< ಗಲಾತ್ಯದವರಿಗೆ ಬರೆದ ಪತ್ರಿಕೆ 6 >

1 ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ.
ಹೇ ಭ್ರಾತರಃ, ಯುಷ್ಮಾಕಂ ಕಶ್ಚಿದ್ ಯದಿ ಕಸ್ಮಿಂಶ್ಚಿತ್ ಪಾಪೇ ಪತತಿ ತರ್ಹ್ಯಾತ್ಮಿಕಭಾವಯುಕ್ತೈ ರ್ಯುಷ್ಮಾಭಿಸ್ತಿತಿಕ್ಷಾಭಾವಂ ವಿಧಾಯ ಸ ಪುನರುತ್ಥಾಪ್ಯತಾಂ ಯೂಯಮಪಿ ಯಥಾ ತಾದೃಕ್ಪರೀಕ್ಷಾಯಾಂ ನ ಪತಥ ತಥಾ ಸಾವಧಾನಾ ಭವತ|
2 ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ, ಹೀಗೆ ಕ್ರಿಸ್ತನ ನೀತಿನಿಯಮಗಳನ್ನು ನೆರವೇರಿಸಿರಿ.
ಯುಷ್ಮಾಕಮ್ ಏಕೈಕೋ ಜನಃ ಪರಸ್ಯ ಭಾರಂ ವಹತ್ವನೇನ ಪ್ರಕಾರೇಣ ಖ್ರೀಷ್ಟಸ್ಯ ವಿಧಿಂ ಪಾಲಯತ|
3 ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುವನಾಗಿದ್ದಾನೆ.
ಯದಿ ಕಶ್ಚನ ಕ್ಷುದ್ರಃ ಸನ್ ಸ್ವಂ ಮಹಾನ್ತಂ ಮನ್ಯತೇ ತರ್ಹಿ ತಸ್ಯಾತ್ಮವಞ್ಚನಾ ಜಾಯತೇ|
4 ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ. ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡಬಹುದೇ ಹೊರತು ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು ಹೆಚ್ಚಳಪಡಬೇಕಾಗಿರುವುದಿಲ್ಲ.
ಅತ ಏಕೈಕೇನ ಜನೇನ ಸ್ವಕೀಯಕರ್ಮ್ಮಣಃ ಪರೀಕ್ಷಾ ಕ್ರಿಯತಾಂ ತೇನ ಪರಂ ನಾಲೋಕ್ಯ ಕೇವಲಮ್ ಆತ್ಮಾಲೋಕನಾತ್ ತಸ್ಯ ಶ್ಲಘಾ ಸಮ್ಭವಿಷ್ಯತಿ|
5 ಏಕೆಂದರೆ ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ತಾನೇ ಹೊತ್ತುಕೊಳ್ಳಬೇಕು.
ಯತ ಏಕೈಕೋ ಜನಃ ಸ್ವಕೀಯಂ ಭಾರಂ ವಕ್ಷ್ಯತಿ|
6 ದೇವರ ವಾಕ್ಯವನ್ನು ಕಲಿಯುವವನು, ಅದನ್ನು ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಕೊಡಬೇಕು.
ಯೋ ಜನೋ ಧರ್ಮ್ಮೋಪದೇಶಂ ಲಭತೇ ಸ ಉಪದೇಷ್ಟಾರಂ ಸ್ವೀಯಸರ್ವ್ವಸಮ್ಪತ್ತೇ ರ್ಭಾಗಿನಂ ಕರೋತು|
7 ಮೋಸಹೋಗಬೇಡಿರಿ. ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.
ಯುಷ್ಮಾಕಂ ಭ್ರಾನ್ತಿ ರ್ನ ಭವತು, ಈಶ್ವರೋ ನೋಪಹಸಿತವ್ಯಃ, ಯೇನ ಯದ್ ಬೀಜಮ್ ಉಪ್ಯತೇ ತೇನ ತಜ್ಜಾತಂ ಶಸ್ಯಂ ಕರ್ತ್ತಿಷ್ಯತೇ|
8 ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶವನ್ನು ಕೊಯ್ಯುವನು. ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು. (aiōnios g166)
ಸ್ವಶರೀರಾರ್ಥಂ ಯೇನ ಬೀಜಮ್ ಉಪ್ಯತೇ ತೇನ ಶರೀರಾದ್ ವಿನಾಶರೂಪಂ ಶಸ್ಯಂ ಲಪ್ಸ್ಯತೇ ಕಿನ್ತ್ವಾತ್ಮನಃ ಕೃತೇ ಯೇನ ಬೀಜಮ್ ಉಪ್ಯತೇ ತೇನಾತ್ಮತೋಽನನ್ತಜೀವಿತರೂಪಂ ಶಸ್ಯಂ ಲಪ್ಸ್ಯತೇ| (aiōnios g166)
9 ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.
ಸತ್ಕರ್ಮ್ಮಕರಣೇಽಸ್ಮಾಭಿರಶ್ರಾನ್ತೈ ರ್ಭವಿತವ್ಯಂ ಯತೋಽಕ್ಲಾನ್ತೌಸ್ತಿಷ್ಠದ್ಭಿರಸ್ಮಾಭಿರುಪಯುಕ್ತಸಮಯೇ ತತ್ ಫಲಾನಿ ಲಪ್ಸ್ಯನ್ತೇ|
10 ೧೦ ಆದ್ದರಿಂದ ಅವಕಾಶ ಸಿಕ್ಕಿದಾಗಲೆಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ, ವಿಶೇಷವಾಗಿ ಒಂದೇ ಮನೆಯವರಂತಿರುವ ಕ್ರೈಸ್ತ ವಿಶ್ವಾಸಿಗಳಿಗೆ ಮಾಡೋಣ.
ಅತೋ ಯಾವತ್ ಸಮಯಸ್ತಿಷ್ಠತಿ ತಾವತ್ ಸರ್ವ್ವಾನ್ ಪ್ರತಿ ವಿಶೇಷತೋ ವಿಶ್ವಾಸವೇಶ್ಮವಾಸಿನಃ ಪ್ರತ್ಯಸ್ಮಾಭಿ ರ್ಹಿತಾಚಾರಃ ಕರ್ತ್ತವ್ಯಃ|
11 ೧೧ ಇಗೋ ನೋಡಿರಿ, ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ.
ಹೇ ಭ್ರಾತರಃ, ಅಹಂ ಸ್ವಹಸ್ತೇನ ಯುಷ್ಮಾನ್ ಪ್ರತಿ ಕಿಯದ್ವೃಹತ್ ಪತ್ರಂ ಲಿಖಿತವಾನ್ ತದ್ ಯುಷ್ಮಾಭಿ ರ್ದೃಶ್ಯತಾಂ|
12 ೧೨ ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ.
ಯೇ ಶಾರೀರಿಕವಿಷಯೇ ಸುದೃಶ್ಯಾ ಭವಿತುಮಿಚ್ಛನ್ತಿ ತೇ ಯತ್ ಖ್ರೀಷ್ಟಸ್ಯ ಕ್ರುಶಸ್ಯ ಕಾರಣಾದುಪದ್ರವಸ್ಯ ಭಾಗಿನೋ ನ ಭವನ್ತಿ ಕೇವಲಂ ತದರ್ಥಂ ತ್ವಕ್ಛೇದೇ ಯುಷ್ಮಾನ್ ಪ್ರವರ್ತ್ತಯನ್ತಿ|
13 ೧೩ ಸುನ್ನತಿ ಮಾಡಿಸಿಕೊಂಡವರೇ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತಿಲ್ಲವಲ್ಲಾ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.
ತೇ ತ್ವಕ್ಛೇದಗ್ರಾಹಿಣೋಽಪಿ ವ್ಯವಸ್ಥಾಂ ನ ಪಾಲಯನ್ತಿ ಕಿನ್ತು ಯುಷ್ಮಚ್ಛರೀರಾತ್ ಶ್ಲಾಘಾಲಾಭಾರ್ಥಂ ಯುಷ್ಮಾಕಂ ತ್ವಕ್ಛೇದಮ್ ಇಚ್ಛನ್ತಿ|
14 ೧೪ ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು.
ಕಿನ್ತು ಯೇನಾಹಂ ಸಂಸಾರಾಯ ಹತಃ ಸಂಸಾರೋಽಪಿ ಮಹ್ಯಂ ಹತಸ್ತದಸ್ಮತ್ಪ್ರಭೋ ರ್ಯೀಶುಖ್ರೀಷ್ಟಸ್ಯ ಕ್ರುಶಂ ವಿನಾನ್ಯತ್ರ ಕುತ್ರಾಪಿ ಮಮ ಶ್ಲಾಘನಂ ಕದಾಪಿ ನ ಭವತು|
15 ೧೫ ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಏನು ಅಲ್ಲ, ಆದರೆ ಹೊಸ ಸೃಷ್ಟಿಯಾಗುವುದೇ ಪ್ರಮುಖವಾದುದು.
ಖ್ರೀಷ್ಟೇ ಯೀಶೌ ತ್ವಕ್ಛೇದಾತ್ವಕ್ಛೇದಯೋಃ ಕಿಮಪಿ ಗುಣಂ ನಾಸ್ತಿ ಕಿನ್ತು ನವೀನಾ ಸೃಷ್ಟಿರೇವ ಗುಣಯುಕ್ತಾ|
16 ೧೬ ಈ ನಿಯಮಗಳನ್ನು ಸರಿಯಾಗಿ ನಡೆಯುವವರೆಲ್ಲರಿಗೂ ಮತ್ತು ದೇವರ ಇಸ್ರಾಯೇಲ್ಯರಿಗೆ ಶಾಂತಿಯೂ, ಕರುಣೆಯೂ ಉಂಟಾಗಲಿ.
ಅಪರಂ ಯಾವನ್ತೋ ಲೋಕಾ ಏತಸ್ಮಿನ್ ಮಾರ್ಗೇ ಚರನ್ತಿ ತೇಷಾಮ್ ಈಶ್ವರೀಯಸ್ಯ ಕೃತ್ಸ್ನಸ್ಯೇಸ್ರಾಯೇಲಶ್ಚ ಶಾನ್ತಿ ರ್ದಯಾಲಾಭಶ್ಚ ಭೂಯಾತ್|
17 ೧೭ ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಮುದ್ರಿಸಿಕೊಂಡಿದ್ದೇನೆ.
ಇತಃ ಪರಂ ಕೋಽಪಿ ಮಾಂ ನ ಕ್ಲಿಶ್ನಾತು ಯಸ್ಮಾದ್ ಅಹಂ ಸ್ವಗಾತ್ರೇ ಪ್ರಭೋ ರ್ಯೀಶುಖ್ರೀಷ್ಟಸ್ಯ ಚಿಹ್ನಾನಿ ಧಾರಯೇ|
18 ೧೮ ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.
ಹೇ ಭ್ರಾತರಃ ಅಸ್ಮಾಕಂ ಪ್ರಭೋ ರ್ಯೀಶುಖ್ರೀಷ್ಟಸ್ಯ ಪ್ರಸಾದೋ ಯುಷ್ಮಾಕಮ್ ಆತ್ಮನಿ ಸ್ಥೇಯಾತ್| ತಥಾಸ್ತು|

< ಗಲಾತ್ಯದವರಿಗೆ ಬರೆದ ಪತ್ರಿಕೆ 6 >