< ಆದಿಕಾಂಡ 21 >
1 ೧ ಯೆಹೋವನು ತಾನು ವಾಗ್ದಾನ ಮಾಡಿದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು.
А Господь згадав Сарру, як сказав був, і вчинив Господь Саррі, як Він говорив.
2 ೨ ಅದರಂತೆ ಸಾರಳು ಬಸುರಾಗಿ, ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಅವನಿಗೆ ಒಬ್ಬ ಮಗನನ್ನು ಹೆತ್ತಳು.
І Сарра зачала́, і породила сина Авраамові в старості його на означений час, що про нього сказав йому Бог.
3 ೩ ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ “ಇಸಾಕ” ಎಂದು ಹೆಸರಿಟ್ಟನು.
І назвав Авраам ім'я́ синові своєму, що вродився йому, що Сарра йому породила: Ісак.
4 ೪ ಎಂಟನೆಯ ದಿನದಲ್ಲಿ ದೇವರ ಅಪ್ಪಣೆಯ ಮೇರೆಗೆ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿದನು.
І обрізав Авраам Ісака, сина свого, коли мав він вісім день, як Бог наказав був йому.
5 ೫ ಇಸಾಕನು ಹುಟ್ಟಿದಾಗ ಅಬ್ರಹಾಮನು ನೂರು ವರ್ಷದವನಾಗಿದ್ದನು.
А Авраам був віку ста літ, як уродився йому Ісак, син його.
6 ೬ ಸಾರಳು, “ದೇವರು ನನ್ನನ್ನು ಸಂತೋಷಪಡಿಸಿ ನಗುವಂತೆ ಮಾಡಿದ್ದಾನೆ; ಇದುವರೆಗೂ ಈ ಬಗ್ಗೆ ಕೇಳಿದವರು ನನ್ನೊಡನೆ ನಗುವರು.
І промовила Сарра: „Сміх учинив мені Бог, — кожен, хто почує, буде сміятися з мене“.
7 ೭ ಸಾರಳೂ ಮಕ್ಕಳಿಗೆ ಮೊಲೆ ಕುಡಿಸುವಳೆಂದು ಯಾರಾದರೂ ಅಬ್ರಹಾಮನಿಗೆ ಹೇಳಲು ಸಾಧ್ಯವಿತ್ತೇ? ಆದರೆ ದೇವರ ಚಿತ್ತದಿಂದ ನನ್ನ ಮುಪ್ಪಿನಲ್ಲಿ ಮತ್ತು ಅಬ್ರಹಾಮನ ಮುಪ್ಪಿನಲ್ಲೇ ಅವನಿಗೆ ಮಗನನ್ನು ಹೆತ್ತಿದ್ದೇನಲ್ಲಾ” ಎಂದು ಹೇಳಿಕೊಂಡಳು.
І промовила: „Хто б сказав Авраамові: Сарра годує синів? Бо вродила я сина в старості його“.
8 ೮ ಆ ಕೂಸು ಬೆಳೆದು ಮೊಲೆಬಿಟ್ಟಿತು. ಇಸಾಕನು ಮೊಲೆ ಬಿಟ್ಟ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣವನ್ನು ಮಾಡಿಸಿದನು.
І дитина росла, і була відлучена. І справив Авраам велику гостину в день відлучення Ісака.
9 ೯ ಆದರೆ ಐಗುಪ್ತಳಾದ ಹಾಗರಳಲ್ಲಿ ಅಬ್ರಹಾಮನಿಗೆ ಹುಟ್ಟಿದ್ದ ಮಗನು ಇಸಾಕನ ವಿಷಯದಲ್ಲಿ ಹಾಸ್ಯಮಾಡುವುದನ್ನು ಕಂಡು ಸಾರಳು,
І побачила Сарра сина Аґари єги́птянки, що вродила була Авраамові, що він насміхається.
10 ೧೦ ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯಸ್ಥನಾಗಬಾರದು” ಎಂದು ಹೇಳಿದಳು.
I сказала вона Авраамові: „Прожени ту невільницю та сина її, бо не буде наслідувати син тієї невільниці разом із сином моїм, із Ісаком“.
11 ೧೧ ಮಗನ ಬಗ್ಗೆ ಆಡಿದ ಈ ಮಾತು ಅಬ್ರಹಾಮನಿಗೆ ಬಹು ದುಃಖವುಂಟುಮಾಡಿತು.
Але ця справа була дуже не до вподоби Авраамові через сина його.
12 ೧೨ ಆದರೆ ದೇವರು ಅವನಿಗೆ, “ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು;
І промовив Господь Авраамові: „Нехай не буде не до вподоби тобі це через хлопця та через невільницю твою. Усе, що скаже тобі Сарра, послухай голосу її, бо Ісаком буде покликане тобі потомство.
13 ೧೩ ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದುದರಿಂದ ಅವನಿಂದಲೂ ಬಹು ಜನಾಂಗವಾಗುವಂತೆ ಆಶೀರ್ವಾದ ಮಾಡುವೆನು” ಎಂದು ಹೇಳಿದನು.
І також сина невільниці тієї — учиню його наро́дом, бо він — твоє насіння“.
14 ೧೪ ಮಾರನೆಯ ದಿನ ಬೆಳಗ್ಗೆ ಅಬ್ರಹಾಮನು ಎದ್ದು, ಹಾಗರಳಿಗೆ ಬುತ್ತಿಯನ್ನೂ, ಒಂದು ತಿತ್ತಿ ತಣ್ಣೀರನ್ನೂ ಅವಳ ಹೆಗಲಿನ ಮೇಲೆ ಇಟ್ಟು, ಮಗುವನ್ನು ಒಪ್ಪಿಸಿ ಅವಳನ್ನು ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು.
І встав рано Авраам, і взяв хліба й бурдюка́ води, і дав до Аґари на плече її, також дитину, та й послав її. І пішла вона, та й заблудила в пустині Беер-Шева.
15 ೧೫ ತಿತ್ತಿಯಲ್ಲಿದ್ದ ನೀರು ಮುಗಿದ ಮೇಲೆ ಅವಳು ಮಗುವನ್ನು ಒಂದು ಗಿಡದ ನೆರಳಿನಲ್ಲಿ ಮಲಗಿಸಿ,
І скінчилась вода в бурдюці, і покинула вона дитину під одним із кущів.
16 ೧೬ ಕಲ್ಲೆಸೆಯುವಷ್ಟು ದೂರ ಹೋಗಿ ಕುಳಿತುಕೊಂಡು, “ಮಗುವು ಸಾಯುವುದನ್ನು ನೋಡಲಾರೆನು” ಎಂದು ಹೇಳಿ ಜೋರಾಗಿ ಅತ್ತಳು.
І пішла вона, і сіла собі навпроти, на віддалі — як стрілити луком, бо сказала: „Нехай я не бачу смерти цієї дитини!“І сіла навпроти, і піднесла свій голос та й заплакала.
17 ೧೭ ಆ ಹುಡುಗನ ಮೊರೆಯು ದೇವರಿಗೆ ಕೇಳಿಸಿತು; ದೇವದೂತನು ಆಕಾಶದಿಂದ ಹಾಗರಳನ್ನು ಕರೆದು ಆಕೆಗೆ, “ಹಾಗರಳೇ, ನಿನಗೇನಾಯಿತು? ಹೆದರಬೇಡ; ಆ ಹುಡುಗನ ಕೂಗು ದೇವರಿಗೆ ಕೇಳಿಸಿತು;
І почув Бог голос того хлопця. І кликнув до Аґари Божий Ангол із неба, і сказав їй: „Що тобі, Аґаро? Не бійся, бо почув Бог голос хлопця, де він там.
18 ೧೮ ನೀನು ಎದ್ದು ಮಗನನ್ನು ಎತ್ತಿಕೊಂಡು ಸಂತೈಸು. ಏಕೆಂದರೆ ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
Устань, підійми хлопця, і рукою своєю держи його, бо великим наро́дом зроблю Я його“.
19 ೧೯ ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದಿದ್ದರಿಂದ, ಅವಳು ಅಲ್ಲಿ ನೀರಿನ ಬಾವಿಯನ್ನು ಕಂಡು ತಿತ್ತಿಯಲ್ಲಿ ನೀರನ್ನು ತುಂಬಿಕೊಂಡು ಮಗನಿಗೆ ಕುಡಿಸಿದಳು.
І відкрив Бог очі її, і вона побачила криницю води. І пішла вона, і наповнила бурдюка водою, та й напоїла хлопця.
20 ೨೦ ದೇವರು ಆ ಹುಡುಗನ ಸಂಗಡ ಇದ್ದನು; ಅವನು ಬೆಳೆದು ಕಾಡಿನಲ್ಲಿ ವಾಸವಾಗಿದ್ದು ಬಿಲ್ಲುಗಾರನಾದನು.
І з хлопцем був Бог, — і він виріс. І осів у пустині, і став він стрілець-лучник.
21 ೨೧ ಅವನು ಪಾರಾನಿನ ಅರಣ್ಯದಲ್ಲಿ ವಾಸ ಮಾಡಿದನು. ಅವನ ತಾಯಿ ಐಗುಪ್ತ ದೇಶದಿಂದ ಕನ್ಯೆಯನ್ನು ತಂದು ಅವನಿಗೆ ಮದುವೆ ಮಾಡಿಸಿದಳು.
І осів він у пустині Паран, а мати його взяла йому жінку з єгипетського кра́ю.
22 ೨೨ ಆ ಕಾಲದಲ್ಲಿ ಅಬೀಮೆಲೆಕನು ತನ್ನ ಸೇನಾಧಿಪತಿಯಾದ ಫೀಕೋಲನ ಸಮೇತ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾನೆ.
І сталося ча́су того, і сказав Авімеле́х і Піхол, головний провідник його війська, до Авраама, говорячи: „Бог із тобою в усьому, що́ ти робиш!
23 ೨೩ ಆದುದರಿಂದ ನೀನು ನನಗೂ, ನನ್ನ ಮಕ್ಕಳಿಗೂ, ನನ್ನ ಸಂತತಿಗೂ ಅನ್ಯಾಯ ಮಾಡದೆ, ನಾನು ನಿನಗೆ ಹಿತವನ್ನು ಮಾಡಿದಂತೆಯೇ, ನನಗೂ, ನೀನು ವಾಸಿಸುವ ಈ ದೇಶಕ್ಕೂ ಹಿತವನ್ನು ಮಾಡುವುದಾಗಿ ದೇವರ ಮೇಲೆ ಪ್ರಮಾಣ ಮಾಡಬೇಕು” ಎಂದು ಹೇಳಿದನು.
А тепер присягни ж мені Богом отут, що ти не обманиш мене, і нащадка мого, і онука мого. І яка була ласка, яку я до тебе чинив, ти вчиниш зо мною та з краєм, що ти в нім чужинцем пробува́єш“.
24 ೨೪ ಅದಕ್ಕೆ ಅಬ್ರಹಾಮನು “ಹಾಗೆಯೇ” ಪ್ರಮಾಣಮಾಡುತ್ತೇನೆ ಅಂದನು.
І сказав Авраам: „Я присягаю!“
25 ೨೫ ಅಬೀಮೆಲೆಕನ ಆಳುಗಳು ಒಂದು ಬಾವಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡದ್ದರಿಂದ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಲು,
І Авраам дорікав Авімелехові за криницю води, що її відняли були Авімелехові раби.
26 ೨೬ ಅಬೀಮೆಲೆಕನು, “ಈ ಕೆಲಸವನ್ನು ಮಾಡಿದವರು ಯಾರೋ ನಾನರಿಯೆ; ನೀನು ನನಗೆ ತಿಳಿಸಲೂ ಇಲ್ಲ, ಈಗಿನ ವರೆಗೆ ನಾನು ಈ ಸಂಗತಿಯನ್ನು ಕೇಳಲೂ ಇಲ್ಲ” ಎಂದನು.
І сказав Авімелех: „Я не знаю, хто вчинив оту річ, — ані ти не розповів мені, й ані я не чув, хібащо сьогодні“.
27 ೨೭ ಆ ನಂತರ ಅಬ್ರಹಾಮನು ಕುರಿದನಗಳನ್ನು ಅಬೀಮೆಲೆಕನಿಗೆ ದಾನ ಮಾಡಿದನು.
І взяв Авраам дрібну та велику худобу, та й дав Авімелехові, і оби́два вони склали умову.
28 ೨೮ ತರುವಾಯ ಅಬ್ರಹಾಮನು ಹಿಂಡಿನ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಲು,
І поставив Авраам сім овечок з дрібного товару осібно.
29 ೨೯ ಅಬೀಮೆಲೆಕನು ಅಬ್ರಹಾಮನಿಗೆ “ನೀನು ಈ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಲು ಕಾರಣವೇನು?” ಎಂದು ಕೇಳಿದನು.
І сказав Авімелех до Авраама: „Що́ вони, сім овечок отих, що ти їх поставив осібно?“
30 ೩೦ ಅದಕ್ಕೆ ಅಬ್ರಹಾಮನು, “ಈ ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ನೀನು ಈ ಏಳು ಹೆಣ್ಣು ಕುರಿಮರಿಗಳನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು” ಎಂದು ಹೇಳಿ, ಅವರಿಬ್ಬರೂ ಒಡಂಬಡಿಕೆ ಮಾಡಿಕೊಂಡರು.
А той відказав: „Бо з моєї руки сім овечок ти візьмеш, щоб для мене були на свідоцтво, що я́ викопав цю криницю“.
31 ೩೧ ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಹೆಸರಾಯಿತು.
Тому то назвав він це місце Беер-Шева, бо там поклялися вони.
32 ೩೨ ಬೇರ್ಷೆಬದಲ್ಲಿ ಅವರು ಒಡಂಬಡಿಕೆಯನ್ನು ಮಾಡಿಕೊಂಡ ತರುವಾಯ ಅಬೀಮೆಲೆಕನೂ ಅವನ ಸೇನಾಧಿಪತಿಯಾದ ಫೀಕೋಲನೂ ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿ ಹೊರಟು ಹೋದರು.
І склали умову вони в Беер-Шеві. І встав Авімелех та Піхол, головний провідник його війська, і вернулись вони до краю филистимського.
33 ೩೩ ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು ಅಲ್ಲಿ ನಿತ್ಯದೇವರಾದ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
А Авраам посадив тамариска в Беер-Шеві, і кликав там Ім'я́ Господа, Бога Вічного.
34 ೩೪ ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹಳ ದಿನಗಳ ಕಾಲ ವಾಸವಾಗಿದ್ದನು.
І Авраам пробув́ав у филистимській землі багато днів.