< ಎಜ್ರನು 6 >
1 ೧ ಅರಸನಾದ ದಾರ್ಯಾವೆಷನು ಬಾಬಿಲೋನಿನ ಗ್ರಂಥಸಂಗ್ರಹವಾಗಿದ್ದ ಬಾಬಿಲೋನಿನ ಭಂಡಾರದಲ್ಲಿ ರಾಜಾಜ್ಞೆಯನ್ನು ಹುಡುಕುವುದಕ್ಕೆ ಆಜ್ಞೆಯನ್ನು ಹೊರಡಿಸಿದನು.
Ouinge Tokosra Fulat Darius el sapkin in sukok in ma simla ke sramsram matu su karinginyuk in acn Babylon.
2 ೨ ಅವರು ಹುಡುಕಿದಾಗ ಮೇದ್ಯ ಸಂಸ್ಥಾನದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಒಂದು ಸುರುಳಿ ಸಿಕ್ಕಿತು.
Tusruk, koneyukyak sie limlim in ma simusla in siti Ecbatana in acn Media, ma fahk ouinge:
3 ೩ ಅದರಲ್ಲಿ, “ಅರಸನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನ ದೇವಾಲಯದ ವಿಷಯವಾಗಿ ಕೊಟ್ಟ ಅಪ್ಪಣೆ, ‘ಬಲವಾದ ಅಸ್ತಿವಾರವನ್ನು ಹಾಕಿ, ಯಜ್ಞಸಮರ್ಪಣೆಗಾಗಿ ಆಲಯವನ್ನು ಪುನಃ ಕಟ್ಟಬೇಕು. ಅದರ ಎತ್ತರ ಅರುವತ್ತು ಮೊಳವು, ಅಗಲ ಅರುವತ್ತು ಮೊಳವು ಇರಬೇಕು.
“In yac se meet ke Tokosra Cyrus el mutawauk in Tokosra Fulat, el sapkin tuh Tempul Jerusalem in sifil musaiyuk tuh in sie acn mwet uh ku in sang mwe sang lalos ac kisakin mwe kisa lalos we. Tempul sac in fit eungoul fulata ac fit eungoul sralupa.
4 ೪ ದೊಡ್ಡ ಕಲ್ಲುಗಳ ಮೂರು ಸಾಲುಗಳಾದ ಮೇಲೆ ಹೊಸ ಮರದ ಒಂದು ಸಾಲನ್ನು ಹಾಕಿ ಕಟ್ಟಬೇಕು. ವೆಚ್ಚವೆಲ್ಲಾ ರಾಜಭಂಡಾರದಿಂದ ಕೊಡಲ್ಪಡುವುದು.
Musaiyen sinka uh in ouinge: fwilin sak se in oan fin fwilin eot tolu nukewa. Molin ma nukewa ac fah akfalyeyuk ke nien mani lun tokosra.
5 ೫ ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದಿಂದ ಬಾಬಿಲೋನಿಗೆ ತೆಗೆದುಕೊಂಡು ಹೋದ ಬೆಳ್ಳಿ, ಬಂಗಾರದ ದೇವಸ್ಥಾನ ಪಾತ್ರೆಗಳನ್ನು ಹಿಂತಿರುಗಿ ಕೊಡಬೇಕು. ಅವುಗಳನ್ನೆಲ್ಲಾ ಮೊದಲಿದ್ದ ಸ್ಥಳಕ್ಕೆ ಅಂದರೆ ಯೆರೂಸಲೇಮಿನ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಡಬೇಕು’ ಎಂಬುದಾಗಿ ಬರೆದಿತ್ತು.
Oayapa ahlu gold ac silver nukewa ma Tokosra Nebuchadnezzar el tuh use nu Babylon liki Tempul Jerusalem ac folokinyukla nu yen fal in oan we in Tempul Jerusalem.”
6 ೬ “ಆಗ ದಾರ್ಯಾವೆಷನು ಬರೆದು ಕಳುಹಿಸಿದ್ದೇನೆಂದರೆ, ಹೊಳೆಯಾಚೆಯ ಪ್ರದೇಶಗಳ ದೇಶಾಧಿಪತಿಯಾದ ತತ್ತೆನೈ, ಶೆತರ್ಬೋಜೆನೈ, ಹೊಳೆಯಾಚೆಯಲ್ಲಿ ಇವರು ಜೊತೆಗಾರರಾದ ಅಪರ್ಸತ್ಕಾಯರು ಇವರಿಗೆ, ನೀವು ಅವರ ಗೊಡವೆಗೆ ಹೋಗಬೇಡಿರಿ.
Na Tokosra Fulat Darius el supwala topuk lal ouinge: “Nu sum, Tattenai, governor lun acn Roto-in-Euphrates, ac Shethar Bozenai ac mwet pwapa wiowos in acn Roto-in-Euphrates. “Kowos tuyak liki Tempul sacn
7 ೭ ಆ ದೇವಾಲಯವನ್ನು ಕಟ್ಟುವ ಕೆಲಸಕ್ಕೆ ಅಡ್ಡಿ ಮಾಡಬೇಡಿರಿ. ಯೆಹೂದ ದೇಶಾಧಿಪತಿಯು, ಯೆಹೂದ್ಯರ ಹಿರಿಯರು ಇವರೇ ಅದನ್ನು ಅದರ ಸ್ಥಳದಲ್ಲಿ ಕಟ್ಟಲಿ.
ac nimet lusrong orekma kac an. Fuhlela governor lun Judah ac mwet kol lun mwet Jew in sifil musai Tempul lun God in acn na ma oan we meet ah.
8 ೮ ಆ ದೇವಾಲಯವನ್ನು ಕಟ್ಟುವುದಕ್ಕಾಗಿ ನೀವು ಯೆಹೂದ್ಯರ ಹಿರಿಯರಿಗೆ ರಾಜರ ಸೊತ್ತಿನಿಂದ ಅಂದರೆ ಹೊಳೆಯಾಚೆಯ ಪ್ರಾಂತ್ಯಗಳ ಕಪ್ಪದಿಂದ ತಡಮಾಡದೆ ಎಲ್ಲಾ ವೆಚ್ಚವನ್ನು ಕೊಡಬೇಕು.
Inge, nga sapkin nu suwos tuh kowos in kasrelos sifil musaela. Molin ma ac orekmakinyuk an in sa na molla, ac in tuku ke mani lun tokosra, su ac itukla ke tax lun Roto-in-Euphrates, tuh orekma sacn in tia lusrongyukla.
9 ೯ ಅವರು ಪರಲೋಕದೇವರ ಸರ್ವಾಂಗಹೋಮಗಳಿಗೋಸ್ಕರ ಬೇಕಾದ ಹೋರಿ, ಟಗರು, ಕುರಿಮರಿಗಳನ್ನೂ, ಗೋದಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ ಯೆರೂಸಲೇಮಿನ ಯಾಜಕರು ಹೇಳುವ ಪ್ರಕಾರ ಪ್ರತಿದಿನವೂ ತಪ್ಪದೆ ಒದಗಿಸಿ ಕೊಡಬೇಕು ಎಂಬುದಾಗಿಯೂ ಆಜ್ಞಾಪಿಸುತ್ತೇನೆ.
Len nu len kowos in aklohya in sang nu sin mwet tol in Jerusalem kutena ma elos fahk mu elos enenu: oana cow mukul fusr, ku sheep, ku sheep fusr mwe orek kisa firir nu sin God lun Kusrao, ku flao, sohl, wain ku oil in olive.
10 ೧೦ ಅವರಾದರೋ ಪರಲೋಕದೇವರಿಗೆ ಸುಗಂಧಹೋಮಗಳನ್ನು ಸಮರ್ಪಿಸಿ, ರಾಜನ ಮತ್ತು ರಾಜಪುತ್ರರ ದೀರ್ಘಾಯಷ್ಯಕ್ಕಾಗಿ ಪ್ರಾರ್ಥನೆಮಾಡಲಿ.
Ma inge in orek tuh elos in ku in sang mwe kisa ma fal nu sin God lun Kusrao, ac elos in pre tuh Elan akinsewowoyeyu oayapa wen nutik.
11 ೧೧ ಈ ನನ್ನ ಆಜ್ಞೆಯನ್ನು ಯಾವನಾದರೂ ಬದಲಾಯಿಸುವುದಾದರೆ ಅವನ ಮನೆಯಿಂದಲೇ ಒಂದು ತೊಲೆಯನ್ನು ತೆಗೆದು, ಅದನ್ನು ಶೂಲವನ್ನಾಗಿ ಮಾಡಿ, ಅದರ ಮೇಲೆ ಅವನನ್ನು ಏರಿಸಬೇಕು ಮತ್ತು ಅ ಮನೆಯನ್ನು ತಿಪ್ಪೆಯನ್ನಾಗಿ ಮಾಡಿಬಿಡಬೇಕೆಂದು ಆಜ್ಞಾಪಿಸಿದ್ದೇನೆ.
Nga tafwela pac sap soko inge tuh kutena mwet fin seakos ma nga sapkin, na in fifyak soko sak maspang lulap liki lohm sel, ac tetela sie muta, ac sang fakisya sasla manol. Na lohm sel fah orek oana sie yol in kutkut.
12 ೧೨ ಮತ್ತು ತನ್ನ ಹೆಸರನ್ನು ಸ್ಥಾಪಿಸುವುದಕ್ಕೋಸ್ಕರ ಆ ಸ್ಥಳವನ್ನು ಆರಿಸಿಕೊಂಡ ದೇವರು ಈ ಆಜ್ಞೆಯನ್ನು ಬದಲಿಸುವುದಕ್ಕೂ, ಯೆರೂಸಲೇಮಿನ ದೇವಾಲಯವನ್ನು ನಾಶಮಾಡುವುದಕ್ಕೂ ಕೈಯೆತ್ತುವ ಪ್ರತಿಯೊಬ್ಬ ರಾಜನನ್ನೂ ಮತ್ತು ಪ್ರತಿಯೊಂದು ಜನಾಂಗವನ್ನೂ ಕೆಡವಿ ಹಾಕಲಿ. ದಾರ್ಯಾವೆಷನಾದ ನಾನು ಆಜ್ಞೆಯನ್ನು ಕೊಟ್ಟಿದ್ದೇನೆ, ಅದನ್ನು ಉದಾಸೀನತೆಯಿಂದ ಅಲಕ್ಷಿಸದೆ ಕೈಕೊಳ್ಳಬೇಕು” ಎಂದು ತಿಳಿಸಿದನು.
Lela God su sulela tuh Jerusalem in acn se mwet uh in alu nu sel we uh, Elan sisla kutena tokosra ku mutanfahl su sikul ma sap se inge ac srike in kunausla Tempul sac. Nga, Darius, pa sapkin in ouinge. Ma sap luk fah arulana akosyuk.”
13 ೧೩ ಅರಸನಾದ ದಾರ್ಯಾವೆಷನು ಆಜ್ಞೆಯನ್ನು ಕೊಟ್ಟಿದ್ದರಿಂದ ಹೊಳೆಯ ಈಚೆಯ ದೇಶಾಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಮತ್ತು ಅವರ ಜೊತೆಗಾರರೂ ಜಾಗರೂಕರಾಗಿ ಅದನ್ನು ಅನುಸರಿಸಿದರು.
Na Governor Tattenai, Shethar Bozenai, ac mwet fulat wialos elos oru ma nukewa oana tokosra fulat el sapkin.
14 ೧೪ ಯೆಹೂದ್ಯರ ಹಿರಿಯರು, ಪ್ರವಾದಿಯಾದ ಹಗ್ಗೈ, ಇದ್ದೋವಿನ ಮಗನಾದ ಜೆಕರೀಯ ಇವರ ಪ್ರವಾದನೆಯಿಂದ ಪ್ರೇರಿತರಾಗಿ ಕಟ್ಟುವ ಕೆಲಸವನ್ನು ಮುಂದುವರಿಸಿದರು. ಇಸ್ರಾಯೇಲ್ ದೇವರ ಆಜ್ಞಾನುಸಾರವಾಗಿಯೂ ಪರ್ಷಿಯ ರಾಜರಾದ ಕೋರೆಷ್, ದಾರ್ಯಾವೆಷ್, ಅರ್ತಷಸ್ತ ಇವರ ಅಪ್ಪಣೆಯ ಆಧಾರದಿಂದಲೂ ಕಟ್ಟಡವನ್ನು ಮುಗಿಸಿದರು.
Mwet kol lun mwet Jew elos oru tuh orekma in musa ke Tempul in fahla arulana wo, ac mwet palu Haggai ac Zechariah eltal akkeyalos. Elos aksafyela Tempul fal nu ke ma God lun Israel El sapkin, ac oayapa ma sap sin tokosra fulat tolu lun Persia: Cyrus, Darius, ac Artaxerxes.
15 ೧೫ ಅರಸನಾದ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಕಟ್ಟಿ ಪೂರೈಸಿದರು.
Elos aksafyela Tempul ke len se aktolu in malem Adar, ke yac se akonkosr wacl Tokosra Fulat Darius.
16 ೧೬ ಯಾಜಕರೂ, ಲೇವಿಯರೂ ಮತ್ತು ಸೆರೆಯಿಂದ ಹಿಂತಿರುಗಿ ಬಂದ ಬೇರೆ ಇಸ್ರಾಯೇಲರೂ ಸಂತೋಷದಿಂದ ಆ ದೇವಾಲಯದ ಪ್ರತಿಷ್ಠೆಯನ್ನು ಆಚರಿಸಿದರು.
Na mwet tol, mwet Levi, ac mwet Israel nukewa su folok liki sruoh, elos kisaela Tempul ke engan na lulap.
17 ೧೭ ಅವರು ಆ ದೇವಾಲಯದ ಪ್ರತಿಷ್ಠೆಗೋಸ್ಕರ ನೂರು ಹೋರಿ, ಇನ್ನೂರು ಟಗರು, ನಾನೂರು ಕುರಿಮರಿ ಇವುಗಳನ್ನೂ, ಇಸ್ರಾಯೇಲರ ದೋಷಪರಿಹಾರಾರ್ಥವಾಗಿ ಅವರ ಕುಲಗಳ ಸಂಖ್ಯಾನುಸಾರ ಹನ್ನೆರಡು ಹೋತಗಳನ್ನೂ ಸಮರ್ಪಿಸಿದರು.
Elos kisakin cow mukul siofok, sheep luofoko, ac sheep fusr angfoko, na elos sang nani singoul luo tuh in mwe kisa ke ma koluk, kais soko nu ke sruf lun Israel.
18 ೧೮ ಆ ಮೇಲೆ ಯಾಜಕರ ಮತ್ತು ಲೇವಿಯರ ಆಯಾ ಮಾರ್ಗಗಳನ್ನು ಮೋಶೆಯ ಧರ್ಮಶಾಸ್ತ್ರ ನಿಯಮದ ಪ್ರಕಾರ ಯೆರೂಸಲೇಮಿನ ದೇವರ ಸೇವೆಗೆ ನೇಮಿಸಿದರು.
Elos oayapa oakiya orekma kunen mwet tol ac mwet Levi nu ke Tempul in Jerusalem, fal nu ke ma simusla in book lal Moses.
19 ೧೯ ಸೆರೆಯಿಂದ ಬಂದವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕವನ್ನು ಆಚರಿಸಿದರು.
Ke len se aksingoul akosr in malem se meet in yac tok ah, mwet su foloko liki sruoh elos akfulatye Kufwen Alukela.
20 ೨೦ ಯಾಜಕರೂ ಮತ್ತು ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡರು. ಎಲ್ಲರೂ ಶುದ್ಧವಾದನಂತರ ಲೇವಿಯರು ದೇಶಾಂತರದಿಂದ ಹಿಂದಿರುಗಿ ಬಂದವರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಗಳನ್ನು ವಧಿಸಿದರು.
Mwet tol ac mwet Levi nukewa elos aknasnasyalos sifacna tuh elos in nasnas fal nu ke oakwuk lun alu lalos. Mwet Levi elos uniya kosro tuh in mwe kisa ke Kufwen Alukela ke mwet nukewa su foloko liki sruoh, ac ke mwet tol, ac kaclos sifacna.
21 ೨೧ ದೇಶಾಂತರದಿಂದ ಬಂದ ಇಸ್ರಾಯೇಲರೂ ಇಸ್ರಾಯೇಲ್ ದೇವರಾದ ಯೆಹೋವನನ್ನು ಹುಡುಕುವುದಕ್ಕಾಗಿ ದೇಶನಿವಾಸಿಗಳ ಅಶುದ್ಧತ್ವವನ್ನು ತೊರೆದುಬಿಟ್ಟು, ಇವರೊಡನೆ ಕೂಡಿಕೊಂಡವರೆಲ್ಲರೂ ಪಸ್ಕಭೋಜನಮಾಡಿದರು.
Mwet Israel nukewa su foloko liki sruoh elos mongo ke ma kisakinyukla. Oayapa mwet nukewa su sisla moul pegan lun mwet saya su muta in facl sac ac forla in wi pac alu nu sin LEUM GOD lun Israel, elos wi pac mongo kac.
22 ೨೨ ಇದಲ್ಲದೆ ಇಸ್ರಾಯೇಲ್ ದೇವರ ಆಲಯವನ್ನು ಕಟ್ಟುವುದರಲ್ಲಿ ಅಶ್ಶೂರದ ಅರಸನು ತಮಗೆ ಸಹಾಯಮಾಡುವಂತೆ ಯೆಹೋವನು ಅವನ ಮನಸ್ಸನ್ನು ತಿರುಗಿಸಿ ತಮಗೆ ಸಂತೋಷವನ್ನು ಉಂಟುಮಾಡಿದ್ದಾನೆ ಎಂದು ಹರ್ಷಿಸುತ್ತಾ ಏಳು ದಿನಗಳ ವರೆಗೂ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಆಚರಿಸಿದರು.
Ke len itkosr, elos engan ac akfulatye Kufwen Bread Tia Akpulol. Arulana yohk engan lalos ke sripen LEUM GOD El oru tuh Tokosra Fulat lun Assyria elan kulang nu selos, ac kasrelos ke orekma lalos in sifil musai Tempul lun God lun Israel.