< ಆದಿಕಾಂಡ 17 >

1 ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ.
अब्राम उनान्सय वर्षको हुँदा परमप्रभु तिनीकहाँ देखा पर्नुभयो र तिनलाई भन्‍नुभयो, “म सर्वशक्‍तिमान् परमेश्‍वर हुँ । मेरो सामु आज्ञाकारी भएर हिँड्, र निर्दोष हो ।
2 ನಾನು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅತ್ಯಧಿಕವಾದ ಸಂತತಿಯನ್ನು ನಿನಗೆ ಕೊಡುವೆನು” ಎಂದನು.
त्यसपछि मेरो र तेरो बिचको आफ्नो करार म पक्‍का गर्नेछु, र तँलाई अत्यन्तै वृद्धि गराउनेछु ।”
3 ಅಬ್ರಾಮನು ಅಡ್ಡಬೀಳಲು ದೇವರು ಅವನ ಸಂಗಡ ಮಾತನಾಡಿ,
अब्राम घोप्‍टो परे अनि परमेश्‍वरले तिनलाई भन्‍नुभयो,
4 “ನಾನು ನಿನ್ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅದೇನೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ,
“निश्‍चय नै मेरो करार तँसँगै छ । तँ धेरै जातिहरूका पिता बन्‍नेछस् ।”
5 ಇನ್ನು ಮುಂದೆ ನಿನಗೆ ಅಬ್ರಾಮ ಎಂದು ಹೆಸರಿರುವುದಿಲ್ಲ. ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವುದರಿಂದ ನಿನಗೆ ಇನ್ನು ಮೇಲೆ ಅಬ್ರಹಾಮ ಎಂದು ಹೆಸರಿರುವುದು.
तेरो नाम अब्राम हुनेछैन, तर अब्राहाम हुनेछ । किनकि म तँलाई धेरै जातिका पिता हुनलाई नियुक्‍त गर्छु ।
6 ನಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು ನಿನ್ನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರು ಹುಟ್ಟುವರು.
म तँलाई अत्यन्तै फल्दो-फुल्दो तुल्याउनेछु, र तँबाट धेरै जातिहरू बनाउनेछु । तँबाट राजाहरू उत्‍पन्‍न हुनेछन् ।
7 ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.
तँ र तँपछिका तेरा सन्तानका परमेश्‍वर हुनलाई तेरो र मेरो र तँपछिका तेरा सन्‍तानको बिचमा नित्य रहिरहने करार म स्थापित गर्नेछु ।
8 ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತ ಸ್ವತ್ತಾಗಿ ಕೊಟ್ಟು ಎಂದೆಂದಿಗೂ ಅವರಿಗೆ ದೇವರಾಗಿರುವೆನು” ಎಂದನು.
तँ बसेको देश अर्थात् सारा कनान तँ र तँपछि आउने तेरा सन्तानलाई सधैँको निम्ति अधिकारको रूपमा दिनेछु, र म तिनीहरूका परमेश्‍वर हुनेछु ।”
9 ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರು ತಲತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು.
त्यसपछि परमेश्‍वरले अब्राहामलाई भन्‍नुभयो, “तैँलेचाहिँ मेरो करार पालन गर्नुपर्छ, तँ र तँपछिका तेरा सन्तानहरूले तिनीहरूका पुस्तौँसम्म ।
10 ೧೦ ನೀನೂ ನಿನ್ನ ಸಂತತಿಯುವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ, ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು ಎಂಬುದೇ.
यो मेरो र तेरो र तँपछि आउने तेरा सन्‍तानहरूका बिचमा भएको तिमीहरूले पालन गर्नुपर्ने मेरो करार होः तिमीहरूका बिचमा भएका हरेक पुरुषको खतना हुनुपर्छ ।
11 ೧೧ ಅದೇ ನಿಮಗೂ ನನಗೂ ಉಂಟಾದ ಒಡಂಬಡಿಕೆಯ ಗುರುತಾಗಿದೆ.
तिमीहरूको खलडीको खतना हुनुपर्छ । मेरो र तिमीहरूको बिचको करारको चिन्ह यही हुनेछ ।
12 ೧೨ ಮುಂದಿನ ಎಲ್ಲಾ ತಲತಲಾಂತರವಾಗಿ ಬರುವ ನಿಮ್ಮ ಪ್ರತಿಯೊಂದು ಗಂಡು ಮಗುವಿಗೂ, ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾಗಲಿ;
तिमीहरूका पुस्तौँसम्म तिमीहरूमा आठ दिन पुगेका हरेक पुरुषको खतना गरिनुपर्छ । यसमा तेरो घरमा जन्मेका र तेरो सन्‍तान नभए पनि विदेशीबाट दाम हालेर किनेका व्यक्‍ति पनि पर्दछन् ।
13 ೧೩ ನಿನ್ನ ಮನೆಯಲ್ಲಿ ಹುಟ್ಟಿದವನಿಗೂ, ನೀನು ಕ್ರಯಕ್ಕೆ ತೆಗೆದುಕೊಂಡವನಿಗೂ ತಪ್ಪದೆ ಸುನ್ನತಿಯಾಗಬೇಕು. ಹೀಗೆ ನಾನು ಮಾಡುವ ಒಡಂಬಡಿಕೆಯ ಗುರುತು ನಿಮ್ಮ ಶರೀರದಲ್ಲೇ ಇದ್ದು, ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುವುದು.
तेरो घरमा जन्मेका र तेरो पैसाले किनेका सबैको खतना हुनैपर्छ । यसरी मेरो करार तिमीहरूको शरीरमा नित्य रहिरहने करार हुनेछ ।
14 ೧೪ ಸುನ್ನತಿಮಾಡಿಸಿಕೊಳ್ಳದ ಪುರುಷನಿಗೆ ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದಂತೆ ಆಗುವ ಕಾರಣ ಅವನನ್ನು ಕುಲದಿಂದ ಬಹಿಷ್ಕರಿಸಬೇಕು” ಎಂದು ಹೇಳಿದನು.
खलडीको खतना नगरिएको पुरुष उसका मानिसहरूबाट बहिष्कार गरिनेछ । त्यसले मेरो करार भङ्‍ग गरेको छ ।”
15 ೧೫ ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳೆಂದು ಕರೆಯದೆ ‘ಸಾರಾ’ (ರಾಣಿ) ಎಂದು ಕರೆಯಬೇಕು.
पमेश्‍वरले अब्राहामलाई भन्‍नुभयो, “तेरी पत्‍नी साराईलाई चाहिँ अबदेखि साराई भनेर नबोलाउनू । तर त्यसको नाउँ सारा हुनेछ ।
16 ೧೬ ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು.
म त्यसलाई आशिष् दिनेछु, र त्यसद्वारा म तँलाई एउटा छोरो दिनेछु । म त्यसलाई आशिष् दिनेछु, र त्यो जाति-जातिहरूकी आमा हुनेछे । जाति-जातिहरूका राजाहरू त्यसबाट उत्पन्‍न हुनेछन् ।”
17 ೧೭ ಅಬ್ರಹಾಮನು ಅಡ್ಡ ಬಿದ್ದು ನಕ್ಕು, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೇ? ತೊಂಭತ್ತು ವರ್ಷದವಳಾದ ಸಾರಳು ಹೆರಲು ಸಾಧ್ಯವೇ?” ಎಂದು ಮನಸ್ಸಿನಲ್ಲಿ ಅಂದುಕೊಂಡನು.
त्यसपछि अब्राहाम घोप्‍टो परेर हाँसे, अनि मनमनै यसो भने, “के सय वर्षको मानिसबाट सन्तान जन्मन सक्छ र? नब्बे वर्ष पुगेकी साराले कसरी सन्तान जन्माउन सक्छिन् र?”
18 ೧೮ ಅಬ್ರಹಾಮನು ದೇವರಿಗೆ, “ಇಷ್ಮಾಯೇಲ್ ಇದ್ದಾನಲ್ಲಾ, ಅವನೇ ನಿನ್ನ ದಯೆ ಹೊಂದಿ ಬಾಳಲಿ” ಎನ್ನಲು.
अब्राहामले परमेश्‍वरलाई भने, “इश्माएल नै तपाईंको आशिष्‍्‌मा बाँचिरहे त हुन्छ!”
19 ೧೯ ದೇವರು, “ಹಾಗಲ್ಲ ನಿನ್ನ ಹೆಂಡತಿಯಾದ ಸಾರಳಲ್ಲಿಯೇ ನಿನಗೆ ಮಗನು ಹುಟ್ಟುವನು. ಅವನಿಗೆ ‘ಇಸಾಕ’ ಎಂದು ಹೆಸರಿಡಬೇಕು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು; ಅದು ಅವನ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
परमेश्‍वरले भन्‍नुभयो, “होइन, तर तेरी पत्‍नी साराले तेरो निम्ति एउटा छोरो जन्माउनेछे, र तैँले त्यसको नाउँ इसहाक राख्‍नू । नित्य रहिरहने करारको रूपमा म त्यससित र त्यसपछि आउने त्यसका सन्तानसित मेरो करार स्थापित गर्नेछु ।
20 ೨೦ ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕಿವಿಗೊಟ್ಟು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ; ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಅವನು ಹನ್ನೆರಡು ಮಂದಿ ಅರಸರನ್ನು ಪಡೆಯುವನು, ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು.
इश्माएको विषयमा मैले तेरो बिन्ति सुनेँ । हेर्, म त्यसलाई आशिष् दिनेछु, र त्यसलाई फल्दो‍-फुल्दो बनाएर प्रशस्त गरी त्यसको वृद्धि गर्नेछु । त्यो बाह्र जातिका अगुवाहरूका पिता हुनेछ, र त्यसलाई म ठुलो जाति बनाउनेछु ।
21 ೨೧ ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನೊಂದಿಗೆ ಸ್ಥಾಪಿಸಿಕೊಳ್ಳುತ್ತೇನೆ; ಬರುವ ವರ್ಷ ಇದೇ ವೇಳೆಗೆ ಸಾರಳು ಅವನನ್ನು ಹೆರುವಳು” ಅಂದನು.
तर मेरो करार त म इसहाकसँग स्थापित गर्नेछु, जसलाई साराले अर्को वर्ष यही समयमा तँबाट जन्माउनेछे ।”
22 ೨೨ ಆ ನಂತರ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿ ಅವನ ಬಳಿಯಿಂದ ಮೇಲಕ್ಕೆ ಏರಿ ಹೋದನು.
तिनीसँग कुरा गरिसक्‍नुभएपछि परमेश्‍वर अब्राहामदेखि छुट्टिनुभयो ।
23 ೨೩ ಅದೇ ದಿನದಲ್ಲಿ ಅಬ್ರಹಾಮನು ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೂ, ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ತಾನು ಕ್ರಯಕ್ಕೆ ತೆಗೆದುಕೊಂಡವರಿಗೂ ದೇವರ ಅಪ್ಪಣೆಯಂತೆ ಸುನ್ನತಿಮಾಡಿಸಿದನು.
त्यसपछि अब्राहामले आफ्नो छोरो इश्माएल, र आफ्‍नो घरमा जन्मेका, र दाम हालेर किनेका सबै, परमेश्‍वरले भन्‍‍नुभएबमोजिम त्यसै दिन आफ्नो घरका सबै पुरुषहरूका खलडीको खतना गरे ।
24 ೨೪ ಅಬ್ರಹಾಮನಿಗೆ ಸುನ್ನತಿಯಾದಾಗ ಅವನಿಗೆ ತೊಂಭತ್ತೊಂಭತ್ತು ವರ್ಷವಾಗಿತ್ತು.
तिनको खलडीको खतना गर्दा अब्राहाम उनान्सय वर्षका थिए ।
25 ೨೫ ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷವಾಗಿತ್ತು.
तिनको छोरो इश्माएलचाहिँ आफ्नो खलडीको खतना गर्दा तेह्र वर्षका थिए ।
26 ೨೬ ಅಬ್ರಹಾಮನಿಗೂ ಅವನ ಮಗನಾದ ಇಷ್ಮಾಯೇಲನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು.
अब्राहाम र इश्माएलको खतना एकै दिनमा भयो ।
27 ೨೭ ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನೊಂದಿಗೆ ಸುನ್ನತಿಯಾಯಿತು.
तिनको घरमा जन्मेका र विदेशीबाट किनिएका सबै पुरुषहरूको खतना तिनको खतनासँगसँगै भयो ।

< ಆದಿಕಾಂಡ 17 >