< ಆದಿಕಾಂಡ 16 >
1 ೧ ಅಬ್ರಾಮನ ಹೆಂಡತಿಯಾದ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಐಗುಪ್ತ ದೇಶದವಳಾದ ಹಾಗರಳೆಂಬ ದಾಸಿಯಿದ್ದಳು.
१अब्रामाला आपली पत्नी साराय हिच्यापासून मूल झाले नाही, परंतु तिची एक मिसरी दासी होती, जिचे नाव हागार होते.
2 ೨ ಹೀಗಿರಲಾಗಿ ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಲ್ಲಾ; ನೀನು ನನ್ನ ದಾಸಿಯಾದ ಹಾಗರಳ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು” ಎಂದು ಹೇಳಲು ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು.
२साराय अब्रामाला म्हणाली, “परमेश्वराने मला मुले होण्यापासून वंचित ठेवले आहे. तेव्हा तुम्ही माझ्या दासीपाशी जा. कदाचित तिच्यापासून मला मुले मिळतील.” अब्रामाने आपली पत्नी साराय हिचे म्हणणे मान्य केले.
3 ೩ ಅಬ್ರಾಮನು ಹತ್ತು ವರ್ಷಗಳ ಕಾಲ ಕಾನಾನ್ ದೇಶದಲ್ಲಿ ವಾಸಿಸಿದ ಮೇಲೆ ಅವನ ಹೆಂಡತಿಯಾದ ಸಾರಯಳು ಐಗುಪ್ತಳಾದ ಹಾಗರಳೆಂಬ ದಾಸಿಯನ್ನು ಕರೆದು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು.
३अब्राम कनान देशात दहा वर्षे राहिल्यानंतर, अब्रामाची पत्नी साराय हिने आपली मिसरी दासी हागार ही, आपला पती अब्राम याला पत्नी म्हणून दिली.
4 ೪ ಅವನು ಹಾಗರಳನ್ನು ಸಂಗಮಿಸಲು ಆಕೆಯು ಬಸುರಾದಳು. ತಾನು ಬಸುರಾದೆನೆಂದು ತಿಳಿದುಕೊಂಡಾಗ ಅವಳು ತನ್ನ ಯಜಮಾನಿಯನ್ನು ತಾತ್ಸಾರ ಮಾಡತೊಡಗಿದಳು.
४त्याने हागार सोबत शरीरसंबंध केले, आणि अब्रामापासून ती गरोदर राहिली. आणि जेव्हा तिने पाहिले की आपण गरोदर आहोत, तेव्हा ती आपल्या मालकीणीकडे तिरस्काराने पाहू लागली.
5 ೫ ಆಗ ಸಾರಯಳು ಅಬ್ರಾಮನಿಗೆ, “ನನ್ನ ಗೋಳು ನಿನಗೆ ತಟ್ಟಲಿ; ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಒಪ್ಪಿಸಿದೆನಷ್ಟೆ; ಅವಳು ತಾನು ಬಸುರಾದೆನೆಂದು ತಿಳಿದು ನನ್ನನ್ನು ತಾತ್ಸಾರಮಾಡುತ್ತಿದ್ದಾಳೆ; ನಿನಗೂ ನನಗೂ ನಡುವೆ ಯೆಹೋವನೇ ನ್ಯಾಯತೀರಿಸಲಿ” ಎಂದು ಹೇಳಿದಳು.
५नंतर साराय अब्रामाला म्हणाली, “माझ्यावरचा अन्याय तुमच्यावर असो. मी आपली दासी तुम्हास दिली, आणि आपण गरोदर आहो हे लक्षात आल्यावर, मी तिच्या दृष्टीने तुच्छ झाले. परमेश्वर तुमच्यामध्ये व माझ्यामध्ये न्याय करो.”
6 ೬ ಆಗ ಅಬ್ರಾಮನು, “ನಿನ್ನ ದಾಸಿಯು ನಿನ್ನ ಕೈಯಲ್ಲೇ ಇದ್ದಾಳಲ್ಲಾ; ನಿನ್ನಗೆ ಮನಸ್ಸು ಬಂದಂತೆ ಮಾಡು” ಎಂದನು. ಆಗ ಸಾರಯಳು ಅವಳನ್ನು ಬಾಧಿಸಲು ಅವಳು ಓಡಿಹೋದಳು.
६परंतु अब्राम सारायला म्हणाला, “तू हागारेची मालकीण आहेस, तुला काय पाहिजे तसे तू तिचे कर.” तेव्हा साराय तिच्याबरोबर निष्ठुरपणे वागू लागली म्हणून हागार तिला सोडून पळून गेली.
7 ೭ ಅವಳು ಮರಳುಗಾಡಿನಲ್ಲಿ ಶೂರಿನ ಮಾರ್ಗದ ನೀರಿನ ಬುಗ್ಗೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡು,
७शूर गावाच्या वाटेवर वाळवंटातील एका पाण्याच्या झऱ्याजवळ हागार परमेश्वराच्या एका देवदूताला आढळली.
8 ೮ “ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು ಅವಳು, “ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಾ ಇದ್ದೇನೆ” ಎಂದಳು.
८देवदूत तिला म्हणाला, “सारायचे दासी हागारे, तू येथे का आलीस? तू कोठे जात आहेस?” हागार म्हणाली, “माझी मालकीण साराय हिच्यापासून मी पळून जात आहे.”
9 ೯ ಅದಕ್ಕೆ ಯೆಹೋವನ ದೂತನು, “ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ಅಧೀನಳಾಗಿ ನಡೆದುಕೋ” ಎಂದನು.
९परमेश्वराचा दूत तिला म्हणाला, “तू आपल्या मालकिणीकडे परत जा आणि तिच्या अधिकारात तिच्या अधीनतेत राहा.”
10 ೧೦ ಅದಲ್ಲದೆ ಯೆಹೋವನ ದೂತನು ಅವಳಿಗೆ, “ನಿನಗೆ ಬಹುಸಂತಾನವಾಗುವಂತೆ ಮಾಡುವೆನು; ನಿನ್ನ ಸಂತತಿಯು ಲೆಕ್ಕಿಸಲಾಗದಷ್ಟು ಹೆಚ್ಚಾಗುವುದು” ಎಂದು ಹೇಳಿದನು.
१०परमेश्वराचा दूत तिला आणखी म्हणाला, “तुझी संतती मी इतकी बहुगुणित करीन, की ती मोजणे शक्य होणार नाही.”
11 ೧೧ ಯೆಹೋವನ ದೂತನು ಅವಳಿಗೆ, “ನೀನು ಗರ್ಭಿಣಿಯಾಗಿದಿಯಾ; ನಿನಗೆ ಮಗನು ಹುಟ್ಟುವನು; ಯೆಹೋವನು ನಿನ್ನ ಕಷ್ಟದ ಕೂಗಿಗೆ ಕಿವಿಗೊಟ್ಟಿದ್ದರಿಂದ ಆ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಡಬೇಕು.
११परमेश्वराचा दूत तिला असे सुद्धा म्हणाला, “तू आता गरोदर आहेस आणि तुला मुलगा होईल त्याचे नाव तू इश्माएल म्हणजे परमेश्वर ऐकतो असे ठेव, कारण प्रभूने तुझ्या दुःखाविषयी ऐकले आहे.
12 ೧೨ ಆ ಮನುಷ್ಯ ಕಾಡು ಕತ್ತೆಯಂತೆ ಇರುವನು. ಅವನು ಎಲ್ಲರ ಮೇಲೆ ಕೈಯೆತ್ತುವನು; ಹಾಗೆಯೇ ಅವನ ಮೇಲೆ ಎಲ್ಲರೂ ಕೈಯೆತ್ತುವರು. ತನ್ನ ಅಣ್ಣತಮ್ಮಂದಿರಿಗೆ ಎದುರಾಗಿ ವಾಸವಾಗಿರುವನು” ಎಂದು ಹೇಳಿ ಹೋದನು.
१२इश्माएल जंगली गाढवासारखा मनुष्य असेल. तो सर्वांविरूद्ध असेल आणि सर्व लोक त्याच्या विरूद्ध असतील, आणि तो एका ठिकाणाहून दुसऱ्या ठिकाणी आपल्या भावांच्यापासून वेगळा राहील.”
13 ೧೩ ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವನಿಗೆ, “ನೀನು ನನ್ನನ್ನು ನೋಡುವ ದೇವರು” ಎಂದು ಹೆಸರಿಟ್ಟಳು: ಏಕೆಂದರೆ, “ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ” ಎಂದುಕೊಂಡಳು.
१३नंतर तिच्याशी बोलणारा जो परमेश्वर त्याचे नाव, “तू पाहणारा देव आहेस,” असे तिने ठेवले, कारण ती म्हणाली, “जो मला पाहतो त्यास मी येथेही मागून पाहिले काय?”
14 ೧೪ ಈ ಸಂಗತಿಯಿಂದ ಅಲ್ಲಿರುವ ಬಾವಿಗೆ “ಬೆರ್ ಲಹೈರೋಯಿ” ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.
१४तेव्हा तेथील विहिरीला बैर-लहाय-रोई असे नाव पडले; पाहा, ती कादेश व बेरेद यांच्या दरम्यान आहे.
15 ೧೫ ಹಾಗರಳು ಅಬ್ರಾಮನಿಂದ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.
१५हागारेने अब्रामाच्या पुत्राला जन्म दिला, आणि ज्याला हगारेने जन्म दिला त्या त्याच्या पुत्राचे नाव अब्रामाने इश्माएल ठेवले.
16 ೧೬ ಹಾಗರಳು ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರ್ಷದವನಾಗಿದ್ದನು.
१६हागारेला अब्रामापासून इश्माएल झाला तेव्हा अब्राम शहाऐंशी वर्षांचा होता.