬನಿಗೆ, “ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಲ್ಪಡುವುದಿಲ್ಲ; ನೀನು ದೇವರ ಸಂಗಡಲೂ, ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದುದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರಾಗುವುದು” ಎಂದು ಹೇಳಿದನು.
౨౮అప్పుడాయన “నువ్వు దేవునితో, మనుషులతో పోరాడి గెలిచావు. కాబట్టి ఇక ముందు నీ పేరు ఇశ్రాయేలు, యాకోబు కాదు” అని చెప్పాడు.
29 ೨೯ ಯಾಕೋಬನು, “ನೀನು ನಿನ್ನ ಹೆಸರನ್ನು ನನಗೆ ತಿಳಿಸಬೇಕು” ಎಂದು ಅವನನ್ನು ಕೇಳಿಕೊಂಡಾಗ ಆತನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು.
౨౯అప్పుడు యాకోబు “దయచేసి నీ పేరు చెప్పు” అన్నాడు. అందుకాయన “నా పేరు ఎందుకు అడుగుతావు?” అని చెప్పి అక్కడ అతణ్ణి ఆశీర్వదించాడు.
30 ೩೦ ಆಗ ಯಾಕೋಬನು, “ನಾನು ದೇವರನ್ನು ಪ್ರತ್ಯಕ್ಷವಾಗಿ ನೋಡಿದೆನಲ್ಲಾ; ಆದರೂ ನನ್ನ ಪ್ರಾಣ ಉಳಿದಿದೆ” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು,
౩౦యాకోబు “నేను ముఖాముఖిగా దేవుణ్ణి చూశాను. అయినా నా ప్రాణం నిలిచింది” అని ఆ స్థలానికి “పెనూయేలు” అని పేరు పెట్టాడు.
31 ೩೧ ಅವನು, ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು. ಆದರೆ ಯಾಕೋಬನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು.
౩౧అతడు పెనూయేలు నుండి బయలుదేరి నప్పుడు సూర్యోదయం అయ్యింది. అతడు తొడ కుంటుతూ నడిచాడు.
32 ೩೨ ಆ ಪುರುಷನು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಾಯೇಲ್ಯರು ಇಂದಿನ ವರೆಗೂ ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವುದಿಲ್ಲ.
౩౨ఆయన యాకోబు తొడగూటి మీది తుంటినరంపై కొట్టి గూడు వసిలేలా చేసాడు కాబట్టి ఈనాటి వరకూ ఇశ్రాయేలీయులు తొడ గూటి మీద ఉన్న తుంటినరాన్ని తినరు.

< ಆದಿಕಾಂಡ 32 >