< ಆದಿಕಾಂಡ 32 >
1 ೧ ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು.
Ug si Jacob mipadayon sa iyang paglakat ug gisugat siya sa mga manolonda sa Dios.
2 ೨ ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೇನಾನಿವೇಶ” ಎಂದು ಹೇಳಿ ಆ ಸ್ಥಳಕ್ಕೆ “ಮಹನಯಿಮ್” ಎಂದು ಹೆಸರಿಟ್ಟನು.
Ug si Jacob miingon, sa pagkakita kanila: Kini mao ang panon sa Dios ug gihinganlan niya kadtong dapita Mahanaim.
3 ೩ ಬಳಿಕ ಯಾಕೋಬನು ತನಗಿಂತ ಮೊದಲು ಎದೋಮ್ಯರ ಪ್ರದೇಶವಾಗಿರುವ ಸೇಯೀರ್ ಸೀಮೆಗೆ ತನ್ನ ಅಣ್ಣನಾದ ಏಸಾವನ ಬಳಿಗೆ ಸೇವಕರನ್ನು ಕಳುಹಿಸಿದನು.
Ug si Jacob nagsugo ug mga sulogoon sa unahan niya ngadto kang Esau nga iyang igsoon didto sa yuta sa Seir, sa kapatagan sa Edom.
4 ೪ ಕಳುಹಿಸುವಾಗ ಅವರಿಗೆ “ನೀವು ನನ್ನ ಪ್ರಭುವಾದ ಏಸಾವನ ಬಳಿಗೆ ಹೋಗಿ ಅವನಿಗೆ, ‘ನಿನ್ನ ಸೇವಕನಾದ ಯಾಕೋಬನು ಇಷ್ಟು ದಿನ ಲಾಬಾನನ ಬಳಿಯಲ್ಲಿ ವಾಸವಾಗಿದ್ದನು
Ug siya nagsugo kanila nga nag-ingon: Mao kini ang igaingon ninyo sa akong ginoo nga si Esau: Mao kini ang giingon sa imong alagad nga si Jacob: Kang Laban nagpuyo ako, ug nadugay ako didto hangtud karon.
5 ೫ ಈಗ ಅವನಿಗೆ ಎತ್ತು, ಕತ್ತೆ ಮುಂತಾದ ಪಶುಗಳ ಹಿಂಡುಗಳೂ ದಾಸದಾಸಿಯರು ಇದ್ದಾರೆ. ಅವನು ತಮ್ಮ ದಯೆ ಆತನ ಮೇಲೆ ಇರಬೇಕೆಂದು ತಿಳಿಸುವುದಕ್ಕೆ ನಿಮ್ಮನ್ನು ಕಳುಹಿಸಿದ್ದಾನೆ’” ಎಂದು ಹೇಳಿರಿ ಅಂದನು.
Ug ako adunay mga vaca, ug mga asno, ug mga panon sa mga carnero, ug mga binatonan nga lalake ug mga sulogoong babaye, ug nagsugo ako sa pag-ingon sa akong ginoo aron ako mahimut-an sa iyang mga mata.
6 ೬ ತರುವಾಯ ಆ ಸೇವಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಹತ್ತಿರಕ್ಕೆ ಹೋಗಿ ಬಂದಿದ್ದೇವೆ, ಅವನು ನಾನೂರು ಜನರ ಸಮೇತ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ” ಎಂದು ಹೇಳಿದಾಗ,
Ug ang mga sinugo nanagpamalik kang Jacob nga nagaingon: Nakadangat kami sa imong igsoon nga si Esau, ug ingon usab siya moanhi sa pagsugat kanimo, ug uban kaniya ang upat ka gatus ka tawo.
7 ೭ ಯಾಕೋಬನಿಗೆ ಬಹು ಭಯವೂ ಕಳವಳವೂ ಉಂಟಾದವು. ಅವನು ತನ್ನೊಂದಿಗಿದ್ದ ಜನರನ್ನು, ಕುರಿದನಗಳನ್ನು ಹಾಗೂ ಒಂಟೆಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿದನು.
Unya si Jacob nahadlok sa hilabihan gayud ug nagsubo siya; ug gibahinbahin niya ang mga tawo nga diha uban kaniya, ug ang mga panon sa mga carnero ug ang mga vaca, ug ang mga camello, sa duruha ka pundok.
8 ೮ ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ಬಿದ್ದರೂ ಮತ್ತೊಂದು ಗುಂಪು ತಪ್ಪಿಸಿಕೊಂಡು ಹೋಗಬಹುದು” ಅಂದುಕೊಂಡನು.
Ug miingon: Kong umanhi si Esau ug patyon ang usa ka pundok; ang nahabiling pundok makakalagiw,
9 ೯ ಇದಲ್ಲದೆ ಯಾಕೋಬನು ದೇವರನ್ನು ಪ್ರಾರ್ಥಿಸಿ, “ಯೆಹೋವನೇ, ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ‘ನಿನ್ನ ಸ್ವದೇಶಕ್ಕೂ, ಬಂಧುಗಳ ಬಳಿಗೂ ತಿರುಗಿ ಹೋಗಬೇಕೆಂದು ನನಗೆ ಆಜ್ಞಾಪಿಸಿ ನಿನಗೆ ಒಳ್ಳೆಯದನ್ನು ಮಾಡುವೆನೆಂದು’ ನನಗೆ ವಾಗ್ದಾನ ಮಾಡಿದ ಯೆಹೋವನೇ,
Unya miingon si Jacob: O Dios sa akong amahan nga si Abraham ug Dios sa akong amahan nga si Isaac, O Jehova nga miingon kanako: Bumalik ka sa imong yuta ug sa imong kaubanan, ug ikaw buhatan ko ug maayo:
10 ೧೦ ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ನಂಬಿಕೆಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಯೋಗ್ಯನು. ನಾನು ಮೊದಲು ಈ ಯೊರ್ದನ್ ನದಿಯನ್ನು ದಾಟಿದಾಗ ನನ್ನ ಬಳಿಯಲ್ಲಿ ಒಂದು ಕೋಲು ಮಾತ್ರವೇ ಇತ್ತು. ಈಗ ಎರಡು ಗುಂಪುಗಳಿಗೆ ಒಡೆಯನಾಗಿದ್ದೇನೆ.
Ako dili takus sa labing diyutay sa tanan nga mga mahigugmaong kalolot ug sa tanan nga kamatuoran nga imong gipakita sa imong ulipon; kay uban sa akong sungkod milabang ako niining Jordan, ug karon nahimo ako nga duruha na ka pundok.
11 ೧೧ ನನ್ನ ಅಣ್ಣನಾದ ಏಸಾವನು ಬಂದು ನನ್ನನ್ನೂ, ನನ್ನ ಮಕ್ಕಳನ್ನೂ, ಅವರ ತಾಯಿಯರನ್ನೂ ಕೊಂದುಹಾಕುವನೋ ಎಂದು ನನಗೆ ಭಯವಿದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ,
Luwasa ako, ginaampo ko kanimo, gikan sa kamot sa akong igsoon, sa kamot ni Esau; kay nahadlok ako kaniya, tingali kaha moanhi siya, ug samaran niya ako, ang inahan uban ang mga anak.
12 ೧೨ ‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡಿ, ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿ ಮಾಡುವೆನೆಂದು ನೀನು ನನಗೆ ಹೇಳಿದ್ದೀಯಲ್ಲಾ?’” ಎಂದನು.
Ug ikaw gayud usab ang nag-ingon: Sa pagkamatuod gayud ikaw buhatan ko ug maayo, ug pagahimoon ko nga ang imong kaliwatan sama sa balas sa dagat, nga dili arang maisip tungod sa gidaghanon.
13 ೧೩ ಯಾಕೋಬನು ಆ ರಾತ್ರಿ ಅಲ್ಲೇ ತಂಗಿದನು. ತಾನು ತಂದದ್ದರಲ್ಲಿ ಕೆಲವನ್ನು ಸಹೋದರನಾದ ಏಸಾವನಿಗೆ ಕಾಣಿಕೆಯಾಗಿ ತೆಗೆದುಕೊಂಡನು.
Ug napabilin siya didto niadtong gabhiona ug gikuha niya gikan sa mga butang nga diha sa iyang luyo ang usa ka gasa alang kang Esau nga iyang igsoon:
14 ೧೪ ಇನ್ನೂರು ಆಡುಕುರಿ, ಇಪ್ಪತ್ತು ಹೋತ, ಇಪ್ಪತ್ತು ಟಗರು, ಮರಿಯೊಡನೆ ಹಾಲು ಕರೆಯುವ
Duha ka gatus ka book nga kanding nga baye ug kaluhaan ka book nga kanding nga lake, duha ka gatus ka book nga carnero nga baye ug kaluhaan ka book nga carnero nga lake.
15 ೧೫ ಮೂವತ್ತು ಒಂಟೆ, ನಲ್ವತ್ತು ಆಕಳು, ಹತ್ತು ಹೋರಿ ಇಪ್ಪತ್ತು ಹೆಣ್ಣುಕತ್ತೆ, ಹತ್ತು ಗಂಡುಕತ್ತೆ ಇವುಗಳನ್ನು ತೆಗೆದುಕೊಂಡನು.
Katloan ka gatasan nga camello uban ang ilang mga nati, kap-atan ka book nga vaca nga baye ug napulo ka book nga vaca nga lake, kaluhaan ka book nga asno nga baye ug napulo ka book nga nati.
16 ೧೬ ಇವುಗಳಲ್ಲಿ ಪ್ರತಿಯೊಂದು ಹಿಂಡನ್ನು ತನ್ನ ಸೇವಕನಿಗೆ ಒಪ್ಪಿಸಿ, “ನೀವು ನನಗಿಂತ ಮುಂಚಿತವಾಗಿ ನದಿಯನ್ನು ದಾಟಿ ಹೋಗಿರಿ ಮತ್ತು ಪ್ರತಿ ಹಿಂಡು ಹಿಂಡಿಗೂ ಮಧ್ಯದಲ್ಲಿ ಅಂತರವಿರಲಿ” ಎಂದನು.
Ug kini gitugyan niya sa mga kamot sa iyang mga binatonan, tagsa ka panon sa pinig, ug miingon sa iyang mga binatonan: Umuna kamo kanako, ug nga usa ka panon ipahilayo ninyo sa usa ka panon.
17 ೧೭ ಮೊದಲನೆಯ ಹಿಂಡಿನ ಮೇಲ್ವಿಚಾರಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಸೇವಕನು? ಎಲ್ಲಿಗೆ ಹೋಗುತ್ತೀ? ನಿನ್ನ ಮುಂದೆ ಇರುವ ಇವೆಲ್ಲಾ ಯಾರದು?’” ಎಂದು ಕೇಳಿದರೆ,
Ug nagsugo siya sa nahauna, nga nagaingon: Kong hisugatan ka ni Esau nga akong igsoon ug iyang pangutan-on ikaw sa pag-ingon: Kang kinsa ikaw? ug asa ikaw paingon? ug kang kansa kanang mga nagauna kanimo?
18 ೧೮ ಆಗ ನೀನು, “ಇವು ನಿಮ್ಮ ಸೇವಕನಾದ ಯಾಕೋಬನದು. ತನ್ನ ಪ್ರಭುಗಳಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾನೆ. ಅವನೂ ನಮ್ಮ ಹಿಂದೆ ಬರುತ್ತಿದ್ದಾನೆ” ಎಂದು ಉತ್ತರಕೊಡಬೇಕು ಎಂಬುದಾಗಿ ಅಪ್ಪಣೆಕೊಟ್ಟನು.
Unya umingon ka kaniya: Iya sa imong alagad nga si Jacob; kini mao ang usa ka gasa nga gipadala alang sa akong ginoo nga si Esau; ug nga ania na usab siya karon nagasunod sa ulahi namo.
19 ೧೯ ಹಾಗೆಯೇ ಎರಡನೆಯವನಿಗೂ ಮೂರನೆಯವನಿಗೂ ಹಿಂಡುಗಳ ಹಿಂದೆ ಹೋದವರೆಲ್ಲರಿಗೂ, “ನೀವು ಏಸಾವನನ್ನು ನೋಡುವಾಗ ಇದೇ ರೀತಿಯಾಗಿ ಹೇಳಬೇಕು. ನಿನ್ನ ಸೇವಕನಾದ ಯಾಕೋಬನೇ ನಮ್ಮ ಹಿಂದೆ ಬರುತ್ತಿದ್ದಾನೆ ಎನ್ನಿರಿ” ಎಂದು ಅಪ್ಪಣೆಕೊಟ್ಟನು.
Ug nagsugo usab siya sa ikaduha, ug mao usab sa ikatolo ug ingon usab sa tanan nga mga nagasunod sa ulahi sa mga panon, nga nagaingon: Niini nga paagiha igasulti ninyo kang Esau kong kamo hisugatan niya.
20 ೨೦ ಯಾಕೋಬನು ತನ್ನೊಳಗೆ, “ನನ್ನ ಮುಂದೆ ಹೋಗುವ ಈ ಕಾಣಿಕೆಯಿಂದ ಏಸಾವನನ್ನು ಸಮಾಧಾನಪಡಿಸುವೆನು. ಆಮೇಲೆ ಅವನನ್ನು ಸಂಧಿಸುವಾಗ, ಒಂದು ವೇಳೆ ನನ್ನನ್ನು ಪ್ರೀತಿಯಿಂದ ಸ್ವೀಕರಿಸುವನೇನೋ” ಎಂದುಕೊಂಡನು.
Ug igaingon ninyo: Labut pa, ania karon, ang imong alagad nga si Jacob nagapaingon nganhi sa ulahi namo. Kay siya miingon: Pagahupayon ko ang iyang kaligutgut tungod sa gasa nga nagauna kanako; ug sa human niini, tan-awon ko ang iyang nawong; ug tingali pagadawaton kaha niya ako ug maayo.
21 ೨೧ ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟು ಹೋಯಿತು. ತಾನು ಆ ರಾತ್ರಿ ತನ್ನ ಪಾಳೆಯದಲ್ಲೇ ಉಳಿದುಕೊಂಡನು.
Mao nga ang gasa miuna kaniya, apan siya napabilin niatong gabhiona uban sa panon.
22 ೨೨ ಆ ರಾತ್ರಿ ಅವನು ತನ್ನ ಇಬ್ಬರು ಹೆಂಡತಿಯರನ್ನು, ಇಬ್ಬರು ದಾಸಿಯರನ್ನು ಹಾಗೂ ಹನ್ನೊಂದು ಮಂದಿ ಮಕ್ಕಳನ್ನು ಕರೆದುಕೊಂಡು ಯಬ್ಬೋಕ್ ಹೊಳೆಯನ್ನು ದಾಟಿದನು.
Ug mitindog siya niadtong gabhiona, ug gikuha niya ang iyang duruha ka asawa, ug ang iyang duruha ka mga sulogoon nga babaye, ug ang iyang napulo ug usa ka mga anak, ug mitabok sa labanganan sa Jaboc.
23 ೨೩ ಅವರನ್ನೂ, ತನ್ನ ಆಸ್ತಿಯೆಲ್ಲವನ್ನೂ ದಾಟಿಸಿದ ಮೇಲೆ
Busa sila gikuha niya, ug iyang gipatabok sila sa suba, ug gipatabok usab niya ang tanan nga iya.
24 ೨೪ ಯಾಕೋಬನು ಒಂಟಿಯಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು.
Ug nahabilin si Jacob nga nag-inusara, ug may nakigbugno kaniya nga usa ka tawo hangtud sa pagbanagbanag sa adlaw:
25 ೨೫ ಆ ಪುರುಷನು ತಾನು ಗೆಲ್ಲದೆ ಇರುವುದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು.
Ug sa pagkakita niini nga siya dili makabuntog kaniya, gipislit niya ang piyakpiyak sa iyang balat-ang, ug nalisa ang balat-ang ni Jacob, sa diha nga siya nagabugno pa kaniya.
26 ೨೬ ಆ ಪುರುಷನು, “ನನ್ನನ್ನು ಬಿಡು, ಬೆಳಗಾಗುತ್ತಿದೆ” ಎನ್ನಲು, ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡುವುದಿಲ್ಲ” ಎಂದನು.
Ug siya miingon: Buhii ako kay mahayaghayag na. Apan mitubag kaniya si Jacob: Dili ko ikaw buhian hangtud nga ako panalanginan mo.
27 ೨೭ ಆ ಪುರುಷನು, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಅವನು, “ಯಾಕೋಬನು” ಎಂದಾಗ,
Ug siya nangutana kaniya: Kinsay imong ngalan? Ug mitubag siya: Si Jacob.
28 ೨೮ ಅವನು ಯಾಕೋಬನಿಗೆ, “ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಲ್ಪಡುವುದಿಲ್ಲ; ನೀನು ದೇವರ ಸಂಗಡಲೂ, ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದುದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರಾಗುವುದು” ಎಂದು ಹೇಳಿದನು.
Ug siya miingon: Dili ka na pagahinganlan nga si Jacob, kondili si Israel; kay nakigbugno ka sa Dios, ug sa tawo, ug nakabuntog ka.
29 ೨೯ ಯಾಕೋಬನು, “ನೀನು ನಿನ್ನ ಹೆಸರನ್ನು ನನಗೆ ತಿಳಿಸಬೇಕು” ಎಂದು ಅವನನ್ನು ಕೇಳಿಕೊಂಡಾಗ ಆತನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು.
Ug nangutana kaniya si Jacob ug miingon: Ginaampo ko kanimo, nga ipahayag mo kanako ang imong ngalan. Apan siya mitubag: Kay nganong nangutana ka sa akong ngalan? Ug siya gipanalanginan niya didto.
30 ೩೦ ಆಗ ಯಾಕೋಬನು, “ನಾನು ದೇವರನ್ನು ಪ್ರತ್ಯಕ್ಷವಾಗಿ ನೋಡಿದೆನಲ್ಲಾ; ಆದರೂ ನನ್ನ ಪ್ರಾಣ ಉಳಿದಿದೆ” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು,
Ug gihinganlan ni Jacob kadtong dapita nga /Peniel, /Peniel kay matud niya, nakita ko ang Dios sa nawong ug nawong, ug naluwas ang akong kinabuhi.
31 ೩೧ ಅವನು, ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು. ಆದರೆ ಯಾಕೋಬನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು.
Ug gisidlakan siya sa adlaw sa iyang pag-agi sa Peniel, ug nagtangkihod siya tungod sa iyang paa.
32 ೩೨ ಆ ಪುರುಷನು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಾಯೇಲ್ಯರು ಇಂದಿನ ವರೆಗೂ ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವುದಿಲ್ಲ.
Tungod niini dili magakaon ang mga anak sa Israel, hangtud karong adlawa, sa kusog nga mibinhod, nga anaa sa piyakpiyak sa balat-ang: kay naigo si Jacob niini nga bahin sa balat-ang niya sa kusog sa kilid.