< ಆದಿಕಾಂಡ 10 >
1 ೧ ನೋಹನ ಮಕ್ಕಳಾದ ಶೇಮ್, ಹಾಮ್, ಯೆಫೆತ್ ಎಂಬುವವರ ಸಂತಾನದವರ ಚರಿತ್ರೆ: ಜಲಪ್ರಳಯದ ನಂತರ ಅವರಿಗೆ ಮಕ್ಕಳು ಹುಟ್ಟಿದರು.
यिनीहरू नोआका सन्तानहरू थिए, अर्थात्, शेम, हाम, र येपेत । जलप्रलयपछि तिनीहरूका छोराहरू जन्मे ।
2 ೨ ಯೆಫೆತನ ಸಂತಾನದವರು ಯಾರೆಂದರೆ - ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್, ತೀರಾಸ್ ಎಂಬವರು.
गोमेर, मागोग, मादे, यावान, तूबल, मेशेक र तीरास येपेतका छोराहरू थिए ।
3 ೩ ಗೋಮೆರನ ಸಂತಾನದವರು - ಅಷ್ಕೆನಸ್, ರೀಫತ್, ತೋಗರ್ಮ ಎಂಬವರು.
अशकनज, रीपत र तोगर्मा गोमेरका छोराहरू थिए ।
4 ೪ ಯಾವಾನನ ಸಂತಾನದವರು - ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವು ಪ್ರದೇಶಗಳಲ್ಲಿ ಹರಡಿಕೊಂಡರು.
एलीशाह, तर्शीश, कित्तीम र रोदानीम यावानका छोराहरू थिए ।
5 ೫ ದೇಶ, ಭಾಷೆ, ಕುಲ, ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು.
यिनीहरूबाट नै समुद्रतटवासी छुट्टिए र तिनीहरू आफ्नो जातिअनुरूप आ-आफ्नो भाषाअनुसार तिनीहरूको भूमितिर गए ।
6 ೬ ಹಾಮನ ಸಂತಾನದವರು ಯಾರೆಂದರೆ - ಕೂಷ್, ಮಿಚ್ರಯಿಮ್, ಪೂತ್, ಕಾನಾನ್ ಎಂಬುವವರು.
कूश, मिश्रइम, पूत र कनान हामका छोराहरू थिए ।
7 ೭ ಕೂಷನ ಸಂತಾನದವರು ಯಾರೆಂದರೆ - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬವರು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬುವವರು.
सेबा, हवीला, सब्ता, रामाह र सब्तका कूशका छोराहरू थिए । शेबा र ददान रामाहका छोराहरू थिए ।
8 ೮ ಕೂಷನು ನಿಮ್ರೋದನನ್ನು ಪಡೆದನು. ಅವನು ಭೂಮಿಯ ಮೇಲಿನ ಮೊದಲನೆಯ ಪರಾಕ್ರಮಶಾಲಿಯಾಗಿದ್ದನು.
कूश निम्रोदका पिता बने, जो पृथ्वीमाथिका पहिलो विजेता थिए ।
9 ೯ ಯೆಹೋವನ ದೃಷ್ಟಿಯಲ್ಲಿ ನಿಮ್ರೋದನು ದಿಟ್ಟ ಬೇಟೆಗಾರನಾಗಿದ್ದನು. ಆದುದರಿಂದ “ಯೆಹೋವನು ನಿನ್ನನ್ನು ದಿಟ್ಟ ಬೇಟೆಗಾರನಾಗಿಸಲಿ” ಎಂಬ ಗಾದೆ ಇಂದಿನವರೆಗೂ ಹೇಳುವುದುಂಟು.
तिनी परमप्रभुको सामु शक्तिशाली शिकारी बने । त्यसैले यसो भनियो, “परमप्रभुको सामु निम्रोदजस्तै शक्तिशाली सिकारी ।”
10 ೧೦ ಶಿನಾರ್ ದೇಶದಲ್ಲಿರುವ ಬಾಬೆಲ್, ಯೆರೆಕ್, ಅಕ್ಕದ್, ಕಲ್ನೇ ಎಂಬ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು.
तिनका राज्यहरूका सुरुका केन्द्रहरू शिनारको मुलुकका बाबेल, अक्कद र कल्नेह थिए ।
11 ೧೧ ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ,
तिनी त्यो भूमिबाट बाहिर अश्शूरतित गए, र निनवे, रहोबोत-इर, कालह,
12 ೧೨ ನಿನೆವೆಗೂ ಕೆಲಹಕ್ಕೂ ಮಧ್ಯದಲ್ಲಿ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ರೆಸೆನ್ ಮಹಾಪಟ್ಟಣವೆಂದು ಪ್ರಸಿದ್ಧವಾಗಿದೆ.
र निनवे र कालह बिचमा पर्ने रेसेन निर्माण गरे । यो एउटा ठुलो सहर थियो ।
13 ೧೩ ಮಿಚ್ರಯಿಮ್ಯರಿಂದ ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು, ಹುಟ್ಟಿದರು.
मिश्रइम लूदी, अनामी, लहाबी, नप्तूही
14 ೧೪ ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಫಿಲಿಷ್ಟಿಯರಿಂದ ಹುಟ್ಟಿದರು.
पत्रुसी, कस्लूही (जसबाट पलिश्तीहरू आए) र कप्तोरीहरूका पुर्खा बने ।
15 ೧೫ ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆ ಮೇಲೆ ಹೇತ್ ಹುಟ್ಟಿದನು.
कनान सीदोन अर्थात् तिनका जेठो छोरो, हित्ती,
16 ೧೬ ಇದಲ್ಲದೆ ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು,
यबूसी, एमोरी,
17 ೧೭ ಹಿವ್ವಿಯರು, ಅರ್ಕಿಯರು, ಸೀನಿಯರು ಕಾನಾನನಿಂದ ಹುಟ್ಟಿದರು.
गिर्गाशी, हिव्वी, अरकी, सिनी,
18 ೧೮ ಕಾಲ ಕ್ರಮೇಣವಾಗಿ ಈ ಕಾನಾನ್ಯರ ವಂಶಸ್ಥರಾದ ಸೀನಿಯರು, ಅರ್ವಾದಿಯರು, ಚೆಮಾರಿಯರು, ಹದೋರಾಮರು, ಹಮಾತಿಯರು ಹರಡಿ ಕಾನಾನನಿಂದ ಹುಟ್ಟಿದರು.
अर्वादी, समारी र हमातीहरूका पुर्खा भए । त्यसपछि कनानीहरूका वंशहरू फैलिए ।
19 ೧೯ ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದ ವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇರುತ್ತದೆ.
कनानीहरूको सिमाना सीदोनदेखि गरार जाने बाटोतिर गाजासम्म, र सदोम, गमोरा, अदमा र सबोयीम जाने बाटोतिर भएर लाशासम्म नै थियो ।
20 ೨೦ ಕುಲ, ಭಾಷೆ, ದೇಶ, ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.
तिनीहरूका वंशहरू र भाषाहरूअनुसार तिनीहरूको भूमि र देशमा हामका छोराहरू यिनीहरू नै थिए ।
21 ೨೧ ಇಬ್ರಿಯರೆಲ್ಲರಿಗೆ ಮೂಲಪುರುಷನನೂ, ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೂ ಮಕ್ಕಳು ಹುಟ್ಟಿದರು.
येपेतका दाजु शेमका पनि छोराहरू भए । शेम एबेरका सबै सन्तानहरूका पुर्खा थिए ।
22 ೨೨ ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್ ಎಂಬವರು.
एलाम, अश्शूर, अर्पक्षद, लूद र अराम शेमका छोराहरू थिए ।
23 ೨೩ ಅರಾಮ್ ಸಂತಾನದವರು - ಊಸ್, ಹೂಲ್, ಗೆತೆರ್, ಮಷ್ ಎಂಬವರು.
ऊज, हुल, गेतेर र मेशेक अरामका छोराहरू थिए ।
24 ೨೪ ಅರ್ಪಕ್ಷದನಿಂದ ಶೆಲಹನೂ, ಶೆಲಹನಿಂದ ಎಬರನೂ ಹುಟ್ಟಿದನು.
अर्पक्षेद शेलहका पिता बने र शेलह एबेरका पिता बने ।
25 ೨೫ ಎಬರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗೆಂಬ ಹೆಸರು; ಅವನ ಕಾಲದಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತ್ತು. ಅವನ ತಮ್ಮನ ಹೆಸರು ಯೊಕ್ತಾನ್.
एबेरका दुई जना छोरा भए । एक जना छोराको नाउँ पेलेग थियो, किनभने तिनको समयमा पृथ्वी विभाजित भयो । तिनको भाइको नाउँ योक्तान थियो ।
26 ೨೬ ಯೊಕ್ತಾನನ ಸಂತಾನದವರು - ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್, ಯೆರಹ,
योक्तान अल्मोदद, शेलेप, हसर्मवित, येरह,
27 ೨೭ ಹದೋರಾಮ್, ಊಜಾಲ್, ದಿಕ್ಲಾ,
हदोरम, ऊजाल, दिक्ला,
28 ೨೮ ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಎಂಬವರು.
ओबाल, अबमाएल, शेबा,
29 ೨೯ ಹದೋರಾಮ್, ಊಜಾಲ್, ದಿಕ್ಲಾ, ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಈ ಕುಲಗಳೆಲ್ಲಾ ಯೊಕ್ತಾನನಿಂದ ಹುಟ್ಟಿದವು.
ओपीर, हवीला योबाबका पिता बने ।
30 ೩೦ ಇವರ ನಿವಾಸವು ಮೇಶಾ ಸೀಮೆ ಮೊದಲುಗೊಂಡು ಪೂರ್ವ ದಿಕ್ಕಿನಲ್ಲಿರುವ ಸೆಫಾರ್ ಎಂಬ ಬೆಟ್ಟದ ವರೆಗೂ ಇತ್ತು.
तिनीहरूका क्षेत्र मेशादेखि सपरा जाने बाटो, पूर्वका पहाडसम्म थियो ।
31 ೩೧ ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.
तिनीहरूका वंशहरू र भाषाहरूअनुसार तिनीहरूका मुलुकहरू, जातिहरूअनुसार शेमका छोराहरू यिनीहरू नै थिए ।
32 ೩೨ ಜನಾಂಗಗಳ ಸಂತತಿಯ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.
तिनीहरूका वंशावलीहरू र जातिहरूअनुसार नोआका छोराहरूका वंशहरू यिनै थिए । यी जातिहरूबाट नै जातिहरू छुट्टिए र जलप्रलयपछि पृथ्वीभरि गए ।