< ಆದಿಕಾಂಡ 12 >
1 ೧ ಯೆಹೋವನು ಅಬ್ರಾಮನಿಗೆ, “ನೀನು, ನಿನ್ನ ಸ್ವದೇಶವನ್ನೂ, ಬಂಧುಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು.
I PAN powiedział do Abrama: Wyjdź z twojej ziemi i od twojej rodziny, i z domu twego ojca do ziemi, którą ci pokażę.
2 ೨ ನಾನು ನಿನ್ನನ್ನು ಮಹಾ ಜನಾಂಗವಾಗುವಂತೆ ಮಾಡಿ, ಆಶೀರ್ವದಿಸಿ, ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದದ ನಿಧಿಯಾಗುವಿ.
A uczynię z ciebie wielki naród, będę ci błogosławił i rozsławię twoje imię, i będziesz błogosławieństwem.
3 ೩ ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು; ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವುದು” ಎಂದು ಹೇಳಿದನು.
I będę błogosławił tym, którzy tobie będą błogosławić; a tych, którzy przeklinają ciebie, będę przeklinać. W tobie będą błogosławione wszystkie narody ziemi.
4 ೪ ಯೆಹೋವನು ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು.
Wyszedł więc Abram, jak mu PAN rozkazał, poszedł z nim też Lot. Abram miał siedemdziesiąt pięć lat, gdy wyszedł z Charanu.
5 ೫ ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ತಮ್ಮನ ಮಗನಾದ ಲೋಟನನ್ನೂ, ತಾನೂ ಲೋಟನೂ ಹಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ, ದಾಸ ದಾಸಿಯರನ್ನೂ ತೆಗೆದುಕೊಂಡು ಕಾನಾನ್ ದೇಶಕ್ಕೆ ಬಂದನು.
I Abram wziął swoją żonę Saraj, Lota, syna brata swego, i cały dobytek, który zgromadzili, i dusze, które nabyli w Charanie, i wyszli, aby udać się do ziemi Kanaan; i przybyli do ziemi Kanaan.
6 ೬ ಅಬ್ರಾಮನು ಆ ದೇಶದಲ್ಲಿ ಸಂಚರಿಸುತ್ತಾ ಶೆಕೆಮ್ ಸ್ಥಳದಲ್ಲಿರುವ ಮೋರೆ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ದೇಶದಲ್ಲಿದ್ದರು.
Abram przeszedł tę ziemię aż do miejsca Sychem, do równiny More. Na tej ziemi [byli] wówczas Kananejczycy.
7 ೭ ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನದಲ್ಲಿ, “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು” ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.
I PAN ukazał się Abramowi, i powiedział: Twemu potomstwu dam tę ziemię. I [Abram] zbudował tam ołtarz dla PANA, który mu się ukazał.
8 ೮ ಅವನು ಅಲ್ಲಿಂದ ಹೊರಟು ಬೇತೇಲಿನ ಪೂರ್ವದಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿ ಇಳಿದುಕೊಂಡನು. ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರುಗಳಿದ್ದವು. ಅಲ್ಲಿಯೂ ಅಬ್ರಾಮನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರಿನಲ್ಲಿ ಆರಾಧಿಸಿದನು.
A stamtąd przeniósł się do góry na wschód od Betel i tam rozbił swój namiot [między] Betel od zachodu i Aj od wschodu. Tam również zbudował ołtarz dla PANA i wzywał imienia PANA.
9 ೯ ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಹೋದನು.
Potem Abram wyruszył, idąc ku południu.
10 ೧೦ ದಕ್ಷಿಣ ಕಾನಾನ್ ದೇಶದಲ್ಲಿ ಘೋರ ಕ್ಷಾಮವಿದ್ದುದರಿಂದ, ಅಬ್ರಾಮನು ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದು ಹೋದನು.
A nastał głód na [tej] ziemi. Abram zstąpił więc do Egiptu, aby tam gościć; ciężki bowiem był głód na ziemi.
11 ೧೧ ಅವನು ಐಗುಪ್ತ ದೇಶದ ಹತ್ತಿರಕ್ಕೆ ಬಂದಾಗ ತನ್ನ ಹೆಂಡತಿಯಾದ ಸಾರಯಳಿಗೆ, “ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ;
A gdy zbliżał się do Egiptu, powiedział do swej żony Saraj: Oto wiem, że jesteś piękną kobietą.
12 ೧೨ ಐಗುಪ್ತ ದೇಶದವರು ನಿನ್ನನ್ನು ಕಂಡು, ಈಕೆಯು ಇವನ ಹೆಂಡತಿ ಎಂದು ತಿಳಿದು ನನ್ನನ್ನು ಕೊಂದು ನಿನ್ನನ್ನು ಉಳಿಸಬಹುದು.
Gdy Egipcjanie cię zobaczą, powiedzą: To jego żona; i zabiją mnie, a ciebie zostawią przy życiu.
13 ೧೩ ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿಮಿತ್ತ ನನಗೆ ಹಿತವಾಗುವುದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು” ಎಂದು ಹೇಳಿದನು.
Mów, proszę, [że] jesteś moją siostrą, aby mi się dobrze wiodło ze względu na ciebie i abym dzięki tobie pozostał przy życiu.
14 ೧೪ ಅಬ್ರಾಮನು ಐಗುಪ್ತ ದೇಶಕ್ಕೆ ಬಂದಾಗ ಐಗುಪ್ತರು ಅವನ ಸಂಗಡ ಇದ್ದ ಸ್ತ್ರೀಯನ್ನು ನೋಡಿ ಬಹು ಸುಂದರಿ ಎಂದು ಅಂದುಕೊಂಡರು.
Gdy Abram wszedł do Egiptu, Egipcjanie zobaczyli, że ta kobieta jest bardzo piękna.
15 ೧೫ ಫರೋಹನ ರಾಜಕುಮಾರರು ಆಕೆಯನ್ನು ನೋಡಿ ಬಂದು, ಅವನ ಮುಂದೆ ಹೊಗಳಲಾಗಿ ಫರೋಹನು ಆ ಸ್ತ್ರೀಯನ್ನು ಅರಮನೆಗೆ ಕರೆಯಿಸಿ ಆಕೆಯ ನಿಮಿತ್ತ ಅಬ್ರಾಮನಿಗೆ ಉಪಕಾರ ಮಾಡಿದನು.
Ujrzeli ją też dostojnicy faraona i chwalili ją przed nim. I zabrano tę kobietę do domu faraona.
16 ೧೬ ಆಗ ಅಬ್ರಾಮನಿಗೆ ಕುರಿ, ಎತ್ತು, ಗಂಡು, ಹೆಣ್ಣು ಕತ್ತೆಗಳು, ದಾಸದಾಸಿಯರು, ಒಂಟೆಗಳು, ದೊರಕಿದವು.
Ten dobrze traktował Abrama ze względu na nią. [Abram] miał więc owce, woły, osły, służących i służące, oślice i wielbłądy.
17 ೧೭ ಆದರೆ ಯೆಹೋವನು ಫರೋಹನಿಗೂ ಅವನ ಮನೆಯವರಿಗೂ ಅಬ್ರಾಮನ ಹೆಂಡತಿಯಾದ ಸಾರಯಳ ನಿಮಿತ್ತ ಬಹಳ ಉಪದ್ರವಗಳಿಂದ ಬಾಧಿಸಿದನು.
PAN jednak dotknął faraona i jego dom wielkimi plagami z powodu Saraj, żony Abrama.
18 ೧೮ ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ಏಕೆ ಹೀಗೆ ಮಾಡಿದೆ? ಆಕೆ ನಿನ್ನ ಹೆಂಡತಿಯೆಂದು ಏಕೆ ನನಗೆ ತಿಳಿಸಲಿಲ್ಲ?
Faraon wezwał więc Abrama i powiedział: Coś ty mi zrobił? Czemu mi nie powiedziałeś, że ona jest twoją żoną?
19 ೧೯ ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡೆನಲ್ಲಾ. ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು” ಎಂದು ಹೇಳಿ,
Dlaczego mówiłeś: Ona jest moją siostrą, tak że mogłem ją wziąć sobie za żonę? A teraz – oto twoja żona, weź [ją] i idź.
20 ೨೦ ಫರೋಹನು ಅವನ ವಿಷಯವಾಗಿ ತನ್ನ ಸೇವಕರಿಗೆ ಅಪ್ಪಣೆಕೊಡಲು ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗೆ ಇದ್ದದ್ದೆಲ್ಲವನ್ನೂ ಒಟ್ಟಿಗೆ ಸೇರಿಸಿ ಕಳುಹಿಸಿ ಬಿಟ್ಟರು.
I faraon rozkazał o nim swoim ludziom, i odprawili go wraz z żoną i wszystkim, co [było] jego.